ಸೋಮವಾರ, ಸೆಪ್ಟೆಂಬರ್ 16, 2024

ತಾಲ್ಲೂಕಿನದ್ಯಂತ ಸೆ. 17ಕ್ಕೆ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಿ.

ಚಿತ್ತಾಪೂರ: ಸಪ್ಟೆಂಬರ್ 17ರಂದು ತಾಲ್ಲೂಕಿನದ್ಯಂತ ಎಲ್ಲಾ ಸರ್ಕಾರಿ,ಅರೆ ಸರ್ಕಾರಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನ ಹಾಗೂ ವಿಶ್ವಕರ್ಮ ದಿನಾಚರಣೆಯನ್ನು ಕಡ್ಡಾಯವಾಗಿ ಆಚರಿಸಬೇಕೆಂದು ತಹಶೀಲ್ದಾರ್
ನಾಗಯ್ಯ ಹೀರೆಮಠ ತಿಳಿಸಿದ್ದಾರೆ.

ಗಣೇಶ ಹಬ್ಬ: ಬಾಂಧವ್ಯ ಗಟ್ಟಿಗೋಳಿಸುತ್ತದೆ.

ಚಿತ್ತಾಪುರ: ಯುವಕರನ್ನು ಸಂಘಟಿಸುವ ಹಾಗೂ ಜನರ ನಡುವೆ ಸಂಬಂಧಗಳನ್ನು ಗಟ್ಟಿಗೊಳಿಸುವ ಮತ್ತು ಬಾಂಧವ್ಯವನ್ನು ವೃದ್ಧಿಸುವ ಎಕೈಕ ಉತ್ಸವ ಅದುವೇ ಗಣೇಶ ಉತ್ಸವ ಎಂದು ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.

ಪಟ್ಟಣದ ನ್ಯೂ ಪೊಲೀಸ್‌ ವಸತಿಗೃಹದ ಏರಿಯಾದಲ್ಲಿ ಶ್ರೀ ಏಕದಂತ ಮಿತ್ರ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಗಣೇಶ ಉತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಣೇಶ ಉತ್ಸವಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ, ಸ್ವಾತಂತ್ರ್ಯ ಚಳುವಳಿಯಲ್ಲಿ ಗಣೇಶ ಉತ್ಸವ ಜಾರಿಗೆ ತಂದವರು, ಬಾಲ್ ಗಂಗಾಧರ ತಿಲಕ್ ಅವರು, ಅಂದಿನಿಂದ ಇಲ್ಲಿಯವರೆಗೂ ಸಾರ್ವಜನಿಕರೆಲ್ಲರೂ ಎಲ್ಲ ಜಾತಿ ಜನಾಂಗದವರು ಒಗ್ಗೂಡಿ ಸಂಭ್ರಮದಿಂದ ಆಚರಿಸುತ್ತಿದ್ದಾರೆ ಎಂದು ಹೇಳಿದರು.

ಈ ಏರಿಯಾದಲ್ಲಿ ಕಳೆದ 9 ವರ್ಷಗಳಿಂದ ಯುವಕರು ಒಗ್ಗೂಡಿ ಬಹಳ ಹುಮ್ಮಸ್ಸಿನಿಂದ ಗಣೇಶ ಉತ್ಸವ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಿತ್ರ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಉಪ್ಪಾರ, ಪತ್ರಕರ್ತ ಜಗದೇವ ಕುಂಬಾರ, ಪ್ರಮುಖರಾದ ವಿಶ್ವನಾಥ ಸ್ವಾಮಿ, ಸಾಬಣ್ಣ ಹುಣಚೇರಿ, ಉಮೇಶ್ ಕಲಾಲ್, ಆಕಾಶ್ ಬಿರೇದಾರ್, ಕಿರಣ ಮಡಿವಾಳ, ನಾಗರಾಜ ಉಪ್ಪಾರ, ಮಲ್ಲಿಕಾರ್ಜುನ್ ಉಪ್ಪಾರ, ಪ್ರಶಾಂತ ಮಡಿವಾಳ, ಪ್ರೀತಮ್ ಮಡಿವಾಳ, ರಾಜು ಕಲಾಲ್‌, ಅಭಿಷೇಕ್ ಜಮಾದಾರ, ನಿತೀಶ ಕಲಾಲ್, ಸಿದ್ದಣ್ಣ ಗೌಡ, ಬಸ್ಸು ಸ್ವಾಮಿ, ವಿಶ್ವನಾಥ ಬಿರೇದಾ‌ರ್, ನಿಂಗೇಶ್ ಉಪ್ಪಾರ, ಮಂಜುನಾಥ ಸ್ವಾಮಿ, ಬಸವರಾಜ ಉಪ್ಪಾರ, ಸಚೀನ್ ಹುಣಚೇರಿ, ಅಭಿಷೇಕ್ ಪಾಲ್‌ ಸೇರಿದಂತೆ ಯುವಕರು, ಮಹಿಳೆಯರು ಉಪಸ್ಥಿತರಿದ್ದರು.

ಸಪ್ನಾ ಸ್ವಾಗತಿಸಿದರು, ಯಲ್ಲಯ್ಯ ಕಲಾಲ್ ನಿರೂಪಿಸಿದರು, ಕಿರಣ್ ಮಡಿವಾಳ ವಂದಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ, ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು, ನಂತರ ಅನ್ನ ಪ್ರಸಾದ ವಿತರಣೆ ನಡೆಯಿತು.

ಅದ್ದೂರಿಯಾಗಿ ನಡೆದ ಈದ್ ಮಿಲಾದ್.


ಚಿತ್ತಾಪುರ: ಮ ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಸೋಮವಾರ ಮೆರವಣಿಗೆ ನಡೆಸುವ ಮೂಲಕ ಹಬ್ಬದವನ್ನು ಅದ್ದೂರಿಯಾಗಿ  ಆಚರಿಸಿದರು.

ಪಟ್ಟಣದ ಐತಿಹಾಸಿಕ ಹಜರತ್ ಚಿತ್ತಷಹಾ ವಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಚಿತ್ತಾವಲಿ ವೃತ್ತದಲ್ಲಿ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮೆರವಣಿಗೆಗೆ ಚಾಲನೆ ನೀಡಿದರು. ಚಿತ್ತಾವಲಿ ವೃತ್ತದಿಂದ ಪ್ರಾರಂಭವಾದ ಮೆರವಣಿಗೆ ಹೋಳಿ ಕಟ್ಟಿ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ಲಾಡ್ಜಿಂಗ್ ವೃತ್ತ, ತಹಸೀಲ್ ಕಚೇರಿ ರಸ್ತೆ, ಸ್ಟೇಷನ್ ರಸ್ತೆ, ನಾಗಾವಿ ವೃತ್ತ, ಜನತಾ ವೃತ್ತ, ಕಪ್ಪಡಾ ಬಜಾರ್ ಮೂಲಕ ಪುನಃ ಚಿತ್ತಾವಲಿ ವೃತ್ತಕ್ಕೆ ಆಗಮಿಸಿ ಸಮಾಪ್ತಿಗೊಂಡಿತ್ತು.

ಈ ಸಂದರ್ಭದಲ್ಲಿ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್‌ಐ ಶ್ರೀಶೈಲ್ ಅಂಬಾಟಿ, ಪತ್ರಕರ್ತ ಕಾಶಿನಾಥ ಗುತ್ತೇದಾರ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಕಾಳಗಿ, ಸೂರ್ಯಕಾಂತ ಪೂಜಾರಿ, ನಾಗರೆಡ್ಡಿ ಗೋಪಸೇನ್, ಭೀಮಸಿಂಗ್ ಚವ್ಹಾಣ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್, ಮಹ್ಮದ್ ಎಕ್ಸಾಲ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಎಂ.ಡಿ.ಯುನುಸ್, ಮೋಸಿನ್ ಚೈನು, ಆಸೀಫ್ ಶೇಖ್, ಮನಾನ್ ನಾಗಾಯಿ, ಸದ್ದಾಮ್, ಇಮ್ರಾನ್ ಖುರೇಷಿ, ಬಾಬಾ ಎಂಐಎಂ, ಇಬ್ರಾಹಿಂ ಎ.ಟು.ಝಡ್ ಹುಸೇನ್, ಇಮಾಮ್ ಅಲಿ ಸೇರಿದಂತೆ ನೂರಾರು ಯುವಕರು, ಮುಸ್ಲಿಂ ಬಾಂಧವರು ಇದ್ದರು.

ಗಣೇಶನ ಲಡ್ಡು 93 ಸಾವಿರಕ್ಕೆ ಹರಾಜು.

ಚಿತ್ತಾಪುರ: ಪಟ್ಟಣದ ಇಂದಿರಾನಗರದಲ್ಲಿ ಗಣೇಶ ಚತುರ್ಥಿ ನಿಮಿತ್ಯ ಯುಥ್ ಕ್ಲಾಬ್ ಯುವಕರು ಸಂಘ ನೇತೃತ್ವದಲ್ಲಿ 9ದಿನ ಗಣೇಶ ಕೂಡಿಸಲಾಗಿತ್ತು. 5ಕೆಜಿ ಲಡ್ಡುಗೆ 11ನೂರಕ್ಕೆ ತರಲಾಗಿತ್ತು. ಕೊನೆಯ ದಿನಕ್ಕೆ ಗಣೇಶ ಲಡ್ಡು ಹರಾಜು ಪ್ರಕ್ರಿಯೆ ಆರಂಭವಾಗಿ 93 ಸಾವಿರಕ್ಕೆ ಸಿದ್ದು ತಂದೆ ಹಣಮಂತ ಬೆನಕನಹಳ್ಳಿ ಎಂಬುವರು ಲಡ್ಡು ಪಡೆದರು ಎಂದು ಗಣೇಶ ಮಂಡಳಿಯವರು ತಿಳಿಸಿದ್ದಾರೆ.

ಅಕ್ರಮ ಮರಳು ದಂಧೆ: ತಾಲೂಕು ಆಡಳಿತ ಮೌನ.

-ಜಗದೇವ ಎಸ್ ಕುಂಬಾರ
ಚಿತ್ತಾಪುರ: ಕಾಗಿಣಾ ನದಿಯಲ್ಲಿ ಅಕ್ರಮ ಮರಳು ದಂಧೆ ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದ್ದರು ತಾಲೂಕು ಆಡಳಿತ ಮೌನವಾಗಿದೆ ಎಂದು ಸಾರ್ವಜನಿಕರು ಆರೂಪಿಸುತ್ತಿದ್ದಾರೆ.

ತಾಲೂಕಿನ ದಂಡೋತಿ, ಮುಡಬೂಳ, ಭಾಗೋಡಿ, ಕದ್ದರ್ಗಿ, ಮುತ್ತಗಿ, ಕಾಟಮದೇವರ ಹಳ್ಳಿ, ಈ ಗ್ರಾಮಗಳಲ್ಲಿ 
ಟ್ರ್ಯಾಕ್ಟರ್ ಮೂಲಕ ಮರಳು ತುಂಬಿಕೊಂಡು ಸಾಗುತ್ತಿವೆ. ರಾಯಲ್ಟಿ ಇಲ್ಲದೆ, ಯಾರ ಭಯವಿಲ್ಲದೆ ಮರಳು ದಂಧೆಯಲ್ಲಿ ತೋಡಗಿದ್ದಾರೆ. ಸರಕಾರದ ಆದೇಶ ಗಾಳಿಗೆ ತೂರಿ ಅಕ್ರಮ ಮರಳು ದಂಧೆ ನಡೆಸುತ್ತಿರುವುದಕ್ಕೆ ಕಡಿವಾಣ ಹಾಕಬೇಕಿದ್ದ, ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್‌, ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸೇರಿದಂತೆ ಗ್ರಾಮ ಪಂಚಾಯಿತಿ ಪಿಡಿಒಗಳಿಗೂ ಅಕ್ರಮ ಮರಳು ಸಾಗಣೆ ಜಾಲದ ವಿರುದ್ಧ ಕಾನೂನು ಕ್ರಮ ಜರುಗಿಸುವ ಅಧಿಕಾರ ಇದೆ. ಆದರೂ ಈ ಅಕ್ರಮ ದಂಧೆಗೆ ಕಡಿವಾಣ ಹಾಕುವಲ್ಲಿ ಆಡಳಿತ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಮರಳು ದಂಧೆಯಿಂದ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿವೆ ಇದರಿಂದ ಪ್ರಯಾಣಿಕರ ಸಂಚಾರಕ್ಕೆ ಅಡೆತಡೆಗಳು ಆಗುತ್ತಿವೆ. ಇನ್ನೂಂದು ಕಡೆ ಕಾಗಿಣಾ ನದಿಯ ನೀರು ಮಾಲಿನ್ಯವಾಗುತ್ತಿದೆ.  ನದಿಯಲ್ಲಿ ಮರಳು ಬಗೆದು ಚಿತ್ತಾಪೂರ ಪಟ್ಟಣದಲ್ಲಿ ಸಾಗಾಟ ಮಾಡುತ್ತಿದ್ದರು ತಾಲೂಕ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದೆ. ಗ್ರಾಮೀಣಾಭಿವೃದ್ಧಿ ಸಚಿವರ ತವರಲ್ಲೇ ಎಗ್ಗಿಲ್ಲದೇ ಅಕ್ರಮ ಮರಳು ಗಣಿಗಾರಿಕೆ‌ ನಡೆದ್ರೂ ಗಣಿ ಹಾಗೂ ಕಂದಾಯ ಇಲಾಖೆ ಡೋಂಟ್ ಕೇರ್ ಅಂತಿವೆ. ಇದು ರೈತರು, ನದಿ ಪಾತ್ರದ ಗ್ರಾಮಗಳ ಜನ್ರ ಆಕ್ರೋಶಕ್ಕೆ ಕಾರಣವಾಗಿದೆ.


 ತಹಸೀಲ್ದಾರ್ ಆಗಿ ಬಂದು ಮೂರ್ನಾಲ್ಕು ದಿನಗಳು ಆಗಿದೆ ಮನವ ಸರಪಳಿ ಕಾರ್ಯಕ್ರಮ ಮುಗಿತ್ತು.ನಾಳೆ ಕಲ್ಯಾಣ ಕರ್ನಾಟಕ ಉತ್ಸವ ಆದ ಮೇಲೆ ಒಂದು ದಿನ ಟಾಸ್ಕ್ ಫೋರ್ಸ್ ಸಭೆಯಲ್ಲಿ ತಾಲೂಕಿನ ಎಲ್ಲಾ ಅಧಿಕಾರಿಗಳ ಜೊತೆ ಚರ್ಚಿಸಿ ಆಕ್ರಮ ಮರಳು ದಂಧೆ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

- ನಾಗಯ್ಯ ಹೀರೆಮಠ 
ತಹಸೀಲ್ದಾರ್ ಚಿತ್ತಾಪೂರ.

====================================

ರಸ್ತೆ ಬದಿಯಲ್ಲಿ ಹೆಸ್ರು-ಉದ್ದು ಬೆಳೆ ರಾಶಿ ನಡೆಯುತ್ತಿದ್ದು ರಾಶಿ ಕಾಯಲು ರಸ್ತೆಯ ಬದಿಯಲ್ಲಿ ಮಲಗುತ್ತೆವೆ ರಾತ್ರಿ ವೇಳೆ ಮರಳು ತುಂಬಿದ ಟ್ರಾಕ್ಟರ್ ಓಡ್ಡಾಟದಿಂದ ಭಯದ ವಾತಾವರಣ ನಿರ್ಮಾಣವಾಗಿದೆ ಎನ್ನುತ್ತಾರೆ.

- ಅಡೇಪ್ಪಗೌಡ ಮಾಲಿ ಪಾಟೀಲ್.
ರೈತರು ಕದ್ದರ್ಗಿ ಗ್ರಾಮ.

ಶನಿವಾರ, ಸೆಪ್ಟೆಂಬರ್ 14, 2024

ಶಿವಲಿಂಗದ ಮೇಲೆ ಕಾಲಿಟ್ಟಿದ್ದು ಮಹಾಪಾಪ: ದಳಪತಿ.

ಚಿತ್ತಾಪುರ: ತಾಲೂಕಿನ ದಿಗ್ಗಾಂವ್ ಗ್ರಾಮದ ಸಿದ್ದವೀರ ಶಿವಾಚಾರ್ಯರು ಶಿವಲಿಂಗದ ಮೇಲೆ ಕಾಲಿಟ್ಟಿದ್ದು ಮಹಾಪಾಪ ಎಂದು  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಕಾರ್ಯದರ್ಶಿ, ಬಸವರಾಜ ಪೊಲೀಸ್ ಪಾಟೀಲ್ ದಳಪತಿ ಭಾಗೋಡಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕೆ ಹೇಳಿಕೆ ನೀಡಿದ ಅವರು, ಇದಕ್ಕೂ ಮೊದಲು ಮೋಟ್ನಳ್ಳಿ ಗ್ರಾಮದಲ್ಲಿ ಹೆಣ್ಣು ದೇವತೆಯ ಮೇಲೆ ಪಾದವನ್ನು ಇಟ್ಟು ಪೂಜೆ ಮಾಡಿದ್ರು ಈಗ ಮತ್ತೆ ಸೇಡಂ ತಾಲೂಕಿನ ಕಲಕಂಬ ಗ್ರಾಮದಲ್ಲಿ ಶಿವಲಿಂಗ ಮೇಲೆ ಪಾದವನ್ನು ಇಟ್ಟು ಪೂಜೆ ಮಾಡಿದ್ದು ಮಹಾ ಅಪರಾಧವಾಗಿದೆ ಕೂಡಲೇ ಶಿವಭಕ್ತರಲ್ಲಿ ಕ್ಷಮೆ ಯಾಚಿಸಬೇಕು ಎಂದರು.

ಸುಮಾರು 20 ವರ್ಷಗಳ ಹಿಂದೆ ಸ್ವಾಮೀಜಿ ನಾಗಾವಿ ಯಲ್ಲಮ್ಮ ದೇವಸ್ಥಾನ ಹತ್ತಿರ ತಪಸ್ಸು ಮಾಡಿದ್ರು, ನಂತರ 3/4 ವರ್ಷಗಳ ಹಿಂದೆ ತಾಲೂಕಿನ ಲಕ್ಷ ದೀಪೋತ್ಸವ ಮಾಡಿ ಹೇಸರು ಪಡೆದಿದ್ದರು. ಈ ಕಾರ್ಯಕ್ರಮಕ್ಕೆ ಪ್ರತಿ ಗ್ರಾಮಗಳಿಂದ ಪಟ್ಟಿ ಮಾಡಲಾಗಿತ್ತು. ಭಕ್ತರಿಂದ ಹೆಸರು ಪ್ರಚಾರ ಪಡೆದು ಈಗ ನಾನೇ ಶಿವನಿಗಿಂತ ದೊಡ್ಡವ ಎನ್ನುವಂತೆ ಸಮರ್ಥನೆ ಮಾಡಿಕೊಂಡಿದ್ದಾರೆ.

ಎಡಗೈನಲ್ಲಿ ಲಿಂಗ ಹಿಡಿದು ಪೂಜೆ ಮಾಡಿಕೋಳ್ಳುವ ಸ್ವಾಮೀಜಿ ಸ್ವಲ್ಪ ವಿಚಾರ ಮಾಡಬೇಕಿತ್ತು ಮಾಡಿಲ್ಲ ಆದ್ರೆ ಸಾಕಷ್ಟು ಸ್ವಾಮೀಜಿ, ಶಿವಾಚಾರ್ಯರು ಪಟ್ಟಾಭಿಷೇಕ ಆಗಿರುವುದು ನೋಡಿರುವೆ ಆದ್ರೆ ಈ ಸಿದ್ದವೀರ ಶಿವಾಚಾರ್ಯರು ಪಟ್ಟಾಭಿಷೇಕ ಆಗಿದ್ದೇನಾ ಎಂಬುದು ಅನುಮಾನವಿದೆ. ಏಕೆಂದರೆ ಪಟ್ಟಾಭಿಷೇಕ ಆದ ಸ್ವಾಮೀಜಿ ಈ ರೀತಿಯ ಕೃತ್ಯ ಕೆಲಸ ಮಾಡಿಲ್ಲ. ಭಕ್ತರಿಗೆ ಒಳ್ಳೆಯ ಮಾರ್ಗ ತೋರಿಸಬೇಕು ಅದು ಬಿಟ್ಟು ಶಿವಲಿಂಗದ ಮೇಲೆ ಕಾಲಿಡುವುದು ಸಮಾಜಕ್ಕೆ ತಪ್ಪು ಸಂದೇಶ ಸಾರುವ ಇಂತಹ ವಿಡಿಯೋ ತುಣುಕುಗಳು ಬಿಡಬಾರದು ಈ ತಪ್ಪಿಗೆ ದೇವರೆ ಆ ಸ್ವಾಮೀಜಿಗೆ ತಕ್ಕ ಪಾಠ ಕಲಿಸಲಿ ಎಂದರು.

ಸ್ವಾಮೀಜಿ ಕೂಡಲೇ ಶಿವಭಕ್ತರಿಗೆ ಕ್ಷಮೆ ಯಾಚಿಸಬೇಕು ಇಲ್ಲಾಂದ್ರೆ ಈಗಾಗಲೇ ಪ್ರತಿ ದಿನ, ಪ್ರತಿ ಕ್ಷಣ ಕಾನೂನು ಪ್ರಕಾರ ಹೋರಾಟಕ್ಕೆ ಸಿದ್ದತೆ ನಡೆಯುತ್ತಿದೆ ಎಂದು ಎಚ್ಚರಿಸಿದ್ದಾರೆ. 

ಶುಕ್ರವಾರ, ಸೆಪ್ಟೆಂಬರ್ 13, 2024

ಅಪೌಷ್ಟಿಕತೆ ನಿವಾರಣೆಗೆ ಪೋಷಣ್ ಮಾಸಾಚರಣೆ ಅಗತ್ಯ.

ಚಿತ್ತಾಪುರ: ಮಹಿಳೆ ಹಾಗೂ ಮಕ್ಕಳನ್ನು ಅಪೌಷ್ಟಿಕತೆಯಿಂದ  ಮುಕ್ತಗೊಳಿಸಿ ಆರೋಗ್ಯವಂತರಾಗಿ ಮಾಡುವಲ್ಲಿ ಪೋಷಣ್ ಮಾಸಾಚರಣೆ ಅಗತ್ಯವಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಆರತಿ ತುಪ್ಪದ್ ಹೇಳಿದರು.

  ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಆಡಳಿತ ಮತ್ತು ಶಿಶು ಅಭಿವೃದ್ಧಿ ಯೋಜನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಷೋಷಣ ಮಾಸಾಚರಣೆ ಕಾರ್ಯಕ್ರಮ  ಉದ್ಘಾಟಿಸಿ ಮಕ್ಕಳಿಗೆ ಅನ್ನಪ್ರಾಸನ, ಮೊದಲ ಗರ್ಬಿಣಿಗೆ ಸಿಮ್ಮಂತ, ಹಾಗೂ ಸ್ವಚ್ಛತಾ ಕುರಿತು ಮಾತನಾಡಿದ ಅವರು ಪೋಷಣ್ ಅಭಿಯಾನ ಮಾಸಾಚರಣೆ ಮೂಲಕ ಗ್ರಾಮೀಣ ಭಾಗಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಹಿಳೆಯರು ಹಾಗೂ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆಯನ್ನು  ಕಲ್ಪಿಸುವುದರ ಜೊತೆಗೆ ಆರೋಗ್ಯ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. 
  ಗ್ರಾಮೀಣ ಭಾಗದ ಮಹಿಳೆಯರು ಪೌಷ್ಠಿಕ ಆಹಾರ ಪದ್ಧತಿಗೆ ಹೆಚ್ಚಿನ ಒತ್ತು ನೀಡಬೇಕು, ಮಾತೃವಂದನಾ ಯೋಜನೆ ಅಡಿಯಲ್ಲಿ ಮೊದಲ ಗಂಡು ಮಗುವಿಗೆ 5 ಸಾವಿರ, ಹಾಗೂ ಎರಡನೇ ಮಗು ಹೆಣ್ಣು ಹುಟ್ಟಿದರೆ 6 ಸಾವಿರ ರೂಪಾಯಿ ನೀಡಲಾಗುತ್ತಿದೆ. ಹೀಗೆ ಅನೇಕ ಸರ್ಕಾರ ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು. 

ಈ ಸಂದರ್ಭದಲ್ಲಿ ತಾಪಂ ಇಓ ಆಕ್ರಂ ಮಹ್ಮದ್ ಪಾಶಾ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ, ಸೈಯದ್ ಖಾದ್ರಿ, ಪುರಸಭೆ ಕಂದಾಯ ಅಧಿಕಾರಿ ಶರಣಪ್ಪ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಕಿರಣ್ ಜಾಧವ್, ಸೇರಿದಂತೆ ಅಂಗನವಾಡಿ ಮೇಲ್ವಿಚಾರಕರಾದ ಗೀತಾ ಯಡ್ರಾಮಿ, ಶಶಿಕಲಾ ಪಾಟೀಲ್, ಸುನೀತಾ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು ಸ್ವಾಗತ ರಮಾಬಾಯಿ ಸ್ವಾಗತಿಸಿದರು ಕವಿತಾ ರವರು ನಿರೂಪಿಸಿ ವಂದಿಸಿದರು.

ಗುರುವಾರ, ಸೆಪ್ಟೆಂಬರ್ 12, 2024

ಉದ್ದು ಬೆಳೆ ಹಾನಿ, ಪರಿಹಾರಕ್ಕೆ ರೈತ ಸಂಘ ಒತ್ತಾಯ.

ಚಿತ್ತಾಪುರ: ಸತತವಾಗಿ ಸುರಿದ ಮಳೆಯಿಂದಾಗಿ ಉದ್ದು ಬೆಳೆ ಸಂಪೂರ್ಣ ನೆಲಕಚ್ಚಿ ರೈತರು ತೀವ್ರ ಸಂಕಷ್ಟದಲ್ಲಿದ್ದು, ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದರು.
ತಾಲೂಕಿನ ಬಂಕಲಗಿ ಗ್ರಾಮದ ಸಾಕಷ್ಟು ರೈತರು ಉದ್ದು ಹೆಸರು ಬೆಳೆ ಬೆಳೆದಿದ್ದು, ಈಗ ಸಾದ್ಯಕ್ಕೆ ಸತತವಾಗಿ ಸುರಿದ ಮಳೆಗೆ ಉದ್ದು ಬೆಳೆ ಸಂಪೂರ್ಣ ನೆಲಕಚ್ಚಿದ್ದು. ಸಂಬಂಧಪಟ್ಟ ಅಧಿಕಾರಿಗಳು ಜಮೀನಿಗೆ ವಿಕ್ಷಣೆಗೆ ಬಂದಿಲ್ಲ ಎಂದು ನಿರೂಪಿಸಿ ಕೂಡಲೆ ಕೇಂದ್ರ ರಾಜ್ಯ ಸರ್ಕಾರ ರೈತರ ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂಪಾಯಿ ನೀಡಬೇಕು ಎಂದರು.

ಈ ವೇಳೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಮಲಬೋ, ಸಣ್ಣ ಅಯ್ಯಪ್ಪ ಪೂಜಾರಿ, ಭೀಮರಾಯ ಚಿತ್ತಾಪುರ, ಮಲ್ಲಪ್ಪ ಸುಬೆದರ, ಅರಣಪ್ಪ ದೋಡ್ಡಮನಿ, ಹುಸೆನಪಾಷ, ಹಣಮಂತ ಮೂಲಿಮನಿ, ಸೇರಿದಂತೆ ಇತರರು ಇದ್ದರು.

ಮಕ್ಕಳ ಪ್ರತಿಭೆಗೆ ಪ್ರತಿಭಾ ಕಾರಂಜಿ ಸಹಾಯಕ.

ಚಿತ್ತಾಪುರ: ಮಕ್ಕಳಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಸಹಾಯಕವಾಗಲಿದ್ದು ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ವಿವಿದ ಪ್ರತಿಭೆಗಳನ್ನು ಕಾರಂಜಿಗಳನ್ನಾಗಿ ಪರಿವರ್ತಿಸುವಲ್ಲಿ ಪ್ರಯತ್ನಿಸುತ್ತಿರುವದು ಶ್ಲಾಂಘನೀಯ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ ಹೇಳಿದರು

ಪಟ್ಟಣದ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಚಿತ್ತಾಪುರ ಇವರ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಪಶ್ಚಿಮ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತರುವ ಹಾಗೂ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ 2002ರಲ್ಲಿ ಸರಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮ ಜಾರಿಗೆ ತಂದಿದೆ ಆದ್ದರಿಂದ ಮಕ್ಕಳು ಸಹಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸಮಗ್ರ ವ್ಯಕ್ತಿತ್ವ ವಿಕಸನವನ್ನು ಸಾಧಿಸುತ್ತಾರೆ ಎಂದು ಹೇಳಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಕವಿತಾ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಹೀಗಾಗಿ ಮಕ್ಕಳು ಯಾವುದಕ್ಕೂ ಹೆದರಬಾರದು ತಮ್ಮಲ್ಲಿನ ಪ್ರತಿಭೆಗಳನ್ನು ಹೊರಹಾಕಬೇಕು ಎಂದು ಹೇಳಿದರು.

ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು,ದೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಠಾಳೆ, ಕಾರ್ಯದರ್ಶಿ ಚಂದ್ರಶೇಖರ ಅವಂಟಿ, ಬಿಆರ್.ಪಿ ಜಾಫರ್, ಪತ್ರಕರ್ತ ಕಾಶಿನಾಥ ಗುತ್ತೇದಾರ ಮಾತನಾಡಿದರು.

ಮುಖ್ಯಗುರುಗಳಾದ ಶರಣಬಸಪ್ಪ ಬೊಮ್ಮನಹಳ್ಳಿ ದೇವಿಂದ್ರಪ್ಪ ಇಮಡಾಪೂರ, ದೇವಿಂದ್ರಪ್ಪ ಶಹಾಬಾದಕರ್, ಎಲ್ಎಲ್ಎಫ್ ಸಂಯೋಜಕ ಸಂತೋಷ, ಮಲ್ಲಿನಾಥ, ಶೈಲಜಾ ಹಲಸೂರು, ದೇವಿಂದ್ರಪ್ಪ, ನರಸಪ್ಪ ಚಿನ್ನಾ ಕಟ್ಟಿ, ವಿಷ್ಣುವರ್ಧನ್ ರೆಡ್ಡಿ, ನಾಗರಾಜ ಕುಲಕರ್ಣಿ, ವಿರೇಶ ಕರದಾಳ, ಜಗದೇವ ಕುಂಬಾರ, ಸೇರಿದಂತೆ ಇತರರು ಇದ್ದರು. ವೀರಸಂಗಪ್ಪ ಸುಲೇಗಾಂವ ಸ್ವಾಗತಿಸಿದರು, ಮುಖ್ಯಗುರು ಆದಪ್ಪ ಬಗಲಿ ನಿರೂಪಿಸಿ ವಂದಿಸಿದರು.

ಬುಧವಾರ, ಜನವರಿ 31, 2024

ಇಂದು ಮಡಿವಾಳ ಮಾಚಿದೇವರ ಜಯಂತಿ.




ಚಿತ್ತಾಪುರ: ರಾಜ್ಯಾದ್ಯಂತ ಇಂದು ಫೆಬ್ರವರಿ ೧,ರಂದು ಮಡಿವಾಳ ಮಾಚಿದೇವರ ಜಯಂತಿಯನ್ನು  ಆಚರಿಸಲಾಗುತ್ತಿದೆ.

ಪಟ್ಟಣದ ತಹಸೀಲ್ ಕಾರ್ಯಾಲಯದಲ್ಲಿ ನಡೆಯಲಿರುವ  ಮಡಿವಾಳ ಮಾಚಿದೇವರ ಜಯಂತಿಗೆ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮಡಿವಾಳ ಸಮಾಜದ ಮುಖಂಡ ಮಲ್ಲಿನಾಥ ಮಡಿವಾಳ ವಿನಂತಿಕೊಂಡಿದ್ದಾರೆ.

ವಚನ ಸಾಹಿತ್ಯ ರಕ್ಷಣೆಯ ದಂಡನಾಯಕರೆಂದೇ ಮಾಚಿದೇವರನ್ನು ಕರೆಯುತ್ತಾರೆ. ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಮಾಚಿದೇವರು ಹೊತ್ತ ಜವಾಬ್ದಾರಿ ಅನುಪಮವಾದದ್ದು. ಶರಣ ಸಮೂಹವನ್ನು ರಕ್ಷಿಸಿ, ವಚನ ಸಾಹಿತ್ಯವನ್ನು ಉಳವಿಗೆ ತಲುಪಿಸಿದ ಮಹಾನ್ ದಂಡನಾಯಕನೇ ಮಾಚಿದೇವ. ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಜತೆಗೆ ಜ್ಞಾನ ವಿಸ್ತರಣೆಗೆ ಅವರು ನೀಡಿದ ಕೊಡುಗೆ ಮಹತ್ತರವಾದುದು. ಹೀಗಾಗಿ ಮುಂಬರುವ ದಿನಗಳಲ್ಲಿ ಚಿತ್ತಾಪುರ ಪಟ್ಟಣದಲ್ಲಿ ಮಡಿವಾಳ ಮಾಚಿದೇವರ ಭವನ ನಿರ್ಮಾಣವಾಗಲಿ ಅವರ ಆದರ್ಶ ಪತ್ರಿಯೊಬ್ಬರಿಗೂ ಮುಟ್ಟುವ ಕೆಲಸ ಆಗಲಿ ಎಂಬುದು ನನ್ನ ಆಸೆ ನುಡಿದಿದ್ದಾರೆ.

ಶನಿವಾರ, ಜನವರಿ 20, 2024

ಅಸುರರು ಸಿನಿಮಾದ ಪೋಸ್ಟರ್ ಬಿಡುಗಡೆ.

ರಾಯಚೂರು:  ಮಕರ ಸಂಕ್ರಾಂತಿ ಹಬ್ಬದಂದು ಅಸುರರು ಸಿನಿಮಾದ ಪೋಸ್ಟರ್ ಅನ್ನು ಹಿರಿಯ ಕಲಾವಿದರಾದಂತಹ ಎಂ ಕೆ ಸುಂದರ್ ರಾಜ್ ಹಾಗೂ ಅವರ ಧರ್ಮಪತ್ನಿಯವರ ಸಾರಥ್ಯದಲ್ಲಿ ಬಿಡುಗಡೆ ಮಾಡಲಾಯಿತು.

ವಿಶೇಷ ಹಾಗೂ ವಿಸ್ಮಯ ಕಥಹಂದರವನ್ನು ಹೊತ್ತು ತರುತ್ತಿರುವ ಅಸುರರು ಸಿನಿಮಾ ಅಸುರರು ಸಿನಿಮಾ ಜನರಲ್ಲಿ ಕುತೂಹಲ ಮೂಡಿಸುವಂತಹ ನೈಜನತೆಯ ವಿಶೇಷತೆಯ ಕಥಾಂದರವನ್ನು ಹೊಂದಿದೆ ಎನ್ನಲಾಗಿದೆ  ಈ ಸಿನಿಮಾ ಪ್ರತಿ ಮನುಷ್ಯನಲ್ಲೂ ಇರುವಂತಹ ಸುರ ಅಸುರರ ಪ್ರತಿರೂಪವಾಗಿದೆ ಎನ್ನಲಾಗುತ್ತಿದೆ.

ಸಿನಿಮಾ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ ಹಿರಿಯ ಕಲಾವಿದರಾದ ಎಂಕೆ ಸುಂದರ್ ರಾಜ್ ರವರು ಮಾತನಾಡಿ ವಿಶೇಷ ಕಥ ಹಂದರವನ್ನು ಹೊತ್ತು ತರುತ್ತಿರುವ ಅಸುರರು ಸಿನಿಮಾ ತಂಡಕ್ಕೆ ಅರಸಿ ಹಾರೈಸಿದ್ದಾರೆ ಸಿನಿ ಪ್ರೇಕ್ಷಕನ ಮನಗೆಲ್ಲಲು ತಯಾರಾಗಿರುವ ಅಸುರರು ಸಿನಿಮಾ ಅದ್ಭುತ ಯಶಸ್ಸು ಕಾಣುವುದಾಗಿ ಹಾಗೂ ಹೊಸ ಪ್ರತಿಭೆಗಳು ಮತ್ತಷ್ಟು ಬೆಳಕಿಗೆ ಬಂದು ಚಿತ್ರರಂಗದ ಗರಿಮೆಯನ್ನು ಮತ್ತಷ್ಟು ಎತ್ತರಕ್ಕೆ  ಬೆಳೆಸಲಿ ಮತ್ತು ಅಸುರರು ಸಿನಿಮಾ ಯಶಸ್ವಿ ಪ್ರದರ್ಶನಗೊಂಡು ಜಯಭೇರಿ ಬಾರಿಸಲಿ ಎಂದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ರಾಜ್ ಬಹದ್ದೂರ್, ನಿರ್ಮಾಪಕರಾದ ರಾಜ್ ಬಹದ್ದೂರ್ ಫಿಲ್ಮ್ ಫ್ಯಾಕ್ಟರಿ, ಸಂಕಲನ ಸುರೇಶ್ ಅರಸ್, ಛಾಯಾಗ್ರಹಣ ನವೀನ್ ಸೂರ್ಯ, ಸಂಗೀತ ನಿರ್ದೇಶಕರಾದ ಸುಭಾಷ್,   ಕಲಾವಿದರಾದ ರಾಯ(ರಾಹುಲ್ ಗಾಯಕ್ವಾಡ್). ರಾಯಚೂರು ತಮ್ಮಣ್ಣ TK, ಶಕ್ತಿನಗರ ತಿಪ್ಪಣ್ಣ TS ,ಶಕ್ತಿನಗರ ಮಲ್ಲಿಕಾರ್ಜುನ್ ಮಿಮಿಕ್ರಿ, ಶಕ್ತಿನಗರ ಸುಪ್ರಿತರಾಜ್  ಬೆಂಗಳೂರು, ಮಂಜುಸ್ವಾಮಿ, ಮೈಸೂರು ಶಾಮ್ ಖಾನಾಪುರ, ಬಾಬುಖಾನ್ ತುಮಕೂರು, ಸೇರಿದಂತೆ ಇತರರು ಇದ್ದರು.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...