ನಾಗಾವಿ ಯಲ್ಲಮ್ಮ ದೇವಾಲಯದ ಹುಂಡಿಯಲ್ಲಿ ವಿದೇಶಿ ಹಣ ಪತ್ತೆ!

ಚಿತ್ತಾಪುರ: ಇಲ್ಲಿನ ಐತಿಹಾಸಿಕ ಪ್ರಸಿದ್ಧ ನಾಗಾವಿ ಯಲ್ಲಮ್ಮ ದೇವಾಲಯದಲ್ಲಿ ಗುರುವಾರ ನಡೆದ ಹುಂಡಿ ಎಣಿಕೆ ಸಮಯದಲ್ಲಿ ವಿವಿಧ ದೇಶಗಳ ವಿದೇಶಿ ಕರೆನ್ಸಿಗಳು (ಹಣ) ಹಾಗೂ ನಾಣ್ಯಗಳು ಪತ್ತೆಯಾಗಿದ್ದು, ನಾಗಾವಿ ನಾಡಿನ ಜನತೆಯಲ್ಲಿ ಆಶ್ಚರ್ಯ ಮೂಡಿಸಿದೆ.

ದೇವಾಲಯ ಸಮಿತಿಯ ಅಧ್ಯಕ್ಷರು ಹಾಗೂ ತಹಸೀಲ್ದಾರ್ ಆಗಿರುವ ನಾಗಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. ಎಣಿಕೆಯ ಸಂದರ್ಭದಲ್ಲಿ ಕೊರಿಯಾ, ಕೆನಡಾ, ಯುಎಇ (ಯುಎಇ) ಹಾಗೂ ಅಮೆರಿಕ ದೇಶಗಳ ಹಣ ಹುಂಡಿಯಲ್ಲಿ ಜಮೆಯಾಗಿರುವುದು ಕಂಡು ಬಂದಿದೆ.

ವಿದೇಶಿ ಕರೆನ್ಸಿಗಳಾದ ಕೊರಿಯಾ 10 ಸಾವಿರ ಕರೆನ್ಸಿ (ಭಾರತೀಯ ಮೌಲ್ಯ ಸುಮಾರು ₹690). ಕೆನಡಾ 5 ಸಿಂಕ್ ಡಾಲರ್ (ಭಾರತೀಯ ಮೌಲ್ಯ ಸುಮಾರು ₹477). ಯುಎಇ 5 ದಿರಾಮ್ಸ್ ಹಾಗೂ 10 ದಿರಾಮ್ಸ್ (ಭಾರತೀಯ ಮೌಲ್ಯ ಕ್ರಮವಾಗಿ ₹129.81 ಮತ್ತು ₹259.62). ಅಮೆರಿಕ ಅಮೆರಿಕನ್ ಡಾಲರ್‌ಗಳು ಹಾಗೂ ಕಾಯಿನ್‌ಗಳು ಸೇರಿದಂತೆ ಸುಮಾರು ₹14,584.4 ಮೌಲ್ಯದ ನೋಟುಗಳು ಹಾಗೂ ₹1,000 ಮೌಲ್ಯದ ನಾಣ್ಯಗಳು ಪತ್ತೆಯಾಗಿವೆ.

ಒಟ್ಟಾರೆಯಾಗಿ ವಿದೇಶಿ ಕರೆನ್ಸಿಯಿಂದ ₹17,140.91 ಜಮೆಯಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಮಾಹಿತಿ ನೀಡಿದ್ದಾರೆ. ಕಳೆದ ಬಾರಿಯ ಹುಂಡಿ ಎಣಿಕೆಯ ಸಂದರ್ಭದಲ್ಲೂ ಸಹ ವಿದೇಶಿ ಹಣ ಪತ್ತೆಯಾಗಿತ್ತು. ಈ ವರ್ಷವೂ ಸಹ ನಾಲ್ಕೈದು ದೇಶಗಳ ಕರೆನ್ಸಿ ಪತ್ತೆಯಾಗಿರುವುದು ಭಕ್ತ ಸಮೂಹದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಮೂಲಕ ನಾಗಾವಿ ಯಲ್ಲಮ್ಮ ದೇವಿಯ ಭಕ್ತರು ವಿದೇಶಗಳಲ್ಲೂ ಇದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم