ರೈತರ ಅಹವಾಲು ಸ್ವೀಕರಿಸಲು ಕಾಲಾವಕಾಶ: ಡಿಸಿ.
ಚಿತ್ತಾಪುರ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಉದ್ದೇಶಿತ ರಾಮ್ಕೊ ಸಿಮೆಂಟ್ ಕಂಪೆನಿಯ ಯೋಜನಾ ಸ್ಥಳದಲ್ಲಿ ವಾಸವಾಗಿರುವ ಆಸಕ್ತ ನಿವಾಸಿಗಳು, ಪರಿಸರಾಸಕ್ತ ಗುಂಪುಗಳು ಮತ್ತು ಈ ಯೋಜನೆಯಿಂದ ತೊಂದರೆಗೊಳಗಾಗಬಹುದಾದ ಸಾರ್ವಜನಿಕರು ತಮ್ಮ ಸಲಹೆಗಳು, ಅನಿಸಿಕೆಗಳು, ಟೀಕೆ-ಟಿಪ್ಪಣಿಗಳು ಹಾಗೂ ಅಹವಾಲುಗಳನ್ನು ಜಿಲ್ಲಾಧಿಕಾರಿಗಳಿಗೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ, ಸೇಡಂ ಸಹಾಯಕ ಆಯುಕ್ತರಿಗೆ ಅಥವಾ ಚಿತ್ತಾಪುರ ತಹಸೀಲ್ದಾರ್ ಅವರಿಗೆ ಸಲ್ಲಿಸಲು ಮೂರು ವಾರಗಳ ಕಾಲಾವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಹೇಳಿದರು.
ದಿ ರಾಮ್ಮೊ ಸಿಮೆಂಟ್ಸ್ ಲಿಮಿಟೆಡ್ ರವರು ಚಿತ್ತಾಪುರ ತಾಲೂಕಿನ ಬೊಮ್ಮನಹಳ್ಳಿ ಸುಣ್ಣದಕಲ್ಲು ಗಣಿ ಬ್ಲಾಕ್ (ಇ-ಹರಾಜು ಮಾಡಿದ ಗಣಿ ಬ್ಲಾಕ್) ನಿಂದ 4.0 MTPA ಉತ್ಪಾದನಾ ಸಾಮರ್ಥ್ಯದ ಸುಣ್ಣದ ಕಲ್ಲು, ಮೇಲಿನ ಮಣ್ಣು 2,14321 M', ಅಧಿಕ ಭಾರ (Over Burden) 0.46 ΜΤΡΑ ಜೊತೆಗೆ 1000 TPH ಸಾಮರ್ಥ್ಯದ ಕ್ರಷರ್ 500 TPH ಸಾಮರ್ಥ್ಯದ ವೊಟ್ಲರ್ ಮತ್ತು ಸ್ಟ್ರೀನ್, 1200 TPH ಸಾಮರ್ಥ್ಯದ ಬೆಲ್ಟ್ ಕನ್ವೆಯರ್‌ಗಳನ್ನು ಒಟ್ಟು 500 ಹೇಕ್ಟೇರ್ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಕಲಬುರ್ಗಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಉದ್ದೇಶಿತ ಯೋಜನೆಯ ಪರಿಸರ ಸಾರ್ವಜನಿಕ ಆಲಿಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಅವರು ಜಮೀನು ಕಳೆದುಕೊಂಡವರಿಗೆ ಸ್ಥಳೀಯರಿಗೆ ಆದ್ಯತೆ ಮೇರೆಗೆ ಉದ್ಯೋಗ ನೀಡುವುದು, ಸಿಎಸ್ಆರ್ ಅನುದಾನ ಹೆಚ್ಚಳ ಮಾಡಬೇಕು, ಶಾಲೆ, ಆಸ್ಪತ್ರೆ, ಅಂಗನವಾಡಿ ನಿರ್ಮಾಣ, ಈಗಿರುವ ಎರಡು ರಸ್ತೆಗಳಲ್ಲಿ ಓಡಾಡಲು ತೊಂದರೆ ಆಗದಂತೆ ನೋಡಿಕೊಳ್ಳುವುದು, ಜಮೀನನ ಬೆಲೆ ಹೆಚ್ಚಿಸುವುದು ಸೇರಿದಂತೆ ಸರ್ಕಾರದ ನಿಯಮದ ಪ್ರಕಾರ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎನ್ನುವ ಚರ್ಚಿತ ವಿಷಯಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಕಂಪನಿಗೆ ಜಾಮೀನು ನೀಡಿದ ರೈತರ ಅಭಿಪ್ರಾಯಗಳು:
ರಾಜು ಗುತ್ತೇದಾರ: ರಾಮ್ಕೊ ಸಿಮೆಂಟ್ ಕಂಪೆನಿಯಿಂದ ರೈತರಿಗೆ ಹಾಗೂ ಸ್ಥಳೀಯರಿಗೆ ಸಾಕಷ್ಟು ಅನುಕೂಲಗಳು ಆಗಲಿದ್ದು ಬಹುಬೇಗನೆ ಕಂಪನಿ ಆರಂಭವಾಗಬೇಕು ಎಂದರು.
ವಿರೇಶ್ ಕರದಾಳ: ಶಿಕ್ಷಣಕ್ಕೆ ಆದ್ಯತೆ ನೀಡುವ ಭರವಸೆ ನೀಡಿದ್ದು ತುಂಬಾ ಖುಷಿಯ ವಿಚಾರ ಅದರ ಜೊತೆಗೆ
ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಜಮೀನು ನೀಡಿದ ರೈತರ ಮಕ್ಕಳಿಗೆ ಉದ್ಯೋಗ ನೀಡಬೇಕು. ಹಾಗೂ ಭೌತಿಕ ಮೂಲಸೌಕರ್ಯಗಳು ಒದಗಿಸಬೇಕು ಎಂದು ಒತ್ತಾಯಿಸಿದರು.
ಅಯ್ಯಪ್ಪ ಬೊಮ್ಮನಹಳ್ಳಿ: ಈಗಾಗಲೇ ಪ್ರತಿ ಎಕರೆಗೆ 19 ಲಕ್ಷದಂತೆ ಕಂಪೆನಿಯವರು ಖರೀದಿ ಮಾಡಿದ್ದಾರೆ ಈ ಸಂದರ್ಭದಲ್ಲಿ ಕೊರೋನ್ ವೇಳೆ ಜನರಿಗೆ ಹಣದ ಅವಶ್ಯಕತೆ ಇತ್ತು ಈಗ ರೈತರಿಗೆ ಆ ತಪ್ಪು ಅರಿವು ಆಗಿದೆ ಆದ್ದರಿಂದ ಪ್ರತಿ ಎಕರೆಗೆ 35/40 ಲಕ್ಷ ನೀಡಬೇಕು ಮತ್ತು ಗ್ರಾಮದಲ್ಲಿ 40 ಎಕರೆ ಗೈರಾಣಿ ಜಮೀನು ಇದೆ ಇದು ಕಂಪೆನಿಯವರು ಖರೀದಿ ಮಾಡದೇ ದನಕರುಗಳಿಗೆ ಮೇಯಿಸಲು ಬೀಡಬೇಕು.
ನಾಗರೆಡ್ಡಿ ಪಾಟೀಲ ಕರದಾಳ: ರೈತರು ಗುಳೆ ಹೋಗದಂತೆ ತಡೆಯುವುದರ ಜೊತೆಗೆ ಜಮೀನು ನೀಡಿದ ಪ್ರತಿಯೊಬ್ಬರಿಗೂ ಉದ್ಯೋಗ ನೀಡಬೇಕು, ಗ್ರಾಮದಲ್ಲಿ ಈಗಿರುವ ಎರಡು ರಸ್ತೆಗಳನ್ನು ಬದಲಾವಣೆ ಮಾಡದೆ ಯಥಾಪ್ರಕಾರ ರಸ್ತೆಗಳನ್ನು ಹೊಂದಿಸಿಕೊಂಡು ಅಭಿವೃದ್ಧಿಪಡಿಸಬೇಕು, ಮಾಲಿನ್ಯ ನಿಯಂತ್ರಣ ಮಾಡುವುದನ್ನು ಪರಿಸರ ಇಲಾಖೆ ಗಮನ ಹರಿಸಬೇಕು ಎಂದರು.
ರೈತರಾದ ರೇವಣಸಿದ್ದಪ್ಪ ತಳವಾರ, ರಫೀಕ್ ಲಿಂಕ್, ತೋಟಪ್ಪ ಪೂಜಾರಿ,ಸಂಗಮೇಶ ಕರದಾಳ, ಮಲ್ಲಣ್ಣ, ಮಾಳಪ್ಪ, ಚಂದ್ರಪ್ಪ ಪೂಜಾರಿ, ನಾಗರಾಜ ತಳವಾರ, ದೂಳಪ್ಪ ಬೊಮ್ಮನಹಳ್ಳಿ, ಚಂದ್ರಕಾಂತ ಚೂರಿ, ದೊಡ್ಡಪ್ಪಗೌಡ ಮಳಖೇಡ, ಮೌನೇಶ್ ಬೊಮ್ಮನಹಳ್ಳಿ, ಬಸವರಾಜ ಕರದಾಳ, ಅವರು ಸಹ ಅನಿಸಿಕೆ ವ್ಯಕ್ತಪಡಿಸಿದರು.
ಪರಿಸರ ಹಿರಿಯ ಅಧಿಕಾರಿ ರೇಖಾ, ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್ ನಾಗಯ್ಯ ಹಿರೇಮಠ, ರಾಮ್ಮೊ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಶ್ರೀನಿವಾಸ್, ಎಜಿಎಂ ಟೀ.ಮದ್ದಿ ವನ್ನನ್, ಜಿಎಂ ವಿ.ಎಸ್.ಸಾಂಬಾಶೀವ, ಅಧಿಕಾರಿ ಸೋಮಶೇಖರ ರೆಡ್ಡಿ, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐಗಳಾದ ಜಗದೇವಪ್ಪ ಪಾಳಾ, ನಟರಾಜ್ ಲಾಡೆ, ಪಿಎಸ್‌ಐಗಳಾದ ಶ್ರೀಶೈಲ್ ಅಂಬಾಟಿ, ತಿರುಮಲೇಶ್ ಕುಂಬಾರ, ಚಂದ್ರಾಮಪ್ಪ ಸೇರಿದಂತೆ ಕರದಾಳ, ಬೊಮ್ಮನಹಳ್ಳಿ, ಸೂಲಹಳ್ಳಿ, ಕಮರವಾಡಿ ಗ್ರಾಮಗಳ ಮುಖಂಡರು, ರೈತರು ಭಾಗವಹಿಸಿದ್ದರು.
ಕಂಪೆನಿ ಅಧಿಕಾರಿ ಮುರುಳಿ ಮನೋಜ್ ಉದ್ದೇಶಿತ ಯೋಜನೆ ಬಗ್ಗೆ ಮಾಹಿತಿ ನೀಡಿದರು, ಪರಿಸರ ಅಧಿಕಾರಿ ಸೋಮಶೇಖರ ಸ್ವಾಗತಿಸಿದರು, ಕಂಪೆನಿ ಅಧಿಕಾರಿ ಸಣ್ಣ ವೆಂಕಟೇಶ್ ನಿರೂಪಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ