ಚಿತ್ತಾಪುರ: ಭಾಗೋಡಿ ಮತ್ತು ಮುಡಬೂಳ ರಸ್ತೆ ದುರಸ್ತಿ ಬಗ್ಗೆ ಜನವರಿ 30ಕ್ಕೆ ಅಧಿಕಾರ ವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ತಿಳಿದು ವರದಿಗಾರರ ಜೊತೆ ಭಾಗೋಡಿ ಗ್ರಾಪಂ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಜಗದೀಶ್ ಪಾಟೀಲ್ ಮಾತನಾಡಿ ಭಾಗೋಡಿಯಿಂದ ಡಿಗ್ರಿ ಕಾಲೇಜು ಮಾರ್ಗವಾಗಿ ಮತ್ತು ಮುಡಬೂಳ ಮಾರ್ಗವಾಗಿ ಚಿತ್ತಾಪುರ ಹೋಗುವ ರಸ್ತೆ ಹಾಗೂ ಭಾಗೋಡಿಯಿಂದ ಗುಂಡಗುರ್ತಿ ರಸ್ತೆ ದುರಸ್ತಿ ಬಗ್ಗೆ ಈಗಾಗಲೇ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ರವರಿಗೆ ಮನವಿ ಮಾಡಲಾಗಿದ್ದು ಸಚಿವರು ಸ್ಪಂದಿಸಿ ಅದೋಷ್ಟು ಬೇಗನೆ ರಸ್ತೆ ದುರಸ್ತಿ ಮಾಡಿಸುವ ಭರವಸೆ ನೀಡಿರುವುದಾಗಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ಮಂಗಳವಾರ, ಫೆಬ್ರವರಿ 4, 2025
ಶ್ರೀ ಅಯ್ಯಪ್ಪಯ್ಯ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ.
ಚಿತ್ತಾಪುರ: ತಾಲೂಕಿನ ಅಳ್ಳೋಳ್ಳಿ ಮಹಾತ್ಮಾಪೀಠ ಗದ್ದಗಿಮಠದ ಶ್ರೀ ಅಯ್ಯಪ್ಪಯ್ಯ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ಫೆ. 3 ರಿಂದ ಪ್ರಾರಂಭವಾಗಿ ಫೆ. 27 ಕ್ಕೆ ಮುಕ್ತಾಯವಾಗಲಿದೆ ಎಂದು ಪೀಠಾಧಿಪತಿ ನಾಗಪ್ಪಯ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಫೆ.3 ರಂದು ಗಂಗಸ್ಥಳ, 4 ರಂದು ಮಹಾಪ್ರಸಾದ ಉಷಾ:ಕಾಲ ಕಾರಣಿಕ ಪೂಜೆ, 5 ರಂದು ಮಹಾಸೇವಾ ಹಾಗೂ ರಾತ್ರಿ 9 ಗಂಟೆಗೆ, ಪೂಜ್ಯ ಶ್ರೀ ನಾಗಪ್ಪಯ್ಯ ಮಹಾಸ್ವಾಮಿಗಳ ತುಲಾಭಾರ ಕಾರ್ಯಕ್ರಮ ಜರುಗುವುದು. 6 ರಂದು ಕೈ ಕುಸ್ತಿ, 7 ರಂದು ದಶಮಿ ಮೌನೇಶ್ವರ ಮಹಾಪ್ರಸಾದ, 8 ರಂದು ದಶಮಿ ಸೇವಾ, 12 ರಂದು ಹಾಲೋಕುಳಿ, 14 ರಂದು ಗಂಗಮ್ಮನ ಪೂಜೆ, 18 ರಂದು ತುರಕರ ಲಂಕಿ ಪ್ರಸಾದ, 26 ರಂದು ಶಿವರಾತ್ರಿ ಜಾಗರಣೆ, 27 ರಂದು ಶಿವರಾತ್ರಿ ಅಮಾವಾಸ್ಯೆ ಹೀಗೆ ವಿವಿಧ ಕಾರ್ಯಕ್ರಮಗಳು ಹಾಗೂ ಸೇವೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.
11ನೇ ಶತಮಾನದ ಧರ್ಮಕ್ರಾಂತಿಕಾರರು ಧಾರ್ಮಿಕ ಸಂಘರ್ಷಣೆಯಲ್ಲಿ ಭಾಗವಹಿಸಿ ಹಿಂದೂ ಧರ್ಮದ ಆರೂಢ ಮತವನ್ನು ಎತ್ತಿ ಹಿಡಿದಿದ್ದ ಶ್ರೀ ವಿರಾಟ ವಿಶ್ವಕರ್ಮ ಜಗದ್ಗುರು ಶ್ರೀ ಮೌನೇಶ್ವರರು ಕರ್ನಾಟಕದಲ್ಲೆಲ್ಲಾ ಅನೇಕ ಪವಾಡಗಳನ್ನು ಮಾಡಿದ ಮಹಾಯೋಗಿಗಳವರು ಅವರ ವರಪ್ರಸಾದಿಕರಾದ ಶ್ರೀ ಅಯ್ಯಪ್ಪಯ್ಯ ಮಹಾಸ್ವಾಮಿಗಳು ಮಹಾಮಹಿಮರಾಗಿದ್ದರು. ಇವರ ಪವಾಡಗಳು ಒಂದಲ್ಲ ಸಾವಿರಾರು ಪವಾಡಗಳಾಗಿವೆ. ಇವರ ತರುವಾಯ ಬಂದ ಮಠದ ಲೀಲಾ ಪುರುಷರು ಸರ್ವಧರ್ಮಗಳನ್ನು ಸಮನಾಗಿ ಕಂಡು ಜನರಲ್ಲಿ ಭಾವೈಕ್ಯತೆಯನ್ನುಂಟು ಮಾಡಿದ ಅಗ್ರಗಣ್ಯರು. ಇಂತಹ ಮಹಾತ್ಮರ ನಿಲುಮೆ ಈ ಅಳ್ಳೋಳ್ಳಿ ಗ್ರಾಮವಾಗಿದೆ ಎಂದು ಹೇಳಿದ್ದಾರೆ.
ಇಲ್ಲಿಯ ಕಾರಣಿಕ ಪೂಜೆಯು ತುಂಬಾ ಮಹತ್ವದಾಗಿದ್ದು, ದೇಶದ ಭವಿಷ್ಯ, ಮಳೆ, ಬೆಳೆ ಮತ್ತು ರಾಜಕೀಯ ಪರಿವರ್ತನೆಗಳನ್ನು ಸೂಚಿಸುವಂಥದ್ದಾಗಿದೆ. ಇಂತಹ ಪವಿತ್ರ ಕ್ಷೇತ್ರದ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಶಕೆ 1946 ಕ್ರೋಧಿನಾಮ ಸಂವತ್ಸರ ಮಾಘ ಶುದ್ದ 5 ಪಂಚಮಿಯಿಂದ ಬಹುಳ 30 ರ ವರೆಗೆ ಜರಗುವುದು. ಆದಕಾರಣ ಭಕ್ತಾದಿಗಳು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿ ಕ್ಷೇತ್ರಾಧಿಪತಿಗಳ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ.
ಫೆ.6 ರಿಂದ 10 ದಿನಗಳ ವರೆಗೆ ದನಗಳ ಜಾತ್ರೆ ಇರುತ್ತದೆ. ಕಾರಣ ರೈತರೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಫೆ.5 ರಿಂದ ಸತತ (4 ದಿನಗಳವರೆಗೆ) ಪ್ರತಿದಿನ ರಾತ್ರಿ 10.30 ಗಂಟೆಗೆ “ಎಚ್ಚರ ತಂಗಿ ಎಚ್ಚರ” ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶಿಸಲಾಗುವುದು. ಫೆ.5 ರಿಂದ 9 ರ ವರೆಗೆ ಯಾದಗಿರ, ಗುರುಮಠಕಲ್, ಕಲಬುರಗಿ, ಸೇಡಂ, ಚಿತ್ತಾಪೂರ ಡಿಪೋಗಳಿಂದ ಹೆಚ್ಚಿನ ಬಸ್ಸುಗಳ ಸೌಕರ್ಯ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
“ಅಳ್ಳೋಳ್ಳಿ ಸುಕ್ಷೇತ್ರದ ಗದ್ದಗಿಮಠ ಹಿಂದು ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದ್ದು, ಈ ಮಠಕ್ಕೆ 600 ವರ್ಷದ ಇತಿಹಾಸ ಇದೆ. ಕಷ್ಟ ಅಂತ, ಸಮಸ್ಯೆ ಅಂತ ಬಂದವರಿಗೆ ಪರಿಹರಿಸುವ ಅಯ್ಯಪ್ಪಸ್ವಾಮಿ, ಭಕ್ತಿಯಿಂದ ಬೇಡಿದ್ದನ್ನು ಕರುಣಿಸುವ ಆರಾಧ್ಯ ದೈವ ಆಗಿದ್ದಾರೆ, ಈಗಾಗಲೇ ನಾಗಪ್ಪಯ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಸಿದ್ಧತೆ ಪೂರ್ಣಗೊಂಡಿದೆ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ".
-ರಾಜಣ್ಣ ಕರದಾಳ ಮಠದ ಪರಮ ಭಕ್ತರು ಹಾಗೂ ಅಧ್ಯಕ್ಷರು ಬಾಬು ಜಗಜೀವನರಾಮ್ ಸಮಿತಿ ಚಿತ್ತಾಪುರ.
ತಾಂಡಾದಲ್ಲಿ ವಿಜೃಂಭಣೆಯಿಂದ ಜರುಗಿದ ಪಲ್ಲಕ್ಕಿ ಉತ್ಸವ.
ಚಿತ್ತಾಪುರ: ಸ್ಟೇಷನ್ ತಾಂಡಾದಲ್ಲಿ 8 ನಾಯಕರ ನೇತೃತ್ವದಲ್ಲಿ ಎರಡನೇ ವರ್ಷದ ಪಲ್ಲಕ್ಕಿ ಉತ್ಸವ ಬಹು ವಿಜೃಂಭಣೆಯಿಂದ ನಡೆಯಿತ್ತು.
ನಂತರ ಮೆರವಣಿಗೆ ಮುಖಾಂತರ ಸದ್ಗುರು ಸೇವಾಲಾಲ್ ಮಹಾರಾಜರ ಜಗಧಂಬಾ ದೇವಿಯ ಭಾವಚಿತ್ರದೊಂದಿಗೆ ಸ್ಟೇಷನ್ ತಾಂಡಾದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿಯನ್ನು ಪೂಜಿಸುತ್ತಾ ಬಂಜಾರ ಸಮಾಜದ ಸಂಸ್ಕೃತಿಯನ್ನು ಎತ್ತಿ ಇಡಿಯುತ್ತಾ ಬಗೆ ಬಗೆಯ ಬಂಜಾರ ವೇಷಗಳನ್ನು ಧರಿಸಿ ಯುವತಿಯರು ಕುಂಭಮೇಳ ಆರುತಿ ಹಿಡಿದುಕೊಂಡು ಭಜನೆ ಮತ್ತು ಡೊಳ್ಳು, ಡಿಜೆ ಮುಖಾಂತರ ಪಲ್ಲಕಿಯು ಸೇವಾಲಾಲ್ ದೇವಸ್ಥಾನಕ್ಕೆ ತಲುಪಿತ್ತು.
ಈ ಸಂದರ್ಭದಲ್ಲಿ ಕಿಶನ್ ರೂಪಲಾ ನಾಯಕ, ಕಿರಣ್ ಭೀಮಾ ನಾಯಕ, ಮೋತಿಲಾಲ್ ಬಾಬು ನಾಯಕ, ಲಕ್ಷ್ಮಣ ವಿಠಲ್ ನಾಯಕ್, ಚಂದು ನಾಯಕ, ಚಂರ್ದ ಭೀಕು ನಾಯಕ, ಪೊಮ್ಯಾ ನಾಯಕ, ರವೀಂದ್ರ ತಾರಾನಾಥ್,ನಾಯಕ, ದೇವಸ್ಥಾನ ಪೂಜಾರಿ, ಪೋಮು ಪಾಂಡು ಚವ್ಹಾಣ, ಬಂಜಾರ ಸಮಾಜದ ಗೌರವಾಧ್ಯಕ್ಷ ಗೋಪಾಲ ರಾಠೋಡ, ಸೇವಾಲಾಲ್ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಭೀಮಸಿಂಗ್ ಚವ್ಹಾಣ, ಪುರಸಭೆ ಸದಸ್ಯ ಜಗದೀಶ್ ಡಿ ಚವ್ಹಾಣ, ಭಮು ಪವಾರ, ಶಂಕರ್ ಬಾಬು ನಾಯಕ, ರಮೇಶ್ ನಾಗು ರಾಠೋಡ, ಚಂದರ್ ಮೋಟನಳ್ಳಿ, ದೇವಲಾ ನಾಮು ಚವ್ಹಾಣ, ಸಂಜು ರಾಠೋಡ, ಕುಶಾನ ಜಾಧವ, ಮನೋಜ್ ರಾಠೋಡ್ ಗೋರ್ ಸಿಕವಾಡಿ ಅಧ್ಯಕ್ಷ ಮನೋಜ್ ರಾಠೋಡ, ಅಂಬು ರಾಠೋಡ, ನಾಗ್ಯಾ ದೇವಲಾ, ಗೋಪಿ ರಾಠೋಡ, ಪಾಂಡು ರಾಠೋಡ, ರಾಮ ಚವ್ಹಾಣ, ರವಿ ಜಾಧವ, ಸುಭಾಷ್ ಜಾಧವ, ದೇವಿದಾಸ್ ಚವ್ಹಾಣ್ ಸೇವಾಲಾಲ್ ದೇವಸ್ಥಾನ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ದೇವಿದಾಸ್ ಚವ್ಹಾಣ, ಸೇವಾಲಾಲ್ ಜಗಧಂಬಾ ದೇವಿ ದೇವಸ್ಥಾನ ಅಧ್ಯಕ್ಷ ಶ್ರೀಕಾಂತ್ ರಾಠೋಡ, ಆಕಾಶ್ ಚವ್ಹಾಣ, ವಿಜಯ್ ಕುಮಾರ್ ಚವ್ಹಾಣ, ಗಣೇಶ್ ಚವ್ಹಾಣ, ಬಾಲರಾಜ್ ಚವ್ಹಾಣ, ವಿನೋದ್ ಪವಾರ, ದೀಪಕ್ ಜಾಧವ, ಸಂತೋಷ ರಾಠೋಡ, ಅಂಬದಾಸ್ ರಾಠೋಡ, ವಿಕಾಸ್ ರಾಠೋಡ, ವಾಸು ರಾಠೋಡ, ಸುನಿಲ್ ಚವ್ಹಾಣ, ಪ್ರೇಮ್ ಜೈರಾಮ್ ನಾಯಕ್, ಚಂದ್ರಕಾಂತ್ ಪವಾರ, ಕಿರಣ್ ಡಿಜೆ, ಪ್ರೇಮ್ ತುಳಜಾರಾಮ್ ಚವ್ಹಾಣ, ಧತು ಪವಾರ್ ಪೊಲೀಸ್, ಅನಿಲ್ ಪವಾರ, ಗೋಪಿ ಚವ್ಹಾಣ, ಸುಭಾಷ್ ರಾಠೋಡ, ಕಿಶು ರಾಠೋಡ, ಸುನಿಲ್ ಚವ್ಹಾಣ, ಗುರುನಾಥ ರಾಠೋಡ, ಅರ್ಜುನ್ ಚವ್ಹಾಣ, ಆಕಾಶ್ ಚವ್ಹಾಣ, ಕುಮಾರ್ ಚವ್ಹಾಣ, ಅಂಬದಾಸ್ ಚವ್ಹಾಣ, ಅವಿನಾಶ್ ಪವಾರ, ರಮೇಶ್ ಪವಾರ, ಸಂಜು ರಾಠೋಡ್, ಕಾಶಿನಾಥ್ ಚವ್ಹಾಣ, ಚಂದು ಚವ್ಹಾಣ, ನರೇಶ್ ಚವ್ಹಾಣ ಸೇರಿದಂತೆ ಅನೇಕ ಜನ ಸಮಾಜದ ಮುಖಂಡರು ತಾಯಂದಿರು ಸೇರಿದಂತೆ ಇತರರು ಇದ್ದರು.
ತಹಸೀಲ್ ಕಚೇರಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ.
ಚಿತ್ತಾಪುರ: ತಹಸೀಲ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯದ ಸಂರಕ್ಷಕ ಮಹಾನ್ ವಚನಕಾರ ಮಡಿವಾಳ ಮಾಚಿದೇವ ಜಯಂತ್ಯುತ್ಸವ ನಿಮಿತ್ತ ಭಾವಚಿತ್ರಕ್ಕೆ ತಹಸೀಲ್ದಾರ್ ನಾಗಯ್ಯ ಹಿರೇಮಠ ಪೂಜೆ ಸಲ್ಲಿಸಿ ಗೌರವ ನಮನಗಳು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು, ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ಮಡಿವಾಳ ಸಮಾಜದ ತಾಲೂಕಾಧ್ಯಕ್ಷ ಸಾಬಣ್ಣ ಮಡಿವಾಳ, ಮುಖಂಡರಾದ ವಿಜಯಕುಮಾರ್ ಮಡಿವಾಳ, ದೇವೇಂದ್ರಪ್ಪ ಮಡಿವಾಳ, ಸುರೇಶಕುಮಾರ್ ಮಡಿವಾಳ, ಮಾದೇವ ಮಡಿವಾಳ, ಲಕ್ಷ್ಮಣ್ ಮಡಿವಾಳ, ಸೂರ್ಯಕಾಂತ್ ಮಡಿವಾಳ, ರವಿಕುಮಾರ್ ಮಡಿವಾಳ, ವಿಶ್ವನಾಥ ಮಡಿವಾಳ, ಗೌರೀಶ್ ಮಡಿವಾಳ, ನಾಗಣ್ಣ ಮಡಿವಾಳ ದಿಗ್ಗಾಂವ, ಶರಣಪ್ಪ ಮಡಿವಾಳ, ನಾಗರಾಜ ಮಡಿವಾಳ, ಹುಸನಪ್ಪ ಮಡಿವಾಳ ಕಾಶಿನಾಥ ಮಡಿವಾಳ, ಸೇರಿದಂತೆ ಇತರರು ಇದ್ದರು.
ಜಿಲ್ಲಾಧ್ಯಕ್ಷ ಸ್ಥಾನ ನೀಡಲು ಕೋಲಿ ಸಮಾಜದ ಮುಖಂಡರ ಆಗ್ರಹ.
ಚಿತ್ತಾಪುರ: ಕೋಲಿ ಸಮಾಜದ ಹಿರಿಯ ಮುಖಂಡರು ಹಾಗೂ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾದ ಅವ್ವಣ್ಣ ಮ್ಯಾಕೇರಿ ಅವರಿಗೆ ಕಲಬುರ್ಗಿ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕು ಎಂದು ಕೋಲಿ ಸಮಾಜದ ಮುಖಂಡರಾದ ಅಂಬು ಹೋಳಿಕಟ್ಟಿ, ತಿಪ್ಪಣ್ಣ ಇವಣಿ, ರಾಜಶೇಖರ ಮೂಲಿಮನಿ ಹೊಸ್ಸುರ್ ಅವರು ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅವ್ವಣ್ಣ ಮ್ಯಾಕೇರಿ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಪಕ್ಷದ ಸಂಘಟನೆಗೆ ಹಗಲಿರಳು ಶ್ರಮಿಸುತ್ತಾ ಬಂದಿರುತ್ತಾರೆ. ಅಲ್ಲದೇ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳು ಸೇರಿದಂತೆ ಅನೇಕ ಚುನಾವಣೆಯಲ್ಲಿ ಸಕ್ರೀಯವಾಗಿ ಶ್ರಮಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣಿಕರ್ತರಾಗಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇಲ್ಲಿವರೆಗೆ ಹಿಂದುಳಿದವರಿಗೆ ಅವಕಾಶ ನೀಡಿಲ್ಲ ಬರೀ ಮೇಲ್ವರ್ಗದವರಿಗೆ ಮಣೆ ಹಾಕಲಾಗಿದೆ ಹೀಗಾಗಿ ಹಿಂದುಳಿದವರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾಧ್ಯಕ್ಷ ಆಯ್ಕೆ ಮಾಡುವಲ್ಲಿ ಅವ್ವಣ್ಣ ಮ್ಯಾಕೇರಿ ಅವರಿಗೆ ಅವಕಾಶ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮುಡ್ ಅವರು ಭರವಸೆಯನ್ನು ನೀಡಿದ್ದರು. ಆದರೆ ಭರವಸೆ ಈಡೇರಿಲ್ಲ ಇದರಿಂದ ಜಿಲ್ಲೆಯ ಕಾರ್ಯಕರ್ತರಿಗೆ ತೀವ್ರ ಬೇಸರವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಸದ್ಯ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಅಶೋಕ ಬಗಲಿ ಇವರನ್ನು ಬದಲಾವಣೆ ಮಾಡಿ ಅವ್ವಣ್ಣ ಮ್ಯಾಕೇರಿ ಇವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಇವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡದೆ ಇದ್ದ ಪಕ್ಷದಲ್ಲಿ ಪಕ್ಷದ ಮುಖಂಡರ ವಿರುದ್ಧ ಉಗ್ರಸ್ವರೂಪ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ರಾಜಸ್ಥಾನಿಗಳಿಂದ ಹಣ ವಸೂಲಿ: ರೈತರ ಆಕ್ರೋಶ.
ಚಿತ್ತಾಪುರ: ತೊಗರಿ ರಾಶಿ ಮಾಡುವ ರಾಜಸ್ಥಾನ ಯಂತ್ರಗಳ ಮಾಲಿಕರು ಸಿಕ್ಕಾಪಟ್ಟೆ ದರ ಹೆಚ್ಚಳ ಮಾಡಿ ರೈತರ ಹತ್ತಿರ ಹೆಚ್ಚಿನ ದರದಲ್ಲಿ ಹಣ ವಸೂಲಿ ಮಾಡಿರುವ ಅವರ ಮೇಲೆ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ರೈತ ಮುಖಂಡರು ಮಂಗಳವಾರ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಳೆದ ಸಾಲಿನಲ್ಲಿ ತೊಗರಿ ರಾಶಿ ಮಾಡುವ ರಾಜಸ್ಥಾನ ಯಂತ್ರಗಳ ಮಾಲಿಕರು ತೊಗರಿ 75 ಕೆ.ಜಿ ಒಂದು ಪಾಕೀಟ ರಾಶಿ ಮಾಡಲು ರೂ.150 ಕಡಲೆ ರಾಶಿಗೆ ರೂ.80 ತೆಗೆದುಕೊಂಡು ತಾಲೂಕಿನ ರೈತರ ಜಮೀನುಗಳನ್ನು ರಾಶಿ ಮಾಡಿರುತ್ತಾರೆ.
ಆದರೆ ಈ ವರ್ಷ ಅಂದರೆ 2024-25ನೇ ಸಾಲಿನಲ್ಲಿ ತೊಗರಿ 75 ಕೆ.ಜಿ ಒಂದು ಪಾಕೇಟಿಗೆ 250 ಹಾಗೂ ಕಡಲೆ ರಾಶಿಗೆ 150 ಹಣ ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತು ರೈತರು, ಅವರಿಗೆ ತಕರಾರು ಮಾಡಿದರೆ ನಾವು ಮಾಡುವುದು ಹೀಗೆ ನೀವು ಮಾಡಿಕೊಳ್ಳಬೇಕಾದರೆ ಮಾಡಿಕೊಳ್ಳಿ ಇಲ್ಲವಾದರೆ ಬಿಡಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ತೊಗರಿ, ಕಡಲೆ ಬೆಲೆ ಬಹಳ ಕಡಿಮೆ ಇದ್ದು ಇದರಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ.
ಆದಕಾರಣ ರೈತರ ಹತ್ತಿರ ಹೆಚ್ಚಿನ ರೀತಿಯಲ್ಲಿ ಹಣ ವಸೂಲಿ ಮಾಡುತ್ತಿರುವ ರಾಜಸ್ಥಾನ ಮಶೀನಗಳ ಮಾಲಿಕರ ಮೇಲೆ ಸೂಕ್ತ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡರಾದ ರಾಮಲಿಂಗ ಬಾನರ್, ಸಿದ್ಧರಾಮೇಶ್ವರ ಸಜ್ಜನಶೆಟ್ಟಿ, ನಿಂಗಣ್ಣ ಹೆಗಲೇರಿ, ಬಸವರಾಜ ಲೋಕನಳ್ಳಿ, ಪ್ರಭು ಹಲಕಟ್ಟಿ, ಲಕ್ಷ್ಮೀಕಾಂತ ಸಾಲಿ, ಮೈಪಾಲ ಮೂಲಿಮನಿ, ಬಸವರಾಜ ಮೈನಾಳಕರ್, ಕರಿಗೂಳಿ ವಾರ್ಡ್, ಕರ್ಣಕುಮಾರ ಅಲ್ಲೂರ, ಇಬ್ರಾಹಿಂ ನೈಕೋಡಿ, ಮಾರುತಿ ಇವಣಿ, ಶಿವಾಜಿ ಸೇರಿದಂತೆ ಇತರರು ಇದ್ದರು.
ಪಲ್ಲಕ್ಕಿ ಉತ್ಸವಕ್ಕೆ ಕಂಬಳೇಶ್ವರ ಶ್ರೀ ಚಾಲನೆ
ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾದಲ್ಲಿ ಸೇವಾಲಾಲ್ ಮಹಾರಾಜರ ಪಲ್ಲಕ್ಕಿ ಉತ್ಸವಕ್ಕೆ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಚಾಲನೆ ನೀಡಿದರು. ತುಕಾರಾಮ ಖೀರು ನಾಯಕ ಅವರ ಮನೆಯಿಂದ ಸೇವಾಲಾಲ್ ಮಹಾರಾಜರ ಪಲ್ಲಕ್ಕಿ ಉತ್ಸವ ಪ್ರಾರಂಭಗೊಂಡು ತಾಂಡಾದ ಎಲ್ಲ ಬೀದಿಗಳಲ್ಲಿ ಪಲ್ಲಕ್ಕಿಯ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ತಾಂಡಾದ ನಾಯಕರಾದ ತುಕಾರಾಮ ಖೀರು ನಾಯಕ, ಕನ್ನು ಯಂಕು ನಾಯಕ, ಚಂದ್ರಾಮ ಚವ್ಹಾಣ, ಡಾವ ಕಿಶನ, ಕಿಶನ ಕಾರಭಾರಿ, ಸರಪಂಚ ಭೋಜು ಪವಾರ, ಕಾಂತು ಚವ್ಹಾಣ, ಲಕ್ಷಣ ಪಾಂಡು, ಅನಿಲ, ಶಂಕರ, ನಾಗರಾಜ, ವಿಠಲ ರಾಠೋಡ, ಖುಬ್ಬು ರಾಠೋಡ, ವಿಕಾಸ ಪವಾರ, ಸುರೇಶ ರೂಪಲಾ, ರಮೇಶ್ ನಾಗು, ರವಿ ಹೀರು, ಆಕಾಶ ನಿಲು ಚವ್ಹಾಣ, ಖುಬ್ಬು ಚವ್ಹಾಣ, ಶಿವರಾಮ ಚವ್ಹಾಣ, ಅಶ್ವಥ ರಾಠೋಡ ಸೇರಿದಂತೆ ತಾಂಡಾದ ತಾಯಂದಿರು ಹಲವಾರು ಗಣ್ಯಮಾನ್ಯರು ಇದ್ದರು.
ತೋಟೇಂದ್ರ ಸ್ವಾಮೀಜಿ ಅಳಿಯ ಆತ್ಮಹತ್ಯೆ.
ಚಿತ್ತಾಪುರ: ತಾಲೂಕಿನ ನಾಲವಾರದ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಭಕ್ತನೋರ್ವ ಹಾಡಹಗಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಗುಂಡು ಹಿರೇಮಠ ಆತ್ಮಹತ್ಯೆಗೆ ಒಳಗಾದ ವ್ಯಕ್ತಿ (34) ಮಠದಲ್ಲಿನ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಮೃತ ಗುಂಡು ಮಠದ ಪೀಠಾಧಿಪತಿ ಪೂಜ್ಯ ಶ್ರೀ ತೋಟೇಂದ್ರ ಶಿವಾಚಾರ್ಯ ಅವರ ತಂಗಿಯ ಪುತ್ರ ಎನ್ನಲಾಗಿದ್ದು, ಒಂದು ವರ್ಷದ ಹಿಂದೆ ಇವರ ಮದುವೆಯಾಗಿತ್ತು. ಪೂಜ್ಯರ ಸೇವೆ ಮಾಡುತ್ತ ಮಠದಲ್ಲೇ ವಾಸವಿದ್ದರು ಎಂಬುದು ಸಾರ್ವಜನಿಕರ ಮೂಲಗಳಿಂದ ತಿಳಿದುಬಂದಿದೆ. ಇನ್ನೊಂದು ಕಡೆ ಶ್ರೀ ಕೋರಿಸಿದ್ದೇಶ್ವರರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಮುಗಿದು ಒಂದು ವಾರ ಕಳೆದಿಲ್ಲ ಮಠದಲ್ಲಿ ಆತ್ಮಹತ್ಯೆ ಘಟನೆ ತಿಳಿದು ಭಕ್ತರಲ್ಲಿ ದು:ಖದ ವಾತಾವರಣ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಸಿಪಿಐ ಚಂದ್ರಶೇಖರ ತಿಗಡಿ ಹಾಗೂ ವಾಡಿ ಠಾಣೆ ಪಿಎಸ್‌ಐ ತಿರುಮಲೇಶ ಕುಂಬಾರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.
ಬುಧವಾರ, ಜನವರಿ 29, 2025
ಭಾಗೋಡಿ- ಮುಡಬೂಳ ರಸ್ತೆ ದುರಸ್ತಿಗೆ ಆಗ್ರಹ.
ಚಿತ್ತಾಪುರ: ಭಾಗೋಡಿ ಮತ್ತು ಮುಡಬೂಳ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಜನ, ವಾಹನ ಸಂಚಾರಕ್ಕೆ ತೊಂದರೆಯಾಗಿದ್ದರಿಂದ ತಕ್ಷಣ ದುರಸ್ತಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ತಾಲೂಕಿನ ಭಾಗೋಡಿ ಗ್ರಾಮದಿಂದ ಮುಡಬೂಳ ಗ್ರಾಮ 8 ಕಿಲೋ ಮೀಟರ್ ರಸ್ತೆ ಡಾಂಬರೀಕರಣ ಮಾಡಿ ಎರಡು/ಮೂರು ವರ್ಷಗಳು ಕಳೆದಿಲ್ಲ ರಸ್ತೆಯ ಸ್ಥಿತಿಗತಿ ಬದಲಾಗಿ ರಸ್ತೆಯಲ್ಲಿ ಗುಂಡಿ, ತಗ್ಗುಗಳು ಬಿದ್ದಿರುವದರಿಂದ ವಾಹನ ಸಂಚಾರ ಕಷ್ಟಕರವಾಗುತ್ತಿದೆ. ಅದಲ್ಲದೇ, ದಿನಾಲು ಒಂದಲ್ಲ ಒಂದು ಅಪಘಾತಗಳು ನಡೆಯುತ್ತಿರುವುದರಿಂದ ಜನರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದಿಟ್ಟುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಪ್ರತಿನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ರಸ್ತೆಯ ಅವ್ಯವಸ್ಥೆಯಿಂದಾಗಿ ಸಕಾಲಕ್ಕೆ ಪ್ರಯಾಣಿಕರು, ವಿದ್ಯಾರ್ಥಿಗಳು, ಸಾರ್ವಜನಿಕರು ತಮ್ಮ ತಮ್ಮ ಕೆಲಸಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯ ಸಾವಿರಾರು ಜನ ಈ ಮಾರ್ಗದಲ್ಲಿ ಪ್ರಯಾಣ ಮಾಡುತ್ತಿದ್ದು ರಸ್ತೆ ದುರಸ್ತಿ ಮಾಡದಿರುವ ಬಗ್ಗೆ ಸಾರ್ವಜನಿಕರು ಇಲಾಖೆ ಆಧಿಕಾರಿಗಳ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತದ್ದಾರೆ. ಕೂಡಲೇ ಈ ರಸ್ತೆ ದುರಸ್ತಿ ಕೆಲಸ ಪ್ರಾರಂಭಿಸಿ ಸಾರ್ವಜನಿಕರಿಗೆ ಆನುಕೂಲ ಮಾಡಿಕೊಡುವಂತೆ ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಭಾಗೋಡಿ-ಮುಡಬೂಳ ರಸ್ತೆಯ ಮೇಲೆ ದಿನನಿತ್ಯ ಮರಳು ತುಂಬಿದ ಬಾರಿ ಗಾತ್ರದ ಟಿಪ್ಪರ್, ಟ್ರಾಕ್ಟರ್ ಓಡಾಟದಿಂದ ರಸ್ತೆ ಹಾಳಾಗಿದೆ ಮರಳು ಗಾಡಿಗಳ ಓಡಾಟಕ್ಕೆ ಕಡಿವಾಣ ಹಾಕಿ ರಸ್ತೆ ಸುಧಾರಣೆ ಮಾಡಿ ಗ್ರಾಮಗಳ ಜನರ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು ಎಂದರು.
- ಬಸವರಾಜ ಪೋಲಿಸ್ ಪಾಟೀಲ ದಳಪತಿ
ಗ್ರಾಮಸ್ಥರು ಭಾಗೋಡಿ.
ರಸ್ತೆ ದುರಸ್ತಿ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಎರಡು ಗ್ರಾಮಗಳ ಗ್ರಾಮಸ್ಥರು ಸೇರಿ ಕಲಬುರ್ಗಿ ಹೋಗುವ ಮುಡಬೂಳ ಹತ್ತಿರದ ಮುಖ್ಯ ರಸ್ತೆ ಬಂದ್ ಮಾಡುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
- ಭಾಗಣ್ಣ ಮುಡಬೂಳ
ಜಿಲ್ಲಾ ಉಪಾಧ್ಯಕ್ಷರು, ಅಂಬೇಡ್ಕರ್ ಸೇವಾ ಸಮಿತಿ ಕಲಬುರ್ಗಿ.
ಭವ್ಯ ಮೆರವಣಿಗೆ, ಡಿಜೆ ಸೌಂಡಗೆ ಕುಣಿದು ಕುಪ್ಪಳಿಸಿದ ಯುವಕರು.
ಚಿತ್ತಾಪುರ: ನಿಜಶರಣ ಅಂಬಿಗರ ಚೌಡಯ್ಯ ನವರ 905 ನೇ ಜಯಂತ್ಯೋತ್ಸವ ನಿಮಿತ್ತ ತಾಲೂಕು ಯುವ ಕೋಲಿ ಸಮಾಜದ ಅಧ್ಯಕ್ಷ ರಾಜೇಶ್ ಹೋಳಿಕಟ್ಟಿ ನೇತೃತ್ವದಲ್ಲಿ ಮಂಗಳವಾರ ರಾತ್ರಿ ಪಟ್ಟಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನವರ 9 ಅಡಿ ಎತ್ತರದ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.
ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಿಂದ ಪ್ರಾರಂಭವಾಗದ ಮೆರವಣಿಗೆ ಸ್ಟೇಷನ್ ರಸ್ತೆ, ನಾಗಾವಿ ವೃತ್ತ, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ಲಾಡ್ಡಿಂಗ್ ಕ್ರಾಸ್ ವರೆಗೆ ನಡೆಯಿತ್ತು.
ಈ ವೇಳೆ ತಾಲೂಕು ಯುವ ಅಧ್ಯಕ್ಷ ರಾಜೇಶ್ ಹೋಳಿಕಟ್ಟಿ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯ ನವರ ಮೂರ್ತಿಯ ಶೋಭಾಯಾತ್ರೆ ಮಾಡುವುದಕ್ಕೆ ಎಷ್ಟೇ ಅಡೆತಡೆ ಹಾಗೂ ಯುವಕರ ಉತ್ಸಾಹ ಕುಗ್ಗಿಸುವ ಎಷ್ಟೇ ಪ್ರಯತ್ನ ಮಾಡಿದರೂ ಸಹ ಯುವಕರ ಒಗ್ಗಟ್ಟಿನಿಂದ ಮತ್ತು ಸಹಕಾರದಿಂದ ಯಶಸ್ವಿಯಾಗಿದೆ, ಇದರಿಂದ ಯುವಶಕ್ತಿ ಏನೆಂಬುದು ತೋರಿಸಿಕೊಟ್ಟಿದೆ. ಇದೊಂದು ಐತಿಹಾಸಿಕ ಶೋಭಾಯಾತ್ರೆ ಎಂದರೆ ತಪ್ಪಾಗಲಾರದು ಈ ನಿಟ್ಟಿನಲ್ಲಿ ಬಹಳ ಅದ್ದೂರಿಯಾಗಿ ಹಾಗೂ ಅಚ್ಚುಕಟ್ಟಾಗಿ ಹಾಗೂ ಶಾಂತಿಯುತವಾಗಿ ನಡೆದಿದೆ ಇದಕ್ಕೆ ಸಹಕರಿಸಿದ ಕೋಲಿ ಸಮಾಜದವರಿಗೂ ಹಾಗೂ ಇತರೆ ಸಮಾಜದ ಮುಖಂಡರಿಗೂ, ಯುವಕರಿಗೂ ಹಾಗೂ ರಕ್ಷಣೆ ನೀಡದ ಪೊಲೀಸ್ ಅಧಿಕಾರಿಗಳಿಗೂ ಧನ್ಯವಾದಗಳು ಸಲ್ಲಿಸಿದರು.
ಮೆರವಣಿಗೆಯಲ್ಲಿ ಅಂಬಿಗರ ಚೌಡಯ್ಯ ನವರ 9 ಅಡಿ ಎತ್ತರದ ಮೂರ್ತಿ ಜೊತೆಗೆ ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಎಲ್ಲ ಸಮಾಜಗಳ ಗುರುಗಳ ಭಾವಚಿತ್ರದ ಮೆರವಣಿಗೆ ವಿಶೇಷವಾಗಿತ್ತು. ಡಿಜೆ ಸೌಂಡ್ ಗೆ ಯುವಕರು ಉತ್ಸಾಹ ಮತ್ತು ಹರ್ಷೋಲಾಸದಿಂದ ಕುಣಿದು ಹರ್ಷೋಲ್ಲಾಸದಿಂದ ಕುಣಿದು ಕುಪ್ಪಳಿಸಿದರು, ಸೋಲ್ಲಾಪುರದ ಡೊಳ್ಳು ಕುಣಿತ ವಿಶೇಷವಾಗಿ ಆಕರ್ಷಿಸಿತು, ಕುಂಬ ಹೊತ್ತ ಮಹಿಳೆಯರಿಂದ ಮೆರವಣಿಗೆಗೆ ಮೆರುಗು ನೀಡಿತು ಬ್ಯಾಂಜೋ ಮತ್ತು ಹಲಗೆ ವಾದನದ ಅಬ್ಬರ ಜೋರಾಗಿತ್ತು.
ಪಿಎಸ್‌ಐ ಶ್ರೀಶೈಲ್ ಅಂಬಾಟಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರ ಯುವ ಅಧ್ಯಕ್ಷ ಬಸವರಾಜ್ ಮೈನಾಳಕರ, ಯುವ ಮುಖಂಡರಾದ ಸಾಬಣ್ಣ ಹೋಳಿಕಟ್ಟಿ, ಬಸವರಾಜ್ ರಾಜೋಳ್ಳಿ, ದೇವರಾಜ್ ತಳವಾರ, ಪರಮಾನಂದ ಕಲಗುರ್ಕಿ, ರೇವಣಸಿದ್ದು, ಜಗದೀಶ್ ಹಳ್ಳಿ, ಆಕಾಶ್ ಬೆನಕನಳ್ಳಿ, ಬಾಗೇಶ್ ಹಳ್ಳಿ, ಸಾಬಣ್ಣ ಹೋಳಿಕಟ್ಟಿ, ಅಭಿಷೇಕ್ ಯಾರಗಲ್, ಗೌತಮ್, ಮೈಲಾರಿ, ಜಗ್ಗು, ಸುನಿಲ್ ದಂಡೋತಿ, ನಾಗರಾಜ್ ಮೈನಾಳಕರ, ಭೀಮು ಹೋಳಿಕಟ್ಟಿ, ಭೀಮು ಹೋನಗೆರಿ, ಕಾಶಪ್ಪ ಬಾಗೋಡಿ, ಮುನಿಯಪ್ಪ ಬಾಗೋಡಿ, ದಶರಥ ಹೊತಿನಮಡಿ ಸೇರಿದಂತೆ ನೂರಾರು ಯುವಕರು ಭಾಗವಹಿಸಿದ್ದರು.
ಮಂಗಳವಾರ, ಜನವರಿ 28, 2025
ಪರಿಶಿಷ್ಟ ಪಂಗಡಕ್ಕೆ ಸೇರಿಸುವುದೇ ನನ್ನ ಜೀವನದ ಕೊನೆಯ ಆಸೆ: ಚಿಂಚನಸೂರ.
ಚಿತ್ತಾಪುರ: ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದೇ ನನ್ನ ಜೀವನದ ಕೊನೆಯ ಆಸೆಯಾಗಿದೆ ಎಂದು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಹೇಳಿದರು.
ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದ ಹತ್ತಿರ ತಾಲೂಕು ಕೋಲಿ ಸಮಾಜದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ನವರ 905ನೇ ಜಯಂತ್ಯೋತ್ಸವ ನಿಮಿತ್ತ ಶೋಭಾಯಾತ್ರೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಎಲ್ಲ ಸಮಾಜಗಳು ಮುಂದೆ ಬಂದಿವೆ ಆದರೆ ಕೋಲಿ ಸಮಾಜ ಮಾತ್ರ ಹಿಂದುಳಿದಿದೆ ಅದಕ್ಕೆ ನಮ್ಮವರೇ ಕಾರಣ ಎಂದು ದೂರಿದರು.
ಗುರುಮಠಕಲ್ ಕ್ಷೇತ್ರದಿಂದ ನನ್ನ ಸೋಲಿಗೆ ನಮ್ಮವರೇ ಕಾರಣ ಒಂದು ವೇಳೆ ನಾನು ಗೆಲುವು ಸಾಧಿಸಿದ್ದರೆ ಪ್ರಭಾವಿ ಖಾತೆಯ ಪವರಫುಲ್ ಮಂತ್ರಿಯಾಗುತ್ತಿದ್ದೆ, ಹಾಗೂ ಕೋಲಿ ಸಮಾಜ ಎಸ್.ಟಿ ಮಾಡುವ ಸಲುವಾಗಿ ಪ್ರಧಾನಿ ಮೋದಿ ಮನೆ ಮುಂದೆ ಅಮರಣಾಂತ ಉಪವಾಸ ಮಾಡುತ್ತಿದ್ದೆ. ಈಗ ನಾನು ಸೋತರೂ ಅಧಿಕಾರದಲ್ಲಿ ಇದ್ದೇನೆ ಎಂದು ಹೇಳಿದರು.
ನಾನು ಅಧಿಕಾರಕ್ಕೆ ಬಂದಾಗೆಲ್ಲ ಸಾಕಷ್ಟು ಅಭಿವೃದ್ಧಿ ಕೆಲಸಗಳು ಮಾಡಿದ್ದೇನೆ ಆಗಿನ ಮುಖ್ಯಮಂತ್ರಿ ಈರಪ್ಪ ಮೊಯ್ಲಿ ಅವರ ಮೇಲೆ ಒತ್ತಡ ಹೇರಿ ಕೋಲಿ ಸಮಾಜವನ್ನು ಪ್ರವರ್ಗ 1 ಕ್ಕೆ ಸೇರಿಸಿದ್ದೇನೆ, ಕೋಲಿ ಸಮಾಜದ ದೇವಸ್ಥಾನಗಳಿಗೆ 33 ಕೋಟಿ ಅನುದಾನ ನೀಡಿದ್ದೇನೆ, ಎಸ್.ಟಿ ಸೇರಿಸುವ ಸಲುವಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದೇನೆ ಹೀಗಾಗಿ ನಾನು ಸುಮ್ಮನೆ ಸಾಯುವುದಿಲ್ಲ ಕೋಲಿ ಸಮಾಜವನ್ನು ಎಸ್.ಟಿ ಮಾಡಿಯೇ ಸಾಯುತ್ತೇನೆ ಇದು ಶತಸಿದ್ಧ ಎಂದು ವಾಗ್ದಾನ ಮಾಡಿದರು. ಕೋಲಿ ಸಮಾಜ ಎಸ್.ಟಿ ಆದಾಗ ಮಾತ್ರ ಅಭಿವೃದ್ಧಿ ಆಗಲಿದೆ ಹೀಗಾಗಿ ನಮ್ಮ ಕೂಗು ದೆಹಲಿ ಗೆ ಮುಟ್ಟುವ ಹಾಗೆ ಹೋರಾಟ ಮಾಡಬೇಕು ಇದಕ್ಕಾಗಿ ಎಲ್ಲರೂ ಒಗ್ಗೂಡಬೇಕು ಎಂದು ಕರೆ ನೀಡಿದರು.
ಈ ಭಾಗದ ಶಾಸಕರು ಸಚಿವರಾದ ಪ್ರಿಯಾಂಕ್ ಖರ್ಗೆ ಪ್ರಭಾವಿ ನಾಯಕರು, ಅಭಿವೃದ್ಧಿ ಹರಿಕಾರರು ಆಗಿದ್ದು ರಾಜ್ಯ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಹೀಗಾಗಿ ಭವಿಷ್ಯದಲ್ಲಿ ಈ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು. ನಾನು ಸಹ ಮುಂದಿನ ಚುನಾವಣೆಯಲ್ಲಿ ಗೆದ್ದು ರಾಜ್ಯದ ಉಪ ಮುಖ್ಯಮಂತ್ರಿ ಆಗಲಿದ್ದೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ತೋನಸನಳ್ಳಿ ಅಲ್ಲಮಪ್ರಭು ಸಂಸ್ಥಾನ ಮಠದ ಶ್ರೀ ಮಲ್ಲಣ್ಣಪ್ಪ ಮಹಾಸ್ವಾಮಿಗಳು ಮಾತನಾಡಿ, ಚಿತ್ತಾಪುರ ಕ್ಷೇತ್ರದಲ್ಲಿ ಕೋಲಿ ಸಮಾಜದ ಬಹುದೊಡ್ಡ ಶಕ್ತಿ ಇದೆ.ಚುನಾವಣೆಗಳಲ್ಲಿ ರಾಜಕೀಯ ಚಿತ್ರಣ ಬದಲಾಯಿಸುವ ಸಾಮರ್ಥ್ಯ ಇದೆ ಈ ಕ್ಷೇತ್ರದಿಂದಲೇ ಬಾಬುರಾವ್ ಚಿಂಚನಸೂರ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕೋಲಿ ಸಮಾಜದ ಶಕ್ತಿ ಇಡೀ ರಾಜ್ಯಕ್ಕೆ ತೋರಿಸಿದ್ದಾರೆ ಅಲ್ಲದೇ ಪ್ರಿಯಾಂಕ್ ಖರ್ಗೆ ಶಾಸಕರಾಗಿ ಸಚಿವರಾಗಿ
ಆಗಿದ್ದಾರೆ ಹೀಗಾಗಿ ಕೋಲಿ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಕೋಲಿ ಸಮಾಜದ ಮುಖಂಡರಾದ ಲಚ್ಚಪ್ಪ ಜಮಾದಾರ, ಭೀಮಣ್ಣ ಸಾಲಿ ಮಾತನಾಡಿದರು. ಪಿಎಸ್‌ಐ ಶ್ರೀಶೈಲ್ ಅಂಬಾಟಿ, ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಗೌರವಾಧ್ಯಕ್ಷ ರಾಮಲಿಂಗ ಬಾನರ್, ನಗರಾಧ್ಯಕ್ಷ ಪ್ರಭು ಹಲಕಟ್ಟಿ, ಯುವ ಅಧ್ಯಕ್ಷ ಬಸವರಾಜ ಮೈನಾಳಕರ್, ಮುಖಂಡರಾದ ಹಣಮಂತ ಸಂಕನೂರ, ಬಸವರಾಜ ಚಿನ್ನಮಳ್ಳಿ, ರೇಖಾ ತಳವಾರ, ಭೀಮರಾಯ ಹೊತಿನಮಡಿ, ಮಹೇಶ್ ಮುಕೆ, ಶರಣಪ್ಪ ನಾಶಿ, ಪಿಂಟು ಜಮಾದಾರ, ದತ್ತು ಬಸವಕಲ್ಯಾಣ, ಮುನಿಯಪ್ಪ ಕೊಳ್ಳಿ, ಸಿದ್ದು ಸಂಗಾವಿ, ದೇವಿಂದ್ರ ಕೆರಳ್ಳಿ, ಸುರೇಶ್ ಬೆನಕನಳ್ಳಿ, ಸತೀಶ್ ಜಮಾದಾರ, ಸಂತೋಷ ಮಳಬಾ, ಮಲ್ಲಿಕಾರ್ಜುನ ಸಂಗಾವಿ, ಕರಣಕುಮಾರ್ ಅಲ್ಲೂರು, ಶರಣು ಡೋಣಗಾಂವ, ಚಂದ್ರು ಕಾಳಗಿ, ಮೈಪಾಲ್ ಮೂಲಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಎಮ್ಮೆನೋರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಿಂದ. ಅರಣಕಲ್ ನಿರೂಪಿಸಿದರು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.
ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...
-
ಚಿತ್ತಾಪುರ: ಪಟ್ಟಣದ ವರಣನಗರದಲ್ಲಿರುವ ಪುರಾತನ ಶರಣಬಸವೇಶ್ವರ ದೇವಸ್ಥಾನದಲ್ಲಿ ಜನೆವರಿ 19ರ ಸೋಮವಾರ ರಾತ್ರಿ ಕಳ್ಳರು ನುಗ್ಗಿ ದೇವಸ್ಥಾನದ ಹುಂಡಿಯನ್ನು ಕಳ...
-
ಮನೆಗಳ ಹಂಚಿಕೆ ಪ್ರಕ್ರಿಯೆ ಮುಂದೂಡಲಾಗಿದೆ ಚಿತ್ತಾಪುರ: ಪಟ್ಟಣದ ನಾಗಾವಿ ಎಜುಕೇಷನ್ ಹಬ್ ಪ್ರದೇಶದಲ್ಲಿ ನಿರ್ಮಿಸಲಾದ 1000 ಜಿ+1 ಮನೆಗಳ ಹಂಚಿಕೆಯು ಮಂಗಳ...