ಸ್ಪೋಕನ್ ಇಂಗ್ಲಿಷ್ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

ಚಿತ್ತಾಪುರ: ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಖಾಲಿ ಇರುವ 3 ಸ್ಪೋಕನ್ ಇಂಗ್ಲಿಷ್ (Spoken English) ಶಿಕ್ಷಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಕಾಶಿರಾಯ ಎಸ್. ಕಲಾಲ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪೋಕನ್ ಇಂಗ್ಲಿಷ್ ಶಿಕ್ಷಕರು ೩ ಹುದ್ದೆಗಳು ಸೇವಾವಧಿ ೬ ತಿಂಗಳು ಮಾತ್ರ ಮಾಸಿಕ ವೇತನ  ₹೧೨,೦೦೦/- ಶೈಕ್ಷಣಿಕ ವಿದ್ಯಾರ್ಹತೆ ಕಲಾ ಪದವಿಯಲ್ಲಿ ಆಪ್ಷನಲ್ ಇಂಗ್ಲಿಷ್ (Optional English) / ಇಂಗ್ಲಿಷ್ ಆನರ್ಸ್ (English Honors) ಅಥವಾ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ (MA in English) ಪಡೆದಿರಬೇಕು.

ಸ್ಥಳೀಯ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು ,ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ ೧೫, ರೊಳಗಾಗಿ ತಮ್ಮ ಅರ್ಜಿಗಳನ್ನು ಶಾಲೆಗೆ ಸಲ್ಲಿಸಬೇಕಾಗಿದೆ. ಸ್ವೀಕೃತವಾದ ಅರ್ಜಿಗಳ ಪರಿಶೀಲನೆಯನ್ನು ಅಕ್ಟೋಬರ್ ೧೬, ರ ಬುಧವಾರ ಬೆಳಿಗ್ಗೆ ೧೧:೦೦ ಗಂಟೆಗೆ ಶಾಲಾ ಆವರಣದಲ್ಲಿ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು