ಅಗ್ನಿಶಾಮಕ ಠಾಣೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ: ಧ್ವಜಾರೋಹಣ

ಚಿತ್ತಾಪುರ: ಇಲ್ಲಿನ ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ಶನಿವಾರ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಶರಣಯ್ಯ ಗುತ್ತೇದಾರ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಅರ್ಪಿಸಿದ ಬಳಿಕ ಗೌರವಪೂರ್ವಕವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ಸುರೇಶ, ಚಾಂದಶಾ, ಅಕ್ಬರ್ ಪಟೇಲ್, ಮಂಜುನಾಥ್, ಮಲ್ಲಿಕಾರ್ಜುನ್, ಅಮರೇಶ್, ರವೀಂದ್ರ, ಎಂಡಿ ಸಲೀಮ್, ಈರಪ್ಪ ಉಂಡಿ, ಶಿವರಾಜ ಬಿ, ಯಮನಪ್ಪ, ಬಸವರಾಜ, ಕಾಶೀನಾಥ್, ನಭಿಸಾಬ್ ಹಾಗೂ ಮಂಜುನಾ ಪಿ ಉಪಸ್ಥಿತರಿದ್ದರು

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم