ನಮ್ಮನ್ನು ರಕ್ಷಿಸುತ್ತಿದ್ದ ಹುಡೆ, ಅಗಸಿಗೆ ರಕ್ಷಣೆ ಇಲ್ಲದಂತಾಗಿದೆ.
ಪ್ರವಾಸೋದ್ಯಮ, ಪ್ರಾಚ್ಯವಸ್ತು ಮತ್ತು ಪುರಾತತ್ವ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ನಿರ್ಲಕ್ಷತನ. -ಜಗದೇವ ಎಸ್ ಕುಂಬಾರ ವಾಡಿ: ಶತ್ರು ಸೈನಿಕರು ಒಳ ನುಗ್ಗುವುದನ್ನು ಹಾಗೂ ದಾಳಿಗೆ ಪ್ರತ್ಯುತ್ತರ ನೀಡುವ ಉದ್ದೇಶದಿಂದ ಗ್ರಾಮದ, ಜನರ ರಕ್ಷಣೆಗಾಗಿ ಗ್ರಾಮದಲ್ಲಿ ಹುಡೆ ಮತ್ತು ಊರ ಮುಂದೆ ಅಗಸಿನಿ ರ್ಮಿಸಲಾಗುತ್ತಿತ್ತು ಎಂದು ಇತಿಹಾಸ ಹೇಳುತ್ತಿದೆ ಆದರೆ ಅಂದು ನಮ್ಮನ್ನು ರಕ್ಷಿಸುತ್ತಿದ್ದ ಹುಡೆ, ಅಗಸಿಗೆ ರಕ್ಷಣೆ ಇಲ್ಲದಂತಾಗಿದೆ. ಲಕ್ಷ್ಮಿಪುರವಾಡಿ ಈಗಿನ (ಗಾಂಧಿನಗರ) ಗ್ರಾಮದಲ್ಲಿ ಸುಮಾರು ವರ್ಷಗಳ ಹಳೆಯ ಹುಡೆ, ಅಗಸಿ ಇದ್ದು ಈಗ ಅವು ಅಳಿವಿನ ಅಂಚಿನಲ್ಲಿ ಇವೆ ಎಂದರೆ ಇದಕ್ಕೆಲ್ಲ ಕಾರಣ ಪ್ರವಾಸೋದ್ಯಮ, ಪ್ರಾಚ್ಯವಸ್ತು ಮತ್ತು ಪುರಾತತ್ವ ಹಾಗೂ ಪಂಚಾಯತ್‌ರಾಜ್ ಇಲಾಖೆಗಳ ನಿರ್ಲಕ್ಷ್ಯತನವೇ ಎಂಬುವುದು ತೋರುತ್ತಿದೆ. ಈ ಭಾಗದಲ್ಲಿ ಶಾತವಾಹನರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಳಚೂರ್ಯರು, ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದರು. ರಾಷ್ಟ್ರಕೂಟರು ಈಗಿನ ಮಳಖೇಡ (ಮಾನ್ಯಖೇಟ) ತಮ್ಮ ರಾಜಧಾನಿಯನ್ನಾಗಿ ಸಿಕೊಂಡಿದ್ದ ಸಮಯದಲ್ಲಿ ತಾಲೂಕು ಕೇಂದ್ರ ಸೇಡಂನಲ್ಲಿ ರಾಣಿವಾಸ, ಸಮೀಪದ ನೀಲಹಳ್ಳಿಯಲ್ಲಿ ಖಜಾನೆಯು ಇತ್ತು. ಚಿತ್ತಾಪುರ ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಟಂಕಣಶಾಲೆ ದಂಡೋತಿಯಲ್ಲಿ ಸೈನ್ಯದ ವಾಸಸ್ಥಳವಿತ್ತು. ಅಷ್ಟೇ ಅಲ್ಲದೆ ನಾಗವಿ ಎಲ್ಲಮ್ಮ ದೇವಾಲಯ ಹಾಗೂ ಹೊನಗುಂಟಾ ಚಂದ್ರಲಾ ಪರಮೇಶ್ವರಿ ದೇವಾಲಯ, ಮಹಬೂಬ್ ಸುಭಾನಿ ದರ್ಗಾ, ಚರ್ಚ್ ಗಳು...