ಜನತೆಯ ಸುದ್ದಿ ವಾಹಿನಿ

ಸೋಮವಾರ, ಮಾರ್ಚ್ 9, 2026

ಸಂಭ್ರಮದಿಂದ ಜರುಗಿದ ಶ್ರೀ ಆಶಾಪುರ ಆಂಜನೇಯ ಸ್ವಾಮಿ ರಥೋತ್ಸವ ಹಾಗೂ ದೀಪೋತ್ಸವ

ಗುರುಮಿಟ್ಕಲ್: ಸುತ್ತಲಿನ ನಾಲ್ಕು ಗ್ರಾಮಗಳ ಮಧ್ಯದಲ್ಲಿರುವ ಕಾರಣಿಕ ಕ್ಷೇತ್ರ ಹಾಗೂ ಭಕ್ತರ ಆರಾಧ್ಯ ದೈವ ಶ್ರೀ ಆಶಾಪುರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಥೋತ್ಸವ ಹಾಗೂ ದೀಪೋತ್ಸವ ಕಾರ್ಯಕ್ರಮಗಳು ಭಕ್ತಿ-ಭಾವ ಮತ್ತು ಸಡಗರ-ಸಂಭ್ರಮಗಳಿಂದ ಜರುಗಿದವು.

ಎಲೇರಿ, ಗೊಪ್ಲಾಪುರ್, ಗಣಾಪುರ್, ಆಶಾಪುರ್ ತಾಂಡಾ ಹಾಗೂ ಜೆ.ಬಿ. ತಾಂಡಾಗಳ ಕೇಂದ್ರ ಬಿಂದುವಾಗಿರುವ ಶ್ರೀ ಆಶಾಪುರ ಆಂಜನೇಯ ದೇವಸ್ಥಾನದ ರಥೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ರಥೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಬೆಳಗಿದ ದೀಪೋತ್ಸವ: ರಥೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ವಿಶೇಷ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ದೇವೇಂದ್ರಪ್ಪ ಮಾಸ್ತರ್ ಕಾಳೂರ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಗುರುಮಿಟ್ಕಲ್ ಅಧ್ಯಕ್ಷರಾದ ಶರಣಬಸಪ್ಪ ಕಾಳೂರ್  ಅವರ ನೇತೃತ್ವದಲ್ಲಿ ದೀಪೋತ್ಸವ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಗಣ್ಯರ ಉಪಸ್ಥಿತಿ: ಈ ಪುಣ್ಯ ಕಾರ್ಯಕ್ರಮದಲ್ಲಿ ದಿವಂಗತ ಶರಣಗೌಡ ಶಿವರಾಯ್ ಅವರ ಪುತ್ರ ಹಾಗೂ ಯಾದಗಿರಿಯ ನವ ನಂದಿ ಗುರುಕುಲ ಶಾಲೆಯ ಆಡಳಿತ ಮಂಡಳಿಯ ಸೋಮನಾಥ್ ರೆಡ್ಡಿ ಶಿವರಾಜ್, ಎಲೇರಿಯ ಬಸವರಾಜ್ ಗೌಡ ಶಿವರಾಜ್, ಚಂದ್ರಕಾಂತ್ ಗೌಡ ಎಲೇರಿ, ಶರಣಗೌಡ ಅಮಾಪ್ಯನೂರು, ಎಸ್.ಐ. ಹಣಮಂತ ಬೆಟ್ಟದ್, ಕಾಳೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶರಣಪ್ಪ ಕಾಳೂರು, ಪ್ರಮುಖರಾದ ಮಹೇಶ್ ಕಳೂರ್, ಗೌಡಪ್ಪ, ಮಾಳು ಬಳಗಾರ, ಬಸ್ಸು ಅತ್ತಿ ಗೂಡೂರ್, ಅಂತಪ್ಪ ದ್ಯಾವಮ್ಮನವರ್ ಸೇರಿದಂತೆ ಹಲವು ಗಣ್ಯರು ಹಾಗೂ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮೋದಿ-ಷಾ ಅಬ್ಬರಕ್ಕೆ ಬಂಗಾಳದ ಸರ್ವಾಧಿಕಾರಿ ಸರ್ಕಾರ ಧೂಳಿಪಟ; ಮಣಿಕಂಠ ರಾಠೋಡ.

ಚಿತ್ತಾಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರ ದಕ್ಷ ನಾಯಕತ್ವದ ಅಬ್ಬರಕ್ಕೆ ಪಶ್ಚಿಮ ಬಂಗಾಳದಲ್ಲಿ ಸರ್ವಾಧಿಕಾರಿಯಂತೆ ಮೆರೆಯುತ್ತಿದ...