ದೇವರಲ್ಲಿ ಶ್ರದ್ಧೆ, ಭಕ್ತಿ ಇರಲಿ: ಮರೆಪ್ಪ ಮುತ್ಯಾ.
ದೇವರಲ್ಲಿ ಶ್ರದ್ಧೆ, ಭಕ್ತಿ ಇರಲಿ: ಮರೆಪ್ಪ ಮುತ್ಯಾ.
ಚಿತ್ತಾಪುರ: ಪ್ರತಿಯೊಬ್ಬರೂ ದೇವರಲ್ಲಿ ಶ್ರದ್ಧೆ, ಭಕ್ತಿ ಇಟ್ಟುಕೊಳ್ಳಬೇಕು ಎಂದು ಹೂಡಾ(ಬಿ) ಗ್ರಾಮದ ಹಯ್ಯಾಳಸಿದ್ದೇಶ್ವರ ದೇವಸ್ಥಾನದ ಶ್ರೀಗಳಾದ ಮರೆಪ್ಪ ಮುತ್ಯಾ ಹೇಳಿದರು.
ತಾಲೂಕಿನ ಮರಗೋಳ ಗ್ರಾಮದಲ್ಲಿ ನಡೆದ ಶ್ರೀ ಬೀರಲಿಂಗೇಶ್ವರ ಹಾಗೂ ಶ್ರೀ ಮಾಳಿಂಗೇಶ್ವರರ ನೂತನ ಮಂದಿರ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮದಲ್ಲಿ ಹಾಲುಮತದ ಜನರು ಹಾಗೂ ಊರಿನವರ ಸಹಕಾರದಿಂದ ಕುರಿದೊಡ್ಡಿ ಇದ್ದ ಸ್ಥಳದಲ್ಲಿ ಇಂತಹ ಭವ್ಯ ಮಂದಿರ ನಿರ್ಮಾಣ ಮಾಡಿದ್ದು ಹೆಮ್ಮೆಯ ವಿಷಯ.ಜೀವನದಲ್ಲಿ ಏನನ್ನೂ ಸಾಧಿಸುವುದು ಸಾಧ್ಯವಿಲ್ಲವೆಂದು ಕೈಕಟ್ಟಿ ಕುಳಿತುಕೊಂಡರೆ, ಸಾಧನೆ ಮಾಡುವುದು ಅಸಾಧ್ಯ. ಗುರುವಿನ ಕೆಲಸದಲ್ಲಿ ಪ್ರಾಮಾಣಿಕ, ಶ್ರದ್ಧೆ, ಭಕ್ತಿ ಇದ್ದರೆ ಇಂತಹ ಕಾರ್ಯ ಕೆಲಸಗಳು ಆಗಲು ಸಾಧ್ಯ. ಸಮಾಜದ ಗುರುಗಳನ್ನು ಪೂಜಿಸುವುದರ ಜೊತೆಗೆ
ಸಮಾಜದಲ್ಲಿ ಸತ್ಕಾರ್ಯ ಮಾಡುವ ಗುಣ ಬೆಳೆಸಿಕೊಳ್ಳಬೇಕು.
ಹಾಲುಮತ ಸಮಾಜದ ಜಿಲ್ಲಾಧ್ಯಕ್ಷ ರೇವಣಸಿದ್ದಪ್ಪ ಸಾತನೂರ ಮಾತನಾಡಿ ಈ ಗ್ರಾಮದಲ್ಲಿ ಬೀರಲಿಂಗೇಶ್ವರ ಮತ್ತು ಮಾಳಿಂಗರಾಯ ದೇವಸ್ಥಾನವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ ಅಲ್ಲದೇ ಇಲ್ಲಿನ ಜನರ ಸೌರ್ಹಾದತೆಯನ್ನು ಎತ್ತಿ ತೋರಿಸುತ್ತದೆ ಈ ಸಮಾಜವು ಸಧೃಡವಾಗಬೇಕಾದರೆ ನಾವುಗಳು ಎಲ್ಲರೂ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ನಮ್ಮ ಸಮಾಜ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸದೃಡರಾಗಲು ಸಾಧ್ಯವಾಗುತ್ತದೆ ಎಂದರು.
ದೇವಸ್ಥಾನದ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕೊಂಡಂಪಳ್ಳಿ ಅಧ್ಯಕ್ಷತೆ ವಹಿಸಿದ್ದರು. ದಿಗ್ಗಾಂವದ ಕಂಚಗಾರ ಹಳ್ಳಿಯ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು, ಶ್ರೀ ಶರಣಯ್ಯ ಸ್ವಾಮಿ, ಬೀರಣ್ಣ ಸ್ವಾಮಿ ಕೋರವಾರ, ಹಿರಗಪ್ಪ ತಾತಾ ಸೂಗೂರ, ಮುಖಂಡರಾದ ನಾಗಣ್ಣಗೌಡ, ಬಸವರಾಜ ವಾರದ, ಶರಣಗೌಡ ಪೊಲೀಸ್ ಪಾಟೀಲ್, ಅಣ್ಣಾರಾವ ಸಣ್ಣೂರಕರ್, ಶರಣು ಸಾಹು, ಬಸವರಾಜ ಪೂಜಾರಿ ಮೊಗಲಾ, ಮಲ್ಲಿಕಾರ್ಜುನ ಪೂಜಾರಿ ಮೊಗಲಾ, ಈರಪ್ಪ ಭೋವಿ, ಯಲ್ಲಾಲಿಂಗ ಪೂಜಾರಿ, ಬೀರಪ್ಪ ಹೆಬ್ಬಾಳ, ಬೀರಪ್ಪ ಮುಗಟಿ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ಉತ್ತಮ ಶಿಕ್ಷಣವನ್ನು ಪಡೆದ ಹಾಗೂ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು. ಕಾಶಿರಾಯ ಕಲಾಲ್ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ