ಕಸಾಪ ಚುನಾವಣೆ: ಬಿರುಸಿನಿಂದ ನಡೆದ ಮತದಾನ.
ಚಿತ್ತಾಪುರ: ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಈಗಾಗಲೇ ಮತದಾನ ಬೆಳಗ್ಗೆ 8 ಗಂಟೆಯಿಂದಲೇ ಬಿರುಸಿನಿಂದ ಮತದಾನ ಆರಂಭಗೊಂಡಿದೆ. ಪಟ್ಟಣದ ತಹಸೀಲ್ ಕಚೇರಿಯಲ್ಲಿ ನಡೆಯುತ್ತಿರುವ ಕಸಾಪ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆಯುತ್ತಿದ್ದು.ಮತದಾರರು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ಪರಿಷತ್ತು ಕೊಟ್ಟಿರುವ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಸರ್ಕಾರದ ಮಾನ್ಯತೆ ಹೊಂದಿರುವ ಮತದಾರರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ತಾಲೂಕಿನಲ್ಲಿ ಒಟ್ಟು 439 ಮತದಾರರಲ್ಲಿ 12 ಗಂಟೆ ಸಮಯದವರೆಗೆ 124 ರಷ್ಟು ಮತದಾನ ಆಗಿದೆ ಎಂದು ಕಸಾಪ ತಾಲೂಕು ಚುನಾವಣಾ ಅಧಿಕಾರಿ ಮೋಹನ್ ರೆಡ್ಡಿ ತಿಳಿಸಿದ್ದಾರೆ. 11ಗಂಟೆಯಿಂದ ಕೆಲವೊತ್ತು ಮಳೆಸುರಿದರಿಂದ ಮತದಾನಕ್ಕೆ ಅಡ್ಡಿ ಉಂಟಾಗಿತ್ತು ಆದರೂ ಸಹ ಮತದಾರರು ಕ್ರುಷರ್ ನಲ್ಲಿ ಬಂದು ಮತದಾನ ಮಾಡಿದರು. ಈ ಚುನಾವಣೆಯಲ್ಲಿ ರಾಜ್ಯಾದ್ಯಂತ 3 ಲಕ್ಷಕ್ಕೂ ಅಧಿಕ ಮಂದಿ ಮತದಾರರಿದ್ದಾರೆ. ಸುಮಾರು 410 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಮಹೇಶ್ ಜೋಶಿ, ಮ.ಚಿ ಕೃಷ್ಣ, ವ.ಚ ಚನ್ನೇಗೌಡ, ಸಿ.ಕೆ ರಾಮೇಗೌಡ, ಸಂಗಮೇಶ ಬಾದವಾಡಗಿ, ರಾಜಶೇಖರ ಮುಲಾಲಿ, ಬಾಡದ ಭದ್ರಿನಾಥ್, ಬಸವರಾಜ ಶಿ. ಹಳ್ಳೂರ, ಶಿವರಾಜ ಪಾಟೀಲ, ಸರಸ್ವತಿ ಶಿವಪ್ಪ, ವೈ ರೇಣುಕಾ,ಕೆ. ರತ್ನಾಕರ ಶೆಟ್ಟಿ, ಪ್ರಮೋದ್ ಹಳಕಟ್ಟಿ, ಕೆ. ರವಿ ಅಂಬೇಕರ, ಮಾಯಣ್ಣ, ಸುಧೀಂದ್ರರಾವ್, ಸ...