ಮತದಾರರಿಗೆ ಧನ್ಯವಾದ ಅರ್ಪಿಸಿದ ರಾಧಾಕೃಷ್ಣ ದೊಡ್ಡಮನಿ.


ಚಿತ್ತಾಪುರ: ಕಾಂಗ್ರೆಸ್ ಪಕ್ಷ ನನ್ನನ್ನು ಗುರುತಿಸಿ ಟಿಕೇಟು ನೀಡಿತ್ತು. ನೀವೆಲ್ಲ ಜೊತೆಯಾಗಿ ಕೆಲಸ ಮಾಡಿ ಮನೆ 
ಮನೆಗೆ ಹೋಗಿ ಪ್ರಚಾರ ಮಾಡಿ ನನ್ನ ಗೆಲ್ಲುವುಗೆ ಸಹಕಾರಿಯಾಗಿದ್ದೀರಿ, ನಿಮಗೆಲ್ಲ ನಾನು ಮನಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುವೆ ಎಂದು ಸಂಸದ ರಾಧಾಕೃಷ್ಣ ದೊಡ್ಡಮನಿ‌ ಹೇಳಿದರು.

 ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮತದಾರರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ನಾನು ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ನೀವೆಲ್ಲ ವಿಶ್ವಾಸವಿಟ್ಟು ನನಗೆ ಗೆಲ್ಲಿಸಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ನಿಮ್ಮೆಲ್ಲರ ಸಹಕಾರ ಹೀಗೆ ಇರಲಿ, ನಾನು ಹೆಚ್ಚಿಗೆ ಮಾತನಾಡುವುದಿಲ್ಲ ನಿಮ್ಮ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಕ್ಷೇತ್ರದ ಅಭಿವೃದ್ದಿಯ ಚಿತ್ರಣವನ್ನೇ ಬದಲಿಸುವೆ.
ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ನಿಮ್ಮ ಅಭಿಮಾನದ ಅಕ್ಕರೆಗೆ ನನಗೆ ಮಾತು ಬರದಾಗಿದೆ ನೀವು ನಿಮ್ಮ ಪ್ರೀತಿ ತೋರಿಸಲು ಇಲ್ಲಿ ಸೇರಿದ್ದೀರಿ ನಿಮ್ಮ ವಿಶ್ವಾಸಕ್ಕೆ ನಮ್ಮ ಕುಟುಂಬದ ಪರವಾಗಿ ಕೋಟಿ ಕೋಟಿ ಧನ್ಯವಾದಗಳು.ನಾನು ನಿಮಗೆ ಹಲವಾರು ಸಲ ಮಾತು ಕೊಟ್ಟಿದ್ದೇನೆ. ನಮ್ಮ ಭಾಗದ ಅಭಿವೃದ್ದಿಯೇ ನನಗೆ ಮೂಲ ಮಂತ್ರ ಇಂದು ಕೂಡಾ 62 ಕೋಟಿ‌ ರೂಪಾಯಿ ವೆಚ್ಚದಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಲಿದ್ದೇನೆ ಮಾತು ಕೊಟ್ಟಂತೆ 52,000 ಕೋಟಿ ರೂಪಾಯಿ ಖರ್ಚು ಮಾಡಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ, ಇದು ನಮ್ಮ ಸರ್ಕಾರದ ಬದ್ಧತೆ ಎಂದರು.

ಈಗಾಗಲೇ 900 ಇಂಜಿನಿಯರಗಳನ್ನು ಇಲಾಖೆಯಲ್ಲಿ ಭರ್ತಿ ಮಾಡಲಾಗಿದೆ. ಜೊತೆಗೆ ಖಾಲಿ ಇರುವ ವಿವಿಧ ಇಲಾಖೆಗಳ ಎರಡು ಲಕ್ಷ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಿದ್ದೇವೆ ನನಗೆ ಇನ್ನು ಒಂದು ವರ್ಷ ಸಮಯಾವಕಾಶ ನೀಡಿ ಕ್ಷೇತ್ರದ ಅಭಿವೃದ್ದಿಯ ಚಿತ್ರಣವನ್ನೇ ಬದಲಿಸಲಿದ್ದೇನೆ. ಕಲ್ಯಾಣ ಪಥ ಯೋಜನೆಯಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ರಸ್ತೆಗಳ ಅಭಿವೃದ್ದಿಗೆ 1,000 ಕೋಟಿ ರೂಪಾಯಿ ಅನುದಾನ ತೆಗೆದಿರಿಸಲಾಗಿದೆ. ಸಾಮೂಹಿಕ ಮಹಿಳೆಯರ ಶೌಚಾಲಯ ನಿರ್ಮಾಣ ನನ್ನ ಮುಂದಿನ ಗುರಿಯಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಬೊಕ್ಕಸ‌ ಖಾಲಿಯಾಗಿದೆ ಎನ್ನುವ ಬಿಜೆಪಿ ನಾಯಕರಿಗೆ ತಿರುಗೇಟು‌ ನೀಡಿದ ಖರ್ಗೆ ಇತ್ತೀಚಿಗೆ ಕಲಬುರಗಿಯಲ್ಲಿ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 7,000 ಕೋಟಿ ರೂಪಾಯಿ ಹಾಗೂ ಚಿತ್ತಾಪುರಕ್ಕೆ 300 ಕೋಟಿ ರೂಪಾಯಿ ಯೋಜನೆಗಳ ಒಪ್ಪಿಗೆ ‌ಸಿಕ್ಕಿದೆ. ಈಗ ಸಾಧ್ಯಕ್ಕೆ ಮೂವತ್ತು ಗ್ರಾಮಗಳ ಅಭಿವೃದ್ದಿಯ ನೀಲಿ ನಕ್ಷೆ ಹಾಕಲಾಗಿದೆ. ಇದು ಕೇವಲ ಗ್ರಾಮೀಣ ಪ್ರದೇಶ ಮಾತ್ರವಲ್ಲ, ಮುಂದೆ ಚಿತ್ತಾಪುರ, ವಾಡಿ ಸಮಗ್ರ ಅಭಿವೃದ್ದಿಯ ನೀಲಿನಕ್ಷೆ ತಯಾರಾಗಲಿದೆ ಇದಕ್ಕೆ 25 ಕೋಟಿ ರೂಪಾಯಿ ತೆಗೆದಿರಸಲಾಗಿದೆ. ವಿಜ್ಞಾನ ಕೇಂದ್ರ , ಮೃಗಾಲಯ ಸ್ಥಾಪನೆಯ ಗುರಿ ಹೊಂದಲಾಗಿದೆ ಎಂದರು.

 ತಾಲೂಕಿನಲ್ಲಿ "ಕಾಯಕ ಗ್ರಾಮ" ಯೋಜನೆ ಜಾರಿಗೆ ತರಲು ಆಲೋಚಿಸಲಾಗಿದೆ. ಇದರಲ್ಲಿ ಸಂಸದರ ಅನುದಾನ ಕೂಡಾ ಬಳಕೆಯಾಗಲಿದೆ. ಇದರ ಹಿಂದೆ ಸಂಸದ ರಾಧಾಕೃಷ್ಣ ದೊಡ್ಡಮನಿ‌ ಅವರ ಕನಸಿದೆ.‌ ಈ ಯೋಜನೆಯಡಿಯಲ್ಲಿ ಕನಿಷ್ಠ 2 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಸಚಿವ ಶರಣಪ್ರಕಾಶ ಪಾಟೀಲ್ ಮಾತನಾಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ರಾಧಾಕೃಷ್ಣ ದೊಡ್ಡಮನಿ ಅವರಿಗೆ ನೀವೆಲ್ಲ‌ ಆಶೀರ್ವಾದ ಮಾಡಿ ಅವರನ್ನು ಕ್ಷೇತ್ರದ ಜನರ ಸೇವೆಗೆ ಕಳಿಸಿದ್ದೀರಿ.ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ದೇಶದದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದ ಜೊತೆಗೆ‌ ಜನರ‌ ಸಾಮಾಜಿಕ‌ ಕ್ಷೇತ್ರದಲ್ಲಿ, ಬದಲಾವಣೆ ನಡೆಯುತ್ತಿದೆ ಅದೆ ಬಿಜೆಪಿ ಜನರ ನಡುವೆ ಕಲಹ ಹುಟ್ಟು ಹಾಕುತ್ತಿದೆ ಎಂದು ದೂರಿದ ಅವರು ಜನಪರ ಕಾರ್ಯಕ್ರಮಗಳು ಯಾವುದಾದರೊಂದನ್ನು ಅವರು ಜಾರಿಗೆ ತರಲಿಲ್ಲ. ಆದರೆ ನಾವು ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯರಿಗೆ, ನಿರುದ್ಯೋಗಿ ಯುವಕರಿಗೆ ಯೋಜನೆಗಳನ್ನ ಜಾರಿಗೆ ತಂದಿದ್ದೇವೆ ಎಂದರು.
ನಾಗಾವಿ ಯಲ್ಲಮ್ಮ ದೇವಿ,ಚಿತ್ತಾವಲಿ ದರ್ಶನ.
 ಪಟ್ಟಣದ ಹೊರವಲಯದ ನಾಗಾವಿ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ತದನಂತರ, ಚಿತಾವಲಿ ದರ್ಗಾಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ನಂತರ ಬಸವೇಶ್ವರ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದ ಮೂಲಕ ಮೆರವಣಿಗೆಯಲ್ಲಿ ಬಜಾಜ್ ಕಲ್ಯಾಣ ಮಂಟಪಕ್ಕೆ ಕರೆ ತರಲಾಯಿತು. ಈ ಸಂದರ್ಭದಲ್ಲಿ ಕಲಾ ತಂಡಗಳು ಹಾಗೂ ಸಾಂಸ್ಕೃತಿಕ ತಂಡಗಳು ಎಲ್ಲಾರ ಗಮನ ಸೆಳೆದವು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಎಂಎಲ್‌ಸಿ ಜಗದೇವ ಗುತ್ತೇದಾರ, ಶಾಸಕರಾದ ಎಂವೈ ಪಾಟೀಲ್, ಅಲ್ಲಮಪ್ರಭು ಪಾಟೀಲ, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು, ದೇವೆಂದ್ರಪ್ಪ ಮರತೂರು, ಭಾಗನಗೌಡ ಸಂಕನೂರು,ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ, ಭೀಮಣ್ಣ ಸಾಲಿ, ಮಹೆಮೂದ್ ಸಾಹೇಬ್, ರೇವುನಾಯಕ ಬೆಳಮಗಿ, ಶಿವಾನಂದ ಪಾಟೀಲ, ರಮೇಶ ಮರಗೋಳ, ಅಜೀಜ್ ಸೇಟ್, ಶ್ರೀನಿವಾಸ ಸಗರ, ಶಿವರುದ್ರ ಭೀಣ್ಣಿ, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ವೀರಣ್ಣಗೌಡ ಪರಸರೆಡ್ಡಿ, ವಿನೋದ ಗುತ್ತೇದಾರ, ಸಂಜಯ ಬುಳಕ‌ರ್, ಮಲ್ಲಿಕಾರ್ಜುನ ಬೆಣ್ಣೂರಕ‌ರ್, ಶಿವಾಜಿ ಕಾಶಿ, ಜಗದೀಶ್ ಚವ್ಹಾಣ, ಭೀಮಸಿಂಗ್ ಚವ್ಹಾಣ, ರವಿ ರಾಠೋಡ, ನಾಗಯ್ಯ ಗುತ್ತೇದಾರ್, ಶ್ರೀಮತಿ ಶೀಲಾ ಕಾಶಿ, ಸುನೀಲ ದೂಡ್ಡಮನಿ, ಮಲ್ಲಪ್ಪ ಹೊಸಮನಿ, ಶ್ರೀಮತಿ ಶ್ವೇತಾ ಪಾಟೀಲ್, ಜಗಣ್ಣಗೌಡ ಪಾಟೀಲ್, ಸುರೇಶ ಗುತ್ತೇದಾರ್, ಸಾಬಣ್ಣ ಹೋಳಿಕಟ್ಟಿ, ಗುಂಡು ಐನಾಪೂರ, ಸಂತೋಷ ಪೂಜಾರಿ, ಉದಯಕುಮಾರ ಸಾಗರ, ಸೇರಿದಂತೆ ಇತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.