ಪುನೀತ್,ಅನುಮಾನಾಸ್ಪದ ಸಾವು: ದಾಖಲಾಯ್ತು ದೂರು.
ಬೆಂಗಳೂರು: ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣದಿಂದಾಗಿ ಇಡೀ ಕರ್ನಾಟಕವೇ ಶೋಕಸಾಗರದಲ್ಲಿ ಮುಳುಗಿದೆ. ಅಪ್ಪು ದೈಹಿಕವಾಗಿ ನಮ್ಮನ್ನು ಆಗಲಿ 6 ದಿನಗಳೇ ಕಳೆದರೂ ಅವರ ಅಗಲಿಕೆಯ ನೋವಿಂದ ಹೊರಬರಲು ಅಭಿಮಾನಿಗಳಿಂದ ಸಾಧ್ಯವಾಗುತ್ತಿಲ್ಲ.
ಈ ಮಧ್ಯೆ ನಟ ಪುನೀತ್ ರಾಜ್ ಕುಮಾರ್ ಅನುಮಾನಾಸ್ಪದ ಸಾವಿನ ಕುರಿತು ಸಮಗ್ರ ತನಿಖೆ ಮಾಡಿ ಸತ್ಯಾಸತ್ಯತೆಯನ್ನ ಜನರ ಮುಂದಿಡಬೇಕೆಂದು ಅಪ್ಪು ಅಭಿಮಾನಿಯಾದ ಅರುಣ್ ಪರಮೇಶ್ವರ್ ಎಂಬುವವರು ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಇರೋದೇನು?
೨೯.೧೦.೨೦೨೧ ಆ ದಿನದಂದು ಪುನೀತ್ ರಾಜಕುಮಾರ್ ಅವರ ಸಾವಿನ ಸುದ್ದಿ ಮಾಧ್ಯಮದ ಮೂಲಕ ಸಮಗ್ರ ನಾಡಿನ ಕರ್ನಾಟಕ ಜನರಿಗೆ ತಿಳಿಯುತ್ತದೆ ಹಾಗೂ ಅವರು ಮನೆಯಿಂದ ಕ್ಲಿನಿಕ್ ಗೆ ಹೋಗಬೇಕಾದರೆ ಆರೋಗ್ಯವಾಗಿಯೇ ಹೋಗಿರುತ್ತಾರೆ. ಕ್ಲಿನಿಕ್ನಲ್ಲಿ ಯಾವ ರೀತಿಯ ತಪಾಸಣೆ ನಡೆಸಲಾಯಿತು ಹಾಗೂ ನಡೆಸಿದ ಮೇಲೆ ವಿಕ್ರಂ ಆಸ್ಪತ್ರೆಗೆ ಹೋಗಲು ಯಾಕೆ ತಡವಾಯಿತು, ವಿಕ್ರಮ ಹಾಸ್ಪಿಟಲ್ ಗೆ 15 ನಿಮಿಷ ತಡವಾಗಿ ಹೋಗಲು ಏನು ಕಾರಣ? ಎಲ್ಲಾ ಅನುಮಾನಗಳಿದ್ದು ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕು.
ಹಾಗೂ ಕ್ಲಿನಿಕ್ ನಲ್ಲಿರುವ ಸಿಸಿಟಿವಿ ವಿಡಿಯೋವನ್ನು ಯಾಕೆ ಮಾಧ್ಯಮಗಳಿಗೆ ನೀಡುತ್ತಿಲ್ಲ ಹಾಗೂ ಅಲ್ಲಿ ವೈದ್ಯಾಧಿಕಾರಿಗಳ ನಿರ್ಲಕ್ಷವೇ ಪುನೀತ್ ರಾಜಕುಮಾರ್ ಅವರ ಸಾವಿಗೆ ಕಾರಣವೇ ಹಾಗೂ ಅವರು ಅಷ್ಟು ತುರ್ತುಪರಿಸ್ಥಿತಿಯಲ್ಲಿ ಇದ್ದರೂ ಸಹ ಅವರನ್ನು ಆಂಬುಲೆನ್ಸ್ ನಲ್ಲಿ ಕಳುಹಿಸಲಿಲ್ಲ ಎಲ್ಲಾ ಗೊಂದಲಗಳಿಗೆ ಸೂಕ್ತವಾದ ಪರಿಹಾರವನ್ನು ಮಾಡಬೇಕಾಗಿ ದೂರಿನಲ್ಲಿ ಪರಮೇಶ್ವರ್ ಅವರು ಉಲ್ಲೇಖಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ