ಟಿ-20 ವಿಶ್ವಕಪ್ ಜಯ: ವಾಡಿಯಲ್ಲಿ ವಿಜಯೋತ್ಸವ.

ಚಿತ್ತಾಪುರ: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ಮತಕ್ಷೇತ್ರದ ವಾಡಿ ಪಟ್ಟಣದ ನ್ಯೂ ಟೌನ್‌ನಲ್ಲಿ ‘ಬೆಳಗಿನ ಬಳಗ’ದ ಸದಸ್ಯರು ಭಾರತಾಂಬೆಗೆ ಜೈಕಾರ ಹಾಕುವ ಮೂಲಕ ಅದ್ದೂರಿಯಾಗಿ ವಿಜಯೋತ್ಸವ ಆಚರಿಸಿದರು.

ಬೆಳಗ್ಗೆ ಒಗ್ಗೂಡಿದ ಬಳಗದ ಸದಸ್ಯರು ಭಾರತದ ಗೆಲುವನ್ನು ಪರಸ್ಪರ ಅಭಿನಂದಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಅವರು, "ವಿಶ್ವಕಪ್ ಫೈನಲ್ಸ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿ ವಿಶ್ವವಿಜೇತವಾಗಿ ಹೊರಹೊಮ್ಮಿರುವುದು ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದೆ. ಕೋಟ್ಯಂತರ ಭಾರತೀಯರ ಖುಷಿಯನ್ನು ಇಮ್ಮಡಿಗೊಳಿಸಿದ ಭಾರತದ ಯುವ ಕ್ರಿಕೆಟ್ ಪಡೆಯ ಕ್ರೀಡಾಸ್ಫೂರ್ತಿಯು ಜಗತ್ತಿನ ಕ್ರೀಡಾಪಟುಗಳಿಗೆ, ಕ್ರೀಡಾ ಪ್ರೇಮಿಗಳಿಗೆ ಹಾಗೂ ಯುವಕರಿಗೆ ಮಾದರಿಯಾಗಿದೆ. ವಿಜೇತ ತಂಡಕ್ಕೆ ನಮ್ಮ ಹೃದಯಪೂರ್ವಕ ಧನ್ಯವಾದಗಳು," ಎಂದು ಹರ್ಷ ವ್ಯಕ್ತಪಡಿಸಿದರು.

ಈ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ಬೆಳಗಿನ ಬಳಗದ ಪ್ರಮುಖರಾದ ಜಯದೇವ ಜೋಗಿಕಲಮಠ, ಕಾಶಿನಾಥ ಶೆಟಗಾರ, ಬಸವರಾಜ ಕೇಶ್ವರ, ಅಮೃತಪ್ಪ ದಿಗ್ಗಾಂವ, ಶ್ರೀನಿವಾಸ ಅಣ್ಣೆ, ಸತೀಶ ಸಾವಳಗಿ, ವಿಠಲ ರಾಠೋಡ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.

Jtv kannada

ಜನತೆಯ ಸುದ್ದಿ ವಾಹಿನಿ, ನೇರ ದಿಟ್ಟ ನಿರಂತರ.

إرسال تعليق

أحدث أقدم