ಸೋಮವಾರ, ಮಾರ್ಚ್ 9, 2026

ಶಿಸ್ತು, ಮೌಲ್ಯಗಳೇ ಯಶಸ್ಸಿನ ಮೆಟ್ಟಿಲು: ಜಗದೇವ ಕುಂಬಾರ

ಚಿತ್ತಾಪೂರ: ವಿದ್ಯಾರ್ಥಿ ಜೀವನದಲ್ಲಿ ಪ್ರಾಥಮಿಕ ಶಿಕ್ಷಣವು ಬುನಾದಿಯಿದ್ದಂತೆ. ಈ ಶಾಲೆಯಲ್ಲಿ ನೀವು ಕಲಿತ ಶಿಸ್ತು, ಸಮಯ ಪ್ರಜ್ಞೆ ಮತ್ತು ಮೌಲ್ಯಗಳನ್ನು ಮುಂದಿನ ದಿನಗಳಲ್ಲೂ ಪಾಲಿಸಿ. ಉತ್ತಮ ಪ್ರಜೆಗಳಾಗಿ ಬೆಳೆದು ಸಮಾಜಕ್ಕೆ ಮಾದರಿಯಾಗಿ," ಎಂದು ಮಾತೋಶ್ರೀ ಕಿರಿಯ ಪ್ರಾಥಮಿಕ ಶಾಲೆಯ ಕಾರ್ಯದರ್ಶಿಯಾದ ಜಗದೇವ ಎಸ್ ಕುಂಬಾರ ಹೇಳಿದರು.

ಪಟ್ಟಣದ ಮಾತೋಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 5ನೇ ತರಗತಿಯ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ  ವಿದ್ಯಾದೇವತೆ ಶಾರದಾ ಮಾತೆ ಹಾಗೂ ಸರಸ್ವತಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪ ನಮನಗಳನ್ನು ಅರ್ಪಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣದ ಒಂದು ಹಂತವನ್ನು ಯಶಸ್ವಿಯಾಗಿ ಮುಗಿಸಿ, ಉನ್ನತ ಶಿಕ್ಷಣದತ್ತ ಹೆಜ್ಜೆ ಇಡುತ್ತಿದ್ದಾರೆ. ಈ ಬಿಳ್ಕೊಡುಗೆ ಸಮಾರಂಭವು ಕೇವಲ ಬೀಳ್ಕೊಡುವಿಕೆಯಲ್ಲ, ಇದು ಅವರ ಮುಂದಿನ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡುವ ಶುಭ ಸಂದರ್ಭವಾಗಿದೆ. ಮಾತೋಶ್ರೀ ಕಿರಿಯ ಪ್ರಾಥಮಿಕ ಶಾಲೆಯು ಕೇವಲ ಅಕ್ಷರ ಕಲಿಸಿದ ಸ್ಥಳವಲ್ಲ, ಇದು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಪವಿತ್ರ ದೇಗುಲವಾಗಿದೆ. ಇಲ್ಲಿ ಕಲಿತ ಸಂಸ್ಕಾರ ಮತ್ತು ಜ್ಞಾನದೊಂದಿಗೆ ನೀವು ಸಾಧನೆಯ ಶಿಖರ ಏರಬೇಕು, ನಿಮ್ಮ ಸಾಧನೆ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತರಲಿ," ಎಂದು ಹಾರೈಸಿದರು.

ಬಿಳ್ಕೊಡುಗೆ ಪಡೆಯುತ್ತಿರುವ 5ನೇ ತರಗತಿಯ ವಿದ್ಯಾರ್ಥಿಗಳಾದ ಪಿರ್ದೋಸ್, ಅಮಾನ್ ಮತ್ತು ಮಾನಸ ಮಾತನಾಡಿ, "ನಮಗೆ ಅಕ್ಷರ ಕಲಿಸಿ, ತಪ್ಪು ಮಾಡಿದಾಗ ತಿದ್ದಿ, ಪೋಷಕರಂತೆ ಪ್ರೀತಿಯಿಂದ ನೋಡಿಕೊಂಡ ನಮ್ಮ ಗುರುಗಳನ್ನು ನಾವು ಎಂದಿಗೂ ಮರೆಯುವುದಿಲ್ಲ. ಈ ಶಾಲೆಯ ನೆನಪುಗಳು ನಮ್ಮ ಜೀವನದ ಮಧುರ ಕ್ಷಣಗಳಾಗಿರುತ್ತವೆ. ನಮ್ಮನ್ನು ಈ ಹಂತಕ್ಕೆ ಬೆಳೆಸಿದ ಎಲ್ಲಾ ಶಿಕ್ಷಕರಿಗೂ ನಾವು ಚಿರಋಣಿಯಾಗಿದ್ದೇವೆ," ಎಂದು ಭಾವುಕವಾಗಿ ನುಡಿದರು.

ಈ ಸಂದರ್ಭದಲ್ಲಿ  ಶಾಲೆಯ ಶಿಕ್ಷಕರಾದ ಅಂಬರೀಶ್ ಭೋವಿ, ಶ್ರೀಮತಿ ಫೈಮುದ್ ಬೇಗಂ, ಸುಜಾತಾ ಕುಂಬಾರ, ಶಮ್ರೀನ್ ಬೇಗಂ, ಸುನಿತಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಭ್ರಮದಿಂದ ಜರುಗಿದ ಶ್ರೀ ಆಶಾಪುರ ಆಂಜನೇಯ ಸ್ವಾಮಿ ರಥೋತ್ಸವ ಹಾಗೂ ದೀಪೋತ್ಸವ

ಗುರುಮಿಟ್ಕಲ್: ಸುತ್ತಲಿನ ನಾಲ್ಕು ಗ್ರಾಮಗಳ ಮಧ್ಯದಲ್ಲಿರುವ ಕಾರಣಿಕ ಕ್ಷೇತ್ರ ಹಾಗೂ ಭಕ್ತರ ಆರಾಧ್ಯ ದೈವ ಶ್ರೀ ಆಶಾಪುರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರ...