ಪೌರ ಕಾರ್ಮಿಕರ ಮುಷ್ಕರದ ಎಫೆಕ್ಟ್: ಎಲ್ಲಿ ನೋಡಿದರು ಕಸವೋ ಕಸ, ಗಬ್ಬೆದ್ದು ನಾರುತ್ತಿದೆ ನಾಗಾವಿ ನಾಡು.

ಪೌರ ಕಾರ್ಮಿಕರ ಮುಷ್ಕರದ ಎಫೆಕ್ಟ್: ಎಲ್ಲಿ ನೋಡಿದರು ಕಸವೋ ಕಸ, ಗಬ್ಬೆದ್ದು ನಾರುತ್ತಿದೆ ನಾಗಾವಿ ನಾಡು.

ಚಿತ್ತಾಪುರ: ನಾಗಾವಿ ನಾಡು ಎಂದೆ ಪ್ರಸಿದ್ಧಿ ಪಡೆದ ಚಿತ್ತಾಪುರ ಪಟ್ಟಣದಲ್ಲಿ ಪುರಸಭೆ ವತಿಯಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಪೌರಕಾರ್ಮಿಕರು ನಡೆಸ್ತಿರೋ ಮುಷ್ಕರದಿಂದ ಪಟಣವೆಲ್ಲಾ ಗಬ್ಬೆದ್ದು ನಾರುತ್ತಿದೆ. ರಸ್ತೆ ಗುಡಿಸೋರಿಲ್ಲ, ಮನೆ ಮನೆಯಲ್ಲಿ ಸಂಗ್ರಹವಾಗಿರುವ ಕಸ ಕೇಳೋರಿಲ್ಲ. ಕಟ್ಟಿರುವ ಒಳ ಚರಂಡಿಗಳು ಸರಿಪಡಿಸುವವರಿಲ್ಲ. ಸ್ವಚ್ಛತಾ ವಾಹನಕ್ಕೆ ಚಾಲಕರೇ ಇಲ್ಲದೆ ನಗರವೆಲ್ಲಾ ದುರ್ನಾತ ಬೀರುತ್ತಿದೆ.

ಪಟ್ಟಣದ ಹೃದಯ ಭಾಗ ಸೇರಿದಂತೆ ಇಡೀ ಪ್ರಮುಖ ಮುಖ್ಯ ವೃತ್ತಗಳಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗದೇ ಇಡೀ ಪಟ್ಟಣ ಗಬ್ಬೆದ್ದು ನಾರುತ್ತಿದೆ. ಪಟ್ಟಣದ ಸ್ವಚ್ಛತಾ ಕಾರ್ಯಕ್ಕೆ ಪಾರ್ಶ್ವವಾಯು ಹೊಡೆದಂತಾಗಿದೆ. ನಿತ್ಯ 7 ಟನ್ ವಿಲೇವಾರಿಯಾಗುತ್ತಿದ್ದ ಕಸ, ಈಗ ನಗರದಲ್ಲಿಯೇ ಬಿದ್ದಿದ್ದು, ಕಳೆದ ಮೂರು ದಿನಗಳಲ್ಲಿ 21ಕ್ಕೂ ಹೆಚ್ಚು ಟನ್ ಕಸ ಸಂಗ್ರಹವಾಗಿ ವಿಲೇವಾರಿಯಾಗದೇ ಎಲ್ಲರ ಮನೆ, ರಸ್ತೆಯಲ್ಲಿಯೇ ಕೊಳೆತು, ಇಡೀ ನಗರ ದುರ್ವಾಸನೆ ಬೀರುತ್ತಿದೆ.
ಪುರಸಭೆ ಕಾರ್ಯಲಯದ ಪೌರ ಕಾರ್ಮಿಕರು,ನೀರು ಸರಬರಾಜುಗಾರರು,ವಾಹನ ಚಾಲಕರು, ಲೋಡರ್ಸ್, ಇಲಾಖೆಯ ಖಾಯಂ ಸಿಬ್ಬಂದಿ ಮತ್ತು ಹೊರ ಗುತ್ತಿಗೆ ಸಿಬ್ಬಂದಿ ವರ್ಗ ಸೇರಿ ಒಟ್ಟು 95 ಮಂದಿ ಮುಷ್ಕರಕ್ಕೆ ಬೆಂಬಲ ನೀಡಿದ್ದರಿಂದ ತರಕಾರಿ ಮಾರುಕಟ್ಟೆ, ಒಂಟ್ ಕಮಾನ್, ಸುಪ್ರಸಿದ್ಧ  ಶ್ರೀ ನಾಗಾವಿ ದೇವಸ್ಥಾನ, ಚಿತ್ತಾವಲಿ ದರ್ಗಾ, ಬಸ್ ನಿಲ್ದಾಣ, ತಹಸೀಲ್ ಕಾರ್ಯಲಯ ಸುತ್ತ ಮುತ್ತಲು, ಮತ್ತು ಲಾಡ್ಜಿಂಗ್ ಕ್ರಾಸ್ನಾ ಪರಿಸ್ಥಿತಿ ಶೋಚನೀಯವಾಗಿದೆ.
ಹೋಟೆಲ್‌ಗಳಲ್ಲಿ ಸಂಗ್ರಹವಾಗುತ್ತಿರುವ ಭಾರೀ ಪ್ರಮಾಣದ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಕೆಲವರು ರಾತ್ರಿ ವೇಳೆ ನಿರ್ಜನ ಪ್ರದೇಶಗಳಲ್ಲಿ ಕಸ ವಿಲೇವಾರಿ ಮಾಡುತ್ತಿದ್ದು, ಈಗ ಎಲ್ಲೆಂದರಲ್ಲಿ ಕಸದ ರಾಶಿ ಕಾಣುತ್ತಿದೆ. ಕೊಡಲೇ ಪುರಸಭೆ ಇಲಾಖೆ ಅಥವಾ ತಾಲೂಕು ಆಡಳಿತ ಈ ಸಮಸ್ಯೆ ಬಗೆಹರಿಸುವಲ್ಲಿ ಕ್ರಮಕ್ಕೆ ಮುಂದಾಗಬೇಕು.ಇಲ್ಲವಾದಲ್ಲಿ ಚಿತ್ತಾಪೂರ ಪಟ್ಟಣ ಒಂದು ವಾರದಲ್ಲಿ ಗಬ್ಬು ನಾರುವ ಮೂಲಕ ಪಟ್ಟಣದ ಜನತೆ ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗುವ ಪರಿಸ್ಥಿತಿ ಬಂದ್ರೂ ಬರಬಹುದಾಗಿದೆ.

"ಎಲ್ಲಾ ನಗರ ಸ್ಥಳಿಯ ಸಂಸ್ಥೆಯ ನೌಕರರನ್ನು ರಾಜ್ಯ ಸರ್ಕಾರ ನೌಕರರೆಂದು ಪರಿಗಣಿಸಿ ಮತ್ತು ಜ್ಯೋತಿ ಸಂಜೀವಿನಿ, ಕೆಜಿಐಡಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯವನ್ನು ನೀಡಬೇಕೆಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ನೇತೃತ್ವದಲ್ಲಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಈ ಸಮಸ್ಯೆ ಪಟ್ಟಣದಲ್ಲಿ ಆಗುತ್ತಿದೆ ಮುಖ್ಯಮಂತ್ರಿಗಳು ಸಭೆ ಕರೆದಿದ್ದಾರೆ ಎರಡು ದಿನಗಳಲ್ಲಿ ಸಮಸ್ಯೆ ಇತ್ಯರ್ಥ ಆದ್ರೇ ಎಲ್ಲಾ ಸರಿ ಆಗುತ್ತದೆ ಎಂದರು ಒಂದು ವೇಳೆ ಆಗದಿದ್ದರೆ ಮೇಲಾಧಿಕಾರಿಗೆ ಸೂಚನೆಯಂತೆ ನಡೆಯುವುದಾಗಿ ತಿಳಿಸಿದ್ದಾರೆ".

- ಮನೋಜಕುಮಾರ ಗುರಿಕಾರ
ಪುರಸಭೆ ಮುಖ್ಯಾಧಿಕಾರಿ ಚಿತ್ತಾಪುರ.

=====================================

"ಪಟ್ಟಣದಲ್ಲಿ ಕರ್ತವ್ಯಕ್ಕೆ ಪೌರ ನೌಕರರು ಗೈರಾಗುವ ಮೂಲಕ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು. ಸಂಘದ ಬೇಡಿಕೆಗಳನ್ನು ಈಡೇರಿಸುವವರಿಗೆ  ಮುಷ್ಕರ ನಿಲ್ಲಿಸಲು ಸಾಧ್ಯವಿಲ್ಲ ಎಂದರು".

- ಸಾಬಣ್ಣ ಸಿ.ಕಾಶಿ
ತಾಲ್ಲೂಕು ಅಧ್ಯಕ್ಷರು, ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಚಿತ್ತಾಪೂರ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಿಜೆಪಿ ಕಾರ್ಯಕರ್ತರಿಂದ ವಾಹನಕ್ಕೆ ಹಾಲಿನ ಅಭಿಷೇಕ.

ಎತ್ತಿನ ಗಾಡಿಗೆ ಪಿಕಪ್ ಗಾಡಿ ಡಿಕ್ಕಿ:8 ಜನರಿಗೆ ಗಾಯ.

ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ.

ಮನೆಗಳ ಹಂಚಿಕೆ ಪ್ರಕ್ರಿಯೆ ಮುಂದೂಡಲಾಗಿದೆ

ರಾಜ್ಯೋತ್ಸವ ಪ್ರಶಸ್ತಿಗೆ ಏಳು ಜನ ಸಾಧಕರ ಆಯ್ಕೆ.

ಬಜಾಜ್ ಕಾಂಪ್ಲೆಕ್ಸ್ ನಲ್ಲಿ ಅನೈತಿಕ ಚಟುವಟಿಕೆ.

ತಾಲ್ಲೂಕು ಅಧಿಕಾರಿಗಳ ವಿರುದ್ಧ ಸಚಿವರ ಅಸಮಾಧಾನ.

ಪ್ರಯಾಗರಾಜ್ ಪವಿತ್ರ ತೀರ್ಥಸ್ಥಳ: ಕಂಬಳೇಶ್ವರ ಶ್ರೀ.

ತಹಸೀಲ್ ಕಛೇರಿಯಲ್ಲಿ ಪೋಲೀಸ ಪೇದೆ ಸಾವು.

ಮಗನ ಸಾಧನೆಗೆ ತಂದೆ-ತಾಯಿ ಮೆಚ್ಚುಗೆ.