ಸ್ವಚ್ಛತೆಯಿಂದ ಉತ್ತಮ ಆರೋಗ್ಯ: ಗ್ರಾಪಂ ಅಧ್ಯಕ್ಷ.
ಚಿತ್ತಾಪುರ: ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ಉತ್ತಮ ಆರೋಗ್ಯ ದೊರೆಯಲು ಸಾಧ್ಯ ಎಂದು ಭಾಗೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ ಪಾಟೀಲ್ ಹೇಳಿದರು.
ತಾಲೂಕಿನ ಭಾಗೋಡಿ ಗ್ರಾಮದ ಪಂಚಾಯತ್ ಸಭಾಂಗಣದಲ್ಲಿ ಅಶೋಕ್ ಲೇಲ್ಯಾಂಡ್ ಹಾಗೂ ಲರ್ನಿಂಗ್ ಲಿಂಕ್ ಫೌಂಡೇಶನ್ ಮತ್ತು ರೋಟು ಸ್ಕೂಲ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬರಲ್ಲಿ ಪರಿಸರದ ಬಗ್ಗೆ ಕಾಳಜಿ ಇರಬೇಕು. ನಮ್ಮೆಲ್ಲರ ಜೀವನದಲ್ಲಿ ಇಂತಹ ಮನೋಭಾವನೆ ಮೂಡಿದಾಗ ಸ್ವಚ್ಛ ಊರು, ಸ್ವಚ್ಛ ಗ್ರಾಮ ನಿರ್ಮಾಣ ಸಾಧ್ಯವಾಗುತ್ತದೆ. ಸ್ವಸ್ಥ ಆರೋಗ್ಯ, ವಾತಾವರಣ, ಸಮಾಜದ ನಿರ್ಮಾಣದ ದಿಶೆಯಲ್ಲಿ ಸ್ವಚ್ಛತೆ ಬಹುಮುಖ್ಯವಾಗಿದೆ ಎಂದರು.
ಎಲ್ಎಲ್ಎಫ್ ತಾಲೂಕು ಬ್ಲಾಕ್ ಮ್ಯಾನೇಜರ್ ಸಂತೋಷ ಕುಮಾರ್ ಮಾತನಾಡಿ ತಮ್ಮ ಊರಿನ ಬಡಾವಣೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಆರೋಗ್ಯ ರಕ್ಷಣೆ ಕಡೆ ಗಮನ ಹರಿಸಬೇಕು, ಅಶುದ್ಧ ವಾತಾವರಣ ನಿರ್ಮಾಣವಾದಲ್ಲಿ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತೆದೆ ಹೀಗಾಗಲೇ ತಾಲೂಕಿನಲ್ಲಿ 597 ವೀಕಲ ಚೇತನ್ ಮಕ್ಕಳು ಇದ್ದಾರೆ ಎಂಬ ಮಾಹಿತಿ ಗಮನಕ್ಕೆ ಬಂದಿದೆ. ಆದ್ದರಿಂದ ನಮ್ಮ ನಮ್ಮ ಸ್ವಚ್ಛತೆ ನಾವೇ ಮಾಡಿಕೊಳ್ಳಬೇಕು ಎಂದರು.
ವಾರಕ್ಕೆ ಒಂದು ದಿನದಂತೆ ನಮ್ಮ ಮನೆಯ ಅಕ್ಕ ಪಕ್ಕದ ಸ್ವಚ್ಛತೆ ಮತ್ತಿತರ ಕೆಲಸಗಳನ್ನು ನಾವೆ ಮಾಡಬೇಕು ಇದರ ಬಗ್ಗೆ ಇತರರಿಗೆ ಅರಿವು ಮೂಡಿದರೆ ಮಾತ್ರ ಸ್ವಾವಲಂಬನೆ ಮೂಡಲು ಸಾಧ್ಯ. ಮನೆಯಿಂದ ಹಿಡಿದು ದೇಶದ ಸ್ವಚ್ಛತಾ ಗುರಿ ನಿಮ್ಮದಾಗಲಿ ಎಂದರು.
- ಕುಮಾರಿ ರೇಷ್ಮಾ,
ಹಿರಿಯ ಸಂಪನ್ಮೂಲ ಶಿಕ್ಷಕಿ ಎಲ್ಎಲ್ಎಫ್ ಸಂಸ್ಥೆ
ಈ ಸಂದರ್ಭದಲ್ಲಿ ಪಂಚಾಯತ್ ಪಿಡಿಒ ಓಂಕಾರ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ, ಎಸ್ಡಿಎಂಸಿ ಅಧ್ಯಕ್ಷ ದೇವೇಂದ್ರಪ್ಪ, ರಾಜಶೇಖರ್ ಬಾಳಿ, ಚಂದ್ರಕಾಂತ ಐನಾಪುರ, ಈಶ್ವರ್ ಶಂಕರವಾಡಿ, ಮಹಾದೇವಪ್ಪ ಜಲವಾದಿ, ಪತ್ರಕರ್ತ ಜಗದೇವ ಕುಂಬಾರ, ತಮಿಳುನಾಡಿನ ಸಂಸ್ಥೆಯ ಮ್ಯಾನೇಜರ್ ವಿಜ್ಞೇನೇಶ್ವರ, ಸಂಸ್ಥೆಯ ಬಾಬು, ಶ್ರೀಮತಿ ಶೃತಿ, ಮಸ್ತಾಪ್, ಸುರೇಶ ಸೇರಿದಂತೆ ಇತರರು ಇದ್ದರು.ಕಾರ್ಯಕ್ರಮದಲ್ಲಿ ಪ್ರಾರ್ಥನೆಯು ರವಿಕುಮಾರ್ ನಡೆಸಿಕೊಟ್ಟರು,ಮಲ್ಲಮ್ಮ ಸ್ವಾಗತಿಸಿದರು,ಹಣಮಂತ ಕುಂಬಾರ ನಿರೂಪಿಸಿ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ