ಅದ್ದೂರಿಯಾಗಿ ನಡೆದ ನಾಗಾವಿ ಪಲ್ಲಕ್ಕಿ ಉತ್ಸವ.
•ದಾರಿ ಉದ್ದಕ್ಕೂ ಅನ್ನ ದಾಸೋಹ. •ಪಲ್ಲಕ್ಕಿ ಉತ್ಸವಕ್ಕೆ ಹರಿದುಬಂದ ಭಕ್ತ ಸಾಗರ.
ಚಿತ್ತಾಪೂರ: ರಾಷ್ಟ್ರಕೂಟರ ಕುಲ ದೇವತೆಯಾದ ಸುಪ್ರಸಿದ್ಧ ಶ್ರೀ ನಾಗಾವಿ ಯಲ್ಲಮ್ಮ ದೇವಿ ಪಲ್ಲಕ್ಕಿ ಉತ್ಸವ ತುಂಬಾ ವಿಜೃಂಭಣೆಯಿಂದ ಸಾವಿರಾರು ಭಕ್ತರ ಜೈಘೋಷದ ಮಧ್ಯ ಗುರುವಾರ ಅದ್ದೂರಿಯಾಗಿ ಜರಗಿತ್ತು.
ಪಟ್ಟಣದ ಸರಾಫ್ ಲಚ್ಚಪ್ಪ ನಾಯಕ ನಿವಾಸದಲ್ಲಿ ಮಧ್ಯಾಹ್ನ 2ಗಂಟೆ ಸುಮಾರಿಗೆ ವಿಘ್ನೇಶ್ವರ ಗುರು ಹಾಗೂ ಯಲ್ಲಮ್ಮ ದೇವಿ ಪಲ್ಲಕ್ಕಿಗೆ ತಹಸಿಲ್ದಾರ್ ನಾಗಯ್ಯ ಹೀರೆಮಠ, ಕಚೇರಿಯ ಸಿರಸ್ತೇದಾರ್ ಅಶ್ವಥ್ ನಾರಾಯಣ್, ಕಣ್ವ ನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಪ್ರಭುರಾಜ ಕಾಂತಾ,ಬಿಜೆಪಿ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಡಿವಾಯ್ಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಜಗದೇವಪ್ಪ ಪಾಳಾ, ಗಣ್ಯರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತ್ತು ನಂತರ ಸಕಲ ವಾದ್ಯಗಳೊಂದಿಗೆ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಮೂರ್ತಿ ಹೊತ್ತ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.
ಚಿತಾವಲಿ ಚೌಕ, ಕಪಡಾ ಕಿರಾಣಾ ಬಜಾರ್, ಜನತಾ ಚೌಕ್, ನಾಗಾವಿ ಚೌಕ್, ಹಾಗೂ ಒಂಟಿ ಕಮಾನ್ ಸೇರಿ ವಿವಿಧ ಬೀದಿಗಳ ಮೂಲಕ ರಾತ್ರಿ 8 ಗಂಟೆಗೆ ಶ್ರೀ ನಾಗಾವಿ ಯಲ್ಲಮ್ಮ ದೇವಿ ದೇಗುಲ ತಲುಪಿತ್ತು. ಮೆರವಣಿಗೆಯಲ್ಲಿ ಭಾಜಾ ಭಜಂತ್ರಿ, ಡೊಳ್ಳು ಕುಣಿತ, ಕೋಲಾಟ ಬಣ್ಣ ಬಣ್ಣದ ಧ್ವಜಗಳು ಗಮನ ಸೆಳೆದವು. ಸುಮಂಗಲಿಯರು ಕಳಸ ಕುಂಭ ಹೊತ್ತು ಹೆಜ್ಜೆ ಹಾಕಿದರು. ಸುಮಾರು 7 ಗಂಟೆಗಳ ಕಾಲದವರೆಗೆ ದೇವಿಯ ಉತ್ಸಾಹ ನಡೆಯಿತು. ದೇವಾಲಯದ ಸುತ್ತ 5 ಪ್ರದಕ್ಷಣೆ ಹಾಕಿದ ನಂತರ ದೇವಿಗೆ ವಿಶೇಷ ಪೂಜೆ ಅಭಿಷೇಕ ಕುಂಕುಮಾರ್ಚನೆ ಹಾಗೂ ಮಂಗಳಾರತಿ ನೆರವೇರಿಸಲಾಯಿತು .
ವಿವಿಧ ರಾಜ್ಯ ಸೇರಿ ಆಂಧ್ರಪ್ರದೇಶ ತೆಲಂಗಾಣ ಮಹಾರಾಷ್ಟ್ರ ತಮಿಳುನಾಡಿನಿಂದ ಆಗಮಿಸಿದ ಭಕ್ತರು ಯಲ್ಲಮ್ಮ ದೇವಿ ದರ್ಶನ ಪಡೆದು ಪುನೀತರಾದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗಯ್ಯ ಹೀರೆಮಠ, ಡಿವಾಯ್ಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ ತಿಗಡೆ, ಜಗದೇವಪ್ಪ ಪಾಳಾ,ಶಿರಸ್ತೇದಾರ ಅಶ್ವಥ್ ನಾರಾಯಣ್, ಕಣ್ವ ನಾಯಕ, ಕೃಷ್ಣ ನಾಯಕ್, ನರಹರಿ ಕುಲಕರ್ಣಿ, ಅಂಬರೀಶ್ ಸುಲೇಗಾವ್, ಸುರೇಶ್ ಗುತ್ತೇದಾರ್, ನಾಗಯ್ಯ ಗುತ್ತೇದಾರ್, ಚಂದ್ರಶೇಖರ ಅವಾಂಟಿ, ಕೋಟೇಶ್ವರ ರೇಶ್ಮಿ, ಲಕ್ಷ್ಮೀಕಾಂತ ತಾಂಡೂರಕರ್, ಅಂಬರೀಶ್ ಬೋವಿ, ಆನಂದ ಗುತ್ತೇದಾರ್, ಭೀಮು ಹೋಳಿಕಟ್ಟಿ, ಮಾರುತಿ ತಾಂಡೂರಕರ್, ನಾಗಾವಿ ದೇವಸ್ಥಾನ, ಮತ್ತು ತಹಸಿಲ್ ಸಿಬ್ಬಂದಿ ವರ್ಗ, ಪಿಎಸಐ ಶ್ರೀಶೈಲ್ ಅಬಂಟಿ, ತಿರುಮಲೇಶ್ ಕುಂಬಾರ, ಸೇರಿದಂತೆ ಇತರರು ಇದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ