ರಕ್ಷಣೆ ನೀಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲ: ಸಜ್ಜನಶೆಟ್ಟಿ ಆಕ್ರೋಶ.
ಚಿತ್ತಾಪುರ: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ರಕ್ಷಣೆ ನೀಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳದಲ್ಲಿ 400-500 ಜನ ಪೊಲೀಸರು ಮತ್ತು ಜಿಲ್ಲೆಯ ಎಲ್ಲಾ ಹಂತದ ಪೊಲೀಸ್ ಅಧಿಕಾರಿಗಳು ಇದ್ದರೂ ಛಲವಾದಿ ನಾರಾಯಣಸ್ವಾಮಿ ಅವರಿಗೆ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ ಪೊಲೀಸರೇ ಹೆದರಿಸಿ ಬೆದರಿಸಿ ಸಚಿವರ ಕ್ಷಮೆ ಕೋರುವಂತೆ ಒತ್ತಡ ಹೇರಿದ್ದಾರೆ ಎಂದು ಹೇಳಿದರು. ತಿರಂಗಾ ಯಾತ್ರೆಯಲ್ಲಿ ಛಲವಾದಿ ನಾರಾಯಣಸ್ವಾಮಿ ಭಾಗಿಯಾಗದಂತೆ ಪೊಲೀಸರು ಮತ್ತು ಗುಂಡಾಗಳು ಸೇರಿ ಮೊದಲೇ ಪ್ರೀಪ್ಲಾನ್ ಮಾಡಿದ್ದರು ಎಂದರು.
ಅಪರೇಷನ್ ಸಿಂಧೂರ ಯಶಸ್ವಿಯಾದ ಹಿನ್ನಲೆಯಲ್ಲಿ ಭಾರತೀಯ ಸೈನಿಕರಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೈತಿಕ ಬೆಂಬಲ ನೀಡಲು ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ವೇದಿಕೆ ವತಿಯಿಂದ ಪಟ್ಟಣದಲ್ಲಿ ಬುಧವಾರ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು ಇದೊಂದು ಪಕ್ಷಾತೀತವಾಗಿ ಕಾರ್ಯಕ್ರಮವಾಗಿತ್ತು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗಮಿಸಿದ್ದರು ಇದನ್ನು ಸಹಿಸಿಕೊಳ್ಳದ ಕಾಂಗ್ರೆಸ್ ಪಕ್ಷದ ಮರಳು ಮಾಫಿಯಾ, ಲಿಕ್ಕರ್ ಮಾಫಿಯಾ ಹಾಗೂ ರೌಡಿ ಶೀಟರ್ ಗಳು ಗಂಡಾಗಳ ಜೊತೆಗೆ ಪೊಲೀಸರು ಸೇರಿ ಪ್ರವಾಸಿ ಮಂದಿರದಲ್ಲಿ ಐದಾರು ತಾಸು ದಿಬ್ಬಂಧನ ಮಾಡಿ ಟಾರ್ಚರ್ ನೀಡಿದ್ದಾರೆ. ಪೊಲೀಸರು ತಮ್ಮ ಸೇವೆ ಮರೆತು ಗುಲಾಮರಂತೆ ವರ್ತಿಸಿ ಸಚಿವರ ಕಾವಲುಗಾರರಾಗಿದ್ದಾರೆ, ಅವರು ಪೊಲೀಸ್ ಇಲಾಖೆಯಲ್ಲಿರಲು ಲಾಯಕ್ಕಿಲ್ಲ, ತಿರಂಗಾ ಯಾತ್ರೆಯಲ್ಲಿ ಛಲವಾದಿ ನಾರಾಯಣಸ್ವಾಮಿ ಭಾಗಿಯಾಗದಂತೆ ನೋಡಿಕೊಳ್ಳುವುದು ಹಾಗೂ ಯಾತ್ರೆ ಹಾಳು ಮಾಡುವುದೇ ಅವರ ಉದ್ದೇಶವಾಗಿತ್ತು. ಅಂಬೇಡ್ಕರ್ ದೇಶಕ್ಕೆ ಸಂವಿಧಾನ ಬರೆದರೆ ಪ್ರಿಯಾಂಕ್ ಖರ್ಗೆ ಚಿತ್ತಾಪುರಕ್ಕೆ ರಿಪಬ್ಲಿಕ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಮಾತನಾಡಿ, ಶಾಂತಿ, ಪ್ರೀತಿ ವಿಶ್ವಾಸಕ್ಕೆ ಹೆಸರಾದ ಚಿತ್ತಾಪುರದಲ್ಲಿ ಗುಂಡಾ ಪ್ರವೃತ್ತಿ ನಡೆದಿರುವುದು ಖಂಡನೀಯ. ನಮ್ಮೆದುರು ಯಾರು ಮಾತನಾಡಬಾರದು ಯಾರು ಬೆಳೆಯಬಾರದು ಎನ್ನುವ ಸಂಸ್ಕೃತಿ ಗುರುಮಠಕಲ್ ನಲ್ಲಿತ್ತು ಅದು ಈಗ ಚಿತ್ತಾಪುರದಲ್ಲಿ ತಂದಿದ್ದಾರೆ. ಬಿಜೆಪಿಯಲ್ಲಿ ದಲಿತರ ಬೆಳವಣಿಗೆ ಸಚಿವ ಪ್ರಿಯಾಂಕ್ ಖರ್ಗೆ ಸಹಿಸುತ್ತಿಲ್ಲ ಇದಕ್ಕೆ ಅಂಬಾರಾಯ ಅಷ್ಠಗಿ ಮೇಲೆ ಗುಂಡಾಗಿರಿ ನಡೆಸಿರುವುದೇ ಸಾಕ್ಷಿ ಎಂದು ಹೇಳಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹಗುರವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಆಗ ನಮ್ಮ ನಾಯಕರು ಮಾದ್ಯಮ ಮೂಲಕ ಕೌಂಟರ್ ನೀಡಿದ್ದರು ಹಾಗೆ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಗೆ ಕೌಂಟರ್ ನೀಡುವುದನ್ನು ಬಿಟ್ಟು ಗುಂಡಾಗಿರಿ ಮಾಡಿ ಭಯದ ವಾತಾವರಣ ನಿರ್ಮಾಣ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಕಿಡಿ ಕಾರಿದರು.
ಸಂವಿಧಾನಿಕ ಹುದ್ದೆಯಲ್ಲಿದ್ದ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ಮುಖಂಡರು ಅಶ್ಲೀಲ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರೂ ಸಹ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ, ಛಲವಾದಿ ನಾರಾಯಣಸ್ವಾಮಿ ಹೇಳಿಕೆ ತಪ್ಪಾಗಿದ್ದರೆ ಮಾನನಷ್ಟ ಮೊಕದ್ದಮೆ ಹಾಕಲಿ ಅದನ್ನು ಬಿಟ್ಟು ಗುಂಡಾಗಳಿಗೆ ಬಿಟ್ಟು ಗುಂಡಾಗಿರಿ ನಡೆಸುವುದಕ್ಕೆ ಕುಮ್ಮಕ್ಕು ನೀಡಿದ್ದೆ ಸಚಿವ ಪ್ರಿಯಾಂಕ್ ಖರ್ಗೆ ಕಾರಣ ಎಂದು ಆಪಾದಿಸಿದರು.
-ಚಂದ್ರಶೇಖರ ಅವಂಟಿ
ಬಿಜೆಪಿ ಹಿರಿಯ ಮುಖಂಡ ಚಿತ್ತಾಪೂರ.
=====================================
ಚಿತ್ತಾಪುರದಲ್ಲಿ ಪೊಲೀಸರ ಗುಂಡಾ ವರ್ತನೆ ಹೆಚ್ಚಾಗಿದೆ, ಭಾರತ್ ಮಾತಾ ಕೀ ಜೈ ಎನ್ನುವರನ್ನು ತಡೆಹಿಡಿದ ಪೊಲೀಸರು ಛಲವಾದಿ ನಾರಾಯಣಸ್ವಾಮಿ ವಿರುದ್ಧ ಅಸಂವಿಧಾನಿಕ ಪದಗಳ ಬಳಕೆ ಮಾಡಿ ನಿಂದಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಕೂಡಲೇ ಕೈಗೊಳ್ಳಬೇಕು ಎಂದರು.
-ಮಲ್ಲಿಕಾರ್ಜುನ ಎಮ್ಮೆನೋರ್
ಜಿಲ್ಲಾಧ್ಯಕ್ಷರು,ಬಿಜೆಪಿ ಹಿಂದುಳಿದ ವರ್ಗಗಳ ಚಿತ್ತಾಪುರ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ಸುರೇಶ್ ಬೆನಕನಳ್ಳಿ, ಶಿವರಾಮ ಚವ್ಹಾಣ, ರಮೇಶ್ ಕಾಳನೂರು ಇದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ