ಸಮ್ಮೇಳನ ಆಯೋಜನೆಯ ಸ್ವಷ್ಟನೆ ನೀಡಲಿ: ನಾಲವಾರಕರ್ ಆಗ್ರಹ.
ಚಿತ್ತಾಪುರ: ಜಿಲ್ಲೆಯಲ್ಲಿ ಬರಗಾಲ ಆವರಿಸಿರುವುದರಿಂದ ಜಿಲ್ಲೆಯ ಯಾವುದೇ ತಾಲೂಕುಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆವಾಗಿರುವುದಿಲ್ಲ. ಆದರೆ ಯಾವ ಕಾರಣಕ್ಕಾಗಿ ಚಿತ್ತಾಪುರ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಿರುವ ಬಗ್ಗೆ ಸ್ವಷ್ಟನೆ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ರಾಜ್ಯ ವಕ್ತಾರ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯದಲ್ಲಿ ಬರಗಾಲ ಘೋಷಣೆಯಾಗಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ ಹೀಗಾಗಿ ಹಂಪಿ ಉತ್ಸವ, ಮೈಸೂರು ದಸರಾ ಉತ್ಸವಗಳನ್ನು ಸರಳ ರೀತಿಯಲ್ಲಿ ಆಚರಣೆಗೆ ರಾಜ್ಯ ಸರಕಾರ ಬದ್ಧವಾಗಿದ್ದು ಅಲ್ಲದೇ ಮಂಡ್ಯ ಜಿಲ್ಲೆಯಲ್ಲಿ ನಡೆಯಬೇಕಾದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರದ್ದು ಮಾಡಿರುವ ಮಾದರಿಯಲ್ಲಿ ಚಿತ್ತಾಪುರ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಕೂಡಾ ಮುಂದೂಡಬೇಕು ಎಂದರು
ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಿಗೆ ಮಾಹಿತಿ ನೀಡದೇ, ಕನ್ನಡಪರ ಹೋರಾಟಗಾರರನ್ನು ಹಾಗೂ ಸಾಹಿತಿಗಳನ್ನು ಹೊರಗಿಟ್ಟು ಏಕ ಪಕ್ಷೀಯವಾಗಿ ನಡೆದುಕೊಂಡು ಬರೀ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಅಹ್ವಾನಿಸಿದ್ದರಿಂದ ಇದು ಸಾಹಿತ್ಯ ಸಮ್ಮೇಳನವಲ್ಲ ಕಾಂಗ್ರೆಸ್ ಸಮ್ಮೇಳನವಾಗಿದೆ ಎಂದು ಆರೋಪಿಸಿದರು.
ಉತ್ಸವಗಳಿಗೆ ಬಳಸುವ ಹಣವನ್ನು ರೈತರ ಸಂಕಷ್ಟಕ್ಕೆ ಬಳಸಲಾಗುವುದು ಎಂದು ಸರಕಾರ ಹೇಳಿದೆ ಹೀಗಿರುವಾಗ ಚಿತ್ತಾಪುರ ಸಮ್ಮೇಳನಕ್ಕೆ ಹಣ ಎಲ್ಲಿಂದ ಬಂದಿದೆ ಎಂಬುದನ್ನು ಹಾಗೂ ಕನ್ನಡ ಭವನ ಯಾಕೆ ನೆನಗುದಿಯಲ್ಲಿದೆ ಎಂಬುದು ಸಚಿವ ಪ್ರಿಯಾಂಕ್ ಖರ್ಗೆ ಸ್ವಷ್ಟಪಡಿಸಬೇಕು. ಕಸಾಪ ಅಧ್ಯಕ್ಷರು ಸಮ್ಮೇಳನದ ಅಮಂತ್ರಣ ಪತ್ರಿಕೆಯಲ್ಲಿ ಪರಿಷತ್ತಿನ ದ್ಜಜಾರೋಹಣ ಕೈ ಬಿಟ್ಟು ಪರಿಷತ್ತಿನ ನಿಯಮಕ್ಕೆ ದಕ್ಕೆ ತಂದಿದ್ದಾರೆ, ಅಲ್ಲದೇ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಅವರ ಹೆಸರು ಕೈ ಬಿಟ್ಟಿದ್ದಾರೆ ಹಾಗೂ ನಾಗಾವಿ ನಾಡಿನ ಅಕ್ಷರ ಜಾತ್ರೆಗೆ ಬನ್ನಿ ಎಂದು ಹೇಳಿ ನಾಗಾವಿ ಯಲ್ಲಮ್ಮ ದೇವಿಯ ಚಿತ್ರ ಹಾಕದೇ ಅವಮಾನಿಸಿರುವುದು ಖಂಡನೀಯ ಎಂದರು.
ಮಂಡ್ಯ ಜಿಲ್ಲೆಯಲ್ಲಿ ನಡೆಯಬೇಕಾದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರದ್ದು ಮಾಡಿದ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಶಿ ಅವರು ಯಾವ ಮುಖ ಇಟ್ಟುಕೊಂಡು, ಯಾವ ಉದ್ದೇಶಕ್ಕಾಗಿ ಚಿತ್ತಾಪುರ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಉದ್ಘಾಟನೆಗೆ ಆಗಮಿಸುತ್ತಿದ್ದಾರೆ ಇದೆಂಥ ವಿಪರ್ಯಸ ಸಂಗತಿ, ಇದರಿಂದ ರಾಜ್ಯಕ್ಕೆ ಯಾವ ಸಂದೇಶ ನೀಡುವಿರಿ ರಾಜ್ಯಾಧ್ಯಕ್ಷರೇ ಉತ್ತರ ನೀಡಿ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕರವೇ ಜಿಲ್ಲಾ ಗೌರವಾಧ್ಯಕ್ಷ ರವಿ ವಾಲಿ, ತಾಲೂಕು ಅಧ್ಯಕ್ಷ ಮಂಜುನಾಥ ಸ್ವಾಮಿ,ಮುಖಂಡ ಚಂದ್ರಕಾಂತ ನಾಟೀಕಾರ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ