ಮಂಗಳವಾರ, ಜನವರಿ 28, 2025

ಯುವ ಘಟಕ ವತಿಯಿಂದ ಬೃಹತ್ ಶೋಭಾಯಾತ್ರೆ.

ಚಿತ್ತಾಪುರ: ಬಸವಾದಿ ಶರಣರಲ್ಲಿ ನಿಜ ಶರಣ ಎನಿಸಿಕೊಂಡಿರುವ ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತ್ಯೋತ್ಸವದ ನಿಮಿತ್ಯ ತಾಲೂಕು ಕೋಲಿ ಸಮಾಜದ ಯುವ ಘಟಕ ಅಧ್ಯಕ್ಷ ರಾಜು ಹೋಳಿಕಟ್ಟಿ, ನಗರ ಅಧ್ಯಕ್ಷ ಬಸವರಾಜ ಮೈನಾಳಕರ್, ಬಸವರಾಜ ರಾಜೋಳ್ಳಿ , ಪ್ರಕಾಶ ಯಾಡಗೂಟ್ಟಿ, ಭಾಗಣ್ಣ ಹಳ್ಳಿ, ಜಗ್ಗು ಹಳ್ಳಿ, ನಾಗು ದಂಡಗುಂಡ, ಗೂಳಿ ಡಿಗ್ಗಿ, ಶಿವು ದಿಗ್ಗಾಂವ್ , ನಾಗು, ಗೌತಮ ಇತರರ ನೆತೃತ್ವದಲ್ಲಿ ಜ.28 ಇಂದು ಸಾಯಂಕಾಲ 4:30ಕ್ಕೆ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್‌ ಚಿಂಚನಸೂರು ಅವರು ಬೃಹತ್‌ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ ಜೊತೆಗೆ ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪಾ ಜಮಾದಾರ ಸೇರಿದಂತೆ ಸಮಾಜದ ಅನೇಕ ಹಿರಿಯರು ಭಾಗವಹಿಸಲಿದ್ದಾರೆ.

ಬೃಹತ್‌ ಶೋಭಾಯಾತ್ರೆಯಲ್ಲಿ ಮಹಿಳೆಯರ ಕುಂಭಕಳಸ, ಡೊಳ್ಳು ಕುಣಿತ, ಹಲಿಗೆ ವಾದನ ಶೋಭಾಯಾತ್ರೆಗೆ ಮೆರಗು ನೀಡಲಿದೆ. ಅಂಬಿಗರ ಚೌಡಯ್ಯನವರ ಮೂರ್ತಿ, ಮಾತೆ ಮಾಣಿಕೇಶ್ವರಿ, ಕೋಲಿ ಸಮಾಜದ ಧೀಮಂತ ಹೋರಾಟಗಾರ ದಿ.ವಿಠಲ್ ಹೇರೂರ ಭಾವಿಚಿತ್ರದ ಜೊತೆಗೆ ಅನೇಕ ಶರಣರ ಭಾವಚಿತ್ರವು ಅದ್ಧೂರಿಯಾಗಿ ಬೃಹತ್‌ ಶೋಭಾಯಾತ್ರೆ ಮೆರವಣಿಗೆ ನಡೆಯಲಿದ್ದು ಕೋಲಿ ಸಮಾಜದ ಬಾಂಧವರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ತಿಳಿಸಿದ್ದಾರೆ.

ಸೋಮವಾರ, ಜನವರಿ 27, 2025

ರೋಣದ ಅಧ್ಯಕ್ಷರಾಗಿ ಅವಿರೋಧ ಆಯ್ಕೆ.

ಚಿತ್ತಾಪುರ: ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷರಾಗಿ ನಿವೃತ್ತ ಶಿಕ್ಷಕ ರೇವಣಸಿದ್ದಪ್ಪ ರೋಣದ ಆವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ನಿವೃತ್ತ ನೌಕರರ ಸಭೆಯಲ್ಲಿ ಸರ್ವಸದಸ್ಯರ ಒಪ್ಪಿಗೆ ಮೇರೆಗೆ ಅಧ್ಯಕ್ಷರ ಆಯ್ಕೆ ಮಾಡಿದ್ದು ತಾಲೂಕು ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ಕಿಶನ್ ರಾಠೋಡ ಸೂಚಿಸಿದರು ಮೋನಯ್ಯ ಪಂಚಾಳ ಅನುಮೋದನೆ ಮಾಡಿದರು. 

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷರ ವಿಜಯಕುಮಾರ ಲೊಡ್ಡೆನೋರ ಖಜಾಂಚಿ ಮಲ್ಲಣ್ಣ ಮಾಡಬೂಳ, ಮಲ್ಲಿಕಾರ್ಜುನ ಮಲಕೂಡ, ಸುಭಾಷ್ ಮೆಂಗಜೀ ಆರೋಗ್ಯ ಇಲಾಖೆಯ ನಿಜಾಮೋದಿನ್, ಶಿವಾಜಿ ನಿಂಬೆಳಕರ, ಬಸವರಾಜ ಕಲಬುರ್ಗಿ ಬಾಗೋಡಿ, ಹಾಜಪ್ಪ ಶಹಾಬಾದ್, ಶಶಿಧರ, ಮಹ್ಮದ್ ಅಬ್ದುಲ್ ನಬಿ ರವಿ ಪೊತ್ದಾರ, ಇದ್ದರು.ಮಹಾದೇವಪ್ಪ ಉಪ್ಪಾರ ನಿರೂಪಿಸಿ, ಕಿಶನ್ ರಾಠೋಡ ವಂದಿಸಿದರು.

ಲುಂಬಿನಿ ಗಾರ್ಡನ್ ಲೋಕಾರ್ಪಣೆಗೊಳಿಸಿದ ಸಚಿವ ಪ್ರಿಯಾಂಕ್ ಖರ್ಗೆ.

ಚಿತ್ತಾಪುರ: ಕಲಬುರಗಿ ಜಿಲ್ಲೆಯ ಗ್ರಾಮೀಣ ಭಾಗದ ಅದರಲ್ಲೂ ಚಿತ್ತಾಪುರ ತಾಲೂಕಿನ ಜನರ ಮನೋರಂಜನೆಗಾಗಿ ಹಾಗೂ ವಾರದ ಕೊನೆ ದಿನದಲ್ಲಿ ಮಕ್ಕಳ ಆಟೋಪೋಹಾರಕ್ಕಾಗಿ ಒಂದು ಸುಸಜ್ಜಿತ ಉದ್ಯಾನವನದ ಸ್ಥಾಪನೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ತಾಲೂಕಿನ ಗುಂಡಗುರ್ತಿ ಗ್ರಾಮದ ಬಳಿ ಜನಾಕರ್ಷಕ ಲುಂಬಿನಿ ಉದ್ಯಾನವನವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು ಸುಮಾರು 10 ಎಕರೆ ವಿಸ್ತಾರ ಪ್ರದೇಶದಲ್ಲಿ ಅರಣ್ಯ ಇಲಾಖೆ ಹಾಗೂ ಡಿಎಂಎಫ್ ಅನುದಾನ ಅಂದಾಜು 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಉದ್ಯಾನವನ ವಿವಿಧ ಬಗೆಯ ಸೌಲಭ್ಯಗಳಿಂದ ಜನರನ್ನು ಆಕರ್ಷಿಸುವುದರ ಜೊತೆಗೆ ವಿಭಿನ್ನ ಪ್ರಬೇಧದ ಚಿಟ್ಟೆಗಳು ಹಾಗೂ ಮರಗಿಡಗಳು ಹಾಗೂ ಹಚ್ಚ ಹಸಿರಿನ ಹುಲ್ಲು ಮನಸಿಗೆ ಉಲ್ಲಾಸವನ್ನುಂಟು ಮಾಡುತ್ತವೆ ಮತ್ತು ಮಿಯಾವಾಕಿ ಅರಣ್ಯ ಚಿಟ್ಟೆ ಪಾರ್ಕ್, ಮರದ ಸೇತುವೆ, ಕಾರಂಜಿ, ವಿವಿಧ ಬಗೆಯ ಗಿಡಗಳು, ಹಸಿರು ಹುಲ್ಲಿನ ಹೊದಿಕೆ, ಮಕ್ಕಳ ಆಟದ ಸಾಮಾಗ್ರಿಗಳು, ವಾಟರ್ ಫಾಲ್ಸ್ ಇತ್ಯಾದಿ ಉದ್ಯಾನವನದ ಪ್ರಮುಖ ಆಕರ್ಷಣೆಯಾಗಿವೆ ಎಂದರು.

ಎಂಎಲ್‌ಸಿಗಳಾದ ತಿಪ್ಪಣ್ಣಪ್ಪ ಕಮಕನೂರು,ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಜಿಪಂ ಸಿಇಒ ಭಂವ‌ರ್ ಸಿಂಗ್ ಮೀನಾ, ಎಸ್.ಪಿ ಅಡ್ಡರು ಶ್ರೀನಿವಾಸಲು, ಸೇಡಂ ಸಹಾಯಕ ಆಯುಕ್ತ
ಪ್ರಭು ರೆಡ್ಡಿ, ತಹಶೀಲ್ದಾರ್ ನಾಗಯ್ಯ ಹಿರೇಮಠ, ಸಿಸಿಎಫ್‌'ಗಳಾದ ಸುಮೀತ್ ಕುಮಾರ ಪಾಟೀಲ್, ಚೇತನ್ ಗಸ್ತಿ, ಸಾಗರ ತವಡೆ, ಎಸಿಎಫ್ ಮುನೀರ್ ಅಹ್ಮದ್, ಆರ್‌'ಎಫ್‌'ಒ ವಿಜಯಕುಮಾರ್ ಬಡಿಗೇ‌ರ್, ಚಂದ್ರಶೇಖರ ಹೇಮಾ, ಜಗನ್ನಾಥ ಕೊರಳ್ಳಿ ವಿಶ್ವನಾಥ ಪಾಟೀಲ್‌, ಗ್ರಾಪಂ ಅಧ್ಯಕ್ಷೆ ಸಂಪೂರ್ಣ ಬಣ್ಣಕ್ಕಿ ಪ್ರಮುಖರಾದ ಭೀಮಣ್ಣ ಸಾಲಿ, ರಮೇಶ ಮರಗೋಳ, ಶಿವಾನಂದ ಪಾಟೀಲ್‌, ಸುನೀಲ ದೊಡ್ಡಮನಿ, ಮುಕ್ತಾರ ಪಟೇಲ್, ಮನ್ಸೂ‌ರ್ ಪಟೇಲ್‌, ಬಸವರಾಜ ಹೊಸಳ್ಳಿ, ಯಲ್ಲಾಲಿಂಗ ಮುಗಟಿ, ಅಶೋಕ ವೀರನಾಯಕ, ಮಲ್ಲಪ್ಪ ಹೊಸ್ಮನಿ ಇಂಗನಕಲ್, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶೀಲಾ ಕಾಶಿ, ರಾಮಲಿಂಗ ಬಾನಾರ್, ಹಣಮಂತ ಸಂಕನೂರ, ನಯಿಮ್, ಶೇಖ ಬಬ್ಲು ಮಹ್ಮದ್ ಇಬ್ರಾಹಿಂ, ಕರಣ ಅಲ್ಲೂರ್, ಸುನೀಲ್‌ ಅಮಗೋಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ವಿದ್ಯಾರ್ಥಿಗಳು ಪರೀಕ್ಷೆ ಅನುಕೂಲ ಪಡೆಯಲಿ : ನಾಗರೆಡ್ಡಿ ಪಾಟೀಲ.

ಚಿತ್ತಾಪುರ: ವಿಶ್ವಗುರು ಶಿಕ್ಷಣ ಸಂಸ್ಥೆಯ ಶ್ರೀಮತಿ ಮಹಾದೇವಮ್ಮ ಬಿ. ಪಾಟೀಲ ಮೆಮೋರಿಯಲ್ ಪದವಿ ಪೂರ್ವ ಕಾಲೇಜು ವತಿಯಿಂದ 10 ನೇ ತರಗತಿಯಿಂದ ಹೊರಹೊಮ್ಮುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಪ್ರತಿಭೆ ಗುರುತಿಸುವ ಪರೀಕ್ಷೆಗಳನ್ನು (Talent Search Exam) ದಿನಾಂಕ ಫೆಬ್ರವರಿ 2 ಹಾಗೂ 9 ರಂದು ಕಾಲೇಜು ಆವರಣದಲ್ಲಿ ನಡೆಸಲು ತೀರ್ಮಾನಿಸಿದ್ದು ಆಸಕ್ತಿವುಳ್ಳ ವಿದ್ಯಾರ್ಥಿಗಳು ಸ್ವ ಇಚ್ಛೆಯಿಂದ ಭಾಗಿಯಾಗಬೇಕು ಎಂದು ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಕೋರಿದ್ದಾರೆ.

ಫೆಬ್ರವರಿ 16 ರಂದು 10 ನೇ ತರಗತಿಯಿಂದ ಹೊರಹೊಮ್ಮುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ರಸಪ್ರಶ್ನೆವುಳ್ಳ ಸ್ಪರ್ಧಾತ್ಮಕ ಪರೀಕ್ಷೆ ಹಮ್ಮಿಕೊಂಡಿದ್ದು ಭಾಗಿಯಾಗಿ ವಿಜೇತರಾದ ವಿದ್ಯಾರ್ಥಿಗಳಿಗೆ ಮೊದಲನೆ ಬಹುಮಾನ 10,100, ಎರಡನೆ ಬಹುಮಾನ 5,100, ಮೂರನೇ ಬಹುಮಾನ 2,500 ಬಹುಮಾನ ವಿತರಿಸಲಾಗುವುದು. ತಾಲೂಕಿನ ಎಲ್ಲಾ ಪ್ರೌಢ ಶಾಲೆ ಕೇಂದ್ರಗಳಿಂದ ಉಚಿತ ಸಾರಿಗೆ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆ ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಸೂಚನೆ: ಮೊದಲನೇ ಐದು ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಉಚಿತ ಪ್ರವೇಶ ನೀಡಲಾಗುವುದು. ಉಳಿದ 20 ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಪ್ರಾಂಶುಪಾಲರನ್ನು ಹಾಗೂ ಉಪನ್ಯಾಸಕರನ್ನು 7406620055, 9591450303, 9663542019 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ನಾಳೆ ಅಂಬಿಗರ ಚೌಡಯ್ಯನ ಮೂರ್ತಿ ಬೃಹತ್ ಶೋಭಾಯಾತ್ರೆ.

ಚಿತ್ತಾಪುರ: ಬಸವಾದಿ ಶರಣರಲ್ಲಿ ನಿಜ ಶರಣ ಎನಿಸಿಕೊಂಡಿರುವ ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತ್ಯೋತ್ಸವದ ನಿಮಿತ್ಯ ತಾಲೂಕು ಕೋಲಿ ಸಮಾಜದಿಂದ ಹಿರಿಯ ಮುಖಂಡ ಭೀಮಣ್ಣಾ ಸಾಲಿ ನೇತೃತ್ವದಲ್ಲಿ ಜ.28 ರಂದು ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕೋಲಿ ಸಮಾಜದ ನಗರ ಅಧ್ಯಕ್ಷ ಬಸವರಾಜ ಮೈನಾಳಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಟ್ಟಣದ ಅಂಬಿಗರ ಚೌಡಯ್ಯ ಭವನದ ಸಮೀಪ ಜ.28 ರಂದು ಮಧ್ಯಾಹ್ನ 1 ಗಂಟೆಗೆ ಶೋಭಾಯಾತ್ರೆಯಲ್ಲಿ ತೊನಸನಹಳ್ಳಿ (ಎಸ್) ಗ್ರಾಮದ ಅಲ್ಲಮಪ್ರಭು ಸಂಸ್ಥಾನದ ಮಲ್ಲಣಪ್ಪ ಮಹಾಸ್ವಾಮಿ, ಶಹಾಪೂರ ತಾಲೂಕಿನ ಮಹಲರೋಜಾದ ಮಲ್ಲಿಕಾರ್ಜುನ ಮುತ್ಯಾ ಅವರ ಸಾನಿಧ್ಯದಲ್ಲಿ ನಡೆಯಲಿದೆ. ವೇದಿಕೆ ಕಾರ್ಯಕ್ರಮ ಮುಗಿದ ನಂತರ ಕರ್ನಾಟಕ ರಾಜ್ಯ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್‌ ಚಿಂಚನಸೂರು ಅವರು ಬೃಹತ್‌ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ ಜೊತೆಗೆ ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪಾ ಜಮಾದಾರ ಸೇರಿದಂತೆ ಸಮಾಜದ ಅನೇಕ ಹಿರಿಯರು ಭಾಗವಹಿಸಲಿದ್ದಾರೆ.

ಬೃಹತ್‌ ಶೋಭಾಯಾತ್ರೆಯಲ್ಲಿ ಮಹಿಳೆಯರ ಕುಂಭಕಳಸ, ಡೊಳ್ಳು ಕುಣಿತ, ಹಲಿಗೆ ವಾದನ ಶೋಭಾಯಾತ್ರೆಗೆ ಮೆರಗು ನೀಡಲಿದೆ. ಅಂಬಿಗರ ಚೌಡಯ್ಯನವರ ಮೂರ್ತಿ, ಮಾತೆ ಮಾಣಿಕೇಶ್ವರಿ, ಕೋಲಿ ಸಮಾಜದ ಧೀಮಂತ ಹೋರಾಟಗಾರ ದಿ.ವಿಠಲ್ ಹೇರೂರ ಭಾವಿಚಿತ್ರದ ಜೊತೆಗೆ ಅನೇಕ ಶರಣರ ಭಾವಚಿತ್ರವು ಅದ್ಧೂರಿಯಾಗಿ ಬೃಹತ್‌ ಶೋಭಾಯಾತ್ರೆ ಮೆರವಣಿಗೆ ನಡೆಯಲಿದ್ದು ನಗರದ ಕೋಲಿ ಸಮಾಜದ ಬಾಂಧವರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ತಿಳಿಸಿದ್ದಾರೆ.

ಶನಿವಾರ, ಜನವರಿ 25, 2025

ಕ್ಷೇತ್ರದ ಅಭಿವೃದ್ದಿ ಕೆಲಸಕ್ಕೆ ಬಿಜೆಪಿ ಅಡ್ಡಿ: ಮಲ್ಲಿಕಾರ್ಜುನ ಕಾಳಗಿ.

ಆರೋಪ ಸತ್ಯಕ್ಕೆ ದೂರ, ●ಅಸ್ತಿತ್ವ ಉಳಿವಿಗಾಗಿ ಅಧ್ಯಕ್ಷರ ಪರದಾಟ.

ಚಿತ್ತಾಪುರ: ಪಟ್ಟಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ಮುಖಂಡರು ಹಾಗೂ ಪುರಸಭೆ ಸದಸ್ಯರು ಅಡ್ಡಿಪಡಿಸುತ್ತಿರುವುದು ಖಂಡನೀಯ ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಲ್ಲಿಕಾರ್ಜುನ ಕಾಳಗಿ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿ.ವೈ.ವಿಜಯೇಂದ್ರ ತಮ್ಮ ರಾಜ್ಯಾಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಚಿತ್ತಾಪುರದಲ್ಲಿ ರವೀಂದ್ರ ಸಜ್ಜನಶೆಟ್ಟಿ ಅವರು ತಮ್ಮ ತಾಲೂಕು ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪಟ್ಟಣದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತಂದಿದ್ದಾರೆ ಆದರೆ ಅಭಿವೃದ್ಧಿ ಕೆಲಸ ಕಾಮಗಾರಿಳು ನಡೆಯುತ್ತಿಲ್ಲ ಎಂದು ಹೇಳುವುದು ಬಿಟ್ಟು ಯಾಕೆ ಅಭಿವೃದ್ದಿ ಕೆಲಸ ಕಾರ್ಯಗಳು ವಿಳಂಬ ಆಗುತ್ತಿವೆ ಎಂಬುದು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಲ್ಲಿ ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ ಕೆಲ ತಾಂತ್ರಿಕ ದೋಷಗಳಿಂದ ಕುಂಠಿತಗೊಂಡಿವೆ ಎಂದು ಸ್ಪಷ್ಟತೆ ನೀಡಿದರು. 

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಂದ ಪಟ್ಟಣದ ನಾಗಾವಿ ಹೊರವಲಯದಲ್ಲಿ ನಿರ್ಮಾಣವಾದ 1000 ಮನೆಗಳಿಗೆ ಮೂಲಭೂತ ಸೌಕಾರ್ಯಗಳಾದ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ರಸ್ತೆ, ಸಾಮೂಹಿಕ ಶೌಚಾಲಯಗಳ ಅಭಿವೃದ್ದಿಗೆ ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡಿಸಿ ಅಭಿವೃದ್ದಿಯಾದ ನಂತರ ಹಂಚಿಕೆ ಮಾಡುವುದು ಇದೆ ಆದ್ರೇ ಬಿಜೆಪಿಯವರಿಗೆ ಕಾಂಗ್ರೆಸ್ ಅಭಿವೃದ್ದಿ ಕೆಲಸ ಕಾರ್ಯಗಳು ನೋಡಿ ರಾತ್ರಿಯಿಡೀ ನಿದ್ದೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು 

ಕೆನಾರ ಬ್ಯಾಂಕ್‌ ಎದುರಗಡೆ ನಿರ್ಮಿಸಿದ ವ್ಯಾಣಿಜ್ಯ ಮಳಿಗೆಗೆ ಬಾಡಿಗೆ ಹೆಚ್ಚು ಆಗಿದೆ ಎಂದು ಹೇಳುತ್ತಿದ್ದರು ಈಗ ಬಾಡಿಗೆ ಕಡಿಮೆ ಮಾಡಲಾಗಿದೆ ಟೆಂಡರ್ ಕರೆದು ಬೇಗನೆ ಮಳಿಗೆ ಹಂಚಿಕೆ ಮಾಡುವುದಿದೆ ಸ್ಪಷ್ಟನೆ ನೀಡಿದರು. ಕಳೆದ ಬಾರಿ ತಮ್ಮದೇ ಸರ್ಕಾರ ಯಾಕೆ ಕ್ಷೇತ್ರದ ಅಭಿವೃದ್ದಿ ಕೆಲಸಗಳ ಬಗ್ಗೆ ಮಾತನಾಡಿಲ್ಲ ಈಗ ಪ್ರಶ್ನೆ ಮಾಡುವುದು ಸರಿಯಲ್ಲ ತಮ್ಮ ಸರ್ಕಾರದಲ್ಲಿ ಆಗದ ಅಭಿವೃದ್ದಿ ಕಾಮಗಾರಿಗಳು ಈಗ ಆಗುವುದು ನೋಡಿ ಸಹಿಸಿಕೊಳ್ಳಕ್ಕಾಗದೆ ಆರೋಪ ಮಾಡುತ್ತಿದ್ದಾರೆ ಎಂದರು.

ಪಟ್ಟಣದಲ್ಲಿ ಎಸ್.ಸಿಪಿ ಅನುದಾನದಲ್ಲಿ ನಡೆದ ರಸ್ತೆ ಕಾಮಗಾರಿಯು ಪರಿಶಿಷ್ಟ ಜಾತಿ ವಾರ್ಡ್ ನಲ್ಲಿ ನಡೆದಿದೆ ಎನ್ನುವುದಕ್ಕೆ ಮುಖ್ಯವಾಗಿ ಅಲ್ಲಿ ಎರಡು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಸತಿ ನಿಲಯಗಳು ಇದ್ದು, ಅಲ್ಲಿ ವಾಸವಾಗಿರುವ ಬಹುಜನರು ಎಸ್ಸಿ.ಎಸ್ಟಿ ಆಗಿದ್ದು ಅವರ ಸಂಚಾರಕ್ಕೆ ಆ ರಸ್ತೆ ಮುಖ್ಯವಾಗಿದೆ ಹೀಗಾಗಿ ಅಲ್ಲಿ ರಸ್ತೆ ಕಾಮಗಾರಿ ಮಾಡಿದ್ದು ಇದು ಜನತೆಗೆ ಗೋತ್ತಿರುವ ವಿಷಯ ಆದ್ರೇ ಬಿಜೆಪಿ ಕಾರ್ಯಕರ್ತರು ಪುರಸಭೆ ಸದಸ್ಯರು ಜನರಲ್ಲಿ ತಪ್ಪು ಸಂದೇಶ ಕೊಡುವುದು ತಿದ್ದಿಕೋಳ್ಳಬೇಕು. ಕ್ಷೇತ್ರದಲ್ಲಿ ಸಚಿವರು ಕಾಂಗ್ರೆಸ್, ಬಿಜೆಪಿ ಅಂತಾ ತಾರತಮ್ಯ ಮಾಡದೆ ಪಟ್ಟಣದ ಎಲ್ಲಾ ವರ್ಡ್ ಗಳಿಗೆ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ದಿ ಕೆಲಸಗಳು ಮಾಡುತ್ತಿದ್ದಾರೆ ಆದರೂ ಬಿಜೆಪಿಯವರು ಟೀಕೆ ಮಾಡುವುದು ಬಿಡುತ್ತಿರಲ್ಲ ಎಂದು ವ್ಯಂಗ್ಯ ಮಾಡಿದ್ರು.

-ಚಂದ್ರಶೇಖರ ವಾಯ್ ಕಾಶಿ
ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರು ಪುರಸಭೆ ಚಿತ್ತಾಪೂರ.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ವಿನೋದ್ ಗುತ್ತೇದಾರ್, ಶಿವರಾಜ್ ಪಾಳೆದ್, ಸುಭಾಷ್ ಜಾಧವ್, ಜಗದೀಶ್ ಚವ್ಹಾಣ್, ಮುಖಂಡರಾದ ಶಿವಕಾಂತ ಬೆಣ್ಣೂರಕರ್, ಅಹೆಮದ್ ಸೇಠ್, ನಜೀರ್ ಅಡಕಿ, ವಿಶ್ವನಾಥ ಬೀದಿಮನಿ, ಎಕ್ಬಲ್ ಸೇಠ್, ಸೇರಿದಂತೆ ಇತರರು ಇದ್ದರು.

ಮಂಗಳವಾರ, ಜನವರಿ 14, 2025

ಬಜಾಜ್ ಕಾಂಪ್ಲೆಕ್ಸ್ ನಲ್ಲಿ ಅನೈತಿಕ ಚಟುವಟಿಕೆ.

ಚಿತ್ತಾಪುರ: ಪಟ್ಟಣದ ಬಜಾಜ್ ಕಾಂಪ್ಲೆಕ್ಸ್ ಮಾಳಿಗೆ ಬಿ68  ಸ್ವಾಮಿ ಬರ್ತಡೇ ಸೆಲೆಬ್ರೇಶನ್ ಇವೆಂಟ್ ನಲ್ಲಿ ಸಂಶಯದ ಮೆರೆಗೆ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಮೂಲನಿವಾಸಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸೇರ್ ಅಲಿ 
ಶೇಖ್ ತಿಳಿಸಿದ್ದಾರೆ.

ಜ,13 ಸೋಮವಾರ ಬೆಳಗ್ಗೆ 10:45ಕ್ಕೆ ಬರ್ತಡೇ ಸೆಲೆಬ್ರೇಶನ್ ಸಲುವಾಗಿ ಹುಡುಗ/ಹುಡುಗಿ ಸ್ವಾಮಿ ಬರ್ತಡೆ ಸೆಲೆಬ್ರೇಶನ್ ಇವೆಂಟ್ ಬಂದಿರುತ್ತಾರೆ  ಬರ್ತಡೆ ಆಚರಣೆ ಮಾಡಿಕೊಳ್ಳಲು ಬಿಟ್ಟು ಹೋಗಿರುತ್ತಾರೆ ಮಧ್ಯಾಹ್ನ 2 ಗಂಟೆಯ ನಂತರ ಹುಡುಗ/ ಹುಡುಗಿ ಮಳಿಗೆಯಿಂದ ಹೊರಗೆ ಬರುವ ದೃಶ್ಯ ಕಂಡು ಪಕ್ಕದ ಮಳಿಗೆಯವರು ಸಂಶಯದ ಮೇಲೆ ಅವರಿಗೆ ವಿಚಾರಿಸಿದಾಗ ಭಯದಿಂದ ಅವರು ಓಡಿ ಹೋಗಿರುತ್ತಾರೆ ಇಂದು ಒಂದೆ ಘಟನೆ ಅಲ್ಲಾ ಇಲ್ಲಿ ಸುಮಾರು ಸಾರಿ ಈ ರೀತಿ ಘಟನೆಗಳು ಆಗಿವೆ ಎಂದಿದ್ದಾರೆ.

 ಬರ್ತಡೇ ಸೆಲೆಬ್ರೇಶನ್ ಇವೆಂಟ್ ಒಳಗಡೆ ನೋಡಿದರೆ ಎಲ್ಲೆಂದರಲ್ಲಿ ಕಾಂಡೊಮ್ ಬಿದ್ದಿದು ಕಂಡುಬಂದಿತ್ತು. 
ಡಸ್ಟ್ ಬಿನ್ ಒಂದರಲ್ಲಿ ಕಾಂಡೊಮ್ ಬಳಕೆ ಮಾಡಿ ಬಿಸಾಡಿದ ದೃಶ್ಯ ಸಹ ಕಂಡಿತು, ಹಾಗೂ ಸಿಸಿ ಕ್ಯಾಮೆರಾ ಕಿತ್ತಿ ಹಾಕಲಾಗಿತ್ತು. ಹಾಗೆ ಬೆಳಗ್ಗೆಯಿಂದ ರಾತ್ರಿವರೆಗೂ ಇಲ್ಲಿ ಒಂದಲ್ಲ ಒಂದು ಕಾರ್ಯಕ್ರಮ ನಡೆಯುತ್ತಿರುತ್ತವೆ. ಸಮಯದ ಮಿತಿ ಇಲ್ಲ, ಒಳಗಡೆ ಮಧ್ಯಪಾನ ಸಹ ಮಾಡುತ್ತಾರೆ ಎನ್ನಲಾಗುತ್ತಿದೆ. ಇಷ್ಟೆಲ್ಲ ವಿಷಯ ಕಂಡು ಪಕ್ಕದ ಮಾಳಿಗೆಯವರಿಗೆ ಸಂಶಯ ಉಂಟಾಗಿದೆ ಎನ್ನುತ್ತಾರೆ. 

ಈ ಮಾಳಿಗೆಯ ಅಕ್ಕ-ಪಕ್ಕ ಮತ್ತು ಹಿಂದೆ-ಮುಂದೆ ಹೈಟೆಕ್ ಕಂಪ್ಯೂಟರ್ ತರಬೇತಿ, ಬ್ಯೂಟಿ ಪಾರ್ಲರ್, ಮುತ್ತೂಟ್ ಫೈನಾನ್ಸ್, ಮೇಲೆ ಶಾಲಾ ಕಾಲೇಜು, ಹೀಗೆ ಅನೇಕ ಮಾಳಿಗೆಗಳಿದ್ದು ಈ ವಿಷಯ ತಿಳಿದು ಅವರೆಲ್ಲರಿಗೂ ಮುಜುಗರ ಉಂಟಾಗಿದೆ ಎನ್ನಲಾಗಿದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ವಾಮಿ ಬರ್ತಡೇ ಸೆಲೆಬ್ರೇಶನ್ ಇವೆಂಟ್ ಮಾಲೀಕರನ್ನು ಕರೆಸಿ ವಿಚಾರಿಸಿ ಅಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆ ನಿಜಾನಾ ಸುಳ್ಳ ಎಂಬ ತನಿಖೆಯನ್ನು ಕೈಗೊಂಡು ಸತ್ಯ ಸತ್ಯತೆಯನ್ನು ಮೂಲಕ ತಪ್ಪಿತಸ್ಥನಿಗೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿದ್ದಾರೆ.
 
1) ಬರ್ತಡೇ ಸೆಲೆಬ್ರೇಶನ್ ಇವೆಂಟ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಸುದ್ದಿ ತಿಳಿದ ಬಂದಿದೆ ಕೂಡಲೆ ಅವರನ್ನು ಮಳಿಗೆ ಖಾಲಿ ಮಾಡಿಸುವುದಾಗಿ ತಿಳಿಸಿದ್ದಾರೆ.

- ನಂದ ಕಿಶೋರ್ 
ಬಜಾಜ್ ಕಾಂಪ್ಲೆಕ್ಸ್ ಮಾಲೀಕರು ಚಿತ್ತಾಪುರ. 

2)ಬರ್ತಡೇ ಸೆಲೆಬ್ರೇಶನ್ ಇವೆಂಟ್ ಮಾಲೀಕರಾದ ಶಾಂತು ಚಿಕ್ಕಮಠ/ ಸುರೇಶ್ ಎಂಬುವರಿಗೆ ಪತ್ರಕರ್ತರು ಫೋನ್ ಮಾಡಿ ವಿಚಾರಿಸಿದರೆ ಹರಕೆ ಉತ್ತರ ನೀಡಿರುತ್ತಾರೆ.

ಗುರುವಾರ, ಜನವರಿ 2, 2025

ಸಾವಿತ್ರಿಬಾಯಿ ಪುಲೆ ಪ್ರಶಸ್ತಿಗೆ ದೇವಿಂದ್ರಮ್ಮ ಆಯ್ಕೆ


ಚಿತ್ತಾಪುರ: ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಘಟಕದಿಂದ ಮಹಿಳಾ ಸಾಧಕಿಯರಿಗೆ ಪ್ರತಿ ವರ್ಷ ನೀಡುವ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ರಾಜ್ಯ ಮಟ್ಟದ ಪ್ರಶಸ್ತಿಗೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಜೀವಣಗಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ದೇವಿಂದ್ರಮ್ಮ ವಿ ಮಾಲಿ ಪಾಟೀಲ್ ಆಯ್ಕೆಯಾಗಿದ್ದಾರೆ.

ಜ.3ರಂದು ವಿಜಯಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾ ಸಂಚಾಲಕ ಜಗದೇವ ಕುಂಬಾರ ಪ್ರಕಟಣೆಗೆ ತಿಳಿಸಿದ್ದಾರೆ.

ಶುಕ್ರವಾರ, ನವೆಂಬರ್ 1, 2024

ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ.

ಚಿತ್ತಾಪುರ: ಪಟ್ಟಣದ ಮಾತೋಶ್ರೀ ಮಹಾದೇವಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಭುವನೇಶ್ವರ ದೇವಿಯ ಭಾವಚಿತ್ರಕ್ಕೆ ಪೊಜೆ ನಂತರ ಪುಷ್ಪ ನಮನ ಸಲ್ಲಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಿದರು. ಈ ವೇಳೆಯಲ್ಲಿ ಶಾಲೆಯ ಮುಖ್ಯಗುರುಗಳಾದ ಜಗದೇವ ಕುಂಬಾರ, ಶಿಕ್ಷಕರಾದ ವಿಶ್ವನಾಥ ಮಡಿವಾಳ, ಶ್ರೀದೇವಿ, ಸೇವಕಿ ಜಯಶ್ರೀ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ಕನ್ನಡ ರಾಜ್ಯೋತ್ಸವಕ್ಕೆ ಅವಮಾನ.

ಚಿತ್ತಾಪೂರ: ಈ ಬಾರಿ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಬೇಕು ಎಂದು  ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು ಆದ್ರೇ ಚಿತ್ತಾಪುರ ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸದೆ ಅವಮಾನ ಮಾಡಿದ್ದು ಕಂಡುಬಂದಿದೆ.

ಪಟ್ಟಣದ ನ್ಯಾಯಾಲಯ, ಕರ್ನಾಟಕ ಗ್ರಾಮೀಣ ಬ್ಯಾಂಕ,ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯ, ಬಿಜೆಪಿ ಮಂಡಲ ಕಾರ್ಯಾಲಯ, ಜೆಡಿಎಸ್ ಕಾರ್ಯಾಲಯ, ಭಾರತೀಯ ಸ್ಟೇಟ್ ಬ್ಯಾಂಕ, ಎಸ್ ಬಿಐ ಬ್ಯಾಂಕ,  ರೈಲುನಿಲ್ದಾಣ, ಸೇರಿದಂತೆ ಈ ಎಲ್ಲಾವುಗಳಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡದೆ ಕನ್ನಡಿಗರಿಗೆ ರಾಜ್ಯ ಸರ್ಕಾರಕ್ಕೆ ಅವಮಾನ ಮಾಡಿದಂತೆ ಆಗಿದೆ ಎನ್ನಲಾಗುತ್ತಿದೆ.


ಕೊಡಲೇ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾ ಆಡಳಿತ ಎಚ್ಚತ್ತುಕೊಂಡು ಕನ್ನಡ ರಾಜ್ಯೋತ್ಸವ ಆಚರಣೆ ಮಾಡದೆ ಅವಮಾನಿಸಿದ ಈ ಎಲ್ಲಾ ಕಾರ್ಯಾಲಯ, ಬ್ಯಾಂಕ, ರೈಲುನಿಲ್ದಾಣ, ನ್ಯಾಯಾಲಯ ವಿರುದ್ಧ ಕ್ರಮ ಕೈಗೊಂಡು ಕಾನೂನು ರೀತಿಯಲ್ಲಿ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಲಾಗಿದೆ.

ಪಟ್ಟಣದಲ್ಲಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಣೆ ಮಾಡದೆ ಅವಮಾನ ಮಾಡುವುದು ಇದೇನು ಹೊಸದಲ್ಲ, ಪದೇ ಪದೇ ಕನ್ನಡ ಭಾಷೆಗೆ ಅವಮಾನ ಆಗುತ್ತಿದೆ. ಇದರ ಕುರಿತು ಸಾಕಷ್ಟು ಬಾರಿ ಮನವಿ ಹೋರಾಟ ಮಾಡಿದ್ರು ಪ್ರಯೋಜನವಾಗಿಲ್ಲ ಎನ್ನುತ್ತಾರೆ.

- ಚಂದರ ಚವ್ಹಾಣ್
ಕರವೇ, ಅಧ್ಯಕ್ಷರು ಚಿತ್ತಾಪುರ.


ತಾಲ್ಲೂಕು ಆಡಳಿತ ವತಿಯಿಂದ ನಡೆದ 69ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಹಳೆಯ ಭುವನೇಶ್ವರಿ ದೇವಿ ಬ್ಯಾನರ್ ಭಾವಚಿತ್ರ ಮೆರವಣಿಗೆಗೆ ಬಳಸಿದ್ದು ಕನ್ನಡ ಅಭಿಮಾನಿಗಳಲ್ಲಿ ಬೇಸರ ಮೂಡಿದೇ ಎಂದರು.

- ಲಕ್ಷ್ಮೀಕಾಂತ ತಾಂಡೂರಕರ್
ವಿಕಸೇ, ಅಧ್ಯಕ್ಷರು ಚಿತ್ತಾಪುರ.

ಕನ್ನಡ ಭಾಷೆಯನ್ನು ಗೌರವಿಸಬೇಕು: ಹಿರೇಮಠ.

ಚಿತ್ತಾಪುರ: ಕನ್ನಡ ನಾಡು ಉದಯವಾದ ದಿನವನ್ನು ಸಂಭ್ರಮಿಸುವ ಹಾಗೂ ಕನ್ನಡ ರಾಜ್ಯದ ಏಕೀಕರಣಕ್ಕಾಗಿ ಹೋರಾಡಿದ ಮಹಾತ್ಮರನ್ನು ಸ್ಮರಿಸಿ, ಗೌರವಿಸುವ ಹಾಗೂ ಕನ್ನಡಾಭಿಮಾನವನ್ನು ಮೆರೆಯುವ ಉದ್ದೇಶದಿಂದ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ ಇದರ ಜೊತೆಗೆ ಕನ್ನಡ ಭಾಷೆಯನ್ನು ಗೌರವಿಸಬೇಕು ಎಂದು ತಹಸೀಲ್ದಾರ ನಾಗಯ್ಯ ಹಿರೇಮಠ ಹೇಳಿದರು.

ಪಟ್ಟಣದ ತಹಸೀಲ್‌ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ,ಮೈಸೂರು ರಾಜ್ಯವು (ಈಗಿನ ಕರ್ನಾಟಕ) 1956ರ ನವೆಂಬರ್ 1ರಂದು ನಿರ್ಮಾಣವಾದುದರ ಸಂಕೇತವಾಗಿ ರಾಜ್ಯೋತ್ಸವವನ್ನು ಆಚರಿಸಲಾಗುತ್ತ ಎಂದು ಹೇಳಿದರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ರಾವೂರಿನ ಸಚ್ಚಿದಾನಂದ ಪ್ರೌಢ ಶಾಲೆಯ ಶಿಕ್ಷಕ ಸಿದ್ದಲಿಂಗ ಬಾಳಿ ಮಾತನಾಡಿ, 1956 ನವೆಂಬರ್ 1ರಂದು ಕನ್ನಡ ಭಾಷಿಗರಿಗಾಗಿ ಒಂದು ರಾಜ್ಯ ಉದಯವಾದ ಹಿನ್ನೆಲೆ ರಾಜ್ಯೋತ್ಸವ ಆಚರಣೆಯನ್ನು ಮಾಡಲಾಯಿತು. 1973 ನವೆಂಬರ್ 1ರಂದು ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು ಹೀಗಾಗಿ ಕರ್ನಾಟಕ ರಾಜ್ಯೋತ್ಸವಕ್ಕೆ ತನ್ನದೇ ಆದ ಭವ್ಯ ಇಹಾಸವಿದೆ ಎಂದರು.

 ಎಲ್ಲಾ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಮೊದಲ ಅದ್ಯತೆ ನೀಡಬೇಕು. ಕನ್ನಡ ಭಾಷೆಯಲ್ಲಿ ಅಂಗಡಿ ಹಸರು ಶೇ.70 ರಷ್ಟಿದ್ದು, ಶೇ.30 ರಷ್ಟು ಇಂಗ್ಲಿಷ್‌ ಅಥವಾ ಇತರೆ ಭಾಷೆಯಲ್ಲಿ ಇರಬೇಕು ಎಂಬ ನಿಯಮವಿದೆ ಆದರೆ ರಾಜ್ಯದಲ್ಲಿ ಈ ನಿಯಮವನ್ನು ಪಾಲನೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕನ್ನಡವನ್ನು ಕಟ್ಟುವರು ಇಂದು ಕನ್ನಡವನ್ನು ಕುಟ್ಟುವ ಕೆಲಸ ಮಾಡುತ್ತಿದ್ದಾರೆ ಮಾರ್ಮಿಕವಾಗಿ ನುಡಿದರು.
ತಾಲ್ಲೂಕು ಆಡಳಿತ ವತಿಯಿಂದ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಮೆರವಣಿಗೆಗೆ ಚಾಲನೆ ನೀಡಿದರು ಮೆರವಣಿಗೆಯು ಪಟ್ಟಣದ ತಹಸೀಲ್ ಕಾರ್ಯಲಯದಿಂದ ರೈಲುನಿಲ್ದಾಣ, ನಾಗಾವಿ ಚೌಕ್, ಮಾರುಕಟ್ಟೆ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕ‌ರ್ ವೃತ್ತ, ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ವೇದಿಕೆಗೆ ಆಗಮಿಸಿತ್ತು ಮೆರವಣಿಗೆಯಲ್ಲಿ ಡಿಜೆ ಸೌಂಡ್ ಗೆ ಕನ್ನಡದ ಹಾಡುಗಳು ರಾರಾಜಿಸಿದವು ಅಧಿಕಾರಿಗಳು ನೃತ್ಯ ಮಾಡಿ ಎಲ್ಲಾರ ಗಮನ ಸೆಳೆದರು.

ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಸಿಪಿಐ ಚಂದ್ರಶೇಖರ ತಿಗಡಿ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿರಾದಾರ, ಕಸಾಪ ಅಧ್ಯಕ್ಷ ವಿರೇಂದ್ರ ಕೊಲ್ಲೂರು, ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಶಿವಶರಣಪ್ಪ ಬಿರಾದಾರ, ಪಿಎಸ್‌ಐ ಶ್ರೀಶೈಲ್ ಅಂಬಾಟಿ ಅಧಿಕಾರಿಗಳಾದ ಸಂಜೀವಕುಮಾರ ಮಾನಕ‌ರ್, ಮಹ್ಮದ್ ಸಲೀಂ, ಬಾಲಕೃಷ್ಣ, ವಿಜಯಕುಮಾ‌ರ್ ಬಡಿಗೇರ್, ಪ್ರಕಾಶ್ ನೈಕೋಡಿ, ಶ್ರೀಮತಿ ಆರತಿ ತುಪ್ಪದ್, ಶ್ರೀಮತಿ ಸವಿತಾ, ಚೇತನ್ ಗುರಿಕಾರ, ಶಂಕರಗೌಡ ಪಾಟೀಲ, ಅಶ್ವಥ್ ನಾರಾಯಣ, ಕರವೇ ಅಧ್ಯಕ್ಷರಾದ ನರಹರಿ ಕುಲಕರ್ಣಿ, ಚಂದರ್‌ ಚವ್ಹಾಣ, ಲಕ್ಷ್ಮೀಕಾಂತ ತಾಂಡೂರಕರ್ ಸೇರಿದಂತೆ ಇತರರು ಇದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ ಮರತೂರಕರ್ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು.

ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಜಿಪಂ ಸಿಇಒ ಚರ್ಚೆ.

ಚಿತ್ತಾಪುರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಪೂರ್ವಸಿದ್ಧತಾ ಪರೀಕ್ಷೆ-1 ರಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಪಡೆದ ಕರ್ನಾಟಕ ಪಬ್ಲಿಕ್ ಶಾಲೆ ಮಾಡಬೂಳ,...