ಉಚಿತವಾಗಿ ಉದ್ದು ಬಿತ್ತನೆ ಬೀಜಗಳ ಮಿನಿಕಿಟ್ ವಿತರಣೆ

ಚಿತ್ತಾಪುರ: ಕೃಷಿ ಇಲಾಖೆಯಿಂದ ದ್ವಿದಳ ಧಾನ್ಯಗಳ 'ಆತ್ಮನಿರ್ಭರ ಪಲ್ಸ್ ಅಭಿಯಾನ' ಯೋಜನೆಯಡಿ ತಾಲೂಕಿನ ಡೋಣಗಾಂವ ಗ್ರಾಮದಲ್ಲಿ ರೈತರಿಗೆ ಉಚಿತವಾಗಿ ಉದ್ದು ಬಿತ್ತನೆ ಬೀಜಗಳ ಮಿನಿಕಿಟ್ ವಿತರಣೆ ಕಾರ್ಯಕ್ರಮ ಜರುಗಿತು.

​ಈ ವೇಳೆ ಸಹಾಯಕ ಕೃಷಿ ನಿರ್ದೇಶಕರಾದ ಸಂಜೀವ ಕುಮಾರ್ ಮಾನಕರ ಮಾತನಾಡಿ, ಈ ಯೋಜನೆಯು ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸುವುದು ಹಾಗೂ ರಾಜ್ಯವನ್ನು ಈ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ನಮ್ಮ ತಾಲೂಕಿನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ರೈತರಿಗೆ ತಿಳಿಸಿದರು.

​ಕೃಷಿಕ ಸಮಾಜದ ಅಧ್ಯಕ್ಷರಾದ ನಾಗರೆಡ್ಡಿ ಗೋಬನೂರ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಮತ್ತು ರೈತರಿಗೆ ಸಾಂಕೇತಿಕವಾಗಿ ಉದ್ದು ಮಿನಿಕಿಟ್ ವಿತರಿಸಿದರು. ನಂತರ ಮಾತನಾಡಿ, ರೈತರು ಕೃಷಿ ಇಲಾಖೆಯ ಈ ಸದರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು ಮತ್ತು ರೈತರಿಗೆ ಪ್ರಸ್ತುತ ಹವಾಮಾನ ಅನುಗುಣವಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ರೈತರಿಗೆ ಸಲಹೆ ನೀಡಿದರು.

​ಸದರಿ ಕಾರ್ಯಕ್ರಮದಲ್ಲಿ ಶಿವಶರಣರೆಡ್ಡಿ ಸಿದ್ದಾರೆಡ್ಡಿ ಬಂಕಲಗಾ, ಮಲ್ಲಿಕಾರ್ಜುನ ಚನಪುರ, ಶರಣಪ್ಪ ಬನಪುರ, ಅಶೋಕ ಬಾನರ, ಶಿವಶರಣ ಮಂಗ, ಮತ್ತು ದೇವೆಂದ್ರ ಅರಣಕಲ್  ತಾಲೂಕಾ ನೋಡಲ್ ಅಧಿಕಾರಿಯಾದ ಜುಲ್ಫೇಕರ ಅಹಮದ್, ಅಬ್ದುಲ ಕರೀಂ, ರವೀಂದ್ರ ಕುಮಾರ್, ಹಾಗೂ ಸಚಿನ ಕುಮಾರ, ಹಾಗು ಡೋಣಗಾಂವ ಗ್ರಾಮದ ರೈತರು ಸೇರಿದಂತೆ ಇತರರು ಇದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم