ಯೋಗ ಮಾಡುವ ಮೂಲಕ ನಿರೋಗಿಯಾಗಿ:ಸಾಲಿಮಠ.
ವಾಡಿ: ಜೀವನದಲ್ಲಿ ಪ್ರತಿಯೊಬ್ಬರೂ ಯೋಗ ಮಾಡುವುದರ ಮೂಲಕ ನಿರೋಗಿಯಾಗಿ ಜೀವನ ನಡೆಸಲು ಸಾದ್ಯ ಎಂದು ಭಾರತ ಸ್ವಾಭಿಮಾನ ಟ್ರಸ್ಟನ ಜಿಲ್ಲಾ ಅದ್ಯಕ್ಷರ ಶಿವಾನಂದ ಸಾಲಿಮಠ ಹೇಳಿದರು. ರಾವೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಭಾರತ ಸ್ವಾಭಿಮಾನ ಟ್ರಸ್ಟ, ಪತಾಂಜಲಿ ಯೋಗ ಪೀಠದ ವತಿಯಿಂದ ಹಮ್ಮಿಕೊಂಡಿದ್ದ ಯೋಗದಿಂದ ಆಜಾದಿಕೆ ಅಮೃತ ಮಹೋತ್ಸವದ ಅಂಗವಾಗಿ ಯೋಗದಿಂದ ಆರೋಗ್ಯ ಎಂಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕರೋನಾ ಬಂದ ಮೇಲೆ ಜನರಿಗೆ ಯೋಗದ ಮಹತ್ವ ಅರ್ಥವಾಗುತ್ತಿದೆ. ಇವತ್ತಿನ ಕಲುಷಿತ ಸಮಾಜದಲ್ಲಿ ದೀರ್ಘಕಾಲ ಆರೋಗ್ಯಯುತವಾಗಿ ಜೀವನ ಸಾಗಿಸಲು ಯೋಗ ಅತ್ಯಂತ ಅವಶ್ಯಕ. ಪಿಜ್ಜಾ, ಬರ್ಗರ್ ನಂತಹ ಜಂಕ್‌ಫುಡ್ ನಿಂದ ಚಿಕ್ಕ ವಯಸ್ಸಿನಲ್ಲೇ ಬರಬಾರದ ಖಾಯಿಲೆಗಳು ಬರುತ್ತಿವೆ. ಪಾಶ್ಚಾತ್ಯ ಸಂಸ್ಕೃತಿಯಿಂದ ನಮ್ಮ ಆಹಾರ ಪದ್ದತಿಯೂ ಬದಲಾಗಿರುವುದು ದುರಂತ. ದೇಶಿಯ ಆಹಾರ ಪದ್ದತಿಯಲ್ಲಿ ರೊಟ್ಟಿ, ಚಪಾತಿ, ಕಾಳುಗಳು, ತರಕಾರಿ, ಮೊಸರು, ಹಣ್ಣುಗಳನ್ನು ಸೇವಿಸಿದರೆ ಖಾಯಿಲೆಗಳು ಬರುವುದಿಲ್ಲ. ಒಂದು ವೇಳೆ ಬಂದರೂ ನಾವು ನಿತ್ಯ ಮಾಡುವ ಯೋಗ, ಸೂರ್ಯ ನಮಸ್ಕಾರಗಳು, ಪ್ರಾಣಾಯಾಮಗಳು ನಮಗೆ ರೋಗ ಬರದಂತೆ ಮಾಡುತ್ತವೆ.ವಿದ್ಯಾರ್ಥಿಗಳು ಈಗಿನಿಂದಲೇ ಯೋಗಭ್ಯಾಸವನ್ನು ರೂಢಿಸಿಕೊಂಡರೆ ನಿಮ್ಮ ಆರೋಗ್ಯದ ಜೊತೆ ಜ್ಞಾಪಕ ಶಕ್ತಿಯು ವೃದ್ಧಿಸುವುದಲ್ಲದೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ...