ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ.
ಚಿತ್ತಾಪುರ: ಮೂಲಭೂತ ಸೌಕರ್ಯ, ಸೇವಾ ಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಚಿತ್ತಾಪುರ ತಾಲ್ಲೂಕು ಘಟಕದವರು ಪಟ್ಟಣದಲ್ಲಿ ಗುರುವಾರ ಮುಷ್ಕರ ನಡೆಸಿದರು.
ಆನಂತರ ತಹಶೀಲ್ದಾರ್ ನಾಗಯ್ಯ ಹೀರೆಮಠ ರವರಿಗೆ ಮನವಿ ಪತ್ರ ಸಲ್ಲಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾಧ್ಯಕ್ಷ ಮೋತಿಲಾಲ್ ಚವ್ಹಾಣ್ ಮಾತನಾಡಿ ಕಂದಾಯ ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ 17ಕ್ಕೂ ಅಧಿಕ ಮೊಬೈಲ್ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದು, ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯವಿರುವ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಅದಕ್ಕೆ ಅವಶ್ಯಕವಾಗಿರುವ ಇಂಟರ್‌ನೆಟ್, ಸ್ಕ್ಯಾನರ್ ಒದಗಿಸಿಲ್ಲ. ಕ್ಷೇತ್ರಮಟ್ಟದಲ್ಲಿ ಅಧಿಕ ಒತ್ತಡದೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಅಲ್ಲದೆ, ಮಾನಸಿಕ ಹಾಗೂ ದೈಹಿಕವಾಗಿ ವ್ಯತಿರಿಕ್ತ ಪರಿಣಾಮ ಹೆಚ್ಚಾಗುತ್ತಿದೆ ಎಂದರು.
ವೃತ್ತಕ್ಕೆ ಒಂದರಂತೆ ಮೊಬೈಲ್, ಲ್ಯಾಪ್ಟಾಪ್, ಗೂಗಲ್ ಕ್ರೋಮ್, ಬುಕ್, ಪ್ರಿಂಟರ್, ಇಂಟರ್ ನೆಟ್ ಸೌಲಭ್ಯ ನೀಡುವವರೆಗೆ ಮೊಬೈಲ್ ತಂತ್ರಾಂಶಗಳಾದ ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗರ್ ಹುಕುಂ, ಹಕ್ಕುಪತ್ರ, ನಮೂನೆ 1-5ರ ವೆಬ್ ಅಪ್ಲಿಕೇಷನ್, ಪೌತಿ ಆಂದೋಲನ ಆ್ಯಪ್ ಕೆಲಸ ನಿರ್ವಹಿಸದಿರಲು ತೀರ್ಮಾನಿಸಲಾಗಿದೆ ಎಂದು ಮಾತನಾಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಸಂಘ ಅಧ್ಯಕ್ಷ ಬಸವರಾಜ ಬಳೊಂಡಗಿ, ಸರ್ಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ, ಗ್ರಾಮ ಸಹಾಯಕ ಸಂಘದ ಅಧ್ಯಕ್ಷ ಚಂದ್ರಶ್ ಹಾಗೂ ಇತರರು ಮುಷ್ಕರಕ್ಕೆ ಬೆಂಬಲ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಜಿಲ್ಲಾಧ್ಯಕ್ಷ ಮೋತಿಲಾಲ್ ಚವ್ಹಾಣ್, ತಾಲೂಕು ಅಧ್ಯಕ್ಷ ಸುನೀಲ್ ಚವ್ಹಾಣ್, ಉಪಾಧ್ಯಕ್ಷ ಗ್ರಾಮ ಅಧಿಕಾರಿಗಳಾದ ಮೈನೋದ್ದಿನ್, ಸಂಗಮೇಶ, ರಾಜು, ಮಹಾಂತೇಶ ಅನೀಲಕುಮಾರ, ವೆಂಕಟಪ್ಪ, ಪರಶುರಾಮ, ಬಸವರಾಜ, ಸಂಜೀವಕುಮಾರ, ಮಲ್ಲಿಕಾರ್ಜುನ, ಪೂಜಾ, ಭುವನೇಶ್ವರಿ, ಮಲ್ಲವ್ವ, ಪರಿಮಳ, ಹಾಲಮ್ಮ, ಜ್ಯೋತಿ, ಸಿದ್ದಮ್ಮ, ಶ್ವೇತಾ, ನರಸರೆಡ್ಡಿ, ಸತೀಶ್, ನಾಗಣ್ಣ, ಶೇಖಪ್ಪ, ಮಾರುತಿ, ಸೇರಿದಂತೆ ಇತರರು ಇದ್ದರು.
ಪದೋನ್ನತ್ತಿಯಲ್ಲಿ ಸಾಕಷ್ಟು ಅನ್ಯಾಯವಾಗುತ್ತಿದೆ. ಅನೇಕರು ನಿವೃತ್ತಿ ಅಂಚಿನಲ್ಲಿದ್ದಾರೆ. ಆದರೆ, ಪದೋನ್ನತ್ತಿ ಕೊಟ್ಟಿಲ್ಲ. ಇದನ್ನು ಸರಿಪಡಿಸಬೇಕು. ಪತಿ-ಪತ್ನಿ ಪ್ರಕರಣಗಳಲ್ಲಿ ವರ್ಗಾವಣೆ ಪ್ರಕ್ರಿಯೆ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕು. ಕೆಲಸದ ಅವಧಿ ನಂತರ ವರ್ಚುವಲ್ ಸಭೆಗಳನ್ನು ನಡೆಸದಂತೆ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.
-ಸುನೀಲ್ ಚವ್ಹಾಣ್,
ತಾಲೂಕು ಅಧ್ಯಕ್ಷ, ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಚಿತ್ತಾಪೂರ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ