ಮಂಗಳವಾರ, ಅಕ್ಟೋಬರ್ 22, 2024

ನಾಳೆ ಕಾಂಗ್ರೆಸ್ ಪಕ್ಷದಿಂದ ಪೂರ್ವಭಾವಿ ಸಭೆ.


ಚಿತ್ತಾಪುರ: ಕಲಬುರ್ಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರ ಅಭಿನಂದನಾ ಸಮಾರಂಭ ನಿಮಿತ್ಯ ನಾಳೆ (ಅ.23 ರಂದು) ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಹೇಳಿದರು.

ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಧಾಕೃಷ್ಣ ದೊಡ್ಡಮನಿ ಅವರ ಅಭಿನಂದನಾ ಸಮಾರಂಭ ಇದೇ ಅ.25 ರಂದು ಪಟ್ಟಣದಲ್ಲಿ ಆಯೋಜಿಸಿದ್ದು, ಹೀಗಾಗಿ ಸಮಾರಂಭವನ್ನು ಯಶಸ್ವಿಯಾಗಿ ಮತ್ತು ಅದ್ದೂರಿಯಾಗಿ ಮಾಡುವ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮಾಜಿ ಸದಸ್ಯರು, ಪುರಸಭೆ ಸದಸ್ಯರು ಮತ್ತು ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು, ಪಕ್ಷದ ಎಲ್ಲ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳು ನೀಡಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಜಿಪಂ ಮಾಜಿ ಸದಸ್ಯ ಶಿವರುದ್ರಪ್ಪ ಭೀಣಿ, ಪುರಸಭೆ ಸದಸ್ಯ ವಿನೋದ ಗುತ್ತೇದಾರ, ಕಾಂಗ್ರೆಸ್ ಯುವ ಅಧ್ಯಕ್ಷ ಸಂಜಯ ಬುಳಕರ್‌, ಪ್ರಮುಖರಾದ ಸುನೀಲ್ ದೊಡ್ಡಮನಿ, ಮಲ್ಲಪ್ಪ ಹೊಸಮನಿ, ಶಿವಕಾಂತ್ ಬೆಣ್ಣೂರಕರ್, ರಾಮಲಿಂಗ ಬಾನರ್‌, ನಾಗು ಕಲ್ಲಕ ಇದ್ದರು.

ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸೋಣ.

ಚಿತ್ತಾಪುರ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಕನ್ನಡ ರಾಜ್ಯೋತ್ಸವ ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ಆಚರಿಸೋಣ ಎಂದು ತಹಸೀಲ್ದಾ‌ರ್ ನಾಗಯ್ಯ ಹಿರೇಮಠ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನವೆಂಬರ್ 1 ರಂದು ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಬೆಳಿಗ್ಗೆ 8 ಗಂಟೆ ಅಧಿಕಾರಿಗಳು ಧ್ವಜಾರೋಹಣವನ್ನು ನೆರವೇರಿಸಿ ತಾಲೂಕು ಆಡಳಿತ ವತಿಯಿಂದ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಎಲ್ಲಾರೂ ಭಾಗವಹಿಸಬೇಕು ಎಂದು ಕೋರಿದ್ದಾರೆ. 

ಪಟ್ಟಣದ ಎಲ್ಲ ರಸ್ತೆಗಳಲ್ಲಿ ಸ್ವಚ್ಛತೆ ಕಾರ್ಯ ಮಾಡಬೇಕು ಎಂದು ಪುರಸಭೆಗೆ ಸೂಚಿಸಿದರು, ಎಲ್ಲಾ ಸರ್ಕಾರಿ ಕಚೇರಿಗಳ ಮೇಲೆ ದೀಪಾಲಂಕಾರ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ಪಟ್ಟಣದ ಎಲ್ಲ ಅಂಗಡಿಗಳ ನಾಮಫಲಕ ಕನ್ನಡದಲ್ಲಿ ಇರುವಂತೆ ಮಾಡಬೇಕು, ಭುವನೇಶ್ವರಿ ವೃತ್ತ ಅಭಿವೃದ್ಧಿಗೊಳಿಸಿ ಆಲ್ಲಿ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಬೇಕು, ಎಲ್ಲ ಅಂಗಡಿಗಳ ಮೇಲೆ ಕನ್ನಡ ಧ್ವಜ ಅಳವಡಿಸುವಂತೆ ಸೂಚಿಸಬೇಕು, ಉಪಹಾರದ ವ್ಯವಸ್ಥೆ ಮಾಡಬೇಕು, ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರಗಳ ವ್ಯವಸ್ಥೆ ಮಾಡಬೇಕು, ಮೆರವಣಿಗೆ ಅಚ್ಚುಕಟ್ಟಾಗಿ ನಡೆಯಬೇಕು ಮತ್ತು ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮಾಡಬೇಕು, ಅದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಬೇಕು ಎಂಬ ವಿವಿಧ ಅಭಿಪ್ರಾಯಗಳು ವ್ಯಕ್ತವಾದವು ಈ ಎಲ್ಲಾವು ಕುರಿತು ಮಹ್ಮದ್ ಇಬ್ರಾಹಿಂ,  ಕಾಶಿನಾಥ ಗುತ್ತೇದಾರ, ನರಹರಿ ಕುಲಕರ್ಣಿ, ಚಂದ್ರಶೇಖರ ಬಳ್ಳಾ,  ಜಗದೇವ ದಿಗ್ಗಾಂವಕರ್, ರವಿ ಇವಣಿ, ಪ್ರಹ್ಲಾದ ವಿಶ್ವಕರ್ಮ, ವೀರಣ್ಣ ಸುಲ್ತಾನಪೂ‌ರ್, ಮಾತನಾಡಿದರು.


ಪಟ್ಟಣದಲ್ಲಿ ಸೂಕ್ತವಾದ ವೃತ್ತದಲ್ಲಿ ಭುವನೇಶ್ವರಿ ದೇವಿ ಮೂರ್ತಿ ಕುಡಿಸಬೇಕು,ಅಂಗಡಿ ಮುಂಗಟ್ಟುಗಳ ಮೇಲಿನ ಹಾಕಿದ ಆಂಗ್ಲ ಭಾಷೆಯ ನಾಮಫಲಕ ತೆರುವುಗೋಳಿಸಬೇಕು, ಸರ್ಕಾರ ಜಾರಿಗೆ ತಂದಿರುವ ಸರ್ಕಾರಿ ನೌಕರರ ಕೆಂಪು ಹಳದಿ ಬಣ್ಣದ ಐಡಿ ಕಾರ್ಡ್ ಟ್ಯಾಗ್ ಕಡ್ಡಾಯವಾಗಿ ಧರಿಸಬೇಕು, ಕ್ಷೇತ್ರದಲ್ಲಿ ಓರಿಯಂಟ್, ಎಸಿಸಿ, ಮತ್ತು ಶ್ರೀ ಸಿಮೆಂಟ್ ಕಂಪೆನಿಯಲ್ಲಿ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲು ಸೂಚಿಸುವುದರ ಜೊತೆಗೆ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಬೇಕು ಕನ್ನಡ ಬಾವುಟಗಳು ತಾಲೂಕಿನಲ್ಲಿ ರಾರಾಜಿಸಬೇಕು ಎಂದರು.

- ಜಗದೇವ ಎಸ್ ಕುಂಬಾರ
ಕಸಾಪ ಸದಸ್ಯರು, ಪತ್ರಕರ್ತರು ಚಿತ್ತಾಪೂರ.

ಗ್ರೇಡ್ -2 ತಹಸೀಲ್ದಾರ್ ರಾಜಕುಮಾರ ಮರತೂರಕರ್, ಕಸಾಪ ಅಧ್ಯಕ್ಷ ವಿರೇಂದ್ರ ಕೊಲ್ಲೂರ, ಅಧಿಕಾರಿಗಳಾದ ಸಿಪಿಐ ಚಂದ್ರಶೇಖರ ತಿಗಡೆ, ಆರತಿ ತುಪ್ಪದ್, ಕರಣಕುಮಾರ ಸವಿತಾ ಗೋಣಿ, ಚೇತನ್ ಗುರಿಕಾರ, ಬಾಲಕೃಷ್ಣ, ಡಾ.ಶಂಕರ ಕಣ್ಣಿ, ಡಾ.ಸೃಯಾದ್ ರಜೀವುಲ್ಲಾ, ಶಿವಶರಣಪ್ಪ ಮಂಠಾಳೆ, ಬಸವರಾಜ ಜೆಇ ವಾಡಿ, ಲೋಹಿತ್ ಕಟ್ಟಿಮನಿ, ಅಮೃತ್ ಕ್ಷೀರಸಾಗರ, ಮಹ್ಮದ್ ಜಾವೀದ್, ವಿಜಯಲಕ್ಷ್ಮಿ, ಶ್ರೀಮತಿ ಸುನೀತಾ, ರಾಜಕುಮಾರ, ಚಂದ್ರಕಾಂತ ಮುಖಂಡರಾದ ಚಂದ್ರಶೇಖರ ಉಟಗೂರ, ಲಕ್ಷ್ಮೀಕಾಂತ ತಾಂಡೂರಕರ್, ಶರಣು ದಂಡೋತಿ, ವೆಂಕಟೇಶ್ ಬಳಿಚಕ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶುಕ್ರವಾರ, ಅಕ್ಟೋಬರ್ 18, 2024

ಸಂಘದ ಚುನಾವಣೆ: ಅರುಣಕುಮಾರ್‌ ನಾಮಪತ್ರ ಸಲ್ಲಿಕೆ.

ಚಿತ್ತಾಪುರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆಯ ಚುನಾವಣೆ ಇದೇ ಅ.28 ರಂದು ನಡೆಯಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಅರುಣಕುಮಾರ್ ಚಿಂಚನಸೂರ ನಿರ್ದೇಶಕರ ಹುದ್ದೆಗೆ ಆಯ್ಕೆ ಬಯಿಸಿ ಇಲಾಖೆಯ ಸಿಬ್ಬಂದಿಗಳೊಂದಿಗೆ ತೆರಳಿ ಚುನಾವಣಾಧಿಕಾರಿ ವಿಜಯಕುಮಾರ ಲೊಡ್ಡೆನೋರ ಅವರಿಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಅರುಣಕುಮಾರ್ ಚಿಂಚನಸೂರ ಅವರು ನಾಮಪತ್ರ ಸಲ್ಲಿಸಿ ಚುನಾವಣಾ ಕಣಕ್ಕಿಳಿದಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಬಸವರಾಜ ಜಮಾದಾರ, ಕೆಎಂಎಫ್ ಮಾಜಿ ನಿರ್ದೇಶಕ ತಿಪ್ಪಣ್ಣ ಆಳಂದ, ಇಲಾಖೆ ಸಿಬ್ಬಂದಿಗಳಾದ ಮಹ್ಮದ್ ಗೌಸೋದ್ದಿನ್, ಸಿದ್ದರಾಜ್, ಶರಣು, ಜಯಶ್ರೀ, ಸಿದ್ದಪ್ಪ, ರವಿಕುಮಾ‌ರ್, ಲಿಂಗರಾಜ್, ಪರಶುರಾಮ, ದೇವಿಂದ್ರಪ್ಪ ಭಾಲ್ಕಿ, ರವಿ ಬೆಳಮಗಿ ಸೇರಿದಂತೆ ಇತರರು ಇದ್ದರು.

ಅದ್ದೂರಿಯಾಗಿ ನಡೆದ ನಾಗಾವಿ ಪಲ್ಲಕ್ಕಿ ಉತ್ಸವ.

ದಾರಿ ಉದ್ದಕ್ಕೂ ಅನ್ನ ದಾಸೋಹ.  •ಪಲ್ಲಕ್ಕಿ ಉತ್ಸವಕ್ಕೆ ಹರಿದುಬಂದ ಭಕ್ತ ಸಾಗರ.

ಚಿತ್ತಾಪೂರ: ರಾಷ್ಟ್ರಕೂಟರ ಕುಲ ದೇವತೆಯಾದ ಸುಪ್ರಸಿದ್ಧ ಶ್ರೀ ನಾಗಾವಿ ಯಲ್ಲಮ್ಮ ದೇವಿ ಪಲ್ಲಕ್ಕಿ ಉತ್ಸವ ತುಂಬಾ ವಿಜೃಂಭಣೆಯಿಂದ ಸಾವಿರಾರು ಭಕ್ತರ ಜೈಘೋಷದ ಮಧ್ಯ ಗುರುವಾರ ಅದ್ದೂರಿಯಾಗಿ ಜರಗಿತ್ತು.

ಪಟ್ಟಣದ ಸರಾಫ್ ಲಚ್ಚಪ್ಪ ನಾಯಕ ನಿವಾಸದಲ್ಲಿ ಮಧ್ಯಾಹ್ನ 2ಗಂಟೆ ಸುಮಾರಿಗೆ ವಿಘ್ನೇಶ್ವರ ಗುರು ಹಾಗೂ ಯಲ್ಲಮ್ಮ ದೇವಿ ಪಲ್ಲಕ್ಕಿಗೆ ತಹಸಿಲ್ದಾರ್ ನಾಗಯ್ಯ ಹೀರೆಮಠ, ಕಚೇರಿಯ ಸಿರಸ್ತೇದಾರ್ ಅಶ್ವಥ್ ನಾರಾಯಣ್, ಕಣ್ವ ನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಪ್ರಭುರಾಜ ಕಾಂತಾ,ಬಿಜೆಪಿ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಡಿವಾಯ್ಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಜಗದೇವಪ್ಪ ಪಾಳಾ, ಗಣ್ಯರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತ್ತು ನಂತರ ಸಕಲ ವಾದ್ಯಗಳೊಂದಿಗೆ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಮೂರ್ತಿ ಹೊತ್ತ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.
ಚಿತಾವಲಿ ಚೌಕ, ಕಪಡಾ ಕಿರಾಣಾ ಬಜಾರ್, ಜನತಾ ಚೌಕ್, ನಾಗಾವಿ ಚೌಕ್, ಹಾಗೂ ಒಂಟಿ ಕಮಾನ್ ಸೇರಿ ವಿವಿಧ ಬೀದಿಗಳ ಮೂಲಕ ರಾತ್ರಿ 8 ಗಂಟೆಗೆ ಶ್ರೀ ನಾಗಾವಿ ಯಲ್ಲಮ್ಮ ದೇವಿ ದೇಗುಲ ತಲುಪಿತ್ತು. ಮೆರವಣಿಗೆಯಲ್ಲಿ ಭಾಜಾ ಭಜಂತ್ರಿ, ಡೊಳ್ಳು ಕುಣಿತ, ಕೋಲಾಟ ಬಣ್ಣ ಬಣ್ಣದ ಧ್ವಜಗಳು ಗಮನ ಸೆಳೆದವು. ಸುಮಂಗಲಿಯರು ಕಳಸ ಕುಂಭ ಹೊತ್ತು ಹೆಜ್ಜೆ ಹಾಕಿದರು. ಸುಮಾರು 7 ಗಂಟೆಗಳ ಕಾಲದವರೆಗೆ ದೇವಿಯ ಉತ್ಸಾಹ ನಡೆಯಿತು. ದೇವಾಲಯದ ಸುತ್ತ 5 ಪ್ರದಕ್ಷಣೆ ಹಾಕಿದ ನಂತರ ದೇವಿಗೆ ವಿಶೇಷ ಪೂಜೆ ಅಭಿಷೇಕ ಕುಂಕುಮಾರ್ಚನೆ ಹಾಗೂ ಮಂಗಳಾರತಿ ನೆರವೇರಿಸಲಾಯಿತು .

 ವಿವಿಧ ರಾಜ್ಯ ಸೇರಿ ಆಂಧ್ರಪ್ರದೇಶ ತೆಲಂಗಾಣ ಮಹಾರಾಷ್ಟ್ರ ತಮಿಳುನಾಡಿನಿಂದ ಆಗಮಿಸಿದ ಭಕ್ತರು ಯಲ್ಲಮ್ಮ ದೇವಿ ದರ್ಶನ ಪಡೆದು ಪುನೀತರಾದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗಯ್ಯ ಹೀರೆಮಠ, ಡಿವಾಯ್ಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ ತಿಗಡೆ, ಜಗದೇವಪ್ಪ ಪಾಳಾ,ಶಿರಸ್ತೇದಾರ ಅಶ್ವಥ್ ನಾರಾಯಣ್,  ಕಣ್ವ ನಾಯಕ, ಕೃಷ್ಣ ನಾಯಕ್, ನರಹರಿ ಕುಲಕರ್ಣಿ, ಅಂಬರೀಶ್ ಸುಲೇಗಾವ್, ಸುರೇಶ್ ಗುತ್ತೇದಾರ್, ನಾಗಯ್ಯ ಗುತ್ತೇದಾರ್, ಚಂದ್ರಶೇಖರ ಅವಾಂಟಿ, ಕೋಟೇಶ್ವರ ರೇಶ್ಮಿ, ಲಕ್ಷ್ಮೀಕಾಂತ ತಾಂಡೂರಕರ್, ಅಂಬರೀಶ್ ಬೋವಿ, ಆನಂದ ಗುತ್ತೇದಾರ್, ಭೀಮು ಹೋಳಿಕಟ್ಟಿ, ಮಾರುತಿ ತಾಂಡೂರಕರ್, ನಾಗಾವಿ ದೇವಸ್ಥಾನ, ಮತ್ತು ತಹಸಿಲ್  ಸಿಬ್ಬಂದಿ ವರ್ಗ, ಪಿಎಸಐ ಶ್ರೀಶೈಲ್ ಅಬಂಟಿ, ತಿರುಮಲೇಶ್ ಕುಂಬಾರ, ಸೇರಿದಂತೆ ಇತರರು ಇದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದರು.

ಸಂಘದ ಚುನಾವಣೆಗೆ ಪಿಡಿಓ ನಾಮಪತ್ರ ಸಲ್ಲಿಕೆ

ಚಿತ್ತಾಪುರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆಯ ಚುನಾವಣೆ ಇದೇ ಅ.28 ರಂದು ನಡೆಯಲಿದ್ದು, ನಿರ್ದೇಶಕರ ಹುದ್ದೆಗೆ ಆಯ್ಕೆ ಬಯಿಸಿ ಅಳ್ಳೋಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವಿಂದ್ರಪ್ಪ ಭಾಲ್ಕೆ ಅವರು ಇಲಾಖೆಯ ಸಿಬ್ಬಂದಿಗಳೊಂದಿಗೆ ತೆರಳಿ ಚುನಾವಣಾಧಿಕಾರಿ ವಿಜಯಕುಮಾರ ಲೊಡ್ಡೆನೋರ ಅವರಿಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.

ತಾಲೂಕು ಪಂಚಾಯತ್ ಕಚೇರಿ ವತಿಯಿಂದ ದೇವಿಂದ್ರಪ್ಪ ಭಾಲ್ಕೆ ಅವರು ನಾಮಪತ್ರ ಸಲ್ಲಿಸಿ ಚುನಾವಣಾ ಕಣಕ್ಕಿಳಿದಿದ್ದಾರೆ.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ತಾಲೂಕು ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಾದ ಅಮೃತ್ ಕ್ಷೀರಸಾಗರ, ಹರೀಶ್ ಶಿಂಧೆ, ಓಂಕಾರ, ಶ್ರಾವಣ,ಅನೀಲಕುಮಾರ, ರೇಷ್ಮಾ, ಅನೀತಾ, ಜಕ್ಕಪ್ಪ, ಜುಬೇರ್, ಸಂದೇಶ, ಪ್ರಕಾಶ್ ಸೇರಿದಂತೆ ಇತರರು ಇದ್ದರು.

ಸ್ವಚ್ಛತೆಯಿಂದ ಉತ್ತಮ ಆರೋಗ್ಯ: ಗ್ರಾಪಂ ಅಧ್ಯಕ್ಷ.


ಚಿತ್ತಾಪುರ: ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ಉತ್ತಮ ಆರೋಗ್ಯ ದೊರೆಯಲು ಸಾಧ್ಯ ಎಂದು ಭಾಗೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ ಪಾಟೀಲ್ ಹೇಳಿದರು.

ತಾಲೂಕಿನ ಭಾಗೋಡಿ ಗ್ರಾಮದ ಪಂಚಾಯತ್ ಸಭಾಂಗಣದಲ್ಲಿ ಅಶೋಕ್ ಲೇಲ್ಯಾಂಡ್ ಹಾಗೂ ಲರ್ನಿಂಗ್ ಲಿಂಕ್ ಫೌಂಡೇಶನ್ ಮತ್ತು ರೋಟು ಸ್ಕೂಲ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬರಲ್ಲಿ ಪರಿಸರದ ಬಗ್ಗೆ ಕಾಳಜಿ ಇರಬೇಕು. ನಮ್ಮೆಲ್ಲರ ಜೀವನದಲ್ಲಿ ಇಂತಹ ಮನೋಭಾವನೆ ಮೂಡಿದಾಗ ಸ್ವಚ್ಛ ಊರು, ಸ್ವಚ್ಛ ಗ್ರಾಮ ನಿರ್ಮಾಣ ಸಾಧ್ಯವಾಗುತ್ತದೆ. ಸ್ವಸ್ಥ ಆರೋಗ್ಯ, ವಾತಾವರಣ, ಸಮಾಜದ ನಿರ್ಮಾಣದ ದಿಶೆಯಲ್ಲಿ  ಸ್ವಚ್ಛತೆ ಬಹುಮುಖ್ಯವಾಗಿದೆ ಎಂದರು.
ಎಲ್ಎಲ್ಎಫ್ ತಾಲೂಕು ಬ್ಲಾಕ್ ಮ್ಯಾನೇಜರ್ ಸಂತೋಷ ಕುಮಾರ್ ಮಾತನಾಡಿ ತಮ್ಮ ಊರಿನ  ಬಡಾವಣೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಆರೋಗ್ಯ ರಕ್ಷಣೆ ಕಡೆ ಗಮನ ಹರಿಸಬೇಕು, ಅಶುದ್ಧ ವಾತಾವರಣ ನಿರ್ಮಾಣವಾದಲ್ಲಿ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತೆದೆ ಹೀಗಾಗಲೇ ತಾಲೂಕಿನಲ್ಲಿ 597 ವೀಕಲ ಚೇತನ್ ಮಕ್ಕಳು ಇದ್ದಾರೆ ಎಂಬ ಮಾಹಿತಿ ಗಮನಕ್ಕೆ ಬಂದಿದೆ. ಆದ್ದರಿಂದ ನಮ್ಮ ನಮ್ಮ ಸ್ವಚ್ಛತೆ ನಾವೇ ಮಾಡಿಕೊಳ್ಳಬೇಕು ಎಂದರು.

ವಾರಕ್ಕೆ ಒಂದು ದಿನದಂತೆ ನಮ್ಮ ಮನೆಯ ಅಕ್ಕ ಪಕ್ಕದ ಸ್ವಚ್ಛತೆ ಮತ್ತಿತರ ಕೆಲಸಗಳನ್ನು ನಾವೆ ಮಾಡಬೇಕು ಇದರ ಬಗ್ಗೆ ಇತರರಿಗೆ ಅರಿವು ಮೂಡಿದರೆ ಮಾತ್ರ ಸ್ವಾವಲಂಬನೆ ಮೂಡಲು ಸಾಧ್ಯ. ಮನೆಯಿಂದ ಹಿಡಿದು ದೇಶದ ಸ್ವಚ್ಛತಾ ಗುರಿ ನಿಮ್ಮದಾಗಲಿ ಎಂದರು.

   - ಕುಮಾರಿ ರೇಷ್ಮಾ,
 ಹಿರಿಯ ಸಂಪನ್ಮೂಲ ಶಿಕ್ಷಕಿ ಎಲ್ಎಲ್ಎಫ್ ಸಂಸ್ಥೆ
 
ಈ ಸಂದರ್ಭದಲ್ಲಿ ಪಂಚಾಯತ್ ಪಿಡಿಒ ಓಂಕಾರ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ, ಎಸ್ಡಿಎಂಸಿ ಅಧ್ಯಕ್ಷ ದೇವೇಂದ್ರಪ್ಪ, ರಾಜಶೇಖರ್ ಬಾಳಿ, ಚಂದ್ರಕಾಂತ ಐನಾಪುರ, ಈಶ್ವರ್ ಶಂಕರವಾಡಿ, ಮಹಾದೇವಪ್ಪ ಜಲವಾದಿ, ಪತ್ರಕರ್ತ ಜಗದೇವ ಕುಂಬಾರ, ತಮಿಳುನಾಡಿನ ಸಂಸ್ಥೆಯ ಮ್ಯಾನೇಜರ್ ವಿಜ್ಞೇನೇಶ್ವರ, ಸಂಸ್ಥೆಯ ಬಾಬು,  ಶ್ರೀಮತಿ ಶೃತಿ, ಮಸ್ತಾಪ್, ಸುರೇಶ ಸೇರಿದಂತೆ ಇತರರು ಇದ್ದರು.ಕಾರ್ಯಕ್ರಮದಲ್ಲಿ ಪ್ರಾರ್ಥನೆಯು ರವಿಕುಮಾರ್ ನಡೆಸಿಕೊಟ್ಟರು,ಮಲ್ಲಮ್ಮ ಸ್ವಾಗತಿಸಿದರು,ಹಣಮಂತ ಕುಂಬಾರ ನಿರೂಪಿಸಿ ವಂದಿಸಿದರು.

ಬುಧವಾರ, ಅಕ್ಟೋಬರ್ 9, 2024

ರೈತರ ಅಹವಾಲು ಸ್ವೀಕರಿಸಲು ಕಾಲಾವಕಾಶ: ಡಿಸಿ.

ಚಿತ್ತಾಪುರ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಉದ್ದೇಶಿತ ರಾಮ್ಕೊ ಸಿಮೆಂಟ್ ಕಂಪೆನಿಯ ಯೋಜನಾ ಸ್ಥಳದಲ್ಲಿ ವಾಸವಾಗಿರುವ ಆಸಕ್ತ ನಿವಾಸಿಗಳು, ಪರಿಸರಾಸಕ್ತ ಗುಂಪುಗಳು ಮತ್ತು ಈ ಯೋಜನೆಯಿಂದ ತೊಂದರೆಗೊಳಗಾಗಬಹುದಾದ ಸಾರ್ವಜನಿಕರು ತಮ್ಮ ಸಲಹೆಗಳು, ಅನಿಸಿಕೆಗಳು, ಟೀಕೆ-ಟಿಪ್ಪಣಿಗಳು ಹಾಗೂ ಅಹವಾಲುಗಳನ್ನು ಜಿಲ್ಲಾಧಿಕಾರಿಗಳಿಗೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ, ಸೇಡಂ ಸಹಾಯಕ ಆಯುಕ್ತರಿಗೆ ಅಥವಾ ಚಿತ್ತಾಪುರ ತಹಸೀಲ್ದಾ‌ರ್ ಅವರಿಗೆ ಸಲ್ಲಿಸಲು ಮೂರು ವಾರಗಳ ಕಾಲಾವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಹೇಳಿದರು.
ದಿ ರಾಮ್ಮೊ ಸಿಮೆಂಟ್ಸ್ ಲಿಮಿಟೆಡ್ ರವರು ಚಿತ್ತಾಪುರ ತಾಲೂಕಿನ ಬೊಮ್ಮನಹಳ್ಳಿ ಸುಣ್ಣದಕಲ್ಲು ಗಣಿ ಬ್ಲಾಕ್ (ಇ-ಹರಾಜು ಮಾಡಿದ ಗಣಿ ಬ್ಲಾಕ್) ನಿಂದ 4.0 MTPA ಉತ್ಪಾದನಾ ಸಾಮರ್ಥ್ಯದ ಸುಣ್ಣದ ಕಲ್ಲು, ಮೇಲಿನ ಮಣ್ಣು 2,14321 M', ಅಧಿಕ ಭಾರ (Over Burden) 0.46 ΜΤΡΑ ಜೊತೆಗೆ 1000 TPH ಸಾಮರ್ಥ್ಯದ ಕ್ರಷರ್ 500 TPH ಸಾಮರ್ಥ್ಯದ ವೊಟ್ಲ‌ರ್ ಮತ್ತು ಸ್ಟ್ರೀನ್, 1200 TPH ಸಾಮರ್ಥ್ಯದ ಬೆಲ್ಟ್ ಕನ್ವೆಯರ್‌ಗಳನ್ನು ಒಟ್ಟು 500 ಹೇಕ್ಟೇರ್ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಕಲಬುರ್ಗಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಉದ್ದೇಶಿತ ಯೋಜನೆಯ ಪರಿಸರ ಸಾರ್ವಜನಿಕ ಆಲಿಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಅವರು ಜಮೀನು ಕಳೆದುಕೊಂಡವರಿಗೆ ಸ್ಥಳೀಯರಿಗೆ ಆದ್ಯತೆ ಮೇರೆಗೆ ಉದ್ಯೋಗ ನೀಡುವುದು, ಸಿಎಸ್ಆರ್ ಅನುದಾನ ಹೆಚ್ಚಳ ಮಾಡಬೇಕು, ಶಾಲೆ, ಆಸ್ಪತ್ರೆ, ಅಂಗನವಾಡಿ ನಿರ್ಮಾಣ, ಈಗಿರುವ ಎರಡು ರಸ್ತೆಗಳಲ್ಲಿ ಓಡಾಡಲು ತೊಂದರೆ ಆಗದಂತೆ ನೋಡಿಕೊಳ್ಳುವುದು, ಜಮೀನನ ಬೆಲೆ ಹೆಚ್ಚಿಸುವುದು ಸೇರಿದಂತೆ ಸರ್ಕಾರದ ನಿಯಮದ ಪ್ರಕಾರ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎನ್ನುವ ಚರ್ಚಿತ ವಿಷಯಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಕಂಪನಿಗೆ ಜಾಮೀನು ನೀಡಿದ ರೈತರ ಅಭಿಪ್ರಾಯಗಳು:
 
ರಾಜು ಗುತ್ತೇದಾರ: ರಾಮ್ಕೊ ಸಿಮೆಂಟ್ ಕಂಪೆನಿಯಿಂದ ರೈತರಿಗೆ ಹಾಗೂ ಸ್ಥಳೀಯರಿಗೆ ಸಾಕಷ್ಟು ಅನುಕೂಲಗಳು ಆಗಲಿದ್ದು ಬಹುಬೇಗನೆ ಕಂಪನಿ ಆರಂಭವಾಗಬೇಕು ಎಂದರು.

ವಿರೇಶ್ ಕರದಾಳ: ಶಿಕ್ಷಣಕ್ಕೆ ಆದ್ಯತೆ ನೀಡುವ ಭರವಸೆ ನೀಡಿದ್ದು ತುಂಬಾ ಖುಷಿಯ ವಿಚಾರ ಅದರ ಜೊತೆಗೆ
ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಜಮೀನು ನೀಡಿದ ರೈತರ ಮಕ್ಕಳಿಗೆ ಉದ್ಯೋಗ ನೀಡಬೇಕು. ಹಾಗೂ ಭೌತಿಕ ಮೂಲಸೌಕರ್ಯಗಳು ಒದಗಿಸಬೇಕು ಎಂದು ಒತ್ತಾಯಿಸಿದರು.

ಅಯ್ಯಪ್ಪ ಬೊಮ್ಮನಹಳ್ಳಿ: ಈಗಾಗಲೇ ಪ್ರತಿ ಎಕರೆಗೆ 19 ಲಕ್ಷದಂತೆ ಕಂಪೆನಿಯವರು ಖರೀದಿ ಮಾಡಿದ್ದಾರೆ ಈ ಸಂದರ್ಭದಲ್ಲಿ ಕೊರೋನ್ ವೇಳೆ ಜನರಿಗೆ ಹಣದ ಅವಶ್ಯಕತೆ ಇತ್ತು ಈಗ ರೈತರಿಗೆ ಆ ತಪ್ಪು ಅರಿವು ಆಗಿದೆ ಆದ್ದರಿಂದ ಪ್ರತಿ ಎಕರೆಗೆ 35/40 ಲಕ್ಷ ನೀಡಬೇಕು ಮತ್ತು ಗ್ರಾಮದಲ್ಲಿ 40 ಎಕರೆ ಗೈರಾಣಿ ಜಮೀನು ಇದೆ ಇದು ಕಂಪೆನಿಯವರು ಖರೀದಿ ಮಾಡದೇ ದನಕರುಗಳಿಗೆ ಮೇಯಿಸಲು ಬೀಡಬೇಕು.

ನಾಗರೆಡ್ಡಿ ಪಾಟೀಲ ಕರದಾಳ: ರೈತರು ಗುಳೆ ಹೋಗದಂತೆ ತಡೆಯುವುದರ ಜೊತೆಗೆ ಜಮೀನು ನೀಡಿದ ಪ್ರತಿಯೊಬ್ಬರಿಗೂ ಉದ್ಯೋಗ ನೀಡಬೇಕು, ಗ್ರಾಮದಲ್ಲಿ ಈಗಿರುವ ಎರಡು ರಸ್ತೆಗಳನ್ನು ಬದಲಾವಣೆ ಮಾಡದೆ ಯಥಾಪ್ರಕಾರ ರಸ್ತೆಗಳನ್ನು ಹೊಂದಿಸಿಕೊಂಡು ಅಭಿವೃದ್ಧಿಪಡಿಸಬೇಕು, ಮಾಲಿನ್ಯ ನಿಯಂತ್ರಣ ಮಾಡುವುದನ್ನು ಪರಿಸರ ಇಲಾಖೆ ಗಮನ ಹರಿಸಬೇಕು ಎಂದರು.

ರೈತರಾದ ರೇವಣಸಿದ್ದಪ್ಪ ತಳವಾರ, ರಫೀಕ್ ಲಿಂಕ್, ತೋಟಪ್ಪ ಪೂಜಾರಿ,ಸಂಗಮೇಶ ಕರದಾಳ, ಮಲ್ಲಣ್ಣ, ಮಾಳಪ್ಪ, ಚಂದ್ರಪ್ಪ ಪೂಜಾರಿ, ನಾಗರಾಜ ತಳವಾರ, ದೂಳಪ್ಪ ಬೊಮ್ಮನಹಳ್ಳಿ, ಚಂದ್ರಕಾಂತ ಚೂರಿ, ದೊಡ್ಡಪ್ಪಗೌಡ ಮಳಖೇಡ, ಮೌನೇಶ್‌ ಬೊಮ್ಮನಹಳ್ಳಿ, ಬಸವರಾಜ ಕರದಾಳ, ಅವರು ಸಹ ಅನಿಸಿಕೆ ವ್ಯಕ್ತಪಡಿಸಿದರು.

ಪರಿಸರ ಹಿರಿಯ ಅಧಿಕಾರಿ ರೇಖಾ, ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾ‌ರ್ ನಾಗಯ್ಯ ಹಿರೇಮಠ, ರಾಮ್ಮೊ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಶ್ರೀನಿವಾಸ್‌, ಎಜಿಎಂ ಟೀ.ಮದ್ದಿ ವನ್ನನ್‌, ಜಿಎಂ ವಿ.ಎಸ್.ಸಾಂಬಾಶೀವ, ಅಧಿಕಾರಿ ಸೋಮಶೇಖರ ರೆಡ್ಡಿ, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐಗಳಾದ ಜಗದೇವಪ್ಪ ಪಾಳಾ, ನಟರಾಜ್ ಲಾಡೆ, ಪಿಎಸ್‌ಐಗಳಾದ ಶ್ರೀಶೈಲ್ ಅಂಬಾಟಿ, ತಿರುಮಲೇಶ್ ಕುಂಬಾರ, ಚಂದ್ರಾಮಪ್ಪ ಸೇರಿದಂತೆ ಕರದಾಳ, ಬೊಮ್ಮನಹಳ್ಳಿ, ಸೂಲಹಳ್ಳಿ, ಕಮರವಾಡಿ ಗ್ರಾಮಗಳ ಮುಖಂಡರು, ರೈತರು ಭಾಗವಹಿಸಿದ್ದರು.

ಕಂಪೆನಿ ಅಧಿಕಾರಿ ಮುರುಳಿ ಮನೋಜ್ ಉದ್ದೇಶಿತ ಯೋಜನೆ ಬಗ್ಗೆ ಮಾಹಿತಿ ನೀಡಿದರು, ಪರಿಸರ ಅಧಿಕಾರಿ ಸೋಮಶೇಖರ ಸ್ವಾಗತಿಸಿದರು, ಕಂಪೆನಿ ಅಧಿಕಾರಿ ಸಣ್ಣ ವೆಂಕಟೇಶ್ ನಿರೂಪಿಸಿದರು.

ದಕ್ಷ ಅಧಿಕಾರಿಗಳಿಗೆ ಬಿಜೆಪಿ ಅಭ್ಯರ್ಥಿಯಿಂದ ಕಿರುಕುಳ: ಹೊಸ್ಮನಿ.


ಚಿತ್ತಾಪುರ: ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ವಿಧಾನಸಭೆ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಕಿರುಕುಳ ನೀಡುತ್ತಿದ್ದಾರೆ ಎಂದು ಭಾರತೀಯ ದಲಿತ ಪ್ಯಾಂಥ‌ರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ್ ಹೇಳಿದ್ದಾರೆ.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಹಾಬಾದ ಸಿಪಿಐ ನಟರಾಜ ಲಾಡೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇದುವರೆಗೆ ಅವರ ವೃತ್ತಿಯಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆಯಿಲ್ಲ. ಆದರೆ ಮಣಿಕಂಠ ರಾಠೋಡ ಸುಳ್ಳು ಆರೋಪ ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಕಲುಷಿತ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಮಣಿಕಂಠ ಒಬ್ಬ ರೌಡಿಶೀಟರ್‌ಯಾಗಿದ್ದು, ಗಡಿಪಾರಾದ ಈತ ಗುಂಡಾಗಳ ಪಡೆಕಟ್ಟಿಕೊಂಡು ಅಶಾಂತಿ ವಾತಾವರಣ ಮೂಡಿಸುತ್ತಿದ್ದಾರೆ.

ಚಿತ್ತಾಪುರ ಯಾವತ್ತು ಶಾಂತಿ ತಾಲೂಕಾಗಿದ್ದು,
ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ.ಹಿಂದೆ ಪೋಲಿಸ್ ಕಮಿಷನ‌ರ್ ಸೇರಿದಂತೆ ಅನೇಕ ಪೋಲಿಸ್‌ರ ವಿರುದ್ದವೂ ಸುಳ್ಳು ಆರೋಪ ಮಾಡಿದ ಉದಾಹರಣೆಗಳಿವೆ. ಆದ್ದರಿಂದ ದಕ್ಷ ಅಧಿಕಾರಿ ಸಿಪಿಐ ನಟರಾಜ ಲಾಡೆ ವಿರುದ್ಧ ಸುಳ್ಳು ಆರೋಪ ಮಾಡಿದ್ದು ಜನರು ನಂಬುದಿಲ್ಲ. ಸುಳ್ಳು ಆರೋಪ ಮಾಡಿರುವ ಮಣಿಕಂಠ ರಾಠೋಡ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

28ಕ್ಕೆ ಸರಕಾರಿ ನೌಕರರ ಸಂಘದ ಚುನಾವಣೆ

ಚಿತ್ತಾಪುರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ನಿರ್ದೇಶಕರ ಚುನಾವಣೆ ಅಕ್ಟೋಬರ್ 28 ರಂದು ನಡೆಯಲಿದೆ ಎಂದು ಚುನಾವಣಾಧಿಕಾರಿ ವಿಜಯಕುಮಾರ ಲೊಡ್ಡನೋರ ತಿಳಿಸಿದ್ದಾರೆ.

ಅ.9 ರಿಂದ 18 ವರೆಗೆ ಸರಕಾರಿ ನೌಕರರ ಭವನದಲ್ಲಿ ನಾಮಪತ್ರ ಸಲ್ಲಿಕೆ ನಡೆಯಲಿದ್ದು, ಅ.19 ರಂದು ನಾಮಪತ್ರ ಪರಿಶೀಲನೆ, ಅ.21 ರಂದು ಉಮೇದುವಾರಿಕೆ ವಾಪಸ್ಸು ಪಡೆಯಲು ಕೊನೆ ದಿನವಾಗಿದೆ. ಅಂದೇ ಅರ್ಹ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗುವುದು. ಅ.28 ರಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಮತದಾನ ನಡೆಯಲಿದ್ದು. ಅಂದೆ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ ಎಂದು ಚುನಾವಣಾಧಿಕಾರಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ನಾಗಾವಿಗೆ ಹೋಗುವ ರಸ್ತೆ ಸುಧಾರಣೆಗೆ ಆಗ್ರಹ.

ಚಿತ್ತಾಪೂರ: ಪಟ್ಟಣದ ಕೇಂದ್ರ ಬಸ್ ನಿಲ್ದಾಣದಿಂದ ನಾಗಾವಿ ಯಲ್ಲಮ್ಮ ದೇವಸ್ಥಾನದ ವರೆಗಿನ ರಸ್ತೆ ಸುಧಾರಣೆ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ರಾಷ್ಟ್ರಕೂಟರ ಮನೆತನದ ಕುಲದೇವತೆ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಅಕ್ಟೋಬರ್ 17ರಂದು ನಡೆಯಲಿದ್ದು ಈ ಉತ್ಸವಕ್ಕೆ ವಿವಿಧ ರಾಜ್ಯಗಳಾದ ತೆಲಂಗಾಣ, ಹೈದರಾಬಾದ್, ಮಹಾರಾಷ್ಟ್ರ, ಸೇರಿದಂತೆ ಸಾಕಷ್ಟು ಭಕ್ತರು ಆಗಮಿಸುತ್ತಾರೆ ಹಾಗೂ ಪಲ್ಲಕ್ಕಿ ಉತ್ಸವ ಕೊಡ ಇದೇ ರಸ್ತೆ ಮಾರ್ಗವಾಗಿ ಸಾಗುತ್ತದೆ ಹೀಗಾಗಿ ರಸ್ತೆ ಉದ್ದಕ್ಕೂ ಇರುವ ತಗ್ಗು ಗುಂಡಿಗಳು ಹಾಗೂ ಅಲ್ಲಲ್ಲಿ ಹಾಳ್ಳಾದ ರಸ್ತೆ ಸುಧಾರಣೆ ಮಾಡುವಂತೆ ಸ್ಥಳೀಯರು ಆಗ್ರಹವಾಗಿದೆ.

ಖಬರಸ್ಥಾನ್ ರಸ್ತೆಯ ಅಕ್ಕ-ಪಕ್ಕ ಸಾರ್ವಜನಿಕರು ಮಲವಿಸರ್ಜನೆ ಮಾಡುತ್ತಿದ್ದು ಇಂತಹ ಜಾತ್ರಾ ಮಹೋತ್ಸವ ಸಮಯದಲ್ಲಿ ಹೋರ ಜಿಲ್ಲಾ, ರಾಜ್ಯಗಳಿಂದ ಬರುವ ಭಕ್ತಾದಿಗಳು ನೋಡಿ ಪಟ್ಟಣದ ಅಸ್ವಚ್ಛತೆ ಕಾಣದೆ ಸ್ವಚ್ಛತಾ ಕಾರ್ಯ ಆಗಬೇಕು ಇದಕ್ಕೆ ಪುರಸಭೆ ಇಲಾಖೆ ಕಾಳಜಿ ವಹಿಸಿ ಕೆಲಸ ಮಾಡಬೇಕು

ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪುರಸಭೆ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಕೂಡಲೇ ಉತ್ಸವಕ್ಕೂ ಮುಂಚೆ ರಸ್ತೆ ಸುಧಾರಣೆ ಮಾಡಿ ಭಕ್ತರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಾರೆ ಕಾದುನೋಡಬೇಕಾಗಿದೆ.

ಹರಿಯಾಣ ಗೆಲುವು: ಬಿಜೆಪಿ ವಿಜಯೋತ್ಸವ.

ಚಿತ್ತಾಪೂರ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ್ದಕ್ಕೆ ಪಟ್ಟಣದ ಬಿಜೆಪಿ ಕಾರ್ಯಾಲಯದ ಮುಂದೆ ಕಾರ್ಯಕರ್ತರು ಬುಧವಾರ ಪಾಟಾಕಿ ಸಿಡಿಸಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು ಮುಖಂಡರು, ಕಾರ್ಯಕರ್ತರು, ಜಯಘೋಷ ಹಾಕುವ ಮೂಲಕ ವಿಜಯೋತ್ಸವ ಆಚರಿಸಿದರು.

ಪುರಸಭೆ ವಿರೋಧ ಪಕ್ಷದ ನಾಯಕ ನಾಗರಾಜ ಭಂಕಲಗಿ ಮಾತನಾಡಿ ಹರಿಯಾಣ ರಾಜ್ಯದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಮತ್ತೋಮ್ಮೆ ದೇಶದ ಪ್ರಧಾನಿಯ ಕೈ ಬಲಪಡಿಸಿದೆ. ಇದು ಪಕ್ಷದ ಕಾರ್ಯಕರ್ತರ ಶ್ರಮಕ್ಕೆ ಸಿಕ್ಕ ಗೆಲುವು. ಇದರಿಂದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಾಗಿದೆ’ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿ ರಾಜ್ಯದಲ್ಲಿ ಆಡಳಿತ ಇರುವ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಮತ್ತು ಆಮಿಷಗಳಿಗೆ ಒಳಗಾಗದೆ, ಪ್ರಧಾನಿ ಮೋದಿಯವರು ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಮಾಡುತ್ತಿರುವ ಅಭಿವೃದ್ಧಿ ಹಾಗೂ ಜನಪರ ಯೋಜನೆಗಳಿಗೆ ಹರಿಯಾಣ ಜನ ಆಶಿರ್ವಾದ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸಹ ಬಿಜೆಪಿ ಜಯ ಸಾಧಿಸಲಿದೆ ಎಂದ ಭವಿಷ್ಯ ನುಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್,  ಮಂಡಳ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಹೂಗಾರ, ಮಹಿಳಾ ಮೋರ್ಚಾ ಅಧ್ಯಕ್ಷ ಶ್ರೀಮತಿ ನಾಗುಬಾಯಿ ಜಿತುರೆ, ಶ್ರಿಮತಿ ಅಕ್ಕಮ್ಮ, ನಗರ ಅಧ್ಯಕ್ಷ ಆನಂದ ಪಾಟೀಲ್ ನರಬೂಳ್, ಕಾರ್ಯದರ್ಶಿ ಮೇಘರಾಜ ಗುತ್ತೇದಾರ್, ಸುರೇಶ ಬೆನಕನಳ್ಳಿ, ಕೋಟೇಶ್ವರ ರೇಶ್ಮಿ, ಮಹ್ಮದ್ ಯೂನುಸ್, ಶಾಮಮೇಧಾ, ಪ್ರಭು ಗಂಗಾಣಿ, ಪಂಕಜಾಗೌಡ ಗುತ್ತೇದಾರ್, ಸೇರಿದಂತೆ ಇತರರು ಇದ್ದರು.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...