BREAKING NEWS

ತಿಪ್ಪಣ್ಣಪ್ಪ ಕಮಕನೂರ್ ಜನ್ಮದಿನ: ರೋಗಿಗಳಿಗೆ ಹಣ್ಣು-ಹಂಪಲು ಊಟದ ವ್ಯವಸ್ಥೆ.

ಚಿತ್ತಾಪುರ: ಪ್ರಮುಖ ಕಾಂಗ್ರೆಸ್ ಮುಖಂಡರು ಹಾಗೂ ವಿಧಾನ ಪರಿಷತ್ ಸದಸ್ಯರಾದ (ಎಂಎಲ್‌ಸಿ) ತಿಪ್ಪಣ್ಣಪ್ಪ ಕಮಕನೂರ ಅವರ ಜನ್ಮದಿನದ ಅಂಗವಾಗಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ಹಾಗೂ ಊಟದ ವ್ಯವಸ್ಥೆ (ಅನ್ನಪ್ರಸಾದ) ಮಾಡುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನವನ್ನು ಆಚರಿಸಲಾಯಿತು.

ಕರ್ನಾಟಕ ಪ್ರದೇಶ ಕೋಲಿ ಸಮಾಜದ ಯುವ ಘಟಕದ ತಾಲೂಕಾಧ್ಯಕ್ಷರಾದ ಮಹೇಶ್ ಸಾತನೂರು ಅವರು ಈ ಸಂದರ್ಭದಲ್ಲಿ ಮಾತನಾಡಿ, "ತಿಪ್ಪಣ್ಣಪ್ಪ ಕಮಕನೂರ ಅವರು ಸಮಾಜದ ಏಳಿಗೆಗಾಗಿ ಹಾಗೂ ಸಾರ್ವಜನಿಕರ ಸೇವೆಗಾಗಿ ಸದಾ ಶ್ರಮಿಸುತ್ತಿರುವ ನಾಯಕರಾಗಿದ್ದಾರೆ. ಅವರ ಜನ್ಮದಿನದ ಅಂಗವಾಗಿ ಆಸ್ಪತ್ರೆಯ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಈ ಮಾನವೀಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಸಮಾಜದ ದಿಟ್ಟ ಹೋರಾಟಗಾರ ಎಂದರೆ ದಿವಂಗತ ವಿಠಲ್ ಹೇರೊರ ಅವರಂತೆ ಈಗ ಸಾಧ್ಯ ನಮ್ಮ ಕಮಕನೂರ ಸಾಹೇಬರು ಅವರು ಸಮಾಜಕ್ಕೆ ಮತ್ತಷ್ಟು ಸೇವೆ ಸಲ್ಲಿಸಲು ಭಗವಂತನು ಅವರಿಗೆ ಆಯುಷ್ಯ, ಆರೋಗ್ಯ ಕರುಣಿಸಲಿ" ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ರೇವಣಸಿದ್ದ ದೊಡ್ಡಮನಿ, ಶ್ರೀಕಾಂತ್ ಚಪಟ್ಲ, ಚನ್ನು ಸಾತನೂರು, ಮಲ್ಲಿನಾಥ ಪೂಜಾರಿ ರಾಜೋಳಾ, ಚನ್ನಬಸಪ್ಪ ತಳವಾರ್, ನಿಂಗಪ್ಪ ದಂಡಗುಂಡ, ರಾಜು ಯಾಗಪುರ್, ಶರಣಪ್ಪ ಹೊಸೂರ್, ಸಾಬು ಹೊಸಮನಿ, ರಾಜಕುಮಾರ ತಳವಾರ್ ಸೇರಿದಂತೆ ಕೋಲಿ ಸಮಾಜದ ಪ್ರಮುಖರು, ಮುಖಂಡರು ಹಾಗೂ ಯುವ ಕಾರ್ಯಕರ್ತರು ಉಪಸ್ಥಿತರಿದ್ದರು.

Share this:

ಕಾಮೆಂಟ್‌‌ ಪೋಸ್ಟ್‌ ಮಾಡಿ

 
Copyright © 2014 Jtv kannada. Designed by OddThemes