ವಿಪಕ್ಷ ಸ್ಥಾನ ರದ್ದತಿಗೆ ಆಗ್ರಹಿಸಿ ಮೇ. 31ಕ್ಕೆ ಬೃಹತ್ ಪ್ರತಿಭಟನೆ.

ವಿಪಕ್ಷ ಸ್ಥಾನ ರದ್ದತಿಗೆ ಆಗ್ರಹಿಸಿ ಮೇ. 31ಕ್ಕೆ ಬೃಹತ್ ಪ್ರತಿಭಟನೆ.

ಚಿತ್ತಾಪುರ: ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ವೈಯಕ್ತಿಕವಾಗಿ ನಿಂದನೆ ಮಾಡಿ, ಅಸಂವಿಧಾನಿಕವಾಗಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿಯ ವಿಧಾನ ಪರಿಷತ್ ಸದಸ್ಯತ್ವ ಹಾಗೂ ವಿಪಕ್ಷ ಸ್ಥಾನ ರದ್ದುಗೊಳಿಸುವಂತೆ ಆಗ್ರಹಿಸಿ ಕಲಬುರಗಿ ನಾಗರಿಕ ಹೋರಾಟ ಸಮಿತಿಯಿಂದ ಮೇ 31 ರಂದು ನಗರದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಮುಖಂಡ ಮಲ್ಲಪ್ಪ ಹೊಸಮನಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೃಹತ್ ಪ್ರತಿಭಟನೆಯ ನಿಮಿತ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11ಕ್ಕೆ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಆದ್ದರಿಂದ ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ನಾರಾಯಣಸ್ವಾಮಿ ಒಬ್ಬ ಜವಾಬ್ದಾರಿತ ಸ್ಥಾನದಲ್ಲಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಾಯಿ ಎಂದು ಸಂಭೋದಿಸಿರುವುದು ಅವರ ಬೌದ್ಧಿಕ ಮಟ್ಟ ಹಾಗೂ ಸಂಸ್ಕೃತಿ ಎಂತಹದ್ದು ಎಂಬುದು ತೋರಿಸುತ್ತದೆ ಎಂದು ಹೇಳಿದರು.

ಮುಖಂಡ ದಿನೇಶ್‌ ದೊಡ್ಡಮನಿ ಮಾತನಾಡಿ, ನಾರಾಯಣಸ್ವಾಮಿ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಗುಲಾಮಗಿರಿ ಮಾಡುತ್ತಾ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಅವರ ರಾಜಕೀಯ ಬೆಳವಣಿಗೆ ಸಹಿಸದೆ ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು ಅವರನ್ನು ವೈಯಕ್ತಿಕವಾಗಿ ನಿಂದನೆ ಮಾಡಿ ರಾಜಕೀಯ ತೇಜೋವಧೆ ಮಾಡುತ್ತಿದ್ದ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದ್ದಾರೆ.

ಮುಖಂಡರಾದ ಪ್ರಕಾಶ್ ಮೂಲ ಭಾರತಿ, ರಾಜು ಕಪನೂರ, ಸುರೇಶ್ ಹಾದಿಮನಿ, ಗುಂಡಪ್ಪ ಲಂಡನಕರ್, ಪ್ರಕಾಶ್ ನಾಗನಹಳ್ಳಿ, ದೇವಿಂದ್ರ ಸಿನ್ನೂರ್, ಅಶೋಕ ವೀರ ನಾಯಕ, ಶಿವಕಾಂತ್ ಬೆಣ್ಣೂರಕರ್, ಮಲ್ಲಿಕಾರ್ಜುನ ಬೆಣ್ಣೂರಕ‌ರ್, ಸುಭಾಷ್ ಕಲ್ಮರಿ, ಶಿವಯೋಗಿ ರಾವೂರ, ಜಗನ್ನಾಥ ಮುಡಬೂಳಕ‌ರ್, ಸಾಗರ್ ಚಿಟ್ಟೇಕಾರ, ಪ್ರೇಮ್ ಸಾಗರ, ಬಸವರಾಜ ಮುಡಬೂಳಕರ್, ನಾಗೇಂದ್ರ ಬುರ್ಲಿ, ರಾಜಪ್ಪ ಹುಂಡೇಕಾರ, ಯಲ್ಲಾಲಿಂಗ ಕಲ್ಲಕ್, ದೇವಿಂದ್ರ ಭಾಗೋಡಿ, ಪೀರಪ್ಪ ಸಾಲಹಳ್ಳಿ, ಶೈಲೇಶ್ ಬೆಣ್ಣೂರಕ‌ರ್, ಶರಣು ತಲಾಟಿ, ಬಸವರಾಜ ಮುಡಬೂಳಕ‌ರ್, ಲೋಹಿತ್ ಮುದ್ದಡಗಿ, ವಿಶ್ವನಾಥ ಬೀದಿಮನಿ, ಪೃಥ್ವಿ ಸಾಗರ ಸೇರಿದಂತೆ ಇತರರು ಇದ್ದರು. ಮಲ್ಲಿಕಾರ್ಜುನ ಮುಡಬೂಳಕರ್ ಸ್ವಾಗತಿಸಿದರು, ಉದಯಕುಮಾರ್ ಸಾಗರ ನಿರೂಪಿಸಿ ವಂದಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.

ಮನೆಗಳ ಹಂಚಿಕೆ ಪ್ರಕ್ರಿಯೆ ಮುಂದೂಡಲಾಗಿದೆ

ರಾಜ್ಯೋತ್ಸವ ಪ್ರಶಸ್ತಿಗೆ ಏಳು ಜನ ಸಾಧಕರ ಆಯ್ಕೆ.

ಬಜಾಜ್ ಕಾಂಪ್ಲೆಕ್ಸ್ ನಲ್ಲಿ ಅನೈತಿಕ ಚಟುವಟಿಕೆ.

ತಾಲ್ಲೂಕು ಅಧಿಕಾರಿಗಳ ವಿರುದ್ಧ ಸಚಿವರ ಅಸಮಾಧಾನ.

ಪ್ರಯಾಗರಾಜ್ ಪವಿತ್ರ ತೀರ್ಥಸ್ಥಳ: ಕಂಬಳೇಶ್ವರ ಶ್ರೀ.

ತಹಸೀಲ್ ಕಛೇರಿಯಲ್ಲಿ ಪೋಲೀಸ ಪೇದೆ ಸಾವು.

ಮಗನ ಸಾಧನೆಗೆ ತಂದೆ-ತಾಯಿ ಮೆಚ್ಚುಗೆ.