ಚಿತ್ತಾಪೂರ: ಮತ ಕ್ಷೇತ್ರದ ವಾಡಿ ಪಟ್ಟಣದಲ್ಲಿ ನಡೆದ ದಲಿತ ಸಂಘರ್ಷ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ವಾಡಿ ಪಟ್ಟಣ ಘಟಕದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ದಸಂಸ ತಾಲೂಕು ಅಧ್ಯಕ್ಷ ಶಿವಮೂರ್ತಿ ಪಾಮನೂರ ತಿಳಿಸಿದ್ದಾರೆ.
ಆಯ್ಕೆಯಾದ ನೂತನ ಪದಾಧಿಕಾರಿಗಳಾದ ವಾಡಿ ಸಂಚಾಲಕರಾಗಿ ಸಾಯಬಣ್ಣಾ ಚಿತ್ತಾಪೂರ, ಸಂಘಟನಾ ಸಂಚಾಲಕ ಬಸವರಾಜ ಸಿರೂರಕರ್, ಶರಣು ದೊರೆ, ದೇವರಾಜ ಮಡಿವಾಳ, ಖಜಾಂಚಿ ಲೋಕೇಶ್ ಶಿರೂರಕರ್, ಕಾರ್ಯಕಾರಿ ಸಮಿತಿ ಸದಸ್ಯರಾದ ವಾಸೀಂ ಅಕ್ರಮ, ಶೇಕ್ ನಿಸಾರ, ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕರಾಗಿ ರಾಕೇಶ್ ಶಿರೂರಕರ್, ಸಂಘಟನಾ ಸಂಚಾಲಕ ಕಿರಣ ನಾಟಿಕಾರ, ಮಹ್ಮದ್ ಫಿರೋಜ್, ದೀನೇಶ ಮತ್ತಿಕೋಡ, ಖಜಾಂಚಿ ರಘುವೀರ ಕಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜು ಚಿತ್ತಾಪೂರಕರ್ ಕಾಶಿನಾಥ್ ಕಟ್ಟಿ ಆಯ್ಕೆ ಆಗಿದ್ದಾರೆ.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮರೆಪ್ಪ ಮೇತ್ರೆ, ತಾಲೂಕು ಸಂಘಟನಾ ಸಂಚಾಲಕ ಭೀಮರಾಯ ಕೊಂಚೂರಕರ್ ಸೇರಿದಂತೆ ಸಂಘಟನೆಯ ಹಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.