ಮಣಿಕಂಠ ಮಾಡಿದ ಆರೋಪ ಸತ್ಯಕ್ಕೆ ದೂರ: ಮಲ್ಲಿಕಾರ್ಜುನ ಸ್ಪಷ್ಟನೆ.
ಚಿತ್ತಾಪುರ: ಬಜಾಜ್ ಕಲ್ಯಾಣ ಮಂಟಪದಲ್ಲಿ ಅ.25 ರಂದು ನಡೆದ ಜಿಲ್ಲಾ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರ ಅಭಿನಂದನಾ ಸಮಾರಂಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮಹಿಳೆಯರಿಗೆ ಹಣ ಹಂಚಿದ್ದಾರೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಮಾಡಿದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಲ್ಲಿಕಾರ್ಜುನ ಕಾಳಗಿ ಸ್ಪಷ್ಟನೆ ನೀಡಿದ್ದಾರೆ.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಸಂಸದರಾದ ರಾಧಾಕೃಷ್ಣ ದೊಡ್ಡಮನಿ ಅವರು ಲೋಕಸಭಾ ಚುನಾವಣೆಯಲ್ಲಿ ಬಹುಮತದಿಂದ ಗೆಲುವು ಸಾಧಿಸಿದ್ದ ಖುಷಿಯಿಂದ ಪುರಸಭೆ ಸದಸ್ಯರು ಸ್ವಇಚ್ಛೆಯಿಂದ ಮಹಿಳೆಯರಿಗೆ ದುಡ್ಡು ಕೊಟ್ಟಿದ್ದು ಸತ್ಯ, ಆದ್ರೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ಹೇಳುವ ಮಣಿಕಂಠ ಸ್ವಲ್ಪ ಆ ದಿನ ಅಲ್ಲಿ ಏನೂ ನಡೆದಿದ್ದೆ ಎಂದು ಆಲೋಚನೆ ಮಾಡಲಿ ಅಂದು ಸರ್ಕಾರದ 63 ಕೋಟಿ ರೂಪಾಯಿ ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಸಮಾರಂಭದಲ್ಲಿ ಅಧಿಕಾರಿಗಳು ಭಾಗವಹಿಸಿದ್ದರು. ಅಭಿನಂದನಾ ಸಮಾರಂಭ ಬಜಾಜ್ ಕಲ್ಯಾಣ ಮಂಟಪದಲ್ಲಿ ಹಾಗೂ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು ಮೊದಲು ಇದನ್ನು ಅರಿತುಕೊಂಡು ಆರೋಪ ಮಾಡಲಿ ಎಂದು ಕಿಡಿ ಕಾರಿದರು.
ಕ್ಷೇತ್ರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸಾಕಷ್ಟು ಅಭಿವೃದ್ದಿ ಕೆಲಸಗಳು ಮಾಡುತ್ತಿದ್ದಾರೆ ವಿನಾಕಾರಣ ಅವರ ವಿರುದ್ಧ ಇಲ್ಲಸಲ್ಲದ ಮಾತನಾಡುವಾಗ ಸ್ವಲ್ಪ ನಾಲಿಗೆ ಹಿಡಿತದಲ್ಲಿರಲಿ, ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ, ಸಚಿವರ ವಿರುದ್ಧ ಮಾತನಾಡುವ ನೀವು ಕ್ಷೇತ್ರದಲ್ಲಿ ನಿಮ್ಮ ಕೊಡುಗೆ ಏನು? ಎಂದು ಮಣಿಕಂಠ ರಾಠೋಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಖಾರವಾಗಿ ಪ್ರಶ್ನಿಸಿದರು.
ಮಣಿಕಂಠ ರಾಠೋಡ ಎನ್ನುವ ಮಾನಸಿಕ ವ್ಯಕ್ತಿ ಕ್ಷೇತ್ರಕ್ಕೆ ಆಗಮಿಸಿ ಸಚಿವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುವುದೇ ಆತನ ಸಣ್ಣತನದ ಕೆಲಸವಾಗಿದೆ. ಮಹಿಳೆಯರಿಗೆ ಹಣ ನೀಡಿದ್ದೇವೆ ಅದು ದೀಪಾವಳಿ ಕಾಣಿಕೆಯಾಗಿ ಆದ್ರೇ ಬಿಜೆಪಿಯವರೇನು ಸಾಚಾನ ಎಂದು ಪ್ರಶ್ನಿಸಿದರು ಕಳೆದ ಚುನಾವಣೆಯಲ್ಲಿ ಅನ್ನ ಪ್ರಸಾದ, ದೇವಸ್ಥಾನ ಮತ್ತು ರಸ್ತೆಗಳ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿ ಬರೀ ಶೋ ಪುಟ ಮಾಡುವ ಕೆಲಸ ಮಾಡಿದ್ದಾನೆ ಎಂದರು.
-ಜಗದೀಶ್ ಚವ್ಹಾಣ್
ಪುರಸಭೆ ಸದಸ್ಯ ಚಿತ್ತಾಪುರ.
ಕಲಬುರ್ಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರ ಅಭಿನಂದನಾ ಸಮಾರಂಭಕ್ಕೆ ಆಗಮಿಸಿದ್ದ ಮಹಿಳೆಯರಿಗೆ ಖುಷಿಯಿಂದ ಪುರಸಭೆ ಸದಸ್ಯರು ಸ್ವಇಚ್ಛೆಯಿಂದ ನಮ್ಮ ಸ್ವಂತ ಹಣ ನೀಡಿದ್ದೇವೆ ಇದಕ್ಕೆ ನೀವ್ಯಾರು ಕೇಳೋರು ಎಂದು ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದರು.
- ವಿನೋದ ಗುತ್ತೇದಾರ
ಪುರಸಭೆ ಸದಸ್ಯ ಚಿತ್ತಾಪುರ
ಈ ಸುದ್ದಿಗೋಷ್ಠಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಚಂದ್ರಶೇಖರ ಕಾಶಿ, ಪುರಸಭೆ ಮಾಜಿ ಅಧ್ಯಕ್ಷ ಶಿವಕಾಂತ್ ಬೆಣ್ಣೂರಕರ್, ಮುಖಂಡ ಸುಭಾಷ್ ಜಾಧವ, ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ