ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಕರಣ್ ಗುಜ್ಜರ್.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಕರಣ್ ಗುಜ್ಜರ್.
ಚಿತ್ತಾಪುರ: ಜೀವ ಸಂಕುಲದ ಉಳುವಿಗಾಗಿ ಪರಿಸರದಲ್ಲಿನ ಹಾಗೂ ನಮ್ಮ ಸುತ್ತಲಿನ ಮರ-ಗಿಡಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಕರಣ್ ಗುಜ್ಜರ್ ಹೇಳಿದರು.
ಪಟ್ಟಣದ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪ್ರಾದೇಶಿಕ ಅರಣ್ಯ ವಲಯ ಮತ್ತು ಶಿಶುವಿಹಾರ ಪ್ರಾಥಮಿಕ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ "ವಿಶ್ವ ಪರಿಸರ ದಿನ" ಕಾನೂನು ಅರಿವು ಕಾರ್ಯಕ್ರಮ ನಿಮಿತ್ಯ ಸಸಿಗೆ ನೀರು ಉಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಹಿಂದಿನ ಕಾಲದ ಜನರು ಗಿಡ-ಮರಗಳನ್ನು ಹೆಚ್ಚೆಚ್ಚು ಸಂರಕ್ಷಿಸುತ್ತಿದ್ದರು ಆದ್ರೆ ಇಂದಿನ ಕಾಲದಲ್ಲಿ ಗಿಡ-ಮರಗಳು ನಾಶ ಮಾಡುವುದು ನೋಡುತ್ತಿದ್ದೇವೆ ನಗರೀಕರಣ ಬೆಳೆದಂತೆ ಗಿಡಮರಗಳು ಸಂಖ್ಯೆ ಕಡಿಮೆ ಆಗುತ್ತಿದೆ ಮುಂದೊಂದಿನ ಆಮ್ಲಜನಕ ಬೆನ್ನಿಗೆ ಕಟ್ಟಿಕೊಂಡು ಓಡಾಡುವ ಪರಿಸ್ಥಿತಿ ಬರಬಹುದು ಹೀಗಾಗಿ ಪರಿಸರದಲ್ಲಿನ ಗಿಡಮರಗಳು ಬೆಳೆಸುವ ಮನೋಭಾವ ಕಲಿಯಬೇಕು ಪ್ರತಿದಿನ ಪರಿಸರ ದಿವಾಗಿರಲ್ಲಿ ಎಂದು ಹೇಳಿದರು.
ಶಾಲಾ ಆವರಣದಲ್ಲಿ ಕೆಲ ವಿದ್ಯಾರ್ಥಿಗಳಿಗೆ ವಿಶ್ವ ಪರಿಸರ ದಿನದ ನಿಮಿತ್ಯ ಸಸಿಗಳನ್ನು ವಿತರಿಸಲಾಗುತ್ತದೆ ಯಾವ ವಿದ್ಯಾರ್ಥಿ ದಿನನಿತ್ಯ ಸಸಿಗೆ ನೀರು ಹಾಕುವುದರ ಜೊತೆಗೆ ಸಂರಕ್ಷಿಸಿ ಚೆನ್ನಾಗಿ ಬೆಳೆಸುತ್ತಾರೆ ಆ ವಿದ್ಯಾರ್ಥಿಗೆ ಮುಂದಿನ ವರ್ಷ ನಮ್ಮ ಕೋರ್ಟ್ ವತಿಯಿಂದ ಪ್ರಶಸ್ತಿ ನೀಡುವುದಾಗಿ ಘೋಷಿಸಿದರು.
- ಅಭಿಷೇಕ್ ಆರ್ ಜೋಶಿ
ಸಿವಿಲ್ ನ್ಯಾಯಾಧೀಶರು ಚಿತ್ತಾಪುರ.
==================================
ಶಾಲಾ ಆವರಣದಲ್ಲಿ ವಿಧ್ಯಾರ್ಥಿಗಳು ಪ್ಲಾಸ್ಟಿಕ್ ಮಾಲಿನ್ಯಕ್ಕೆ ಅವಕಾಶ ಮಾಡಿಕೊಡಬೇಡಿ ಮತ್ತು ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬಿಳುವ ಸಾಧ್ಯತೆ ಇರುತ್ತದೆ ಇದರಿಂದ ಬಳಕೆ ಬೇಡ ಎಂದು ಕಿವಿ ಮಾತು ಹೇಳಿದರು.
- ಸಿಸ್ಟರ್ ಸಿಂಪ್ರೊಸ್
ಮುಖ್ಯಗುರುಗಳು, ಶಿಶುವಿಹಾರ ಹಿ.ಪ್ರಾ.ಶಾಲೆ ಚಿತ್ತಾಪೂರ
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿಶನ್ ಮಾಡಲಗಿ, ವಕೀಲರ ಸಂಘದ ಅಧ್ಯಕ್ಷ ನಾಗರಾಜ ಕಡಬೂರ, ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್, ಭೆಂಥನಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಕವಿತಾ ಬಿಎಸ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಅಂಜನಾದೇವಿ, ವಕೀಲರಾದ ಎಸ್ಎಂ ಪಾಟೀಲ್, ಎಸ್ಎಂ ನಂದೂರಕರ್, ಶಿಕ್ಷಕರಾದ ಶೆಶಪ್ಪ ಬಡಿಗೇರ್, ಸತೀಶ್, ಸುಜಾತಾ, ಮಲ್ಲಪ್ಪ, ಕಲ್ಪನಾ, ಅರುಣಕುಮಾರ, ಸೇರಿದಂತೆ ಇತರರು ಇದ್ದರು ನಿರೂಪಣೆ ಸುಮಲತಾ ನಾಡಗೌಡ ನೆರವೇರಿಸಿದರು ವಿಶ್ವನಾಥ ಟೋನಿ ಸ್ವಾಗತಿಸಿಕೊಂಡರು ವಿಶ್ವನಾಥ ಕುಂಬಾರ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ