ಶಿವಲಿಂಗದ ಮೇಲೆ ಕಾಲಿಟ್ಟಿದ್ದು ಮಹಾಪಾಪ: ದಳಪತಿ.
ಚಿತ್ತಾಪುರ: ತಾಲೂಕಿನ ದಿಗ್ಗಾಂವ್ ಗ್ರಾಮದ ಸಿದ್ದವೀರ ಶಿವಾಚಾರ್ಯರು ಶಿವಲಿಂಗದ ಮೇಲೆ ಕಾಲಿಟ್ಟಿದ್ದು ಮಹಾಪಾಪ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಕಾರ್ಯದರ್ಶಿ, ಬಸವರಾಜ ಪೊಲೀಸ್ ಪಾಟೀಲ್ ದಳಪತಿ ಭಾಗೋಡಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆ ಹೇಳಿಕೆ ನೀಡಿದ ಅವರು, ಇದಕ್ಕೂ ಮೊದಲು ಮೋಟ್ನಳ್ಳಿ ಗ್ರಾಮದಲ್ಲಿ ಹೆಣ್ಣು ದೇವತೆಯ ಮೇಲೆ ಪಾದವನ್ನು ಇಟ್ಟು ಪೂಜೆ ಮಾಡಿದ್ರು ಈಗ ಮತ್ತೆ ಸೇಡಂ ತಾಲೂಕಿನ ಕಲಕಂಬ ಗ್ರಾಮದಲ್ಲಿ ಶಿವಲಿಂಗ ಮೇಲೆ ಪಾದವನ್ನು ಇಟ್ಟು ಪೂಜೆ ಮಾಡಿದ್ದು ಮಹಾ ಅಪರಾಧವಾಗಿದೆ ಕೂಡಲೇ ಶಿವಭಕ್ತರಲ್ಲಿ ಕ್ಷಮೆ ಯಾಚಿಸಬೇಕು ಎಂದರು.
ಸುಮಾರು 20 ವರ್ಷಗಳ ಹಿಂದೆ ಸ್ವಾಮೀಜಿ ನಾಗಾವಿ ಯಲ್ಲಮ್ಮ ದೇವಸ್ಥಾನ ಹತ್ತಿರ ತಪಸ್ಸು ಮಾಡಿದ್ರು, ನಂತರ 3/4 ವರ್ಷಗಳ ಹಿಂದೆ ತಾಲೂಕಿನ ಲಕ್ಷ ದೀಪೋತ್ಸವ ಮಾಡಿ ಹೇಸರು ಪಡೆದಿದ್ದರು. ಈ ಕಾರ್ಯಕ್ರಮಕ್ಕೆ ಪ್ರತಿ ಗ್ರಾಮಗಳಿಂದ ಪಟ್ಟಿ ಮಾಡಲಾಗಿತ್ತು. ಭಕ್ತರಿಂದ ಹೆಸರು ಪ್ರಚಾರ ಪಡೆದು ಈಗ ನಾನೇ ಶಿವನಿಗಿಂತ ದೊಡ್ಡವ ಎನ್ನುವಂತೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಎಡಗೈನಲ್ಲಿ ಲಿಂಗ ಹಿಡಿದು ಪೂಜೆ ಮಾಡಿಕೋಳ್ಳುವ ಸ್ವಾಮೀಜಿ ಸ್ವಲ್ಪ ವಿಚಾರ ಮಾಡಬೇಕಿತ್ತು ಮಾಡಿಲ್ಲ ಆದ್ರೆ ಸಾಕಷ್ಟು ಸ್ವಾಮೀಜಿ, ಶಿವಾಚಾರ್ಯರು ಪಟ್ಟಾಭಿಷೇಕ ಆಗಿರುವುದು ನೋಡಿರುವೆ ಆದ್ರೆ ಈ ಸಿದ್ದವೀರ ಶಿವಾಚಾರ್ಯರು ಪಟ್ಟಾಭಿಷೇಕ ಆಗಿದ್ದೇನಾ ಎಂಬುದು ಅನುಮಾನವಿದೆ. ಏಕೆಂದರೆ ಪಟ್ಟಾಭಿಷೇಕ ಆದ ಸ್ವಾಮೀಜಿ ಈ ರೀತಿಯ ಕೃತ್ಯ ಕೆಲಸ ಮಾಡಿಲ್ಲ. ಭಕ್ತರಿಗೆ ಒಳ್ಳೆಯ ಮಾರ್ಗ ತೋರಿಸಬೇಕು ಅದು ಬಿಟ್ಟು ಶಿವಲಿಂಗದ ಮೇಲೆ ಕಾಲಿಡುವುದು ಸಮಾಜಕ್ಕೆ ತಪ್ಪು ಸಂದೇಶ ಸಾರುವ ಇಂತಹ ವಿಡಿಯೋ ತುಣುಕುಗಳು ಬಿಡಬಾರದು ಈ ತಪ್ಪಿಗೆ ದೇವರೆ ಆ ಸ್ವಾಮೀಜಿಗೆ ತಕ್ಕ ಪಾಠ ಕಲಿಸಲಿ ಎಂದರು.
ಸ್ವಾಮೀಜಿ ಕೂಡಲೇ ಶಿವಭಕ್ತರಿಗೆ ಕ್ಷಮೆ ಯಾಚಿಸಬೇಕು ಇಲ್ಲಾಂದ್ರೆ ಈಗಾಗಲೇ ಪ್ರತಿ ದಿನ, ಪ್ರತಿ ಕ್ಷಣ ಕಾನೂನು ಪ್ರಕಾರ ಹೋರಾಟಕ್ಕೆ ಸಿದ್ದತೆ ನಡೆಯುತ್ತಿದೆ ಎಂದು ಎಚ್ಚರಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ