ಕೆಳಗೆ ಬಿದ್ದ ಬೋರ್ಡ್: ಕೃಷಿ ಇಲಾಖೆ ನಿರ್ಲಕ್ಷ್ಯ.
- ಜಗದೇವ ಎಸ್ ಕುಂಬಾರ
ಚಿತ್ತಾಪುರ: ಪಟ್ಟಣದ ಕೃಷಿ ಇಲಾಖೆಗೆ ಹೋಗುವ ರಸ್ತೆಯ ಬದಿಯಲ್ಲಿ ರೈತ ಸಂಪರ್ಕ ಕೇಂದ್ರದ ಬೋರ್ಡ್ ಹಾಕಲಾಗಿತ್ತು ಒಂದು ವರ್ಷದಿಂದ ಈ ಬೋರ್ಡ್ ಕೆಳಗೆ ಬಿದ್ದು ಧೂಳ್ ಹಿಡಿದಿದೆ ಈ ಬೋರ್ಡ್ ಕಣ್ಣಿಗೆ ಕಂಡರೂ ಸಹ ಅದನ್ನು ದುರಸ್ತಿ ಮಾಡದೆ ಕೃಷಿ ಇಲಾಖೆ ಅಧಿಕಾರಿಗಳು ನಿರ್ಲಕ್ಷತನ ವಹಿಸುತ್ತಿದ್ದಾರೆ ಎಂಬುದು ಈ ದೃಶ್ಯ ಸಾಕ್ಷಿಯಾಗಿದೆ.
ತಾಲೂಕಿನ ಸುತ್ತಮುತ್ತಲಿನ ರೈತರು ಕೃಷಿ ಇಲಾಖೆಗೆ ಬರಬೇಕಾದರೆ ಈ ಮುಂಚೆ ಈ ಬೋರ್ಡ್ ನೋಡಿ ಇಲಾಖೆಗೆ ಹೋಗುತ್ತಿದ್ದರು ಈಗ ಸಾಧ್ಯ ಒಂದು ವರ್ಷದಿಂದ ಈ ಬೋರ್ಡ್ ಇಲ್ಲದರಿಂದ ರೈತರಿಗೆ ಇಲಾಖೆಗೆ ಹೋಗಲು ತೊಂದರೆಯಾಗುತ್ತಿದೆ. ಕೃಷಿ ಇಲಾಖೆ ಎಲ್ಲಿ ಬರುತ್ತದೆ ಎಂದು ಸಾರ್ವಜನಿಕರಿಗೆ ಕೇಳಿ ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದು ಸಾಕಷ್ಟು ಜನ ರೈತರು ಹೇಳುತ್ತಿದ್ದಾರೆ.
ಕೃಷಿ ಇಲಾಖೆಗೆ ಅಧಿಕಾರಿಗಳು ಇದೇ ರಸ್ತೆಯಿಂದ ಹೋಗುತ್ತಾರೆ, ಬರುತ್ತಾರೆ, ಹಾಗೂ ಇಲಾಖೆ ಸಿಬ್ಬಂದಿ ವರ್ಗ ವರ್ಗ ಸಹ ಹೋಗಿ ಬರುತ್ತಾರೆ ಅವರಿಗೆ ಈ ಬೋರ್ಡ್ ಕಾಣುತ್ತಿಲ್ಲವೇ? ಎಂಬುವುದು ಸ್ಥಳೀಯರ ಪ್ರಶ್ನೆಯಾಗಿದೆ.
ಈ ಒಂದು ಸಣ್ಣ ಕೆಲಸ ಅವರಿಂದ ಮಾಡಲು ಆಗುತ್ತಿಲ್ಲ ಎಂದರೆ ಇನ್ನು ಕಚೇರಿಯಲ್ಲಿನ ಪರಿಸ್ಥಿತಿ ಏನು ಎಂಬುದು ಇನ್ನೊಂದು ಕಡೆ ರೈತರು ಮಾತಾಡಿಕೊಳ್ಳುತ್ತಿದ್ದಾರೆ.
ಈ ಸುದ್ದಿಯನ್ನಾದರೂ ನೋಡಿ ಕೃಷಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬೋರ್ಡ್ ಎತ್ತಿ ಇಟ್ಟು ದುರಸ್ತಿ ಮಾಡಿ ತಾಲೂಕಿನ ರೈತರಿಗೆ ಇಲಾಖೆಗೆ ಸರಳವಾಗಿ ಭೇಟಿ ನೀಡಲು ಅನುಕೂಲ ಮಾಡಿಕೊಡುತ್ತಾರೆ ಕಾದು ನೋಡಬೇಕು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ