ಅಸುರರು ಸಿನಿಮಾದ ಪೋಸ್ಟರ್ ಬಿಡುಗಡೆ.
ರಾಯಚೂರು: ಮಕರ ಸಂಕ್ರಾಂತಿ ಹಬ್ಬದಂದು ಅಸುರರು ಸಿನಿಮಾದ ಪೋಸ್ಟರ್ ಅನ್ನು ಹಿರಿಯ ಕಲಾವಿದರಾದಂತಹ ಎಂ ಕೆ ಸುಂದರ್ ರಾಜ್ ಹಾಗೂ ಅವರ ಧರ್ಮಪತ್ನಿಯವರ ಸಾರಥ್ಯದಲ್ಲಿ ಬಿಡುಗಡೆ ಮಾಡಲಾಯಿತು.
ವಿಶೇಷ ಹಾಗೂ ವಿಸ್ಮಯ ಕಥಹಂದರವನ್ನು ಹೊತ್ತು ತರುತ್ತಿರುವ ಅಸುರರು ಸಿನಿಮಾ ಅಸುರರು ಸಿನಿಮಾ ಜನರಲ್ಲಿ ಕುತೂಹಲ ಮೂಡಿಸುವಂತಹ ನೈಜನತೆಯ ವಿಶೇಷತೆಯ ಕಥಾಂದರವನ್ನು ಹೊಂದಿದೆ ಎನ್ನಲಾಗಿದೆ ಈ ಸಿನಿಮಾ ಪ್ರತಿ ಮನುಷ್ಯನಲ್ಲೂ ಇರುವಂತಹ ಸುರ ಅಸುರರ ಪ್ರತಿರೂಪವಾಗಿದೆ ಎನ್ನಲಾಗುತ್ತಿದೆ.
ಸಿನಿಮಾ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ ಹಿರಿಯ ಕಲಾವಿದರಾದ ಎಂಕೆ ಸುಂದರ್ ರಾಜ್ ರವರು ಮಾತನಾಡಿ ವಿಶೇಷ ಕಥ ಹಂದರವನ್ನು ಹೊತ್ತು ತರುತ್ತಿರುವ ಅಸುರರು ಸಿನಿಮಾ ತಂಡಕ್ಕೆ ಅರಸಿ ಹಾರೈಸಿದ್ದಾರೆ ಸಿನಿ ಪ್ರೇಕ್ಷಕನ ಮನಗೆಲ್ಲಲು ತಯಾರಾಗಿರುವ ಅಸುರರು ಸಿನಿಮಾ ಅದ್ಭುತ ಯಶಸ್ಸು ಕಾಣುವುದಾಗಿ ಹಾಗೂ ಹೊಸ ಪ್ರತಿಭೆಗಳು ಮತ್ತಷ್ಟು ಬೆಳಕಿಗೆ ಬಂದು ಚಿತ್ರರಂಗದ ಗರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲಿ ಮತ್ತು ಅಸುರರು ಸಿನಿಮಾ ಯಶಸ್ವಿ ಪ್ರದರ್ಶನಗೊಂಡು ಜಯಭೇರಿ ಬಾರಿಸಲಿ ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ರಾಜ್ ಬಹದ್ದೂರ್, ನಿರ್ಮಾಪಕರಾದ ರಾಜ್ ಬಹದ್ದೂರ್ ಫಿಲ್ಮ್ ಫ್ಯಾಕ್ಟರಿ, ಸಂಕಲನ ಸುರೇಶ್ ಅರಸ್, ಛಾಯಾಗ್ರಹಣ ನವೀನ್ ಸೂರ್ಯ, ಸಂಗೀತ ನಿರ್ದೇಶಕರಾದ ಸುಭಾಷ್, ಕಲಾವಿದರಾದ ರಾಯ(ರಾಹುಲ್ ಗಾಯಕ್ವಾಡ್). ರಾಯಚೂರು ತಮ್ಮಣ್ಣ TK, ಶಕ್ತಿನಗರ ತಿಪ್ಪಣ್ಣ TS ,ಶಕ್ತಿನಗರ ಮಲ್ಲಿಕಾರ್ಜುನ್ ಮಿಮಿಕ್ರಿ, ಶಕ್ತಿನಗರ ಸುಪ್ರಿತರಾಜ್ ಬೆಂಗಳೂರು, ಮಂಜುಸ್ವಾಮಿ, ಮೈಸೂರು ಶಾಮ್ ಖಾನಾಪುರ, ಬಾಬುಖಾನ್ ತುಮಕೂರು, ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ