ಟ್ರಸ್ಟ್‌ಗೆ ಸಂಬಂಧಿಸಿದ ಜಮೀನು ಕಾನೂನು ಬಾಹಿರ ಮಾರಾಟ.
ಕಲಬುರಗಿ: ನಗರದ ಕೆಎಚ್‌ಬಿ ಕಾಲೋನಿ ಮಾಲಗತ್ತಿ ಭೂಮಿ ಮಂಡಳಿಂದ ಅಬ್ದುಲ್ ಶುಕೂರ್ ತಂದೆ ಮೊಹಮ್ಮದ್ ಮಹಮೂದ್ ಅಲಿ ಎಂಬುವರು ಮಾಮುಪುರಿ ವಾಲೆ ಎಂಬ ಹೆಸರಿನಿಂದ ಕರೆಯಲ್ಪಡುವ ಇವರು ಕಾನೂನಿನ ಬಾಹಿರವಾಗಿ, ಕೆಎಚ್‌ಬಿ ಸಿ.ಎ ಸೈಟ್ ನಂ.1 ಗ್ರಾಮ ಪಂಚಾಯತ ನಂ. ಸರ್ವೆ ನಂ.84/1 ಹಾಗೂ 84/2, ಸೈಟಿ ನಂ.1 ವಿಸ್ತೀರ್ಣ4376.80 ಚ. ಮೀಟರ, ಕೆ ಎಚ್ ಬಿ ಕಾಲೋನಿ ಮಾಲಗತ್ತಿ ಕಲಬುರಗಿ, ಈ ಜಮೀನನ್ನು ಟ್ರಸ್ಟ ಕಡೆಯಿಂದ ಖರೀದಿ ಮಾಡಿ ಕಾನೂನು ಬಾಹಿರವಾಗಿ ಸೈಟಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಪ್ರೆಸಿಡೆಂಟ್ ವರ್ಕಿಂಗ್ ಜರ್ನಾಲಿಸ್ಟ ಯೂನಿಯನ್ ಸೋಶಿಯಲ್ ಹಾಗೂ ವಲ್ವೇರ್ ಅಧ್ಯಕ್ಷ ಪಠಾನ ಸೂಫಿಯಾನ ಖಾನ ಆಗ್ರಹಿಸಿದ್ದಾರೆ.
ಮಾನ್ಯ ಜಿಲ್ಲಾ ಅಧಿಕಾರಿಗಳಿಗೆ ಮನವಿ ಮಾಡಿ ಮಾತನಾಡಿದ ಅವರು ಈ ಖರೀದಿ ಪತ್ರದ ನೊಂದಣಿ ಸಂಖ್ಯೆ ಜಿಎಲ್‌ಬಿ-1-07748--2021–22, ಸಿ.ಡಿ. ನಂ.ಜಿಎಲ್‌ಬಿಡಿ!146 ದಿನಾಂಕ 18-09-2021ರಂದು ಖರೀದಿ ಮಾಡಿರುತ್ತಾರೆ, ಈ ಜಮೀನು ಟ್ರಸ್ಟ ಜಮೀನು ಆದ ಕಾರಣ ಇದನ್ನು ಯಾವುದೆ ವ್ಯಕ್ತಿ ಸ್ವಯಂಗಾಗಿ ಖರೀದಿ ಮಾಡುವುದು ಕಾನೂನಿನ ಬಾಹಿರವಾಗಿರುತ್ತದೆ ಇದನ್ನು ಖರೀದಿಮಾಡಬೇಕಾದರೆ ಇದಕ್ಕೆ ತನ್ನದೆ ಆದ ಟ್ರಸ್ಟ್ ಗುರಿ ಉದ್ದೇಶಗಳು ಇರುತ್ತವೆ ಅವು ಯಾವುದೇ ಅನುಸರಿಸದೆ ಟ್ರಸ್ಟ್‌ನ ನಿಯಮಗಳನ್ನು ಉಲ್ಲಂಘಿಸಿದ ಯಾರೆ ಆಗರಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಖರೀದಿದಾರರು ಈ ಜಮೀನನ್ನು ಖರೀದಿಸಿದ ನಂತರ ಈ ಜಮೀನಿನ ಮೇಲೆ 25 ನಿವೇಶನಗಳನ್ನು ರಚಿಸಿ ಇವುಗಳನ್ನು ಮಾರಾಟ ಮಾಡುತ್ತಿದ್ದಾರೆ, ಆದ ಕಾರಣ ಅಬ್ದುಲ ಶುಕೂರ ತಂದೆ ಮಹ್ಮದ ಮೆಹಮೂದ ಅಲಿ ಇವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕೆಂದು ಹಾಗೂ ಈ ಎಲ್ಲಾ 25 ನಿವೇಶನಗಳ ಎಲ್ಲಾ ಆದೇಶಗಳನ್ನು ಹಾಗೂ ಮಾರಾಟಗಳನ್ನು ರದ್ದುಗೋಳಿಸಬೇಕೆಂದು ಆಗ್ರಹಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ