ಸಾಹಿತ್ಯ ಬೆಳೆಸುವಲ್ಲಿ ಸಚಿವರ ಕೊಡುಗೆ ಅಪಾರ: ಡಾ.ಸಿದ್ದತೋಟೇಂದ್ರ.


ಚಿತ್ತಾಪೂರ: ಕ್ಷೇತ್ರದ ಶಾಸಕರು, ಸಚಿವರಾದ ಪ್ರಿಯಾಂಕ ಖರ್ಗೆ ಅವರಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಅಭಿರುಚಿ ಹಾಗೂ ಸಾಹಿತ್ಯ ಜ್ಞಾನ ಬೆಳೆಸಿಕೊಳ್ಳುವ ಆಸಕ್ತಿ ಇದೆ. ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಎಜುಕೇಶನ್ ಹಬ್ ಮಾಡಿದ್ದಾರೆ ಹಾಗೂ ಈ ಭಾಗದಲ್ಲಿನ ಕನ್ನಡ ಸಾಹಿತ್ಯ ಬೆಳೆಸುವಲ್ಲಿ ಸಚಿವರ ಅಪಾರವಾದ ಕೊಡುಗೆಯಿದೆ ಎಂದು ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠ ನಾಲವಾರದ ಪೂಜ್ಯ ಶ್ರೀ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಬಜಾಜ್ ಕಲ್ಯಾಣ್ ಮಂಟಪ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ತಾಲೂಕು ಮಟ್ಟದ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಾಗಾವಿ ನಾಡು ಭವ್ಯ ಇತಿಹಾಸ ಹೊಂದಿದ್ದ ನಾಡಾಗಿದ್ದು ಇಲ್ಲಿನ 69 ಗುಡಿ ಅಂದಿನ ಪ್ರಾಚೀನ ವಿಶ್ವವಿದ್ಯಾಲಯವಾಗಿತ್ತು. ಇಲ್ಲಿ ದೇಶ ವಿದೇಶಗಳಿಂದ ಅಧ್ಯಯನ ಮಾಡಲು ಬರುತ್ತಿದ್ದರು ಇಂಥ ಪ್ರಾಚೀನ ಕಾಲದ ದತ್ತ ವೈಭವ ಮತ್ತೆ ಮರುಕಳಿಸಬೇಕಿದೆ ಎಂದು ಹೇಳಿ ಕನ್ನಡ ನಾನು ನುಡಿಯ ಬಗ್ಗೆ ಕೊಂಡಾಡಿದರು.


ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ, ಮಾತನಾಡಿ ಈ ೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಸಮಾಜಕ್ಕೆ ಒಂದು ವಿಶೇಷವಾದ ಸಂದೇಶವನ್ನು ನೀಡಲು ಬಯಸುತ್ತೇನೆ ನಾಗಾವಿ ನಾಡಿನಲ್ಲಿ ಐತಿಹಾಸಿಕ ಸ್ಮಾರಕಗಳು, ಶಾಸನಗಳು, ದೊರೆತಿವೆ ಈ ನೆಲದ ಶ್ರೀಮಂತಿಕೆ, ಪರಂಪರೆಯ ಇತಿಹಾಸವನ್ನು ಹೊಸ ಪೀಳಿಗೆಗೆ ತಿಳಿಸಬೇಕಾದರೆ ಈ ಭಾಗದ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಬೇಲೂರು ಹಳೇಬೀಡಿನ ಇತಿಹಾಸ ನಮ್ಮ ಮಕ್ಕಳಿಗೆ ಬೇಕಾಗಿಲ್ಲ. ಅದಕ್ಕಿಂತ ಎರಡು ಪಟ್ಟು ಇತಿಹಾಸ ಈ ಭಾಗದಲ್ಲಿದೆ ಹೀಗಾಗಿ ನಮ್ಮ ಮಕ್ಕಳು ಓದುವ ಪಠ್ಯಪುಸ್ತಕದಲ್ಲಿ ಈ ಭಾಗದ ಇತಿಹಾಸ ಅಳವಡಿಸಬೇಕು ಎಂದು ಒತ್ತಾಯಿಸಿದರು.


ವೇದಿಕೆಯ ಮೇಲೆ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅಪ್ಪಗೇರೆ ಸೋಮಶೇಖರ್, ನೀಲಮ್ಮ ಕತ್ನಳ್ಳಿ, ಲಿಂಗಾರೆಡ್ಡಿ ಗೌಡ ಭಾಸ ರೆಡ್ಡಿ, ನಾಗರೆಡ್ಡಿ ಪಾಟೀಲ್, ಬಾಗನಗೌಡ ಸಂಕನೂರ್, ಭೀಮಣ್ಣ ಸಾಲಿ, ಸೋಮಶೇಖರ್ ಪಾಟೀಲ್, ಶಿವಾನಂದ್ ಪಾಟೀಲ್, ಮಲ್ಲಿಕಾರ್ಜುನ್ ಕಾಳಗಿ, ಮಲ್ಲಿನಾಥ್ ಇಂದೂರ, ಮುಕ್ತಾರ್ ಪಟೇಲ್, ಬಸವರಾಜ್ ಬಳೂಂಡಗಿ, ಶಂಭುಲಿಂಗ ಗುಂಡಗುರ್ತಿ, ಕಾಶಿನಾಥ್ ಗುತ್ತೇದಾರ್, ರಮೇಶ್ ಮರಗೂಳ, ವೇದಿಕೆ ಮೇಲೆ ಇದ್ದರು.
ವೀರಣ್ಣ ಸುಲ್ತಾನಪುರ, ಮಹಮ್ಮದ್ ಇಬ್ರಾಹಿಂ, ಮಲ್ಲಿಕಾರ್ಜುನ್ ಬೊಮ್ಮನಹಳ್ಳಿಕರ್, ವೆಂಕಟೇಶ್ ಬಳಿಚಕ್ರ, ಶ್ರೀಮತಿ ಪೂಜಾ ಬಂಕಲಗಿ, ನರಸಪ್ಪ ಚಿನ್ನಕಟ್ಟಿ, ಕಾಶಿರಾಯ್ ಕಲಾಲ್, ವೀರಭದ್ರಪ್ಪ ಹುಮನಾಬಾದ್, ನರಸಿಂಹ ಆಲ್ಮೇಲ್ಕರ್, ಮನೋಹರ್ ಹಡಪದ, ಕರಣಕುಮಾರ ಅಲ್ಲೂರ, ಸಾಬಣ್ಣ ಭರಾಟಿ, ಆನಂದ್ ಕಲ್ಲಕ್, ಇದ್ದರು. ನಾಡಗೀತೆ ಮತ್ತು ರೈತ ಗೀತೆಯನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ಸಂಗೀತ ಪ್ರಾಧ್ಯಾಪಕರಾದ ಸಿದ್ಧಾರ್ಥ ಚಿಮ್ಮಾ ಇದ್ಲಾಯಿ ನಡೆಸಿಕೊಟ್ಟರು ಅದೇ ರೀತಿ ಜನಕಲಾ ಸಮಿತಿ ವಾಡಿ ವತಿಯಿಂದ ಸಂವಿಧಾನ ಪೀಠಿಕೆ ಗಾಯನ ನಡೆಯಿತು. ಮಲ್ಲಿಕಾರ್ಜುನ್ ಮುಡಬೂಳಕರ್ ನಿರೂಪಿಸಿದರು. ಜಗದೇವ್ ದಿಗ್ಗಾಂವಕರ್ ಸ್ವಾಗತಿಸಿದರು. ಬಸಪ್ಪ ಯಂಭತ್ನಾಳ ವಂದನಾರ್ಪಣೆ ನಡೆಸಿಕೊಟ್ಟರು.


ಮಾತೃಭಾಷೆಯಲ್ಲಿ ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು, ಪ್ರತಿಯೊಂದು ಇಲಾಖೆ ವಾಣಿಜ್ಯ ಮಾಳಿಗೆ ಹೆಸರಿನ ನಾಮ ಫಲಕಗಳು ಕನ್ನಡದಲ್ಲಿ ಬರೆದು ಕನ್ನಡಮಯವಾಗುವಂತೆ ಮನೋ ಧರ್ಮ ಬೆಳೆಸಿಕೊಳ್ಳಬೇಕು ಎಲ್ಲಿದ್ದರೇನು ಎಂತಿದ್ದರೇನು ಹೇಗಿದ್ದರೇನು? ನಾವು ಎಲ್ಲರೂ ಕನ್ನಡವ ಬಳಸಿ ಬೆಳೆಸಬೇಕು ಮಾತನಾಡಬೇಕು ಪ್ರತಿ ಕ್ಷೇತ್ರದಲ್ಲಿ ಬರವಣಿಗೆ ಕನ್ನಡ ಮಾಯವಾಗಬೇಕು ಎಂದರು

             - ನಿಂಗಪ್ಪ ಮಲ್ಕನ್ ಕೊಲ್ಲೂರ
      ಸಮ್ಮೇಳನ ಅಧ್ಯಕ್ಷರು. ಸಾಹಿತಿಗಳು ಚಿತ್ತಾಪುರ


ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವರ್ಷವಿಡಿ ತಾಲೂಕಿನ ಅತ್ಯಂತ ಕವಿಗೋಷ್ಠಿಗಳು ಕಾವ್ಯ ಸಮ್ಮೇಳನಗಳನ್ನು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪರಿಷತ್ತು ಕೆಲಸ ಮಾಡುತ್ತಿದೆ. ೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ತೇರನ್ನು ನಿಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಗಿ ಎಳೆದಿದ್ದೇನೆ ಎಂದರು.

            - ವೀರೇಂದ್ರಕುಮಾರ ಕೊಲ್ಲೂರು
         ಅಧ್ಯಕ್ಷರು ತಾಲೂಕು ಕಸಾಪ ಚಿತ್ತಾಪುರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.