ರಾವೂರ್: ತಾಲೂಕಿನ ರಾವೂರ್ ಗ್ರಾಮದ ಮಕ್ಕಾ ಮಜೀದ್‌ನಲ್ಲಿ ಈರಣ್ಣ ಗೌಡಾ ಯರಗಲ್ ಮತ್ತು ಗುರುಶಾಂತಲಿಂಗ್ ಆಗ್ರು ಅವರ ನೇತೃತ್ವದಲ್ಲಿ ಇತ್ತೀಚೆಗೆ ಸೌಹಾರ್ದತೆಯ ಇಫ್ತಿಯಾರ್ ಪಾರ್ಟಿಯನ್ನು ಅತ್ಯಂತ ಸಂಭ್ರಮದಿಂದ ಆಯೋಜಿಸಲಾಗಿತ್ತು.
ಪವಿತ್ರ ರಂಜಾನ್ ಮಾಸದ ಅಂಗವಾಗಿ ಆಯೋಜಿಸಲಾಗಿದ್ದ ಈ ಕೂಟದಲ್ಲಿ ವಿವಿಧ ಸಮುದಾಯದ ಮುಖಂಡರು, ಗಣ್ಯರು ಹಾಗೂ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು. ಸೂರ್ಯಾಸ್ತದ ನಂತರ ಎಲ್ಲರೂ ಒಂದೇ ಪಂಕ್ತಿಯಲ್ಲಿ ಕುಳಿತು ಉಪವಾಸ ಮುರಿದು ಇಫ್ತಿಯಾರ್ ಸೇವಿಸಿದ್ದು, ಗ್ರಾಮದ ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆಗೆ ಸಾಕ್ಷಿಯಾಯಿತು.
ಭಾವೈಕ್ಯತೆಯ ಸಂದೇಶ:
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, "ನಮ್ಮ ಗ್ರಾಮದಲ್ಲಿ ನಾವು ಮೊದಲಿನಿಂದಲೂ ಅಣ್ಣ-ತಮ್ಮಂದಿರಂತೆ ಬದುಕುತ್ತಾ ಬಂದಿದ್ದೇವೆ. ಧರ್ಮ ಯಾವುದಾದರೂ ಮನುಷ್ಯತ್ವ ಒಂದೇ ಎಂಬ ಸಂದೇಶವನ್ನು ಇಂದಿನ ಈ ಕಾರ್ಯಕ್ರಮ ಸಾರುತ್ತಿದೆ. ಇದೇ ರೀತಿಯ ಒಗ್ಗಟ್ಟು ಮತ್ತು ಪ್ರೀತಿ ಮುಂದಿನ ದಿನಗಳಲ್ಲೂ ಮುಂದುವರಿಯಲಿ" ಎಂದು ಆಶಿಸಿದರು. ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ಗ್ರಾಮಸ್ಥರು ಸೌಹಾರ್ದತೆಯನ್ನು ಮೆರೆದರು.
ಇದೇ ವೇಳೆ ಗ್ರಾಮದ ಪ್ರಮುಖರಿಗೆ ಸನ್ಮಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು:
ಈ ಸೌಹಾರ್ದ ಕೂಟದಲ್ಲಿ ಕಾಂಗ್ರೆಸ್ ಮುಖಂಡರಾದ ಗುರುನಾಥ್ ಗುದ್ಗಲ್, ತಿಪ್ಪಣ್ಣ ವಗ್ಗರ್, ಮೋಹನ್ ಸುರೇ ಹಾಗೂ ವಕೀಲರಾದ ಬಸವರಾಜ್ ಮಾಕಾ ಪಾಲ್ಗೊಂಡಿದ್ದರು. ಅಲ್ಲದೆ ಪಂಡಿತ್ ಮುತಗಿ, ಗುರುಶಾಂತಲಿಂಗ್ ಕಿರಣಾ ಅಂಗಡಿ, ಗುರುಶಾಂತ್ ಈರಣ್ಣ ಗೌಡಾ, ಗುರುಶಾಂತಲಿಂಗ್ ಆಗ್ರು ರಾವೂರ್, ಗುರುನಾಥ ಬಿಲ್ವಾರ್ ಮತ್ತು ಇಮಾಮ್ ಸಾಬ್ ಮುಸಾವಾಲೆ ಉಪಸ್ಥಿತರಿದ್ದರು.
ಮಕ್ಕಾ ಮಜೀದ್ ಕಮಿಟಿ ಅಧ್ಯಕ್ಷರಾದ ಹಾಜಿಲಾಲ್ ಮುಸವಾಲೇ, ಬಂದಗಿಸಬ ಮದರಾ, ಮಶಾಕ್ ಸಾಬ್ ಸರಡಗಿ, ಅಲಹಜ್ ಜಾಫರಮೀಯಾ ಕರ್ನೂಲ್, ಹಾಜಿಕರಿಮ್ ಮೌಲಾನ, ಹಸನಪಟೇಲ್ ಮುಸ್ತೂರ್, ಅಲೀಷೇರ್ ದಂಡುತಿ ಸೇರಿದಂತೆ ಅನೇಕ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ: ಸಾಹೇಬಪಟೇಲ್ ಎಂ ಹಸರಗುಂಡಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ