ಬಿಜೆಪಿಗರು ನನ್ನೊಂದಿಗೆ ಬಹಿರಂಗ ಚರ್ಚೆಗೆ ಬರಲಿ: ಖರ್ಗೆ.
ತಾಲೂಕಿನ ಮಾಡಬೂಳ ಗ್ರಾಮದಲ್ಲಿ 2.79 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಜಲಜೀವನ ಮಿಷನ್ ಅಡಿಯಲ್ಲಿ ಮನೆ-ಮನೆಗೆ ನೀರು ಒದಗಿಸುವ ಯೋಜನೆ, ಕರ್ನಾಟಕ ಪಬ್ಲಿಕ್ ಶಾಲೆಗೆ ಮೂಲಭೂತ ಸೌಲಭ್ಯ ಒದಗಿಸುವುದು ಹಾಗೂ ಘನತ್ಯಾಜ್ಯ ಘಟಕ ನಿರ್ಮಾಣ ಯೋಜನೆಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ಅದರಲ್ಲೂ ಕಲಬುರಗಿ ಎಂದರೆ ಬಿಜೆಪಿ ಸರ್ಕಾರಕ್ಕೆ ಅಲರ್ಜಿಯಾಗಿದೆ.
ಎರಡುವರೆ ವರ್ಷದ ಅಧಿಕಾರಾವಧಿಯಲ್ಲಿ ಇಬ್ಬರು ಸಿಎಂ ಗಳನ್ನು ಬದಲಾವಣೆ ಮಾಡಿದ್ದೆ ಬಿಜೆಪಿ ಪಕ್ಷದ ಸಾಧನೆ ಏನೂ ಎಂದು ಟೀಕಿಸಿದರು.
ಅಭಿವೃದ್ದಿ ವಿಚಾರದಲ್ಲಿ ನಮ್ಮೊಂದಿಗೆ ಬಹಿರಂಗ ಚರ್ಚೆಗೆ ಬಿಜೆಪಿಗರು ಬರಲಿ ನಾನು ಅವರಿಗೆ ಉತ್ತರಿಸುತ್ತೇನೆ, ಆಗ ನಿಮ್ಮೆಲ್ಲರ ಸೇವೆ ಮಾಡಲು ಯಾರು ಇರಬೇಕು ಎಂದು ನೀವೆ ನಿರ್ಧರಿಸಿ ಎಂದು ಸವಾಲ್ ಹಾಕಿದರು.
ಕಳೆದ ವರ್ಷದ ಹಿಂದೆ ಇದೇ ದಿನದಂದು ನೋಟ್ ಬ್ಯಾನ್ ಮಾಡಿದ ಮೋದಿ ಸರ್ಕಾರ ಜನಸಾಮಾನ್ಯರ ಸಂಕಟಕ್ಕೆ ಕಾರಣವಾದರು. ಜೀರೋ ಅಕೌಂಟ್ ಓಪನ್ ಮಾಡಿಸಿ ಪ್ರತಿಯೊಬ್ಬರ ಅಕೌಂಟ್ ನಲ್ಲಿ ಹದಿನೈದು ಲಕ್ಷ ಹಾಕುವುದಾಗಿ ಹೇಳಿದವರು ಒಂದು ರೂಪಾಯಿನೂ ಹಾಕಲಿಲ್ಲ. ಜನಧನ್ ಯೋಜನೆ ಜನರಿಂದ ಧನ ಕೊಳ್ಳೆಹೊಡೆಯುವ ಯೋಜನೆಯಾಗಿ ಪರಿವರ್ತನೆಯಾಗಿದೆ ಎಂದು ಟೀಕಿಸಿದರು. ಮೋದಿ ಹಾಗೂ ಶಾ ಅವರನ್ನು ಚೋರ್ ಗುರು ಚಾಂಡಾಲ ಶಿಷ್ಯ ಎಂದು ಹೆಸರಿಸಿದ ಶಾಸಕರು ಗ್ರಾಮೀಣ ಭಾಗದ ಹೆಣ್ಣುಮಕ್ಕಳು ತಮ್ಮ ತಮ್ಮ ಸಂಸಾರದ ತಾಪತ್ರಯಕ್ಕೆ ಎಂದು ಕೂಡಿಟ್ಟ ಅಷ್ಟು ಇಷ್ಟು ದುಡ್ಡನ್ನೂ ಕೂಡಾ ಇವರು ತೆಗೆದುಕೊಂಡರು ಎಂದರು.
ನೋಟು ಅಮಾನ್ಯೀಕರಣದಿಂದಾಗಿ ದೇಶದಲ್ಲಿ ಈ ಹಿಂದೆ 50 ವರ್ಷದಲ್ಲಿ ಆಗಿರದಂತ ನಿರುದ್ಯೋಗ ಈಗ ಸೃಷ್ಠಿಯಾಗಿದೆ. ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಠಿಸುವ ವಾಗ್ಧಾನ ನೀಡಿದ್ದ ಮೋದಿ ಭರವಸೆ ನೆರವೇರಿಸಲಿಲ್ಲ ಎಂದರು. ಮಾಡಬೂಳ ಸುತ್ತಮುತ್ತ ಗ್ರಾಮಗಳ ಅಭಿವೃದ್ದಿ ಹಾಗೂ ಆರ್ಥಿಕತೆ ಸದೃಢತೆಗಾಗಿ ( National Investment Manufacturing Zone ) ನಿಮ್ಝ್ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿತ್ತು. ಬಿಜೆಪಿ ಯಾವಾಗ ಅಧಿಕಾರಕ್ಕೆ ಬಂದಿತೋ ಈ ಯೋಜನೆ ಕೈ ತಪ್ಪಿ ಹೋಗಿದೆ.
ಚಿತ್ತಾಪುರ ಮತಕ್ಷೇತ್ರದ ಗ್ರಾಮಗಳಲ್ಲಿ ಶಿಕ್ಷಣದ ಅಭಿವೃದ್ದಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ. ವಾಡಿ ಪಟ್ಟಣದಲ್ಲಿ ಬಡ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಎಜುಕೇಷನ್ ಹಬ್ ನಿರ್ಮಾಣವಾಗಲಿದೆ. ಮರಗೋಳ ಗ್ರಾಮದ ಬಳಿ ರೂ 100 ಕೋಟಿ ವೆಚ್ಚದಲ್ಲಿ ಪ್ರಾಣಿ ಸಂಗ್ರಹಾಲಯ ನಿರ್ಮಾಣಗೊಳ್ಳಲಿದೆ ಎಂದರು. ಕೋವಿಡ್ ಸಂದರ್ಭದಲ್ಲಿ ಅಪೌಷ್ಠಿಕಾಂಶ ಹೊಂದಿದ 6 ಸಾವಿರ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ಒದಗಿಸಲಾಗಿದೆ. ಅಧಿಕಾರದಲ್ಲಿ ಇರುವ ಬಿಜೆಪಿಗರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಪ್ರಾಮಾಣಿಕ ಪ್ರಯತ್ನ, ಅಭಿವೃದ್ದಿ ಪರ ಚಿಂತನೆಯುಳ್ಳವರನ್ನು ಆಯ್ಕೆ ಮಾಡಿ ಕಳಿಸಬೇಕು ಎಂದು ಜನರಿಗೆ ಕರೆ ನೀಡಿದ ಶಾಸಕರು ಹಣದ ಆಸೆಗೆ ಬಿದ್ದು ಅಭಿವೃದ್ದಿಪರ ಇರುವವರನ್ನ ನೀವು ತಿರಸ್ಕರಿಸಬಾರದು ಎಂದು ಮನವಿ ಮಾಡಿದರು.
ಕೌಟುಂಬಿಕ ಕಾರ್ಯಕ್ರಮಗಳಿಗೆ ಭೇಟಿ ನೀಡಬೇಕು, ಜಯಂತಿಗಳಿಗೆ ಅಟೆಂಡ್ ಮಾಡಬೇಕು, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಬೇಕು ಎಂದು ಜನರು ನಮ್ಮಿಂದ ನಿರೀಕ್ಷೆ ಮಾಡುತ್ತಿದ್ದಾರೆ. ಇದು ಬದಲಾದ ರಾಜಕೀಯ ಪರಿಸ್ಥಿತಿ. ಅದರ ಬದಲಿಗೆ ನನ್ನಿಂದ ಅಭಿವೃದ್ದಿ ಯೋಜನೆಗಳನ್ನು ಪಡೆದುಕೊಳ್ಳುವುದರ ಬಗ್ಗೆ ಜನರು ಯೋಚಿಸಬೇಕು ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಭೀಮಣ್ಣ ಸಾಲಿ, ರಮೇಶ್ ಮರಗೋಳ, ಸುನೀಲ್ ದೊಡ್ಡಮನಿ, ಶಂಭುಲಿಂಗ ಗುಡಗುರ್ತಿ ಸೇರಿದಂತೆ ಹಲವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ