ವೈಜ್ಞಾನಿಕ ಕುರಿ ಹಾಗೂ ಮೇಕೆ ಸಾಕಾಣಿಕೆ ತರಬೇತಿ ಶಿಬಿರ ಸಂಪನ್ನ

ಚಿತ್ತಾಪುರ: ಪಶುಪಾಲನಾ ಇಲಾಖೆ ಚಿತ್ತಾಪುರ ಹಾಗೂ ಕಲಬುರ್ಗಿಯ ಪಶುವೈದ್ಯಕೀಯ ತರಬೇತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ, ಇಲ್ಲಿನ ಪಶುಪಾಲನಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ 'ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ' ತರಬೇತಿ ಶಿಬಿರವು ಯಶಸ್ವಿಯಾಗಿ ನೆರವೇರಿತು.

ಈ ತರಬೇತಿ ಶಿಬಿರದಲ್ಲಿ ಚಿತ್ತಾಪುರ ತಾಲೂಕಿನ ಸುಮಾರು 70 ಕುರಿ ಮತ್ತು ಮೇಕೆ ಸಾಕಾಣಿಕೆದಾರರು ಹಾಗೂ ಆಸಕ್ತ ರೈತರು ಸಕ್ರಿಯವಾಗಿ ಪಾಲ್ಗೊಂಡು ಮಾಹಿತಿ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು ನುರಿತ ಪಶುವೈದ್ಯಾಧಿಕಾರಿಗಳು, ಕುರಿ ಹಾಗೂ ಮೇಕೆಗಳಿಗೆ ಬರುವ ಪ್ರಮುಖ ರೋಗಗಳು ಮತ್ತು ಅವುಗಳ ಲಕ್ಷಣಗಳು, ರೋಗ ನಿರೋಧಕ ಲಸಿಕೆಗಳು, ಜಂತುನಾಶಕ ಔಷಧಿ ನೀಡುವ ವಿಧಾನ, ವೈಜ್ಞಾನಿಕ ಮಾದರಿಯ ಶೆಡ್ ನಿರ್ಮಾಣ, ವಿವಿಧ ತಳಿಗಳ ಆಯ್ಕೆ ಹಾಗೂ ಪಶು ಆಹಾರ ನಿರ್ವಹಣೆ ಕುರಿತು ರೈತರಿಗೆ ಸವಿಸ್ತಾರವಾಗಿ ಉಪನ್ಯಾಸ ನೀಡಿದರು.

ಶಿಬಿರದಲ್ಲಿ ಕಲಬುರ್ಗಿ ತರಬೇತಿ ಕೇಂದ್ರದ ಉಪನಿರ್ದೇಶಕ ಡಾ. ದಯಾನಂದ ಹಕ್ಕಪಕ್ಕಿ, ಚಿತ್ತಾಪುರ ಪುರಸಭೆಯ ಮಾಜಿ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಕಾಳಗಿ ಹಾಗೂ ಸಹಾಯಕ ನಿರ್ದೇಶಕ ಡಾ. ಶಂಕರ ಕಣ್ಣೆ ಉಪಸ್ಥಿತರಿದ್ದರು.

ಉಪನ್ಯಾಸಕರಾಗಿ ಡಾ. ಶರಣಬಸಪ್ಪ ಲಿಂಗದಳ್ಳಿ, ಡಾ. ಮಂಜುನಾಥ್, ಡಾ. ಅಭಿಲಾಶ್ ಮತ್ತು ಡಾ. ಆಕಾಶ್ ಭಾಗವಹಿಸಿ ರೈತರ ಸಂಶಯಗಳಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿಗಳಾದ ಶ್ರೀ ವೀರಣ್ಣ, ಶ್ರೀ ರತನ್ ಕುಮಾರ್, ಶ್ರೀ ವಿಜಯಕುಮಾರ್, ಶ್ರೀ ಅಜಯ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم