ಮಂಗಳವಾರ, ಮಾರ್ಚ್ 18, 2025

ಅಪ್ಪು 50ನೇ ಹುಟ್ಟುಹಬ್ಬ ಆಚರಣೆ.

ಚಿತ್ತಾಪುರ: ನಟ ದಿವಂಗತ ಪುನೀತ್ ರಾಜ್ ಕುಮಾರ್ ಅವರ 50ನೇ ಹುಟ್ಟು ಹಬ್ಬವನ್ನು ಅಪ್ಪು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.

ಪಟ್ಟಣದ ಲಾಡ್ಡಿಂಗ್ ಕ್ರಾಸ್ ಹತ್ತಿರ ಕರ್ನಾಟಕ ರಾಜ್ಯ ಭೋವಿ ವಡ್ಡರ ಮಹಾಸಭಾ ತಾಲೂಕ ಅಧ್ಯಕ್ಷ ವೆಂಕಟೇಶ್ ಹರವಾಳ ನೇತೃತ್ವದಲ್ಲಿ ಅಪ್ಪು ಅಭಿಮಾನಿಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರತ್ನ ಪುನೀತ್ ರಾಜಕುಮಾ‌ರ್ ಅವರ ಜನ್ಮ ದಿನದ ಸಮಾರಂಭದಲ್ಲಿ ಕಲಾವಿದ ಬಾಬು ಕಾಶಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ಬಾಲ ನಟನಾಗಿ ಅಭಿನಯಿಸಿ ನಂತರ ನಾಯಕ ನಟನಾಗಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಹ ಸಿನೇಮಾ ಮಾಡಿದ ಪುನೀತ್ ರಾಜಕುಮಾ‌ರ್ ಅವರು ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ಅಮೋಘವಾಗಿದೆ ಹಾಗೂ ಎಲೆಮರೆ ಕಾಯಿಯಂತೆ ಸಲ್ಲಿಸಿದ ಸಮಾಜ ಸೇವೆ ಮೆಚ್ಚುವಂಥದ್ದು ಇಂತಹ ಅಪರೂಪದ ಚಿತ್ರನಟ ಪುನೀತ್ ರಾಜಕುಮಾ‌ರ್ ಅವರ ಹೆಸರನ್ನು ಪಟ್ಟಣದ ಲಾಡ್ಡಿಂಗ್ ಕ್ರಾಸ್ ಗೆ ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್ ಕೇಕ್ ಕತ್ತರಿಸಿದರು. ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಪುರಸಭೆ ಸದಸ್ಯ ವಿನೋದ ಗುತ್ತೇದಾರ, ರವಿ ವಿಟ್ಕರ್, ರಮೇಶ ಬೋಸಗಿ, ಬಾಬು ಜೆಸಿಬಿ, ತಿಮ್ಮಯ್ಯ ಪವಾರ್, ರಾಜೇಶ್ ಕಾಶಿ, ರಾಮು ಹರವಾಳ, ವಿಠಲ್ ಕಟ್ಟಿಮನಿ, ರವಿ ಇವಣಿ, ಕಾಶಿನಾಥ ಗುತ್ತೇದಾರ, ಆನಂದ್ ಗುತ್ತೇದಾರ, ನಾಗು ಕಲ್ಲಕ್, ಮಧುಸೂದನ್ ಕಾಶಿ, ಚಂದ್ರಶೇಖರ್ ಬಿಎಸ್‌ಎನ್‌ಎಲ್, ವೆಂಕಟೇಶ್ ಕಲಬುರಗಿಕರ್ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ದತ್ತು ಜಾನೆ, ಮಂಜುನಾಥ್ ಕಾಶಿ, ಅಂಕುಶ್ ಕಾಶಿ, ಕಾಶಿ ಇದ್ದರು.

ಗುರುವಾರ, ಮಾರ್ಚ್ 13, 2025

ಚಿತ್ತಾಪುರ: ಅಕ್ರಮ ಮದ್ಯ ವಶ.

ಚಿತ್ತಾಪುರ: ಪಟ್ಟಣದದಲ್ಲಿ ಅಕ್ರಮವಾಗಿ ಮದ್ಯ ಸಾಗಾಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ರೂ.75045 ಮೌಲ್ಯದ ಮದ್ಯ ಹಾಗೂ ಒಂದು ಆಟೋ ವಶಕ್ಕೆ ಪಡೆದ ಘಟನೆ ನಡೆದಿದೆ.

ಪಿಎಸ್‌ಐ ಶ್ರೀಶೈಲ ಅಂಬಾಟಿ ಬುಧವಾರ ರಾತ್ರಿ ದಾಳಿ ಮಾಡಿ 650ಎಂಎಲ್ ಪವರ್ ಕೂಲ್ ಸ್ಟ್ರಾಂಗ್ ಬೀರ್ 6 ಬಾಕ್ಸ್ 10800 ರೂಪಾಯಿ, 650ಎಂಎಲ್ ಕಿಂಗ್ ಫಿಶರ್ ಸ್ಟ್ರಾಂಗ್ ಬೀರ್ 5 ಬಾಕ್ಸ್ 11250ರೂಪಾಯಿ, 90ಎಂಎಲ್ ಒರಿಜಿನಲ್ ಚಾಯ್ಸ್ ವಿಸ್ಕಿ 10 ಬಾಕ್ಸ್ 36480 ರೂಪಾಯಿ, 180ಎಂಎಲ್ ಬ್ಯಾಗ ಪೇಪರ್ ವಿಸ್ಕಿ 1 ಬಾಕ್ಸ್ 6912 ರೂಪಾಯಿ, 330 ಎಂಎಲ್ ಕಿಂಗ್ ಫಿಶರ್ ಸ್ಟ್ರಾಂಗ್ ಬೀರ್ 4 ಬಾಕ್ಸ್ 9600 ರೂಪಾಯಿ ಒಟ್ಟು 75045 ರೂಪಾಯಿ ಮೌಲ್ಯದ ಆಕ್ರಮ ಮದ್ಯ ವಶಕ್ಕೆ ಪಡೆಯುವುದರ ಜೊತೆಗೆ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹಾಗೂ ಒಂದು ಆಟೋ ವಶಕ್ಕೆ ಪಡೆದುಕೊಂಡಿದ್ದಾರೆ.

ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಬಂಧಿಸಿದ ತನಿಖೆ ಮುಂದುವರೆದಿದೆ ಎನ್ನಲಾಗಿದೆ.

ಶನಿವಾರ, ಮಾರ್ಚ್ 1, 2025

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ.

ಚಿತ್ತಾಪುರ: ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯೆಯರಾದ ಶ್ರೀಮತಿ ಅನ್ನಪೂರ್ಣ ನಾಗಪ್ಪ ಕಲ್ಲಕ್ ನೂತನ ಅಧ್ಯಕ್ಷೆಯಾಗಿ ಮತ್ತು ಶ್ರೀಮತಿ ಆತೀಯಾ ಬೇಗಂ ನಜಮೋದ್ದಿನ್ ಉಪಾಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್ ತಿಕ್ಕೆಗೆ ಹೋಗಿದೆ.

ಪಟ್ಟಣದ ಪುರಸಭೆ ಕಾರ್ಯಲಯದಲ್ಲಿ ಶುಕ್ರವಾರ ನಡೆದ ಪುರಸಭೆ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಅನ್ನಪೂರ್ಣ ಕಲ್ಲಕ್, ಬಿಜೆಪಿ ಪಕ್ಷದಿಂದ ಸುಶೀಲಾ ದೇವಸುಂಧರ ನಾಮಪತ್ರ ಸಲ್ಲಿಸಿದರು. ಒಟ್ಟು 23 ಸದಸ್ಯರ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಕಲ್ಲಕ್ ಅವರು 18 ಮತಗಳು ಪಡೆಯುವ ಮೂಲಕ ಗೆಲವು ಸಾಧಿಸಿದ್ದಾರೆ. ಬಿಜೆಪಿಯ ಸುಶೀಲಾ ದೇವಸುಂಧರ ಅವರು 5 ಮತಗಳು ಪಡೆದು ಸೋಲು ಅನುಭವಿಸಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಆತೀಯಾ ಬೇಗಂ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗಯ್ಯ ಹಿರೇಮಠ ಅವರು ಘೋಷಣೆ ಮಾಡಿದರು.

ಇದೇ ವೇಳೆ ತಹಶೀಲ್ದಾರ್ ನಾಗಯ್ಯ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾ‌ರ್ ಅವರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿದರು.

ಪುರಸಭೆ ಸದಸ್ಯರಾದ ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಪಾಶಾ ಖುರೇಶಿ, ಸುಮಂಗಲಾ ಸಣ್ಣೂರಕರ್, ಬೇಬಿಬಾಯಿ ಜಾಧವ, ವಿನೋದ ಗುತ್ತೇದಾರ, ಕಾಶಿಬಾಯಿ ಬೆಣ್ಣೂರ್, ಜಗದೀಶ ಚವ್ಹಾಣ, ಸಂತೋಷ ಚೌದ್ರಿ, ಶ್ರುತಿ ಪೂಜಾರಿ, ಶ್ರೀನಿವಾಗರೆಡ್ಡಿ ಪಾಲಪ್, ಶಹಾರಾಜ ಬೇಗಂ, ಖಾಜಾಬಿ, ಮಹ್ಮದ್ ರಸೂಲ್ ಮುಸ್ತಫಾ, ಶಿವರಾಜ ಪಾಳೇದ್, ನಾಗರಾಜ ಭಂಕಲಗಿ, ಪ್ರಭು ಗಂಗಾಣಿ, ರಮೇಶ ಬಮ್ಮನಳ್ಳಿ ಶ್ಯಾಮ್ ಮೇಧಾ ಇದ್ದರು.

ವಿಜಯೋತ್ಸವ : ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ನಂತರ ಕಾಂಗ್ರೆಸ್ ಕಚೇರಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು.

ಅಭಿವೃದ್ಧಿಗೆ ಶ್ರಮಿಸಿ, ಸಚಿವರ ಹೆಸರು ತನ್ನಿ: ನಾಗರೆಡ್ಡಿ ಪಾಟೀಲ.

ಚಿತ್ತಾಪುರ: ನೂತನವಾಗಿ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಸದಸ್ಯರು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ತರಬೇಕು ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಕಿವಿಮಾತು ಹೇಳಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ಒಂದೇ ಸ್ಥಾನಕ್ಕೆ ಹಲವರು ಆಕಾಂಕ್ಷಿಗಳು ಇದ್ದಾಗ ಸ್ವಲ್ಪ ಅಸಮಾಧಾನ ಇದ್ದೆ ಇರುತ್ತದೆ ಹೀಗಾಗಿ ಸ್ವಲ್ಪ ತಾಳ್ಮೆಯಿಂದ ಇರಬೇಕು ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ, ಹೀಗಾಗಿ ಅಸಮಾಧಾನ ಬದಿಗಿಟ್ಟು ಎಲ್ಲರೂ ಒಗ್ಗೂಡಿ ಸರ್ವ ಸದಸ್ಯರ ಅಭಿಪ್ರಾಯ ಪಡೆದು ಅಭಿವೃದ್ಧಿಗೆ ಶ್ರಮವಹಿಸಬೇಕು ಎಂದು ಹೇಳಿದರು.

ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರಿಗೂ ಮತ್ತು ಪುರಸಭೆ ಸದಸ್ಯರಿಗೂ ಯಾವುದೇ ದಕ್ಕೆ ಯಾಗದಂತೆ ಎಲ್ಲರ ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂದರು.

- ಶ್ರೀಮತಿ ಅನ್ನಪೂರ್ಣ ಕಲ್ಲಕ್
ನೂತನ ಅಧ್ಯಕ್ಷೆ ಪುರಸಭೆ ಚಿತ್ತಾಪೂರ.

ವೀಕ್ಷಕರಾಗಿ ಕಲಬುರಗಿ ಜಿಡಿಎ ಅಧ್ಯಕ್ಷ ಮಜ‌ರ್ ಅಲ್ಲಾಂಖಾನ್, ಜಿಪಂ ಮಾಜಿ ಸದಸ್ಯ ಶರಣಗೌಡ ಪಾಟೀಲ ಚಿಂಚನಸೂರ, ಈರಣ್ಣ ಝಳಕಿ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಕಾರ್ಯದರ್ಶಿ ರಮೇಶ್ ಮರಗೋಳ, ಜಿಪಂ ಮಾಜಿ ಸದಸ್ಯ ಶಿವರುದ್ರಪ್ಪ ಭೀಣ್ಣಿ, ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಮಲ್ಲಿಕಾರ್ಜುನ ಕಾಳಗಿ, ವಿನೋದ ಗುತ್ತೇದಾರ, ಅಣ್ಣಾರಾವ್ ಸಣ್ಣೂರಕರ್, ಶ್ರೀನಿವಾಸ ರೆಡ್ಡಿ ಪಾಲಪ್, ಜಗದೀಶ್ ಚವ್ಹಾಣ, ಶಿವಕಾಂತ್ ಬೆಣ್ಣೂರಕ‌ರ್, ಪಾಶಾಮಿಯ್ಯಾ ಖುರೇಷಿ, ಸಂತೋಷ್ ಚೌದರಿ, ಶಿವರಾಜ್ ಪಾಳೇದ್, ರಸೂಲ್ ಮುಸ್ತಫಾ, ಮಹ್ಮದ್ ಯಕ್ಸಾಲ್, ಜಗದೇವರೆಡ್ಡಿ ಪಾಟೀಲ, ನಾಗರೆಡ್ಡಿ ಗೋಪಸೇನ್, ಅಹ್ಮದ್ ಸೇಟ್, ನಾಗು ಕಲ್ಲಕ್‌, ಸಿದ್ದುಗೌಡ ಅಫಜಲಪುರಕ‌ರ್, ಇಸ್ಮಾಯಿಲ್ ಕಮರವಾಡಿ, ಮಹಾಂತೇಶ್‌ ಬೊಮ್ಮನಳ್ಳಿ, ಭೀಮರಾಯ ಹೊತಿನಮಡಿ, ರಾಜಣ್ಣ ಕರದಾಳ, ಸಂಜಯ ಬುಳಕರ್, ಸಂತೋಷ ಪೂಜಾರಿ, ನಜೀರ್‌ ಆಡಕಿ, ರವಿಸಾಗರ ಹೊಸಮನಿ, ಸೂರಜ್ ಕಲ್ಲಕ್, ಶರಣಪ್ಪ ಕೋರವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್ ನಿರೂಪಿಸಿದರು, ಯುವ ಕಾಂಗ್ರೆಸ್‌ ಅಧ್ಯಕ್ಷ ದೇವಿಂದ್ರ ಯಾಬಾಳ ದಿಗ್ಗಾಂವ ವಂದಿಸಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೂತನ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್ ಅವರ ಮೆರವಣಿಗೆ ನಡೆಯಿತು.

ಸೋಮವಾರ, ಫೆಬ್ರವರಿ 24, 2025

ಫೆ.25ಕ್ಕೆ ಕುಂಬಾರರ ಸಭೆ, ಮತ್ತು ಸರ್ವಜ್ಞ ಜಯಂತಿ ಆಚರಣೆ.


ಬೆಂಗಳೂರು: ರಾಜ್ಯ ಕುಂಬಾರರ ಯುವ ಸೈನ್ಯ ರಾಜ್ಯ ಘಟಕ ವತಿಯಿಂದ ಕುಂಬಾರರ ಸಭೆ ಮತ್ತು 505ನೇ ವರ್ಷದ ಸರ್ವಜ್ಞ ಜಯಂತಿ ಆಚರಣೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕುಂಬಾರರ ಯುವ ಸೈನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಗದೇವ ಎಸ್ ಕುಂಬಾರ ತಿಳಿಸಿದ್ದಾರೆ.

ಬೆಂಗಳೂರು ನಗರದ ವಿಧಾನಸೌಧ ಮುಂಭಾಗ ಕಬ್ಬನ ಪಾರ್ಕ್ ನಲ್ಲಿ ಫೆಬ್ರುವರಿ,25 ಮಂಗಳವಾರ ಸಾಯಂಕಾಲ 4 ಗಂಟೆಗೆ ಸರ್ವಜ್ಞ ಜಯಂತಿ ಆಚರಣೆ ನಂತರ ಮಹತ್ವದ ಕುಂಬಾರರ ಸಭೆ ನಡೆಯಲಿದೆ ಈ ಒಂದು ಕಾರ್ಯಕ್ರಮದಲ್ಲಿ ಎಲ್ಲಾ ಜಿಲ್ಲಾ/ತಾಲೂಕಿನ ರಾಜ್ಯ ಕುಂಬಾರರ ಯುವ ಸೈನ್ಯ ಅಧ್ಯಕ್ಷರು ಎಲ್ಲಾ ಪದಾಧಿಕಾರಿಗಳು, ಸಮಯ ಬಿಡುವು ಮಾಡಿಕೊಂಡು ಈ ಒಂದು ಸಣ್ಣ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

ಶುಕ್ರವಾರ, ಫೆಬ್ರವರಿ 21, 2025

ವಿವಿಧೆಡೆ ಸರ್ವಜ್ಞ ಜಯಂತಿ ಆಚರಣೆ.

ಚಿತ್ತಾಪುರ: ಪಟ್ಟಣದ ವಿವಿಧೆಡೆ ಕನ್ನಡ ಪರಂಪರೆಯ ಮಹಾನ್ ಮಾನವತಾವಾದಿ, ತತ್ವಜ್ಞಾನಿ, ತ್ರಿಪದಿಗಳ ಬ್ರಹ್ಮ ಕವಿ ಸರ್ವಜ್ಞ ಅವರ 505ನೇ ಜಯಂತಿ ಆಚರಿಸಲಾಯಿತು.

ತಹಸೀಲ್ ಕಾರ್ಯಾಲಯದಲ್ಲಿ ಸರ್ವಜ್ಞ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ ಜಯಂತಿ ಆಚರಣೆ ಕುರಿತು ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ ಜನರು ಆಡುವ ಭಾಷೆಯಲ್ಲಿ ತ್ರಿಪದಿಯಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಸಮಾಜ ಸುಧಾರಕ, ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆ ನೀಡಿದ ಶ್ರೇಷ್ಠ ವಚನಕಾರ ಸರ್ವಜ್ಞ ರವರ ಆದರ್ಶಗಳು ಪ್ರತಿಯೊಬ್ಬರು ಪಾಲಿಸಬೇಕು ಎಂದು ಸಲಹೆ ನೀಡಿದರು.

ಈ ವೇಳೆಯಲ್ಲಿ ರಾಜ್ಯ ಕುಂಬಾರರ ಯುವ ಸೈನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಗದೇವ ಕುಂಬಾರ, ಅಧ್ಯಕ್ಷ ಪ್ರಭು ಕುಂಬಾರ, ಭೀಮರಾಯ ಕುಂಬಾರ, ಶರಣು ಕುಂಬಾರ, ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.

ಪುರಸಭೆ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತಿಯ ನಿಮಿತ್ಯ ಸರ್ವಜ್ಞ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿ ಆಚರಿಸಿದರು ಈ ವೇಳೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ್, ಸುನೀಲ ಕುಮಾರ, ಶರಣಪ್ಪ, ವೆಂಕಟೇಶ ಕುಮಾರ, ಭೀಮು ಇಲಾಖೆಯ ಇತರರು ಇದ್ದರು.

ತಾಲ್ಲೂಕ ಪಂಚಾಯತ ಇಲಾಖೆಯಯಲ್ಲಿ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತಿಯ ಪ್ರಯುಕ್ತ ಗುರುವಾರ ಸರ್ವಜ್ಞ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸು ಮೂಲಕ ಆಚರಿಸಿದರು.ಈ ಸಂದರ್ಭದಲ್ಲಿ ಹರೀಶ ಶಿಂಧೆ, ಗೋಪಾಲ, ಸಂದೇಶ, ಇರ್ಫಾನ್, ಅನೀಲ ಪಾಟೀಲ್, ಸಂಗೀತ ಸಜ್ಜನ್ ಇತರರು ಇದ್ದರು.

ಸರ್ಕಾರಿ ಪ್ರೌಢ ಶಾಲೆಯಲ್ಲಿ ಸರ್ವಜ್ಞ ಜಯಂತಿ ಆಚರಿಸಿ ಬಳಿಕ ಶಾಲೆಯ ಮುಖ್ಯಗುರುಗಳಾದ ಕಾಶಿರಾಯ ಕಲಾಲ್ ಮಾತನಾಡಿ ತ್ರಿಪದಿಗಳ‌ ಮೂಲಕ ಸಮಾಜದಲ್ಲಿ ಪ್ರಖರ ಚಿಂತನೆಗಳನ್ನು ಸಾರಿದ ಹೆಮ್ಮೆಯ ಕವಿ ಸರ್ವಜ್ಞರು ತೋರಿದ ದಾರಿಯಲ್ಲಿ ಸಾಗುವ ಮೂಲಕ ಜೀವನಾನುಭವ ಪಡೆದುಕೊಳ್ಳೋಣ. ತ್ರಿಪದಿ ಕವಿಗೆ ಮನದುಂಬಿ ಸ್ಮರಿಸೋಣ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಇದ್ದರು.

ಪಶುವೈದ್ಯಕೀಯ ಇಲಾಖೆಯಲ್ಲಿ ಸರ್ವಜ್ಞ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು ಈ ವೇಳೆಯಲ್ಲಿ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.

ಮಾತೋಶ್ರೀ ಮಹಾದೇವಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಕವಿ ಸರ್ವಜ್ಞ ಜಯಂತಿಯ ಪ್ರಯುಕ್ತ ಗುರುವಾರ ಸರ್ವಜ್ಞ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಿದರು.

ಜಗದೇವ ಕುಂಬಾರ ಮಾತನಾಡಿ ಸರ್ವಜ್ಞರ ತ್ರಿಪದಿಗಳು ಕೇವಲ ಕಾವ್ಯವಲ್ಲ, ಅವು ಜೀವನದ ತತ್ವಶಾಸ್ತ್ರ. ಅವರ ವಾಣಿ ಸರಳವಾಗಿದ್ದರೂ ಅತ್ಯಂತ ಗಹನವಾದ ಅರ್ಥವನ್ನು ಹೊಂದಿದೆ. ಜಾತಿ, ಅಸ್ಪೃಶ್ಯತೆ, ಮೂಢನಂಬಿಕೆಗಳಂತಹ ಸಮಾಜದ ಕುಂದುಗಳನ್ನು ಅವರು ತಮ್ಮ ತ್ರಿಪದಿಗಳ ಮೂಲಕ ಧೈರ್ಯದಿಂದ ಟೀಕಿಸಿದರು. ಅವರ ಮಾನವತಾವಾದಿ ದೃಷ್ಟಿಕೋನ ಮತ್ತು ತಾತ್ವಿಕ ಚಿಂತನೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಅಮೂಲ್ಯ ಕೊಡುಗೆಯಾಗಿಯನ್ನು ನೀಡಿದ್ದಾರೆ ಎಂದು ಹೇಳಿದರು.

ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳು ನಮಗೆ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುವುದರ ಜೊತೆಗೆ ಅವರ ಆದರ್ಶಗಳು ನಾವು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ವಿಶ್ವನಾಥ ಮಡಿವಾಳ, ಶಿಕ್ಷಕಿ ಸಂಗೀತ, ಸಹಾಯಕಿ ಶ್ರೀಮತಿ ಜಯಶ್ರೀ ಇತರರು ಇದ್ದರು.

ಬುಧವಾರ, ಫೆಬ್ರವರಿ 19, 2025

ತಹಸೀಲನಲ್ಲಿ ಶಿವಾಜಿ ಜಯಂತ್ಯೋತ್ಸವ ಆಚರಣೆ.

ಚಿತ್ತಾಪುರ: ಪಟ್ಟಣದ ತಹಸೀಲ್ದಾರ ಕಚೇರಿಯ ಬುಧವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತ್ಯೋತ್ಸವ ನಿಮಿತ್ಯ ಶಿವಾಜಿ ಭಾವಚಿತ್ರಕ್ಕೆ ತಾಲೂಕು ಆಡಳಿತ ಹಾಗೂ ಸಮಾಜದ ವತಿಯಿಂದ ಪೂಜೆ ಸಲ್ಲಿಸಿ ಗೌರವ ನಮನಗಳು ಸಲ್ಲಿಸುವ ಮೂಲಕ ಸರಳವಾಗಿ ಜಯಂತ್ಯೋತ್ಸವ ಆಚರಿಸಲಾಯಿತ್ತು.

ಈ ಸಂದರ್ಭದಲ್ಲಿ ತಹಸೀಲ್ದಾರ ನಾಗಯ್ಯ ಹಿರೇಮಠ, ಗ್ರೇಡ್-2 ತಹಸೀಲ್ದಾರ್ ರಾಜಕುಮಾರ, ಪಿಎಸ್‌ಐ ಚಂದ್ರಾಮಪ್ಪ, ಸಮಾಜದ ಅಧ್ಯಕ್ಷ ಅನಿಲ್ ಯಂಡೆ, ಮುಖಂಡರಾದ ರೋಹಿತ್ ಚವ್ಹಾಣ್, ರೋಹಿತ್ ಯಂಡೆ, ಸಂತೋಷ ಗವಳಕರ್, ಆಕಾಶ್ ಸುಗಂಧಿ, ರಾಘವೇಂದ್ರ ಮೋಹಿತೆ, ಸಂಜು ಸೂರ್ಯವಂಶಿ, ಗುರು ಉಪ್ಪಾರ್, ನವೀನ್ ಚವ್ಹಾಣ್, ಅನುಪ್ ಉಬಾಳೆ, ನರಹರಿ ಕುಲ್ಕರ್ಣಿ, ಸೇರಿದಂತೆ ಇತರರು ಇದ್ದರು.

ಶಿವಾಜಿ ಪ್ರಬುದ್ಧ ಆಡಳಿತಗಾರ: ಕಂಬಳೇಶ್ವರ ಶ್ರೀ.


ಚಿತ್ತಾಪುರ: ಶಿವಾಜಿ ಮಹಾರಾಜರು ಅತ್ಯುತ್ತಮ ನಾಯಕತ್ವ, ಆಡಳಿತ ತಂತ್ರಗಳು ಮತ್ತು ಪ್ರಬುದ್ಧ ಆಡಳಿತಗಾರನಾಗಿದ್ದರು ಎಂದು ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಭುವನೇಶ್ವರಿ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತ್ಯೋತ್ಸವ ನಿಮಿತ್ಯ ಶಿವಾಜಿ ಮೂರ್ತಿಗೆ ಶ್ರೀಗಳು ಪೂಜೆ ಸಲ್ಲಿಸಿ ಮಾತನಾಡಿದ ಅವರು ಅವರ ಆಳ್ವಿಕೆಯ ಅವಧಿಯು ಆಡಳಿತ ಮತ್ತು ನ್ಯಾಯಾಲಯ ವಲಯಗಳಲ್ಲಿ ಪರ್ಷಿಯನ್ ಭಾಷೆಗಿಂತ ಮರಾಠಿ ಮತ್ತು ಸಂಸ್ಕೃತಕ್ಕೆ ಆದ್ಯತೆ ನೀಡುವ ಮೂಲಕ ಗುರುತಿಸಲ್ಪಟ್ಟಿತು, ಇದು ಅವರ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಸೂಚಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಅನಿಲ್ ಯಂಡೆ, ಮುಖಂಡರಾದ ರೋಹಿತ್ ಚವ್ಹಾಣ್, ರೋಹಿತ್ ಯಂಡೆ, ಸಂತೋಷ ಗವಳಕರ್, ಆಕಾಶ್ ಸುಗಂಧಿ, ರಾಘವೇಂದ್ರ ಮೋಹಿತೆ, ಸಂಜು ಸೂರ್ಯವಂಶಿ, ಗುರು ಉಪ್ಪಾರ್, ನವೀನ್ ಚವ್ಹಾಣ್, ಅನುಪ್ ಉಬಾಳೆ, ಬಂಟ್ಟಿ ಹರಳೆ, ಸುನೀಲ್ ಯಂಡೆ, ನಿತೇಶ ಸುಗಂಧಿ, ಅನೀಲ್ ಚಪಟ್ಲೆ, ಅಂಬಣ್ಣ ಹೋಳಿಕಟ್ಟಿ, ಸಾಬಣ್ಣ ಹೋಳಿಕಟ್ಟಿ,
ಮಲ್ಲಿಕಾರ್ಜುನ ಅಲ್ಲೂರಕರ್, ಮೇಘರಾಜ ಗುತ್ತೇದಾರ್, ನರಹರಿ ಕುಲ್ಕರ್ಣಿ, ಮಹೇಶ್ ಸುಗಂಧಿ, ಪ್ರಶಾಂತ್ ಶಿಂದೆ,ರಾಜೇಶ ಹೋಳಿಕಟ್ಟಿ, ಹರ್ಷ ಸೂರ್ಯವಂಶಿ ಸೇರಿದಂತೆ ಪಿಎಸ್‌ಐ ಚಂದ್ರಾಮಪ್ಪ, ದತ್ತು ಜಾನೆ, ಸವಿಕುಮಾರ, ಇತರರು ಇದ್ದರು.

ಬುಧವಾರ, ಫೆಬ್ರವರಿ 12, 2025

ಸಂಘಟನೆಗೆ ಯುವಕರ ಪಾತ್ರ ಮುಖ್ಯ: ಬ್ಲಾಕ್ ಅಧ್ಯಕ್ಷ.

ಚಿತ್ತಾಪುರ: ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಯುವ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯುವಕರು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷದ ಕಡೆ ಮುಖ ಮಾಡಲು ಕಾಂಗ್ರೇಸ್ ಯುವ ಘಟಕ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಅದರ ಜೊತೆಗೆ ಯುವಕರಲ್ಲಿ ಏನೇ ವೈ ಮನಸುಗಳಿದ್ದಲ್ಲಿ ಯುವಕರು ಸರಿಪಡಿಸಿಕೊಂಡು ಪಕ್ಷದ ಸಿದ್ಧಾಂತದ ಅಡಿಯಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷದ ಕೆಲಸ ಮಾಡಬೇಕೆಂದು ಹೇಳಿದರು.

ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಮಾತನಾಡಿ
ಹಿಂದಿನ ಕಾಂಗ್ರೆಸ್ ಯುವ ಘಟಕ ಅಧ್ಯಕ್ಷ ಸಂಜು ಬೂಳ್ಕರ್ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರು ಅದೇ ರೀತಿ ನೂತನ ಅಧ್ಯಕ್ಷರು ಸಹ ಸಕ್ರಿಯವಾಗಿ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡುವುದರ ಜೊತೆಗೆ ಯುವಕರಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ತಿಳಿಸುವಂತಹ ಕೆಲಸಗಳು ಆಗಲಿ ಹೇಳಿದರು.

ಪಕ್ಷದಲ್ಲಿನ ನನ್ನ ಸೇವೆಯನ್ನು ಗುರುತಿಸಿ ನನಗೆ ನೂತನ ತಾಲೂಕು ಯುವ ಘಟಕ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ಸಂತೋಷವಾಗಿದೆ, ಇನ್ನು ಹೆಚ್ಚಿನ ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳ ಅಡಿಯಲ್ಲಿ ಯುವ ಘಟಕ ಸಂಘಟನೆ ಸಲುವಾಗಿ ಸಕ್ರಿಯವಾಗಿ ನಾನು ಪಕ್ಷದಲ್ಲಿ ಸೇವೆ ಸಲ್ಲಿಸುವುದಾಗಿ ತಿಳಿಸಿ, ಹಿರಿಯರ ಮಾರ್ಗದರ್ಶನ ನನ್ನ ಮೇಲೆ ಇರಲಿ ಎಂದು ಹೇಳಿದರು.

- ದೇವೇಂದ್ರ ಯಾಬಾಳ್ 
ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಚಿತ್ತಾಪುರ.

ಪ್ರಾಸ್ತಾವಿಕವಾಗಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ತರ್ ಪಾಟೀಲ್ ಮಾತನಾಡಿದರು ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಹಾಲಿ ಸದಸ್ಯ ಚಂದ್ರಶೇಖರ ಕಾಶಿ, ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಲ್ಲಿಕಾರ್ಜುನ ಕಾಳಗಿ, ಮುಖಂಡರಾದ ಗೋಪಸೇನ, ಶರಣು ಡೋಣಗಾಂವ್ , ಸಂಜು ಬುಳಕರ್, ಬಸವರಾಜ ಚಿನ್ನಮಳ್ಳಿ, ಸಾಬಣ್ಣ ಡಿಗ್ಗಿ, ನಾಜಿರ ಅಡಕಿ, ರಾಮಲಿಂಗ ಬಾನರ್, ಹಣಮಂತ ಸಂಕನೂರ, ನಿಂಗಣ್ಣ ಹೆಗಲೇರಿ, ಸೇರಿದಂತೆ ಇತರರು ಇದ್ದರು.

ಭಾನುವಾರ, ಫೆಬ್ರವರಿ 9, 2025

ಪ್ರಯಾಗರಾಜ್ ಪವಿತ್ರ ತೀರ್ಥಸ್ಥಳ: ಕಂಬಳೇಶ್ವರ ಶ್ರೀ.

ಚಿತ್ತಾಪುರ: ಸಮುದ್ರ ಮಂಥನದ ಸಮಯದಲ್ಲಿ ಭಗವಾನ್ ವಿಷ್ಣು ಮೋಹಿನಿಯ ವೇಷದಲ್ಲಿ ಅಮೃತದ ಪಾತ್ರೆಯನ್ನು ಹೊತ್ತೊಯ್ದಾಗ, ದೇವತೆಗಳು ಮತ್ತು ದಾನವರ ನಡುವಿನ ಹೋರಾಟದಲ್ಲಿ ಅಮೃತದ ನಾಲ್ಕು ಹನಿಯು ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಬಿದ್ದಿತು ಹೀಗೆ ಮೂರು ಪವಿತ್ರ ತೀರ್ಥಸ್ಥಳ ಜೊತೆಗೆ ಪ್ರಯಾಗರಾಜ್ ಕೂಡ ಒಂದು ಪವಿತ್ರ ತೀರ್ಥಸ್ಥಳವಾಗಿದೆ ಎಂದು ಕಂಬಳೇಶ್ವರ ಮಠ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.

ಪಟ್ಟಣದಿಂದ ಪ್ರಯಾಗರಾಜ್ ಕುಂಭಮೇಳಕ್ಕೆ ಹೊರಟ ಭಕ್ತರ ವಾಹನಕ್ಕೆ ವರುಣನಗರದ ಶರಣ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಎರಡು ಬಸ್ ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಪ್ರಯಾಗರಾಜ್‌ದಲ್ಲಿ ಜನವರಿ 13 ರಿಂದ ಪ್ರಾರಂಭವಾಗಿ ಫೆಬ್ರವರಿ 26 ರವರೆಗೆ ಮಹಾಕುಂಭಮೇಳ ನಡೆಯುತ್ತಿದ್ದು 144 ವರ್ಷಗಳ ಬಳಿಕ ಈ ಕುಂಭಮೇಳ ನಡೆಯುತ್ತಿದೆ ಎಂದರು. 
ಹಿಂದೂ ಪುರಾಣಗಳ ಪ್ರಕಾರ ಕುಂಭಮೇಳದಲ್ಲಿ ದೇವರುಗಳು ಭೂಮಿಗೆ ಇಳಿದು ಭಕ್ತರನ್ನು ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ ಜೊತೆಗೆ ಪ್ರಯಾಗರಾಜ್‌ ಈ ಸ್ಥಳದಲ್ಲಿ ಹರಿಯುವ ನದಿಯಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ನಾಗರಾಜ್ ಸಾಹುಕಾರ ಬಂಕಲಗಿ ಮಾತನಾಡಿ ಮಹಾಕುಂಭ ಮೇಳ ಕೇವಲ ಉತ್ಸವ ಮಾತ್ರವಲ್ಲ ಸಾವಿರಾರು ವರ್ಷಗಳ ಐತಿಹ್ಯ, ಪುರಾತನ ಇತಿಹಾಸ ಹೊಂದಿರುವ ಉತ್ಸಾಹಭರಿತ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ಈ ಉತ್ಸವವು ಪ್ರಾಚೀನ ಹಿಂದೂ ಪುರಾಣ ಮತ್ತು ಭಾರತದ ಶ್ರೀಮಂತ ಧಾರ್ಮಿಕ ಪರಂಪರೆಗೆ ಸಾಕ್ಷಿಯಾಗಿದೆ. ಚಿತ್ತಾಪುರದಿಂದ ಪ್ರಯಾಗರಾಜ್, ಅಯೋಧ್ಯ, ಕಾಶಿ, ಮತ್ತು ಗೋರಕಪೂರ ವರೆಗೆ ಎರಡು ಬಸ್ ವ್ಯವಸ್ಥೆ ಮೂಲಕ 60ಕ್ಕೂ ಅಧಿಕ ಭಕ್ತರು ಹೋಗುತ್ತಿದ್ದೇವೆ ಎಂದು ಹೇಳಿದರು.
ಇದೆ ವೇಳೆ ಕಲ್ಬುರ್ಗಿ ಘಟಕ-1ರ ವ್ಯವಸ್ಥಾಪಕ ಅಶೋಕ್ ದೊಡ್ಮನಿ, ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಸಯ್ಯದ್ ನಿಜ್ಮೊ ದಿನ್ ಚಿಸ್ತಿ, ರವರಿಗೆ ಭಕ್ತರು ಧನ್ಯವಾದಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಭಕ್ತರಾದ ಮಲ್ಲಿಕಾರ್ಜುನ ಪೂಜಾರಿ, ಶಾಂತಕುಮಾರ್ ಹತ್ತಿ, ಅನಿಲ್ ವಟ್ಟಡಗಿ, ಸಂತೋಷ ಕಲಾಲ್, ಬಸವರಾಜ ಬೊಮ್ಮನಳ್ಳಿ, ಅಶ್ವಥ್ ರಾಠೋಡ, ರಮೇಶ್ ಬೊಮ್ಮನಳ್ಳಿ, ಪಂಕಜಗೌಡ, ಚಂದ್ರು ಅಲ್ಲೂರ, ಮಲ್ಲಿಕಾರ್ಜುನ ಇಜೇರಿ,ಮಲ್ಲಿಕಾರ್ಜುನ ಪಡಶೆಟ್ಟಿ, ಚಂದ್ರು, ಸಂಜು ಪಲಾಫ್, ರಾಜಶೇಖರ ಬಳ್ಳಾ, ನಾಗರಾಜ್ ಸುಲ್ತಾನಪೂರ, ಪ್ರಭು ಬೊಮ್ಮನಳ್ಳಿ, ಸೇರಿದಂತೆ ಇತರರು ಇದ್ದರು.

ಮಂಗಳವಾರ, ಫೆಬ್ರವರಿ 4, 2025

ರಸ್ತೆ ದುರಸ್ತಿಗೆ ಸ್ಪಂದನೆ: ಗ್ರಾಪಂ ಅಧ್ಯಕ್ಷ ಸ್ಪಷ್ಟನೆ.

ಚಿತ್ತಾಪುರ: ಭಾಗೋಡಿ ಮತ್ತು ಮುಡಬೂಳ ರಸ್ತೆ ದುರಸ್ತಿ ಬಗ್ಗೆ ಜನವರಿ 30ಕ್ಕೆ ಅಧಿಕಾರ ವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ತಿಳಿದು ವರದಿಗಾರರ ಜೊತೆ ಭಾಗೋಡಿ ಗ್ರಾಪಂ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಜಗದೀಶ್ ಪಾಟೀಲ್ ಮಾತನಾಡಿ ಭಾಗೋಡಿಯಿಂದ ಡಿಗ್ರಿ ಕಾಲೇಜು ಮಾರ್ಗವಾಗಿ ಮತ್ತು ಮುಡಬೂಳ ಮಾರ್ಗವಾಗಿ ಚಿತ್ತಾಪುರ ಹೋಗುವ ರಸ್ತೆ ಹಾಗೂ ಭಾಗೋಡಿಯಿಂದ ಗುಂಡಗುರ್ತಿ ರಸ್ತೆ ದುರಸ್ತಿ ಬಗ್ಗೆ ಈಗಾಗಲೇ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ರವರಿಗೆ ಮನವಿ ಮಾಡಲಾಗಿದ್ದು ಸಚಿವರು ಸ್ಪಂದಿಸಿ ಅದೋಷ್ಟು ಬೇಗನೆ ರಸ್ತೆ ದುರಸ್ತಿ ಮಾಡಿಸುವ ಭರವಸೆ ನೀಡಿರುವುದಾಗಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...