ಕಿತ್ತು ಹೋದ ರಸ್ತೆ: ಸಂಚಾರಕ್ಕೆ ತೊಡಕು

ಚಿತ್ತಾಪೂರ: ತಾಲೂಕಿನ ಭಾಗೋಡಿ ಗ್ರಾಮದ ಮೂಲಕ ಡಿಗ್ರಿ ಕಾಲೇಜಿನ ಮಾರ್ಗವಾಗಿ ಚಿತ್ತಾಪುರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಕಿತ್ತು ಹೋಗಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
9 ಕಿಲೋಮೀಟರ್ ರಸ್ತೆಯು ಪ್ರತಿ ವರ್ಷ ಮಳೆಗೆ ಹಾಗೂ ಬಾರಿ ಗಾತ್ರದ ಮರಳು ತುಂಬಿದ ಟಿಪ್ಪರ್ ಹಾಗೂ ಟ್ರ್ಯಾಕ್ಟರ್ ಗಳ ಓಡಾಟದಿಂದ ಕಿತ್ತು ಹೋಗಿದೆ ಈಗ ಎರಡುಮೂರು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ಮತ್ತಷ್ಟು ರಸ್ತೆ ಕಿತ್ತು ಹೋಗಿದ್ದು ಸಂಬಂಧಿಸಿ ಅಕಾರಿಗಳು ಈ ರಸ್ತೆಯ ಕಡೆ ತಿರುಗಿ ನೋಡುತ್ತಿಲ್ಲ ಕನಿಷ್ಠ ಮರಂ ಹಾಕುವ ಕೆಲಸ ಕೂಡ ಮಾಡಿಲ್ಲ. ಅಕಾರಿಗಳ ನಿರ್ಲಕ್ಷ್ಯದಿಂದ ವಾಹನ ಸವಾರರು ರಾತ್ರಿ ವೇಳೆ ಜೀವಭಯದಲ್ಲೇ ಸಂಚರಿಸುವಂತಾಗಿದೆ. ಎನ್ನುತ್ತಾರೆ.
ಈ ರಸ್ತೆಯಿಂದ ಚಿತ್ತಾಪೂರ ಪಟ್ಟಣಕ್ಕೆ ಹೋಗಿ ಬರಲು ತುಂಬಾ ಅನುಕೂಲಕರ ಏಕೆಂದರೆ ಬರಿ 9 ಕಿಲೋಮೀಟರ್ ಅಷ್ಟೇ ಆದ್ರೆ ಮುಡಬೂಳ ಮಾರ್ಗವಾಗಿ ಬಂದ್ರೆ 15 ಕಿಲೋಮೀಟರ್ ಆಗುತ್ತದೆ ಹೀಗಾಗಿ ಭಾಗೋಡಿ ಗ್ರಾಮದ ಮೂಲಕ ಡಿಗ್ರಿ ಕಾಲೇಜಿನ ಮಾರ್ಗವಾಗಿ ಚಿತ್ತಾಪುರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ  ದುರಸ್ತಿ ಮಾಡಿ ಗ್ರಾಮಸ್ಥರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.

ಗ್ರಾಮ ಪಂಚಾಯತ್ ಇರುವ ಈ ಗ್ರಾಮದಲ್ಲಿ ಸಾಕಷ್ಟು ಜನಪ್ರತಿನಿಧಿಗಳು ಇದ್ದು ಇರದಂತೆ ಆಗಿದೆ. ಈಗಾಗಲೇ ರಸ್ತೆ ಅವ್ಯವಸ್ಥೆಯಿಂದ ಗ್ರಾಮಕ್ಕೆ ಖಾಸಗಿ ವಾಹನಗಳ ಸಂಚಾರ ಕಡಿಮೆಯಾಗುತ್ತಿದೆ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ. ಮಳೆಯಾಗಿರುವುದರಿಂದ ರಸ್ತೆಯ ಪಕ್ಕದ ರೈತರಿಗೆ  ತಮ್ಮ ಜಮೀನುಗಳನ್ನು ಉಳುಮೆ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ.
ಪಿಆರ್ ಇ ಇಲಾಖೆಗೆ ಸಂಬಂಧಿಸಿದ ಕಾಮಗಾರಿಯು ಈ ಹಿಂದೆ ರಸ್ತೆ ನಿರ್ಮಾಣ ಮಾಡಿದ ಗುತ್ತಿಗೆದಾರರು, ಮಳೆ ನೀರು ಹರಿದು ಹೋಗಲು ಸೇತುವೆಗಳು ಸರಿಯಾಗಿ  ಅಳವಡಿಸಿಲ್ಲ. ಇದರಿಂದ ರಸ್ತೆ ಕಿತ್ತು ಹೋಗಲು ಕಾರಣವಾಗಿದೆ.
ಕೂಡಲೇ ಇಂತಹ ಗುತ್ತಿಗೆದಾರರ ಪರವಾನಿಗೆ ರದ್ದುಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕ್ಷೇತ್ರದ ಶಾಸಕರು ಪ್ರತಿ ವರ್ಷ ಕೋಟಿಗಟ್ಟಲೆ ಹಣ ತಂದು ತಾಲೂಕಿನ ವಿವಿಧ ಭಾಗದ ರಸ್ತೆಗಳ ಡಾಂಬರೀಕರಣ ಮಾಡುತ್ತಿದ್ದರೂ ಮಳೆಗಾಲ ಕಳೆಯುತ್ತಿದ್ದಂತೆ ರಸ್ತೆಗಳು ಅಧ್ವಾನದ ಸ್ಥಿತಿ ನಿರ್ಮಾಣವಾಗಿ ಅಭಿವೃದ್ಧಿ ದಶಕಗಳ ಹಿಂದೆ ಹೋಗಿದೆಯೇನೋ ಎನ್ನಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ ಎನ್ನುತ್ತಾರೆ.

 -ಲಕ್ಷ್ಮಿಕಾಂತ್ ತಾಂಡೂರಕರ್.
ತಾಲೂಕಾಧ್ಯಕ್ಷ, ವೀರ ಕನ್ನಡಿಗ ಸೇನೆ ಚಿತ್ತಾಪುರ.

==================================

ಈ ರಸ್ತೆಯ ದುರಸ್ತಿ ಕುರಿತು ವರದಿಗಾರರು ಪಿಆರ್ ಇ ಇಲಾಖೆಯ ಪಿಡಬ್ಲ್ಯೂಡಿ ಬಾಲಕೃಷ್ಣ ಅಧಿಕಾರಿಗಳಿಗೆ ಫೋನ್ ಕರೆ ಮಾಡಿದ್ರೆ ಕರೆ ಸ್ವೀಕರಿಸುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.