ಬಸವರಾಜ ಪೂಜಾರಿಯವರನ್ನು ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸುವಂತೆ ಒತ್ತಾಯ.

ಚಿತ್ತಾಪುರ: ಕಳೆದ ಮೂರು ದಶಕಗಳಿಂದ (30 ವರ್ಷ) ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ, ಪಕ್ಷದ ಸಂಘಟನೆ ಹಾಗೂ ಏಳಿಗೆಗಾಗಿ ಹಗಲಿರುಳು ಶ್ರಮಿಸಿರುವ ಮತಕ್ಷೇತ್ರದ ಮೊಗಲಾ ಗ್ರಾಮದ ಹಿರಿಯ ಮುಖಂಡ ಬಸವರಾಜ ಬೀರಣ್ಣ ಪೂಜಾರಿ ಅವರಿಗೆ ರಾಜ್ಯದ ಯಾವುದಾದರೂ ಒಂದು ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಗೃಹ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮೊಗಲಾ ಗ್ರಾಮಸ್ಥರ ಮನವಿ ಸಲ್ಲಿಸಿದರು.

ಬಸವರಾಜ ಪೂಜಾರಿ ಅವರು ಮೂಲತಃ ಕೆಳಹಂತದಿಂದಲೇ ಪಕ್ಷವನ್ನು ಕಟ್ಟಿದ ಜನಪ್ರಿಯ ನಾಯಕರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಡವರು, ಕಡುಬಡವರು ಹಾಗೂ ಶೋಷಿತರಿಗೆ ಸರ್ಕಾರದ ಮೂಲಭೂತ ಸೌಲಭ್ಯಗಳನ್ನು ಹಾಗೂ ಬಡವರ ಕಲ್ಯಾಣ ಯೋಜನೆಗಳನ್ನು ತಲುಪಿಸುವಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ."ಲೋಕಸಭೆ, ವಿಧಾನಸಭೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸೇರಿದಂತೆ ಪ್ರತಿಯೊಂದು ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ ಆದರೆ, ದಶಕಗಳ ಕಾಲ ಪಕ್ಷಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದರೂ ಪಕ್ಷದಿಂದ ಯಾವುದೇ ಅಧಿಕೃತ ಸ್ಥಾನಮಾನ ಅಥವಾ ಸೌಲಭ್ಯಗಳು ದೊರೆತಿಲ್ಲ" 

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಗೂಳಿನಾಥ ಹಳಿಮನಿ, ಶಿವಶರಣಪ್ಪ ಹೂಗಾರ್, ಮಲ್ಲಿಕಾರ್ಜುನ ಪೂಜಾರಿ, ಭಾಗಪ್ಪ ದೊರೆ, ಸಂತೋಷ್ ಪೂಜಾರಿ ಚಿತ್ತಾಪೂರ, ವೀರಭದ್ರುಪ್ಪಾ ಇವಣಿ, ಶಿರೋದೀನ್ ಮುಲ್ಲಾ,ರಮೇಶ್ ಪೂಜಾರಿ, ದೇವಿಂದ್ರಪ್ಪ ತಳವಾರ,ನಾರಾಯಣ ಗುತ್ತೇದಾರ್, ಉದಯ ಕೆಂಪನೂರ, ಚಂದ್ರಕಾಂತ್ ದೊರೆ,ಸುಭಾಷ್ ಚಿಂತಗುಂಟಿ, ದಶರಥ ಹಾದಿಮನಿ, ಅಂಬರೀಶ್ ಜಂಬಗಿ ಇತರರು ಇದ್ದರು.

 ಕ್ಷೇತ್ರದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಬಸವರಾಜ ಪೂಜಾರಿಯವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸ್ಥಳೀಯ ಕಾರ್ಯಕರ್ತರು ಮತ್ತು ಸಾರ್ವಜನಿಕರಲ್ಲಿ ಅಪಾರ ಅಭಿಮಾನ ಹೊಂದಿದ್ದಾರೆ. ಹಾಗಾಗಿ, ಮುಂಬರುವ ದಿನಗಳಲ್ಲಿ ಭರ್ತಿಯಾಗಲಿರುವ ನಿಗಮ ಮಂಡಳಿಗಳ ಅಧ್ಯಕ್ಷ ಹುದ್ದೆಗಳಲ್ಲಿ ಬಸವರಾಜ ಪೂಜಾರಿ ಅವರ ನಿಷ್ಠೆ ಹಾಗೂ ದೀರ್ಘಾವಧಿಯ ಸೇವೆಯನ್ನು ಪರಿಗಣಿಸಿ, ಯಾವುದಾದರೂ ಸೂಕ್ತ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅರ್ಹ ಗೌರವ ನೀಡಬೇಕೆಂದು  ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ ಗ್ರಾಮಸ್ಥರು ವಿನಂತಿಸಿಕೊಂಡಿದ್ದಾರೆ.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು