ಗುರುಬಸಪ್ಪ ರವರು ಎಫ್‌ಡಿಸಿ ಹುದ್ದೆಗೆ ಬಡ್ತಿ: ಶಿಕ್ಷಕ ಸ್ನೇಹಿತರ ಬಳಗದಿಂದ ಆತ್ಮೀಯ ಸನ್ಮಾನ.

ಚಿತ್ತಾಪುರ: ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ಕಾರ್ಯಾಲಯದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ (SDA) ಸೇವೆ ಸಲ್ಲಿಸುತ್ತಿದ್ದ ಗುರುಬಸಪ್ಪ ಸರ್ ಅವರಿಗೆ ಪ್ರಥಮ ದರ್ಜೆ ಸಹಾಯಕರಾಗಿ (FDC) ಹುದ್ದೆಗೆ ಪದೋನ್ನತಿ (ಬಡ್ತಿ) ದೊರೆತಿದೆ. ಬಡ್ತಿ ಹೊಂದಿದ ಅವರು ಕಲಬುರಗಿಯ ಜಿಲ್ಲಾ ಪಂಚಾಯತ್‌ನ ‘ಅಕ್ಷರ ದಾಸೋಹ’ ಯೋಜನೆಗೆ ವರ್ಗಾವಣೆಗೊಂಡಿದ್ದಾರೆ.

ಈ ಸಂತಸದ ಸಂದರ್ಭದಲ್ಲಿ ಅವರ ಅಭಿಮಾನಿ ಗೆಳೆಯರ ಬಳಗದ ಶಿಕ್ಷಕ ಮಿತ್ರರು ಜಂಟಿಯಾಗಿ ಗುರುಬಸಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ, ದಂಪತಿಗಳಿಗೆ ವಸ್ತ್ರ ನೀಡಿ, ಸಿಹಿ ತಿನ್ನಿಸಿ ಆತ್ಮೀಯವಾಗಿ ಸನ್ಮಾನಿಸಿದರು.

ಅವರ ಮುಂದಿನ ಸೇವಾ ದಿನಗಳು ಸುಖಕರ ಹಾಗೂ ಯಶಸ್ವಿಯಾಗಲಿ ಎಂದು ಶಿಕ್ಷಕರು ಈ ಸಂದರ್ಭದಲ್ಲಿ ಶುಭ ಹಾರೈಸಿದರು. ಸನ್ಮಾನದ ವೇಳೆ ಅಭಿಮಾನಿ ಗೆಳೆಯರ ಬಳಗದ ಶಿಕ್ಷಕರಾದ ಹಾಜಿಸಾಬ ಮುಲ್ಲಾ, ಳ ಜಗನ್ನಾಥ ಬಡಿಗೇರ, ಗುರುಲಿಂಗಪ್ಪ ದೊಡ್ಡಮನಿ, ದೇವೇಂದ್ರಪ್ಪ ಶಹಾಬಾದಕರ್, ವೀರಸಂಗಪ್ಪ ಸುಲೇಗಾವ್, ಶ್ರೀಕಾಂತ, ವಿಜಯಕುಮಾರ ಬಂಕಲಗಿ ಹಾಗೂ ಹಿರಿಯ ನಿವೃತ್ತ ಮುಖ್ಯ ಶಿಕ್ಷಕರಾದ ಹಾಜಪ್ಪ  ಶಹಾಬಾದ್, ಉಪಸ್ಥಿತರಿದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم