ನಿರ್ಣಯಗಳು ಕೈಗೊಳ್ಳದೆ ಮುಕ್ತಾಯಗೊಂಡ ೪ನೇ ಸಾಹಿತ್ಯ ಸಮ್ಮೇಳನ.

   4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭವ್ಯ ಮೆರವಣಿಗೆಯ ಸಾರೋಟಿನಲ್ಲಿ ಯಾರು ಇಲ್ಲದ ದೃಶ್ಯ.

ಚಿತ್ತಾಪುರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ೪ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಹಿರಂಗ ಅಧಿವೇಶನ ಮಾಡದೇ ನಿರ್ಣಯಗಳನ್ನು ಕೈಗೊಳ್ಳದೇ ಮುಕ್ತಾಯಗೊಂಡಿರುವುದು ಸಾಹಿತ್ಯಾಭಿಮಾನಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಜನರಲ್ಲಿ ಕನ್ನಡ ನಾಡು ನುಡಿ,ನೆಲ,ಜಲ ಭಾಷೆಯ ಬಗ್ಗೆ ಜಾಗೃತಿ ಉಂಟು ಮಾಡುವುದು ಹಾಗೂ ಕನ್ನಡಾಭಿಮಾನ ಮೂಡಿಸುವುದು ಜೊತೆಗೆ ಕನ್ನಡ ನಾಡಿನ ಶ್ರೀಮಂತಿಗೆ ಮತ್ತು ಇತಿಹಾಸ ಬಗ್ಗೆ ಪರಿಚಯಿಸುವ ಕೆಲಸ ಮಾಡುವ ಮೂಲಕ ಸಮ್ಮೇಳನದ ಕೊನೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಂಡು ಅವುಗಳ ಅನುಷ್ಠಾನಕ್ಕೆ ಸರಕಾರಕ್ಕೆ ವರದಿ ಸಲ್ಲಿಸುವುದು ಕನ್ನಡ ಸಾಹಿತ್ಯ ಪರಿಷತ್ತಿನ ನಿಯಮಾವಳಿಯಾಗಿದೆ, ಆದರೆ ತಾಲೂಕು ಕಸಾಪ ಅಧ್ಯಕ್ಷರು ಪರಿಷತ್ತಿನ ನಿಯಮಗಳನ್ನೇ ಉಲ್ಲಂಘಿಸಿ ತಮ್ಮ ಮನ ಬಂದಂತೆ ವರ್ತಿಸಿರುವುದು ಕಂಡುಬಂದಿದೆ.

4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜವಿದ್ದು ಪರಿಷತ್ತಿನ ಧ್ವಜ ಇಲ್ಲದೇ ಇರುವುದು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪರಿಷತ್ತಿನ ದ್ವಜಾರೋಹಣ ಮಾಡುವುದು ನಿಯಮವಿದೆ ಆದರೆ ಇಲ್ಲಿನ ಕಸಾಪ ಅಧ್ಯಕ್ಷರು ಕೇವಲ ರಾಷ್ಟ್ರದ್ವಜಾರೋಹಣ ಮತ್ತು ನಾಡ ದ್ಜಜಾರೋಹಣ ನೆರವೇರಿಸಿ ಪರಿಷತ್ತಿನ ದ್ವಜಾರೋಹಣ ಮಾಡದೇ ಪರಿಷತ್ತಿನ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುವ ಮೂಲಕ ಪರಿಷತ್ತಿನ ಘನತೆ ಗೌರವಕ್ಕೆ ದಕ್ಕೆ ತಂದಿದ್ದಾರೆ.

ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನು ಕಸಾಪ ಜಿಲ್ಲಾಧ್ಯಕ್ಷರು ಮತ್ತು ತಾಲೂಕು ಅಧ್ಯಕ್ಷರು ಸಾರೋಟಿನಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸಮ್ಮೇಳನದ ಸ್ಥಳಕ್ಕೆ ಕರೆತರುವುದು ಸಂಪ್ರದಾಯ, ಆದರೆ ಬಜಾಜ್ ಕಲ್ಯಾಣ ಮಂಟಪದ ಆವರಣ ಇನ್ನೂ ದೂರ ಇರುವಾಗಲೇ ಜಿಲ್ಲಾಧ್ಯಕ್ಷರು ಮತ್ತು ತಾಲೂಕು ಅಧ್ಯಕ್ಷರು ರಥದಿಂದ ಇಳಿದು ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಗೂ ನಾ ಡ್ರೈವರ್ ಹಾಡಿಗೆ ನೃತ್ಯ ಮಾಡಿದರು. ರಥದಲ್ಲಿದ್ದ ಸರ್ವಾಧ್ಯಕ್ಷರು ಅವರು ಇಳಿದು ನೃತ್ಯದಲ್ಲಿ ಭಾಗಿಯಾದರು.ಸರ್ವಾಧ್ಯಕ್ಷರನ್ನು ಸಮ್ಮೇಳನ ಸ್ಥಳದವರೆಗೂ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಗೌರವಯುತದಿಂದ ವೇದಿಕೆ ಕರೆತರುವ ಸಂಪ್ರದಾಯವನ್ನು ಗಾಳಿಗೆ ತೂರಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.