ಅಕ್ರಮ ಮರಳು ದಂಧೆ: ತಾಲೂಕು ಆಡಳಿತ ಮೌನ.

-ಜಗದೇವ ಎಸ್ ಕುಂಬಾರ
ಚಿತ್ತಾಪುರ: ಕಾಗಿಣಾ ನದಿಯಲ್ಲಿ ಅಕ್ರಮ ಮರಳು ದಂಧೆ ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದ್ದರು ತಾಲೂಕು ಆಡಳಿತ ಮೌನವಾಗಿದೆ ಎಂದು ಸಾರ್ವಜನಿಕರು ಆರೂಪಿಸುತ್ತಿದ್ದಾರೆ.

ತಾಲೂಕಿನ ದಂಡೋತಿ, ಮುಡಬೂಳ, ಭಾಗೋಡಿ, ಕದ್ದರ್ಗಿ, ಮುತ್ತಗಿ, ಕಾಟಮದೇವರ ಹಳ್ಳಿ, ಈ ಗ್ರಾಮಗಳಲ್ಲಿ 
ಟ್ರ್ಯಾಕ್ಟರ್ ಮೂಲಕ ಮರಳು ತುಂಬಿಕೊಂಡು ಸಾಗುತ್ತಿವೆ. ರಾಯಲ್ಟಿ ಇಲ್ಲದೆ, ಯಾರ ಭಯವಿಲ್ಲದೆ ಮರಳು ದಂಧೆಯಲ್ಲಿ ತೋಡಗಿದ್ದಾರೆ. ಸರಕಾರದ ಆದೇಶ ಗಾಳಿಗೆ ತೂರಿ ಅಕ್ರಮ ಮರಳು ದಂಧೆ ನಡೆಸುತ್ತಿರುವುದಕ್ಕೆ ಕಡಿವಾಣ ಹಾಕಬೇಕಿದ್ದ, ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್‌, ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸೇರಿದಂತೆ ಗ್ರಾಮ ಪಂಚಾಯಿತಿ ಪಿಡಿಒಗಳಿಗೂ ಅಕ್ರಮ ಮರಳು ಸಾಗಣೆ ಜಾಲದ ವಿರುದ್ಧ ಕಾನೂನು ಕ್ರಮ ಜರುಗಿಸುವ ಅಧಿಕಾರ ಇದೆ. ಆದರೂ ಈ ಅಕ್ರಮ ದಂಧೆಗೆ ಕಡಿವಾಣ ಹಾಕುವಲ್ಲಿ ಆಡಳಿತ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಮರಳು ದಂಧೆಯಿಂದ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿವೆ ಇದರಿಂದ ಪ್ರಯಾಣಿಕರ ಸಂಚಾರಕ್ಕೆ ಅಡೆತಡೆಗಳು ಆಗುತ್ತಿವೆ. ಇನ್ನೂಂದು ಕಡೆ ಕಾಗಿಣಾ ನದಿಯ ನೀರು ಮಾಲಿನ್ಯವಾಗುತ್ತಿದೆ.  ನದಿಯಲ್ಲಿ ಮರಳು ಬಗೆದು ಚಿತ್ತಾಪೂರ ಪಟ್ಟಣದಲ್ಲಿ ಸಾಗಾಟ ಮಾಡುತ್ತಿದ್ದರು ತಾಲೂಕ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದೆ. ಗ್ರಾಮೀಣಾಭಿವೃದ್ಧಿ ಸಚಿವರ ತವರಲ್ಲೇ ಎಗ್ಗಿಲ್ಲದೇ ಅಕ್ರಮ ಮರಳು ಗಣಿಗಾರಿಕೆ‌ ನಡೆದ್ರೂ ಗಣಿ ಹಾಗೂ ಕಂದಾಯ ಇಲಾಖೆ ಡೋಂಟ್ ಕೇರ್ ಅಂತಿವೆ. ಇದು ರೈತರು, ನದಿ ಪಾತ್ರದ ಗ್ರಾಮಗಳ ಜನ್ರ ಆಕ್ರೋಶಕ್ಕೆ ಕಾರಣವಾಗಿದೆ.


 ತಹಸೀಲ್ದಾರ್ ಆಗಿ ಬಂದು ಮೂರ್ನಾಲ್ಕು ದಿನಗಳು ಆಗಿದೆ ಮನವ ಸರಪಳಿ ಕಾರ್ಯಕ್ರಮ ಮುಗಿತ್ತು.ನಾಳೆ ಕಲ್ಯಾಣ ಕರ್ನಾಟಕ ಉತ್ಸವ ಆದ ಮೇಲೆ ಒಂದು ದಿನ ಟಾಸ್ಕ್ ಫೋರ್ಸ್ ಸಭೆಯಲ್ಲಿ ತಾಲೂಕಿನ ಎಲ್ಲಾ ಅಧಿಕಾರಿಗಳ ಜೊತೆ ಚರ್ಚಿಸಿ ಆಕ್ರಮ ಮರಳು ದಂಧೆ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

- ನಾಗಯ್ಯ ಹೀರೆಮಠ 
ತಹಸೀಲ್ದಾರ್ ಚಿತ್ತಾಪೂರ.

====================================

ರಸ್ತೆ ಬದಿಯಲ್ಲಿ ಹೆಸ್ರು-ಉದ್ದು ಬೆಳೆ ರಾಶಿ ನಡೆಯುತ್ತಿದ್ದು ರಾಶಿ ಕಾಯಲು ರಸ್ತೆಯ ಬದಿಯಲ್ಲಿ ಮಲಗುತ್ತೆವೆ ರಾತ್ರಿ ವೇಳೆ ಮರಳು ತುಂಬಿದ ಟ್ರಾಕ್ಟರ್ ಓಡ್ಡಾಟದಿಂದ ಭಯದ ವಾತಾವರಣ ನಿರ್ಮಾಣವಾಗಿದೆ ಎನ್ನುತ್ತಾರೆ.

- ಅಡೇಪ್ಪಗೌಡ ಮಾಲಿ ಪಾಟೀಲ್.
ರೈತರು ಕದ್ದರ್ಗಿ ಗ್ರಾಮ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.