ಇಎಸ್ಐ ಮೆಡಿಕಲ್ ಕಾಲೇಜಿನಲ್ಲಿ 15 ದಿನಗಳ ಸ್ವಚ್ಛತಾ ಆಂದೋಲನ.
ಪಟ್ಟಣದ ಇಎಸ್ಐ ಆಸ್ಪತ್ರೆಯ ಮೆಡಿಕಲ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಚ್ಚತಾ ಆಂದೋಲನ ಕಾರ್ಯಕ್ರಮದಲ್ಲಿ ಇಎಸ್ಐನ್ ಡೀನ್ ಇವೋನಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು
ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಎಲ್ಲ ಉದ್ಯೋಗಿಗಳಿಗೆ ಸ್ವಚ್ಛತಾ ಪ್ರತಿಜ್ಞೆಯನ್ನು ನೀಡಿ. ಆವರಣದ ಎಲ್ಲಾ ಸ್ಥಳಗಳಲ್ಲಿ ಸ್ಯಾನಿಟೈಜರ್ ಮಾಡಿ, ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಿ, ಸ್ವಚ್ಛತಾ ಕಾರ್ಯಾಗಾರ ಹಾಗು ಕೋವಿಡ್ ೧೯ ಮುನ್ನೆಚ್ಚರಿಕಾ ಕ್ರಮಗಳನ್ನು ಹಮ್ಮಿಕೊಂಡು ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಈ ಅವಧಿಯಲ್ಲಿ ರಸ್ತೆ, ಶೌಚಾಲಯ, ವಾರ್ಡ್ ಮತ್ತು ಗಿಡ ಮರಗಳನ್ನು ನೆಡುವ ಬಗ್ಗೆ ಒತ್ತುಕೊಡಲಾಯಿತು ಎಂದರು.
ಇಎಸ್ಐ ಮೆಡಿಕಲ್ ಕಾಲೇಜಿನ ಮತ್ತು ಆಸ್ಪತ್ರೆಯಿಂದ ಜೈವಿಕ -ತ್ಯಾಜ್ಯ ನಿರ್ವಹಣೆ, ತೋಟಗಾರಿಕೆ ಮತ್ತು ಶಕ್ತಿಯ ಸಂರಕ್ಷರಣೆಗಾಗಿ ಸ್ತಪ್ ನೀರಿನ ಬಳಕೆ ಇತ್ಯಾದಿಗಳೊಂದಿಗೆ ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಎಲ್ಲಾ ಕಟ್ಟಡಗಳ ಬೆಳಕಿನ ವ್ಯವಸ್ಥೆ,ಸೂಕ್ತವಾದ ಸ್ಥಳಗಳಲ್ಲಿ ಡಸ್ಟ್ ಬಿನ್, ಸ್ಯಾನಿಟೈಜರ್ ಹಾಗು ಹ್ಯಾಂಡ್ ವಾಶಗಳನ್ನು ಇರಿಸುವ ಬಗ್ಗೆ,ಆಸ್ಪತ್ರೆ ಆವರಣದಲ್ಲಿ ಗಿಡ ಮರಗಳನ್ನು ನೆಡುವ ಬಗ್ಗೆ, ಕಚೇರಿ ಆವರಣದಲ್ಲಿ ಸ್ವಚ್ಛತೆಯ ಕುರಿತು ವಿಚಾರಣಾ ಸಂಕಿರಣ / ಕಾರ್ಯಾಗಾರ ಗಳನ್ನುಆಯೋಜಿಸಿ ಜಾಗೃತಿ ಮೂಡಿಸುವುದು,ಫ್ಯಾನ್ , ಫೋಟೋಕಾಪಿ ಯಂತ್ರಗಳು, ಕಂಪ್ಯೂಟರ್ ಸೇರಿದಂತೆ ಎಲ್ಲಾ ಇಲೆಕ್ಟ್ರಾನಿಕ್ ಉಪಕರಣಗಳನ್ನು ಸ್ವಚ್ಛಗೊಳಿಸುವುದು.
ಈ ಸಂದರ್ಭದಲ್ಲಿ ಡಾ.ಕೆ ಪಿ ಪದ್ಮಾಜ್,ಡಾ.ದಿನಂತಾ ಪೂಜಾರಿ, ಡಾ.ಸ್ವಾತಿ, ಬಾಬುಲಾಲ್, ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ