ಗ್ರಂಥಾಲಯಗಳು ಜ್ಞಾನದ ಭಂಡಾರ: ಮಲ್ಲಪ್ಪ ಹೊಸ್ಮನಿ.

ಚಿತ್ತಾಪುರ: "ಮನುಷ್ಯನ ಬದುಕಿಗೆ ಗ್ರಂಥಾಲಯಗಳೇ ಜ್ಞಾನದ ಭಂಡಾರಗಳಾಗಿವೆ. ಪ್ರತಿಯೊಬ್ಬರೂ ಓದುವ ಹವ್ಯಾಸ ಬೆಳೆಸಿಕೊಳ್ಳುವ ಮೂಲಕ ಜ್ಞಾನವಂತರಾಗಬೇಕು" ಎಂದು ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ ಕರೆ ನೀಡಿದರು.

​ತಾಲೂಕಿನ ಇಂಗನಕಲ ಗ್ರಾಮದಲ್ಲಿ ನೂತನವಾಗಿ ಆರಂಭಿಸಲಾದ ಗ್ರಂಥಾಲಯ ಉಪ ಕೇಂದ್ರವನ್ನು ಸೋಮವಾರ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದ ಅವರು ​"ಕ್ಷೇತ್ರದ ಶಾಸಕ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಶೇಷ ಮುತುವರ್ಜಿ ವಹಿಸಿ ಗ್ರಾಮೀಣ ಭಾಗದ ಜನರಿಗಾಗಿ ಈ ಗ್ರಂಥಾಲಯ ಸೌಲಭ್ಯ ಕಲ್ಪಿಸಿಕೊಟ್ಟಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಗ್ರಂಥಾಲಯ ಎಂಬುದು ಕೇವಲ ಪುಸ್ತಕಗಳನ್ನು ಜೋಡಿಸಿಡುವ ಜಾಗವಲ್ಲ, ಅದೊಂದು ಜ್ಞಾನದ ದೇವಾಲಯ. ಇಲ್ಲಿನ ಪುಸ್ತಕಗಳು ನಮ್ಮ ಯೋಚನಾ ಲಹರಿಗೆ ಹೊಸ ದಿಕ್ಕು ದೆಸೆಯನ್ನು ನೀಡುತ್ತವೆ," ಎಂದು ಅಭಿಪ್ರಾಯಪಟ್ಟರು.
​"ವಿದ್ಯಾರ್ಥಿಗಳಲ್ಲಿ ಸ್ವಯಂ ಅಧ್ಯಯನದ ಮನೋಭಾವ ಮತ್ತು ಓದಿನ ಆಸಕ್ತಿಯನ್ನು ಮೂಡಿಸುವುದೇ ಈ ಉಪ ಕೇಂದ್ರದ ಮುಖ್ಯ ಉದ್ದೇಶವಾಗಿದೆ. ಗ್ರಾಮಸ್ಥರು ಮತ್ತು ಯುವಕರು ಸಮಯ ವ್ಯರ್ಥ ಮಾಡಿ ಹರಟೆ ಹೊಡೆಯುವ ಬದಲು, ಗ್ರಂಥಾಲಯಕ್ಕೆ ಬಂದು ದಿನಪತ್ರಿಕೆ ಹಾಗೂ ಪುಸ್ತಕಗಳನ್ನು ಓದಬೇಕು. ಇಲ್ಲಿ ಲಭ್ಯವಿರುವ ಡಿಜಿಟಲ್ ಸಂಪನ್ಮೂಲಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು" ಎಂದು ಅವರು ಆಶಿಸಿದರು.

​ಇದೇ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಗದೇವಪ್ಪ ನಾಯಕ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಗುಂಡಗುರ್ತಿ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ ಬಣ್ಣಕ್ಕಿ ವಹಿಸಿದ್ದರು.ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ ಸಿದ್ದಣ್ಣ ಮಗಿ, ಮಾಜಿ ಸದಸ್ಯ ಈರಣ್ಣ ದಂಡೋತಿ, ಪ್ರಮುಖರಾದ ದೇವಾನಂದ ಮಂಗಲಗಿ, ರುಕಮಶಾ ದುಕಾನದಾರ, ಹಾಜಿಸಾಬ ದುಕಾನದಾರ, ಮಲ್ಲಪ್ಪ ನಿಡಗುಂದಿ, ಶಿವಯೋಗಿ ಹೊಸಮನಿ, ಶರಣಪ್ಪ ಕದ್ದರಗಿ, ನಾಗರಾಜ ಬಂಡಿವಡ್ಡರ, ಕಲ್ಯಾಣಿ ಪೂಜಾರಿ, ದೀಪಕ ಹೊಸಮನಿ, ಯಲ್ಲಾಲಿಂಗ ನಿಡಗುಂದಿ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಉಪಸ್ಥಿತರಿದ್ದರು.​ನಾಗರಾಜ ಗಾಯಕವಾಡ ಕಾರ್ಯಕ್ರಮ ನಿರೂಪಿಸಿದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم