ಜನತೆಯ ಸುದ್ದಿ ವಾಹಿನಿ

ಬುಧವಾರ, ಜೂನ್ 3, 2026

ನಾಗರೆಡ್ಡಿ ಪಾಟೀಲ್ ಕರದಾಳಗೆ ಎಂಎಲ್‌ಸಿ ಸ್ಥಾನ ನೀಡಲು ಒತ್ತಾಯ.

​ಚಿತ್ತಾಪುರ: ಕಾಂಗ್ರೆಸ್ ಪಕ್ಷದಲ್ಲಿ ಕಳೆದ 20 ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಹಿರಿಯ ಮುಖಂಡ ನಾಗರೆಡ್ಡಿ ಪಾಟೀಲ್ ಕರದಾಳ ಅವರಿಗೆ ವಿಧಾನ ಪರಿಷತ್ತಿಗೆ (ಎಂಎಲ್‌ಸಿ) ನಾಮನಿರ್ದೇಶನ ಮಾಡಬೇಕು ಎಂದು ಸ್ಥಳೀಯ ಮುಖಂಡರು ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಹೈಕಮಾಂಡ್ ಅನ್ನು ಒತ್ತಾಯಿಸಿದರು.

​ಪಟ್ಟಣದ ಎಪಿಎಂಸಿಯ ಅಣ್ಣಾರಾವ ಪಾಟೀಲ ಅವರ ಅಡತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖಂಡರು ನಾಗರೆಡ್ಡಿ ಪಾಟೀಲ್ ಪರವಾಗಿ ಬ್ಯಾಟ್ ಬೀಸಿ ​ಎಪಿಎಂಸಿ ಮಾಜಿ ಅಧ್ಯಕ್ಷ ಡಾ. ಪ್ರಭುರಾಜ್ ಕಾಂತಾ ಮಾತನಾಡಿ, "ನಾಗರೆಡ್ಡಿ ಪಾಟೀಲ್ ಅವರು ಸ್ಥಳೀಯವಾಗಿ ಎಲ್ಲರ ಕೈಗೆ ಸುಲಭವಾಗಿ ಸಿಗುವಂತಹ ಸರಳ ಸಜ್ಜನಿಕೆಯ ನಾಯಕರಾಗಿದ್ದಾರೆ. ಎಲ್ಲಾ ಜಾತಿ ಜನಾಂಗವನ್ನು ಸಮಾನವಾಗಿ ಕೊಂಡೊಯ್ಯುವ ವಿಶಾಲ ಮನೋಭಾವ ಅವರದ್ದಾಗಿದೆ. ಈಗಾಗಲೇ ಈ ಭಾಗದಲ್ಲಿ ಹಿಂದುಳಿದ ವರ್ಗದವರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಈ ಬಾರಿ ಮೇಲ್ವರ್ಗದ ಜನಾಂಗಕ್ಕೆ ಎಂಎಲ್‌ಸಿ ಸ್ಥಾನ ನೀಡಬೇಕು. ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿರಂತರವಾಗಿ ದುಡಿದಿರುವ ನಾಗರೆಡ್ಡಿ ಅವರಿಗೆ ಪಕ್ಷ ಈ ಬಾರಿ ಕೂಲಿ ನೀಡಬೇಕು" ಎಂದು ವಿನಂತಿಸಿದರು.
​ಪುರಸಭೆ ಮಾಜಿ ಸದಸ್ಯ ವಿನೋದ್ ಗುತ್ತೇದಾರ್ ಮಾತನಾಡಿ, "ನಾಗರೆಡ್ಡಿ ಪಾಟೀಲ್ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವಂತೆ ಒತ್ತಾಯಿಸಿ ಚಿತ್ತಾಪುರ ಕ್ಷೇತ್ರದಿಂದ ನೂರಕ್ಕೂ ಅಧಿಕ ಬೆಂಬಲಿಗರು ಬುಧವಾರ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದು ಅಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಹಾಗೂ ರಾಜ್ಯದ ಸಚಿವರಾದ ಪ್ರಿಯಾಂಕ್ ಖರ್ಗೆ ಅವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು" ಎಂದು ಮಾಹಿತಿ ನೀಡಿದರು.

​ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಮಾತನಾಡಿ, "ನಾಗರೆಡ್ಡಿ ಪಾಟೀಲ್ ಅವರು ಕೇವಲ ರಾಜಕಾರಣಿಯಲ್ಲ, ಅವರೊಬ್ಬ ಶಿಕ್ಷಣ ಪ್ರೇಮಿ ಹಾಗೂ ಪಕ್ಷದ ಶಿಸ್ತಿನ ಸಿಪಾಯಿ. 2005ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ದಿಗ್ಗಾಂವ್ ಭಾಗದಲ್ಲಿ ಅವರು ಮಾಡಿದ ಜನಪರ ಕೆಲಸಗಳು ಇಂದಿಗೂ ಮಾದರಿಯಾಗಿವೆ. ಅವರ ಜನಸೇವೆಯನ್ನು ಪರಿಗಣಿಸಿ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಅವರಿಗೆ ಎಂಎಲ್‌ಸಿ ಸ್ಥಾನ ನೀಡಲೇಬೇಕು" ಎಂದು ಆಗ್ರಹಿಸಿದರು.

​ಇದೇ ಸಂದರ್ಭದಲ್ಲಿ ನ್ಯಾಯವಾದಿ ಎಸ್.ಎನ್. ಪಾಟೀಲ ಅವರು ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಚಂದ್ರಶೇಖರ ಸಾತನೂರ, ಸುವನರೆಡ್ಡಿ, ಶ್ರೀನಿವಾಸ ರೆಡ್ಡಿ ಪಾಲಪ್, ಶಾಮ್ ಮುಕೇದಾರ, ಶಿವರಾಜ್ ಪಾಳೇದ್, ಸಂತೋಷ ಚೌದರಿ, ನಾಗು ಕಲ್ಲಕ್, ಅನೀಲ್ ವಡ್ಡಡಗಿ, ರವಿ ಗೊಬ್ಬುರ್, ನೀಲಕಂಠ ಕರದಾಳ, ರವಿ ಸಾಗರ ಹೊಸಮನಿ, ರಾಮು ಗಡ್ಡಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಾಗರೆಡ್ಡಿ ಪಾಟೀಲ್ ಕರದಾಳಗೆ ಎಂಎಲ್‌ಸಿ ಸ್ಥಾನ ನೀಡಲು ಒತ್ತಾಯ.

​ಚಿತ್ತಾಪುರ: ಕಾಂಗ್ರೆಸ್ ಪಕ್ಷದಲ್ಲಿ ಕಳೆದ 20 ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಹಿರಿಯ ಮುಖಂಡ ನಾಗರೆಡ್ಡಿ ಪಾಟೀಲ್ ಕರದಾಳ ಅವರಿ...