ಇಂದು ಮಡಿವಾಳ ಮಾಚಿದೇವರ ಜಯಂತಿ.

ಚಿತ್ತಾಪುರ: ರಾಜ್ಯಾದ್ಯಂತ ಇಂದು ಫೆಬ್ರವರಿ ೧,ರಂದು ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಗುತ್ತಿದೆ. ಪಟ್ಟಣದ ತಹಸೀಲ್ ಕಾರ್ಯಾಲಯದಲ್ಲಿ ನಡೆಯಲಿರುವ ಮಡಿವಾಳ ಮಾಚಿದೇವರ ಜಯಂತಿಗೆ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮಡಿವಾಳ ಸಮಾಜದ ಮುಖಂಡ ಮಲ್ಲಿನಾಥ ಮಡಿವಾಳ ವಿನಂತಿಕೊಂಡಿದ್ದಾರೆ. ವಚನ ಸಾಹಿತ್ಯ ರಕ್ಷಣೆಯ ದಂಡನಾಯಕರೆಂದೇ ಮಾಚಿದೇವರನ್ನು ಕರೆಯುತ್ತಾರೆ. ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಮಾಚಿದೇವರು ಹೊತ್ತ ಜವಾಬ್ದಾರಿ ಅನುಪಮವಾದದ್ದು. ಶರಣ ಸಮೂಹವನ್ನು ರಕ್ಷಿಸಿ, ವಚನ ಸಾಹಿತ್ಯವನ್ನು ಉಳವಿಗೆ ತಲುಪಿಸಿದ ಮಹಾನ್ ದಂಡನಾಯಕನೇ ಮಾಚಿದೇವ. ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಜತೆಗೆ ಜ್ಞಾನ ವಿಸ್ತರಣೆಗೆ ಅವರು ನೀಡಿದ ಕೊಡುಗೆ ಮಹತ್ತರವಾದುದು. ಹೀಗಾಗಿ ಮುಂಬರುವ ದಿನಗಳಲ್ಲಿ ಚಿತ್ತಾಪುರ ಪಟ್ಟಣದಲ್ಲಿ ಮಡಿವಾಳ ಮಾಚಿದೇವರ ಭವನ ನಿರ್ಮಾಣವಾಗಲಿ ಅವರ ಆದರ್ಶ ಪತ್ರಿಯೊಬ್ಬರಿಗೂ ಮುಟ್ಟುವ ಕೆಲಸ ಆಗಲಿ ಎಂಬುದು ನನ್ನ ಆಸೆ ನುಡಿದಿದ್ದಾರೆ.