ಸಾಹಿತ್ಯ ಬೆಳೆಸುವಲ್ಲಿ ಸಚಿವರ ಕೊಡುಗೆ ಅಪಾರ: ಡಾ.ಸಿದ್ದತೋಟೇಂದ್ರ.

ಚಿತ್ತಾಪೂರ: ಕ್ಷೇತ್ರದ ಶಾಸಕರು, ಸಚಿವರಾದ ಪ್ರಿಯಾಂಕ ಖರ್ಗೆ ಅವರಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಅಭಿರುಚಿ ಹಾಗೂ ಸಾಹಿತ್ಯ ಜ್ಞಾನ ಬೆಳೆಸಿಕೊಳ್ಳುವ ಆಸಕ್ತಿ ಇದೆ. ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಎಜುಕೇಶನ್ ಹಬ್ ಮಾಡಿದ್ದಾರೆ ಹಾಗೂ ಈ ಭಾಗದಲ್ಲಿನ ಕನ್ನಡ ಸಾಹಿತ್ಯ ಬೆಳೆಸುವಲ್ಲಿ ಸಚಿವರ ಅಪಾರವಾದ ಕೊಡುಗೆಯಿದೆ ಎಂದು ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠ ನಾಲವಾರದ ಪೂಜ್ಯ ಶ್ರೀ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಹೇಳಿದರು . ಪಟ್ಟಣದ ಬಜಾಜ್ ಕಲ್ಯಾಣ್ ಮಂಟಪ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ತಾಲೂಕು ಮಟ್ಟದ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಾಗಾವಿ ನಾಡು ಭವ್ಯ ಇತಿಹಾಸ ಹೊಂದಿದ್ದ ನಾಡಾಗಿದ್ದು ಇಲ್ಲಿನ 69 ಗುಡಿ ಅಂದಿನ ಪ್ರಾಚೀನ ವಿಶ್ವವಿದ್ಯಾಲಯವಾಗಿತ್ತು. ಇಲ್ಲಿ ದೇಶ ವಿದೇಶಗಳಿಂದ ಅಧ್ಯಯನ ಮಾಡಲು ಬರುತ್ತಿದ್ದರು ಇಂಥ ಪ್ರಾಚೀನ ಕಾಲದ ದತ್ತ ವೈಭವ ಮತ್ತೆ ಮರುಕಳಿಸಬೇಕಿದೆ ಎಂದು ಹೇಳಿ ಕನ್ನಡ ನಾನು ನುಡಿಯ ಬಗ್ಗೆ ಕೊಂಡಾಡಿದರು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ, ಮಾತನಾಡಿ ಈ ೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಸಮಾಜಕ್ಕೆ ಒಂದು ವಿಶೇಷವಾದ ಸಂದೇಶವನ್ನು ನೀಡಲು ಬಯಸುತ್ತೇನೆ ನಾಗಾವಿ ನಾಡಿನಲ್ಲಿ ಐತಿಹಾಸಿಕ ಸ್ಮಾರಕಗಳು, ಶಾಸನಗಳು, ದೊರ...