ಮಾಂಗಲ್ಯ ಸರ ಕಳ್ಳತನಕ್ಕೆ ಯತ್ನಿಸಿದ ಯುವತಿಗೆ ಗೂಸಾ.
ಚಿತ್ತಾಪುರ: ಪಟ್ಟಣದ ಬಸ್ ನಿಲ್ದಾಣದಲ್ಲಿ ಮಹಿಳೆಯ ಮಾಂಗಲ್ಯ ಸರ ಕಳ್ಳತನ ಮಾಡಲು ಯತ್ನಿಸಿದ ಯುವತಿಗೆ ಪ್ರಯಾಣಿಕರು ಥಳಿಸಿದ ಘಟನೆ ಬುಧವಾರ ನಡೆದಿದೆ.
ಬುಧವಾರ ಪಟ್ಟಣದಲ್ಲಿ ಸಂತೆ ಇರುವ ಕಾರಣ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಪ್ರತಿ ಬುಧವಾರ ಒಂದಲ್ಲ ಒಂದು ಕಳ್ಳತನ ಆಗುತ್ತದೆ. ಇಂದು ಸಾಯಂಕಾಲ ಬಸ್ ನಿಲ್ದಾಣದಲ್ಲಿ ದಿಗ್ಗಾಂವ್ ಮತ್ತು ಅಲ್ಲೂರ ಗ್ರಾಮದ ಮಹಿಳೆಯರ ಮಾಂಗಲ್ಯ ಸರ ಕಳ್ಳತನಕ್ಕೆ ಯತ್ನಿಸಿ ಓಡಿಹೋಗುವಾಗ ಯುವತಿಯನ್ನು ಹಿಡಿದು ಪೋಲಿಸ್ ಠಾಣೆಗೆ ಒಪ್ಪಿಸಿದ ಘಟನೆ ನಡೆದಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ ಇಲಾಖೆಯು ಬುಧವಾರ ಸಂತೆಯಂದ್ದು ಕಳ್ಳತನ ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ