ನಮ್ಮನ್ನು ರಕ್ಷಿಸುತ್ತಿದ್ದ ಹುಡೆ, ಅಗಸಿಗೆ ರಕ್ಷಣೆ ಇಲ್ಲದಂತಾಗಿದೆ.


ಪ್ರವಾಸೋದ್ಯಮ, ಪ್ರಾಚ್ಯವಸ್ತು ಮತ್ತು ಪುರಾತತ್ವ ಹಾಗೂ ಪಂಚಾಯತ್‌ ರಾಜ್ ಇಲಾಖೆಗಳ ನಿರ್ಲಕ್ಷತನ.


-ಜಗದೇವ ಎಸ್ ಕುಂಬಾರ

ವಾಡಿ: ಶತ್ರು ಸೈನಿಕರು ಒಳ ನುಗ್ಗುವುದನ್ನು ಹಾಗೂ ದಾಳಿಗೆ ಪ್ರತ್ಯುತ್ತರ ನೀಡುವ ಉದ್ದೇಶದಿಂದ ಗ್ರಾಮದ, ಜನರ ರಕ್ಷಣೆಗಾಗಿ ಗ್ರಾಮದಲ್ಲಿ ಹುಡೆ ಮತ್ತು ಊರ ಮುಂದೆ ಅಗಸಿನಿ ರ್ಮಿಸಲಾಗುತ್ತಿತ್ತು ಎಂದು ಇತಿಹಾಸ ಹೇಳುತ್ತಿದೆ ಆದರೆ ಅಂದು ನಮ್ಮನ್ನು ರಕ್ಷಿಸುತ್ತಿದ್ದ ಹುಡೆ, ಅಗಸಿಗೆ ರಕ್ಷಣೆ ಇಲ್ಲದಂತಾಗಿದೆ.

ಲಕ್ಷ್ಮಿಪುರವಾಡಿ ಈಗಿನ (ಗಾಂಧಿನಗರ) ಗ್ರಾಮದಲ್ಲಿ ಸುಮಾರು ವರ್ಷಗಳ ಹಳೆಯ ಹುಡೆ, ಅಗಸಿ ಇದ್ದು ಈಗ ಅವು ಅಳಿವಿನ ಅಂಚಿನಲ್ಲಿ ಇವೆ ಎಂದರೆ ಇದಕ್ಕೆಲ್ಲ ಕಾರಣ ಪ್ರವಾಸೋದ್ಯಮ, ಪ್ರಾಚ್ಯವಸ್ತು ಮತ್ತು ಪುರಾತತ್ವ ಹಾಗೂ ಪಂಚಾಯತ್‌ರಾಜ್ ಇಲಾಖೆಗಳ ನಿರ್ಲಕ್ಷ್ಯತನವೇ ಎಂಬುವುದು ತೋರುತ್ತಿದೆ.


ಈ ಭಾಗದಲ್ಲಿ ಶಾತವಾಹನರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಳಚೂರ್ಯರು, ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದರು. ರಾಷ್ಟ್ರಕೂಟರು ಈಗಿನ ಮಳಖೇಡ (ಮಾನ್ಯಖೇಟ) ತಮ್ಮ ರಾಜಧಾನಿಯನ್ನಾಗಿ ಸಿಕೊಂಡಿದ್ದ ಸಮಯದಲ್ಲಿ ತಾಲೂಕು ಕೇಂದ್ರ ಸೇಡಂನಲ್ಲಿ ರಾಣಿವಾಸ, ಸಮೀಪದ ನೀಲಹಳ್ಳಿಯಲ್ಲಿ ಖಜಾನೆಯು ಇತ್ತು. ಚಿತ್ತಾಪುರ ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಟಂಕಣಶಾಲೆ ದಂಡೋತಿಯಲ್ಲಿ ಸೈನ್ಯದ ವಾಸಸ್ಥಳವಿತ್ತು. ಅಷ್ಟೇ ಅಲ್ಲದೆ ನಾಗವಿ ಎಲ್ಲಮ್ಮ ದೇವಾಲಯ ಹಾಗೂ ಹೊನಗುಂಟಾ ಚಂದ್ರಲಾ ಪರಮೇಶ್ವರಿ ದೇವಾಲಯ, ಮಹಬೂಬ್ ಸುಭಾನಿ ದರ್ಗಾ, ಚರ್ಚ್ ಗಳು ಸೇರಿದಂತೆ ಅನೇಕ ದೇವಾಲಯಗಳು ಒಳಗೊಂಡು ಶಕ್ತಿಪೀಠಗಳಾಗಿದ್ದವು.

ನಮ್ಮ ಭಾಗದ ಸಂಪತ್ತನ್ನು ಕೊಳ್ಳೆ ಹೊಡೆಯಬಾರದು ನಮ್ಮ ಮೇಲೆ ದಾಳಿ ಮಾಡಬಾರದು ಎಂಬ ಉದ್ದೇಶದಿಂದ ಹುಡೆ ನಿರ್ಮಿಸುತ್ತಿದ್ದರು

ಇವುಗಳ ಎತ್ತರ 60 ಅಡಿವೆರೆಗೆ ಇದ್ದು, ನಾಲ್ಕು ದಿಕ್ಕುಗಳಿಗೂ ಅಥವಾ ಊರಿಗೆ ಒಂದು ನಿರ್ಮಿಸಿ. ಆಳೆತ್ತರ ಬಿಟ್ಟು ಕೆಳಗೆ ಮಣ್ಣು ತುಂಬಿರುತ್ತಿದ್ದರು. ವೀಕ್ಷಿಸುವುದಕ್ಕಾಗಿ ಸುತ್ತ ನಾಲ್ಕೂ ಗೋಡೆಗಳಿಗೆ ಸಣ್ಣ ಕಿಂಡಿಗಳನ್ನು ಬಿಟ್ಟಿರುತ್ತಿದ್ದರು. ಇದರ ಮೇಲೆ ಕಾವಲುಗಾರರು ಇರುತ್ತಿದ್ದರು. ಇವರ ಕಾಯಕವಿಷ್ಟೇ; ನಾಲ್ಕು ದಿಕ್ಕುಗಳನ್ನು ಸದಾ ಗಮನಿಸುವುದು. ದಾಳಿಗೆಂದು ಬರುವ ಶತ್ರು ಸೈನಿಕರನ್ನು ಸದೆ ಬಡೆಯಲು ರಾಜನಿಗೆ ಮಾಹಿತಿ ರವಾನಿಸುವುದಾಗಿತ್ತು.

ಇಂತಹ ಇತಿಹಾಸ ಸಾರುವ, ನಮ್ಮನ್ನು ರಕ್ಷಿಸುತ್ತಿದ್ದ ಹುಡೆಗಳು ಇಂದು ಮಾಯವಾಗುತ್ತಿವೆ. ಲಕ್ಷ್ಮಿಪುರವಾಡಿ ಗ್ರಾಮದಲ್ಲಿ ಹುಡೆ, ಅಗಸಿ ಅವಶೇಷಗಳು ಉಳಿದಿದ್ದು, ಹಾಳು ಬಿದ್ದ ಮನೆಯಂತೆ ಗೋಚರಿಸುತ್ತಿವೆ. ಹುಡೆ ಸುತ್ತಮುತ್ತ ಮನೆಗಳು ನಿರ್ಮಾಣವಾಗಿದ್ದು ಈಗ ಹುಡುಗಿ ಶಿಥಿಲಗೊಂಡು ಬೀಳುವ ಪರಿಸ್ಥಿತಿ ಬಂದೊದಗಿದೆ ಅಲ್ಲಿಯ ಸುತ್ತಮುತ್ತಲಿನ ಮನೆಯ ಜನರು ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಒಡೆಯ ಸುತ್ತಮುತ್ತ ಹಾಗೂ ಅಗಸಿ ಪಕ್ಕದಲ್ಲಿ ಸಣ್ಣ ಮಕ್ಕಳು ಆಟ ಆಡುತ್ತಾರೆ ಹೀಗಾಗಿ ಅನಾಹುತಗಳಿಗೆ ಹುಡೆ ಹಾಗೂ ಅಗಸಿ ಕಾರಣವಾಗುವುದೇ ಯಾವುದೇ ರೀತಿಯ ಸಂದೇಹವಿಲ್ಲ ಹೀಗಿದ್ದರೂ ಸಹ  ಅಭಿವೃದ್ಧಿ ಪಡಿಸುವ ಗೋಜಿಗೆ ಯಾರೂ ಹೋಗಿಲ್ಲ. ಮುಂದಿನ ಸಮುದಾಯಕ್ಕೆ ಇದರ ಮಹತ್ವ ತಿಳಿಸುವ ಕೆಲಸಕ್ಕೆ ಪ್ರವಾಸೋದ್ಯಮ, ಪ್ರಾಚ್ಯವಸ್ತು ಮತ್ತು ಪುರಾತತ್ವ ಹಾಗೂ ಪಂಚಾಯತ್‌ರಾಜ್ ಇಲಾಖೆಗಳು ಮುಂದೆ ಬಾರದೇ ಇರುವುದು ವಿಷಾದ ಮೂಡಿಸಿದೆ.


ಪ್ರಾಚೀನ ಕಾಲದದಲ್ಲಿ ನಿರ್ಮಾಣಗೊಂಡ ಕೋಟೆ, ದೇವಸ್ಥಾನ, ಊರ ಅಗಸಿಗಳು ಹಾಗೂ ಹುಡೆಗಳ  ರಕ್ಷಣೆ ಅಗಬೇಕು. ನಮ್ಮ ಇತಿಹಾಸ ತಿಳಿಯಲು ಇದರಿಂದ ಸಾಧ್ಯವಾಗುತ್ತದೆ. ಇದೇ ರೀತಿ ಅವಸಾನದತ್ತ ಸಾಗಿದರೆ ಮುಂದಿನ ಸಮುದಾಯಕ್ಕೆ ಇತಿಹಾಸ ಅರಿಯಲು ಸಾಧ್ಯವಾಗದು. ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಇಂತಹ ಹುಡೆಗಳನ್ನು ಸಮೀಕ್ಷೆ ಮಾಡಿ, ರಕ್ಷಿಸಬೇಕು ಎಂದರು.

-ಡಾ.ಮಲ್ಲಿನಾಥ ತಳವಾರ್, ಸಾಹಿತಿಗಳು ರಾವೂರ್.


ನಮ್ಮ ಗ್ರಾಮದಲ್ಲಿರುವ ಹಳೆಯ ಕಾಲದ ಹುಡೆ ಮತ್ತು ಅಗಸಿ ಶಿಥಿಲಗೊಂಡು ಬಿದ್ದಿವೆ, ಅವುಗಳ ಅಭಿವೃದ್ಧಿಗೆ ಗ್ರಾಮ ಪಂಚಾಯತ್ ಮುಂದಾಗಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ಭಾಗರಾಜ್, ತಿಮ್ಮಯ್ಯ ಶಿರವಾಳ್, ತಿಮ್ಮಯ್ಯ ಸೇಡಂ, ಮತ್ತು ಯುವ ಮುಖಂಡ ಯುವರಾಜ್ ರಾಠೋಡ್ ಆಗ್ರಹಿಸಿದ್ದಾರೆ.


ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು 3 ವರ್ಷದ ಹಿಂದೆಯೇ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದಿರುವೇ, ಹಾಗೂ ಇದು ಪುರಾತನ ಇಲಾಖೆಗೆ ಸಂಬಂಧಿಸಿದ್ದು ಆಗಿದ್ದು ಆದರೂ ಸಹ ಅದೇ ರೀತಿಯ ಅನಾಹುತ ಆಗದೇ ಇರಲಿ ಎಂದು ಮುನ್ನೆಚ್ಚರಿಕೆಗಾಗಿ ಪಂಚಾಯತ್ ವತಿಯಿಂದ ಸುತ್ತಮುತ್ತಲಿನ ಮನೆಗಳಿಗೆ ನೋಟಿಸ್ ನೀಡಲಾಗಿದೆ. ನಮ್ಮ ಪಂಚಾಯತ್ ವತಿಯಿಂದ ಮಾಡಬಹುದಾದ ಕೆಲಸ ಮಾಡುತ್ತೇವೆ ಎಂದರು

- ಕಾವೇರಿ ರಾಠೋಡ್. ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ರಾವೂರ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.